ಪಂಜಾಬ್‌ನ ಭಠಿಂಡ ಮಿಲಿಟರಿ ಸ್ಟೇಷನ್‌ನಲ್ಲಿ ಗುಂಡು ಹಾರಾಟ : ನಾಲ್ಕು ಯೋಧರ ಬಲಿ

ಭಯೋತ್ಪಾದಕ ದಾಳಿ ಅಲ್ಲ ಎಂದ ಪೊಲೀಸ್‌ ವರಿಷ್ಠ ಭಠಿಂಡ : ಪಂಜಾಬ್‌ನ ಭಠಿಂಡದಲ್ಲಿರುವ ಸೇನಾ ನೆಲೆ ʼಭಠಿಂಡ ಮಿಲಿಟರಿ ಸ್ಟೇಷನ್‌ʼನಲ್ಲಿ ಇಂದು ಸಂಭವಿಸಿದ ಗುಂಡು ಹಾರಾಟ ಪ್ರಕರಣದಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಇದು ಭಯೋತ್ಪಾದಕ ದಾಳಿಯೇ ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ಪಂಜಾಬ್‌ ಪೊಲೀಸ್‌ ವರಿಷ್ಠರು ಭಯೋತ್ಪಾದಕ ದಾಳಿ ಅಲ್ಲ ಎಂದಿದ್ದಾರೆ.ನಸುಕಿನ 4.35ರ ವೇಳೆಗ ಗುಂಡಿನ ದಾಳಿಯಾಗಿದೆ. ಕೂಡಲೇ ಕ್ಡಿಕ್‌ ರೆಸ್ಪಾನ್ಸ್‌ ಫೋರ್ಸ್‌ ಕಾರ್ಯಾಚರಣೆಗಿಳಿದಿದೆ. ದಾಳಿ ಭಯೋತ್ಪಾದನೆ ಕೃತ್ಯದಂತೆ ಕಾಣಿಸುತ್ತಿಲ್ಲ, ಯಾರೋ ಹತಾಶ ಮನಸ್ಥಿತಿಯವರು ಎಸಗಿದ ಕೃತ್ಯವಾಗಿರುವ […]

ಪಂಜಾಬ್‌ನ ಭಠಿಂಡ ಮಿಲಿಟರಿ ಸ್ಟೇಷನ್‌ನಲ್ಲಿ ಗುಂಡು ಹಾರಾಟ : ನಾಲ್ಕು ಯೋಧರ ಬಲಿ Read More »

ಸಹಜ ಮುಂಗಾರು ಸಾಧ್ಯತೆ : ಹವಾಮಾನ ಇಲಾಖೆ

ದೂರವಾದ ಜನರ ಆತಂಕ ದೆಹಲಿ : ಈ ವರ್ಷ ಮಳೆ ಕೊರತೆಯಾಗಲಿದೆ ಎಂಬ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್‌ನ ಭವಿಷ್ಯವನ್ನು ಸರಕಾರಿ ಹವಾಮಾನ ಸಂಸ್ಥೆ ಅಲ್ಲಗಳೆದಿದೆ. ಶೇ.20 ರಷ್ಟು ಮಳೆ ಕೊರತೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಭವಿಷ್ಯ ನುಡಿದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಭಾರತೀಯ ಹವಾಮಾನ ಇಲಾಖೆ ಈ ಮುಂಗಾರಿನಲ್ಲಿ ‘ಎಲ್‌ ನಿನೋ’ ಹವಾಮಾನ ಸ್ಥಿತ್ಯಂತರ ಉಂಟಾಗದು. ವಾಡಿಕೆಯಂತೆ ಈ ಸಲವೂ ಸಾಮಾನ್ಯ ಮುಂಗಾರು ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ.ಹವಾಮಾನ ಇಲಾಖೆಯ ಮುನ್ಸೂಚನೆಯನ್ನೇ ರೈತಾಪಿ

ಸಹಜ ಮುಂಗಾರು ಸಾಧ್ಯತೆ : ಹವಾಮಾನ ಇಲಾಖೆ Read More »

ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಲ್ಲಿ ಕರಾವಳಿಗರಿಗೆ ಅಚ್ಚರಿ

ಉಡುಪಿಯಿಂದ ಯಶ್‌ಪಾಲ್‌ ಸುವರ್ಣ, ಕಾಪುವಿನಿಂದ ಗುರ್ಮೆ ಸುರೇಶ್‌ ಶೆಟ್ಟಿ ಕಣಕ್ಕೆ ಪುತ್ತೂರು, ಸುಳ್ಯ ಟಿಕೆಟ್‌ ಮಹಿಳೆಯರಿಗೆ ದೆಹಲಿ : ಗಜಪ್ರಸವದಂತಾಗಿದ್ದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆಗೊಳಿಸಲಾಗಿದೆ. ರಾತ್ರಿ 9 ಗಂಟೆ ವೇಳೆಗೆ ಕೇಂದ್ರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದ 189 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದರು.ನಿರೀಕ್ಷೆಯಂತೆಯೇ ಬಿಜೆಪಿ ಹಲವು ಪ್ರಯೋಗಗಳನ್ನು ಮಾಡಲು ಮುಂದಾಗಿದೆ. ಹಲವು ಅನಿರೀಕ್ಷಿತ ಹೆಸರುಗಳು ಪಟ್ಟಿಯಲ್ಲಿ

ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಲ್ಲಿ ಕರಾವಳಿಗರಿಗೆ ಅಚ್ಚರಿ Read More »

ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಆಶಾ ತಿಮ್ಮಪ್ಪ | ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬೆನ್ನಿಗೇ ಪುತ್ತೂರು ಭೇಟಿ

ಪುತ್ತೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ಪುತ್ತೂರು ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಆಶಾ ತಿಮ್ಮಪ್ಪ ಅವರು ಬುಧವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಜಾತ್ರಾ ಸಂಭ್ರಮದಲ್ಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ತಮ್ಮ ದಿನಚರಿಗೆ ಚಾಲನೆ ನೀಡಿದರು. ದೇವಸ್ಥಾನದಿಂದ ಪುತ್ತೂರು ಬಿಜೆಪಿ ಪಕ್ಷದ ಕಚೇರಿಗೆ ತೆರಳಿದರು.

ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಆಶಾ ತಿಮ್ಮಪ್ಪ | ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬೆನ್ನಿಗೇ ಪುತ್ತೂರು ಭೇಟಿ Read More »

ಭಾಗೀರಥಿ ಮುರುಳ್ಯ ಸುಳ್ಯ ಬಿಜೆಪಿ ಅಭ್ಯರ್ಥಿ: ಸ್ವಾಗತಿಸಿದ ಎಸ್.ಎನ್. ಮನ್ಮಥ

ಪುತ್ತೂರು: ಭಾಗೀರಥಿ ಮುರುಳ್ಯ ಅವರು ಸುಳ್ಯದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಆಗಿರುವುದನ್ನು ಬಿಜೆಪಿ ಸುಳ್ಯ ಮಂಡಲದ ಮಾಜಿ ಅಧ್ಯಕ್ಷ ಎಸ್.ಎನ್. ಮನ್ಮಥ ಸ್ವಾಗತಿಸಿದ್ದಾರೆ. ಬಿಜೆಪಿ ಹೊಸ ಮುಖಗಳಿಗೆ ಅವಕಾಶ ನೀಡಿದೆ. ಉತ್ತಮ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದ್ದು, ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಎಸ್.ಎನ್. ಮನ್ಮಥ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ದೆಹಲಿಯಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ಸುಳ್ಯ ಅಭ್ಯರ್ಥಿಯಾಗಿ ಭಾಗೀರಥಿ ಮುರುಳ್ಯ ಅವರನ್ನು ಆಯ್ಕೆ ಮಾಡಿದೆ.

ಭಾಗೀರಥಿ ಮುರುಳ್ಯ ಸುಳ್ಯ ಬಿಜೆಪಿ ಅಭ್ಯರ್ಥಿ: ಸ್ವಾಗತಿಸಿದ ಎಸ್.ಎನ್. ಮನ್ಮಥ Read More »

ಡಾಕ್ಟರ್ ಕೊಟ್ನೀಸ್ ಕೀ ಅಮರ್ ಕಹಾನಿ

ಈ ಭಾರತದ ವೈದ್ಯರು ಚೀನದ ಹೃದಯವನ್ನು ಗೆದ್ದದ್ದು ಹೇಗೆ? ಭಾರತ ಮತ್ತು ಚೀನ ಸಂಬಂಧ ಇವತ್ತಿಗೂ ಮಧುರವಾಗಿ ಇಲ್ಲ. ಆ ಕಮ್ಯುನಿಸ್ಟ್ ಸರಕಾರ ಭಾರತದ ವಿರುದ್ಧ ಸಂಚು ಹೂಡಿದ್ದೆ ಹೆಚ್ಚು. ಅಂತಹ ರಾಷ್ಟ್ರ ಭಾರತದ ಒಬ್ಬ ವೈದ್ಯರಿಗೆ ಸ್ಮಾರಕ ನಿರ್ಮಾಣ ಮಾಡಿ ರಾಷ್ಟ್ರೀಯ ಗೌರವ ಕೊಟ್ಟಿತು ಎಂದರೆ ನಮಗೆ ನಿಮಗೆ ನಂಬುವುದು ಭಾರಿ ಕಷ್ಟ ಆಗಬಹುದು!ಚೀನಾದಲ್ಲಿ ಪ್ರತಿಯೊಬ್ಬ ವೈದ್ಯ ತನ್ನ ಪದವಿಯನ್ನು ಪಡೆಯುವ ಮೊದಲು ಆ ಸ್ಮಾರಕಕ್ಕೆ ವಂದಿಸಿ ಬರುತ್ತಾರೆ ಅಂದರೆ ನಮಗೆ ಇನ್ನೂ ಆಶ್ಚರ್ಯ ಆಗಬಹುದು.

ಡಾಕ್ಟರ್ ಕೊಟ್ನೀಸ್ ಕೀ ಅಮರ್ ಕಹಾನಿ Read More »

ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಬೋರ್ಡ್ ಅನಾವರಣ

ಪುತ್ತೂರು: ಸ್ಮಾರ್ಟ್ ಬೋರ್ಡ್‌ಗಳ ಮೂಲಕ ತರಗತಿಗಳು ನಡೆದಾಗ ದೃಶ್ಯ ಮಾಧ್ಯಮದೊಂದಿಗೆ ವಿದ್ಯಾರ್ಥಿಗಳು ವಿಷಯಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಬಹುದು. ತನ್ಮೂಲಕ ಜ್ಞಾನ ವೃದ್ಧಿಯ ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಕಲಿಕಾ ಕ್ಷೇತ್ರದಲ್ಲಿ ಪರಿಣತಿ ಪಡೆದು ಯಶಸ್ಸು ಪಡೆಯಬಹುದು ಎಂದು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಅಭಿಲಾಷ್ ಹೇಳಿದರು. ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸುಮಾರು ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಅಳವಡಿಸಲಾಗಿರುವ ಇಂಟರ್‍ಯಾಕ್ಟಿವ್ ಸ್ಮಾರ್ಟ್ ಬೋರ್ಡ್ ನ್ನು ಉದ್ಘಾಟಿಸಿ ಮಾತನಾಡಿದರು. ದಶಕದ ಹಿಂದಿನವರೆಗೂ ಶಾಲಾ

ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಬೋರ್ಡ್ ಅನಾವರಣ Read More »

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ | ಪುತ್ತೂರಿನಿಂದ ಆಶಾ ತಿಮ್ಮಪ್ಪ, ಸುಳ್ಯದಿಂದ ಭಾಗೀರಥಿ ಮುರುಳ್ಯ ಚುನಾವಣಾ ಕಣಕ್ಕೆ | ಗೌಡ ಸಮುದಾಯಕ್ಕೆ ಒಲಿದ ಪುತ್ತೂರು ಕ್ಷೇತ್ರ

ಪುತ್ತೂರು: ರಾಜಕೀಯ ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಗೊಂಡಿದೆ. ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು. 189 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಯಿತು. ಇದರಲ್ಲಿ 33 ಮಂದಿ ಓಬಿಸಿ ವರ್ಗದವರು, 30 St ಅಭ್ಯರ್ಥಿಗಳು, 16 scಗಳು, 52 ಹೊಸ ಮುಖಗಳು, 9 ವೈದ್ಯರು, ಓರ್ವ ಐಎಸ್, ಐಪಿಎಸ್, 31 ಮಂದಿ ಸ್ನಾತಕೋತ್ತರ ಪದವೀಧರರು, 8 ಮಹಿಳೆಯರು ತಂಡದಲ್ಲಿದ್ದಾರೆ. ಪುತ್ತೂರಿನಿಂದ ಗೌಡ ಸಮುದಾಯದ ಆಶಾ ತಿಮ್ಮಪ್ಪ,

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ | ಪುತ್ತೂರಿನಿಂದ ಆಶಾ ತಿಮ್ಮಪ್ಪ, ಸುಳ್ಯದಿಂದ ಭಾಗೀರಥಿ ಮುರುಳ್ಯ ಚುನಾವಣಾ ಕಣಕ್ಕೆ | ಗೌಡ ಸಮುದಾಯಕ್ಕೆ ಒಲಿದ ಪುತ್ತೂರು ಕ್ಷೇತ್ರ Read More »

ಪುತ್ತೂರು : ಮಲಗಿದಲ್ಲೇ ಬಟ್ಟೆ ವ್ಯಾಪಾರಿ ಸಾವು

ಪುತ್ತೂರು : ಪುತ್ತೂರಿನ ಬೊಳುವಾರಿನಲ್ಲಿ ವ್ಯಕ್ತಿಯೋರ್ವರು ಮಲಗಿದ್ದಲ್ಲೇ ಮೃತಪಟ್ಟಿರುವ ಘಟನೆ ಎ. 10 ರಂದು ಸಂಭವಿಸಿದೆ. ನಂದಕುಮಾರ್ (50) ಎಂಬವರೇ ಮೃತ ವ್ಯಕ್ತಿ. ಇವರು ಸುಮಾರು 20 ವರ್ಷಗಳ ಹಿಂದೆ ಪುತ್ತೂರಿಗೆ ಬಂದು ಬೊಳುವಾರಿನಲ್ಲಿ ತನ್ನ ಸಂಸಾರದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದರು. ಎ. 3 ರಂದು ನಂದಕುಮಾರ್ ರವರ ಪತ್ನಿ ಗೋಮತಿಯವರು ಮಗನೊಂದಿಗೆ ಸ್ವಂತ ಊರಿಗೆ ಹೋಗುವಾಗ ಅರಿವಳಗನ್(ನಂದಕುಮಾರ್‌ ರವರ ಗೆಳೆಯ) ಅವರಲ್ಲಿ ನಂದಕುಮಾರ್ ರವರನ್ನು ನೋಡಿಕೊಳ್ಳುವಂತೆ ತಿಳಿಸಿದ್ದರು. ಎ.10 ರಂದು ಗೋಮತಿಯವರು

ಪುತ್ತೂರು : ಮಲಗಿದಲ್ಲೇ ಬಟ್ಟೆ ವ್ಯಾಪಾರಿ ಸಾವು Read More »

ರಷ್ಯಾದ ಶಿವೆಲುಚ್ ಜ್ವಾಲಾಮುಖಿ ಸ್ಫೋಟ : ವಿಮಾನಯಾನಕ್ಕೆ ಅಡ್ಡಿ

ರಷ್ಯಾ : ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ರಷ್ಯಾದ ಶಿವೆಲುಚ್ ಜ್ವಾಲಾಮುಖಿ ಮಂಗಳವಾರ ಮುಂಜಾನೆ ಸ್ಫೋಟಗೊಂಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಸ್ಥಳೀಯ ಅಧಿಕಾರಿಗಳು ಶಾಲೆಗಳನ್ನು ಮುಚ್ಚಿದ್ದಾರೆ, ಸಾಮಾನ್ಯ ಹಳ್ಳಿಗಳಲ್ಲಿ ವಾಸಿಸುವ ನಿವಾಸಿಗಳನ್ನು ಮನೆಯೊಳಗೆ ಇರಲು ಆದೇಶಿಸಲಾಗಿದೆ ಎಂದು ರಾಯಿಟರ್ಸ್ ವರದಿ ಹೇಳಿದೆ. ನಾಗರಿಕರು ಸುರಕ್ಷಿತವಾಗಿರುವಂತೆ ಉಸ್ಟ್-ಕಮ್ಚಾಟ್ಸ್ಕಿ ಪುರಸಭೆಯ ಪ್ರದೇಶದ ಮುಖ್ಯಸ್ಥ ಒಲೆಗ್ ಬೊಂಡರೆಂಕೊ ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಕೇಳಿಕೊಂಡಿದ್ದಾರೆ. ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ರಷ್ಯಾದ ಶಿವೆಲುಚ್ ಜ್ವಾಲಾಮುಖಿ ಮಂಗಳವಾರ ಮುಂಜಾನೆ ಸ್ಫೋಟಗೊಂಡಿದೆ ಎಂದು

ರಷ್ಯಾದ ಶಿವೆಲುಚ್ ಜ್ವಾಲಾಮುಖಿ ಸ್ಫೋಟ : ವಿಮಾನಯಾನಕ್ಕೆ ಅಡ್ಡಿ Read More »

error: Content is protected !!
Scroll to Top