ಹೊಸ ಮುಖಗಳ ಆಯ್ಕೆಗೆ ಮುಂದಾದ ಬಿಜೆಪಿ | ಕಾರ್ಯಕರ್ತರ ಅಸಮಾಧಾನ, ತಟಸ್ಥ ಧೋರಣೆಯ ಎಚ್ಚರಿಕೆ | ಅಭಿವೃದ್ಧಿ ಹರಿಕಾರ ಸಂಜೀವ ಮಠಂದೂರೇ ಅಭ್ಯರ್ಥಿಯಾಗಲೆಂದು ಒತ್ತಾಯ
ಪುತ್ತೂರು: ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲು ಇನ್ನೂ ವಿಳಂಬ ಮಾಡುತ್ತಿರುವ ಬಿಜೆಪಿ ವರಿಷ್ಠರ ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಂಡಿದೆ. ತಾವಿರುವ ಹುದ್ದೆಗೆ ರಾಜೀನಾಮೆ ನೀಡಿ, ತಾವು ಫೀಲ್ಡಿಗೆ ಹೋಗುವುದೇ ಇಲ್ಲ ಎಂಬ ಅಸಮಾಧಾನವನ್ನು ಹೊರಹಾಕಿರುವ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಉಪ್ಪಿನಂಗಡಿ, ಬಜತ್ತೂರು, ಹಿರೇಬಂಡಾಡಿ ಭಾಗದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂಜೀವ ಮಠಂದೂರು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸಂಜೀವ ಮಠಂದೂರು ಅವರನ್ನು ಮತ್ತೊಮ್ಮೆ ಶಾಸಕ ಅಭ್ಯರ್ಥಿಯಾಗಿ ಘೋಷಿಸಬೇಕು. […]










