ರಾಜಕಾರಣಿಯೊಬ್ಬರೊಂದಿಗೆ ಮಹಿಳೆಯ ಅಶ್ಲೀಲ ರೀತಿಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ | ಮಹಿಳೆಯಿಂದ ಉಪ್ಪಿನಂಗಡಿ ಠಾಣೆಗೆ ದೂರು
ಉಪ್ಪಿನಂಗಡಿ : ಪ್ರತಿಷ್ಠಿತ ರಾಜಕಾರಣಿಯೊಬ್ಬರ ಫೋಟೊವನ್ನು ಮಹಿಳೆಯೊಂದಿಗೆ ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಈ ಕುರಿತು ಮಹಿಳೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆ ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನೆಕ್ಕಿಲಾಡಿಯ ಮಹಿಳೆಯೋರ್ವರು ದೂರು ನೀಡಿದ್ದಾರೆ. ದೂರಿನಲ್ಲಿ – ತನ್ನ ಫೋಟೊವನ್ನು ವಿಭಿನ್ನ ರೀತಿಯಲ್ಲಿ ಅಸಹ್ಯಕರವಾಗಿ, ಅಶ್ಲೀಲವಾಗಿ ಪ್ರತಿಷ್ಠಿತ ರಾಜಾಕರಣಿ ಜತೆಗೆ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಈ ರೀತಿ ಮಾಡಿ ತನ್ನ ಘನತೆಗೆ ಕುಂದುಂಟು ಮಾಡಿರುವ ಅಪರಿಚಿತ […]










