ಆನ್‌ಲೈನ್‌ ಮೂವಿ ಟಿಕೆಟ್‌ ರೇಟಿಂಗ್‌ ಕೆಲಸದ ಕುರಿತು 1.14 ಲಕ್ಷ ರೂ. ವಂಚನೆ – ದೂರು ದಾಖಲು

ಮಂಗಳೂರು : ಪಾರ್ಟ್‌ಟೈಂ ಕೆಲಸದ ಕುರಿತು ಟೆಲಿಗ್ರಾಂ ಖಾತೆಯಲ್ಲಿ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 1,14,901 ರೂ. ಮೋಸ ಹೋಗಿರುವ ಕುರಿತು ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಫಲ್ಗುಣಿ ಎಂಬ ಹೆಸರಿನಿಂದ ಪಾರ್ಟ್‌ ಟೈಂ ಕೆಲಸದ ಬಗ್ಗೆ ಸಂದೇಶ ಬಂದಿದ್ದು, ಈ ಕುರಿತು ವಿಚಾರಿಸಿದಾಗ, ಆನ್‌ಲೈನ್‌ ಮೂವಿ ಟಿಕೆಟ್‌ ರೇಟಿಂಗ್‌ ಉದ್ಯೋಗ ಎಂದು ತಿಳಿಸಿದ್ದಾರೆ. ಇನ್ನು ಲಿಂಕ್‌ ಕಳುಹಿಸಿ ಆ್ಯಪ್‌ ಇನ್‌ಸ್ಟಾಲ್‌ ಮಾಡಿ ಖಾತೆ ತೆರೆದು ಅದರಲ್ಲಿ ಪ್ರಸಾರವಾಗುವ ವೀಡಿಯೋ ನೋಡಿ ರೇಟಿಂಗ್‌ ಹಾಕಿ ಕಮೀಷನ್‌ ಹಣ […]

ಆನ್‌ಲೈನ್‌ ಮೂವಿ ಟಿಕೆಟ್‌ ರೇಟಿಂಗ್‌ ಕೆಲಸದ ಕುರಿತು 1.14 ಲಕ್ಷ ರೂ. ವಂಚನೆ – ದೂರು ದಾಖಲು Read More »

ಇಂದು ಕೋಲಾರಕ್ಕೆ ರಾಹುಲ್‌ ಗಾಂಧಿ ಭೇಟಿ

ಅನರ್ಹತೆಗೆ ಕಾರಣವಾಗಿದ್ದ ಸ್ಥಳದಿಂದಲೇ ಹೋರಾಟ ಶುರು ಕೋಲಾರ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಂದಿನಿಂದ ಎರಡು ದಿನ ರಾಜ್ಯದಲ್ಲಿ ಚುನಾವಣೆ ಪ್ರಚಾರ ಮಾಡಲಿದ್ದು, ಇಂದು ಕೋಲಾರದಲ್ಲಿ ಸತ್ಯಮೇವ ಜಯತೆ, ಜೈ ಭಾರತ್ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಕೋಲಾರ ಹೊರವಲಯದ ಟಮಕ ಬಳಿ ಸಮಾವೇಶ ಆಯೋಜನೆ ಮಾಡಲಾಗಿದೆ. ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ.ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರು ಈ ಸಮಾವೇಶಕ್ಕೆ ಬರಲು ಕಾಂಗ್ರೆಸ್‌ ವ್ಯವಸ್ಥೆ ಮಾಡಿದೆ. ರಾಹುಲ್ ಗಾಂಧಿ,‌ ಮಲ್ಲಿಕಾರ್ಜುನ

ಇಂದು ಕೋಲಾರಕ್ಕೆ ರಾಹುಲ್‌ ಗಾಂಧಿ ಭೇಟಿ Read More »

ಟಿಕೆಟ್‌ ಸಿಗದ ನಿರಾಶೆಯಲ್ಲಿ ಬಿಜೆಪಿಗೆ ಜಗದೀಶ್‌ ಶೆಟ್ಟರ್‌ ವಿದಾಯ

ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಶನಿವಾರ ರಾತ್ರಿ ಘೋಷಿಸಿದ್ದಾರೆ. ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಧರ್ಮೇಂದ್ರ ಪ್ರಧಾನ್ ಅವರು ಜಗದೀಶ್ ಶೆಟ್ಟರ್ ಅವರ ಮನೆಗೆ ಆಗಮಿಸಿ ಮನವೊಲಿಕೆಗೆ ಯತ್ನಿಸಿದರು. ಆದರೆ ಬಿಜೆಪಿ ನಾಯಕರ ಸಂಧಾನ ಸಭೆ ವಿಫಲವಾಗಿದೆ.ಸಂಧಾನ ಸಭೆ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಗದೀಶ್ ಶೆಟ್ಟರ್, ಪಕ್ಷ ನನಗೆ ಎಲ್ಲ ಸ್ಥಾನಮಾನ ನೀಡಿದೆ. ಮೂವತ್ತು ವರ್ಷದ ರಾಜಕಾರಣದಲ್ಲಿ

ಟಿಕೆಟ್‌ ಸಿಗದ ನಿರಾಶೆಯಲ್ಲಿ ಬಿಜೆಪಿಗೆ ಜಗದೀಶ್‌ ಶೆಟ್ಟರ್‌ ವಿದಾಯ Read More »

ಪುಟ್ಟ ಬಾಲಕನ ಚಿಕಿತ್ಸೆಗೆ ನೇರವಾದ ವಿಶ್ವಹಿಂದೂ ಪರಿಷದ್, ಭಜರಂಗದಳ

ಬಂಟ್ವಾಳ: ಕಂಬ್ಳ ಪೋಡಿಕಲ ಹನುಮಾನ್ ನಗರ ಶ್ರೀ ರಾಮ ಭಕ್ತ ಆಂಜನೇಯ ಟ್ರಸ್ಟ್ ಸದಸ್ಯರು  ಒಟ್ಟು ಸೇರಿ ವಿಶ್ವಹಿಂದೂ ಪರಿಷದ್, ಭಜರಂಗದಳ ಹನುಮಾನ್ ಶಾಖೆ ನೇತೃತ್ವದಲ್ಲಿ ಕಾರಣಿಕ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಿಯ ಜಾತ್ರೋತ್ಸವದ ಸಂದರ್ಭದಲ್ಲಿ ಭವತಿ ಬಿಕ್ಷಾಂದೇಹಿ ಸಹಾಯ ಯೋಜನೆಯ0ತೆ ಪುಟ್ಟ ಬಾಲಕನಿಗೆ ಧನ ಸಹಾಯ ಮಾಡಿದರು. ಮಂಗಳೂರು ತಾಲೂಕಿನ ಕುಪ್ಪೆಪದವು ಸಮೀಪದ ಕೊಳವೂರು ಗ್ರಾಮದ ಜಯಶೀಲಾ ಸದಾಶಿವ ಆಚಾರ್ಯ ದಂಪತಿ 2ವರ್ಷ 3ತಿಂಗಳ ಶಮಿತ್  ಎಂಬ ಮಗುವಿಗೆ ಹುಟ್ಟುವಾಗಲೇ ಮಲ ವಿಸರ್ಜನೆ ಮಾಡುವ ಅಂಗವಿರಲಿಲ್ಲ

ಪುಟ್ಟ ಬಾಲಕನ ಚಿಕಿತ್ಸೆಗೆ ನೇರವಾದ ವಿಶ್ವಹಿಂದೂ ಪರಿಷದ್, ಭಜರಂಗದಳ Read More »

ಪೊಲೀಸ್, ಪತ್ರಕರ್ತರ ಎದುರೇ ಕುಖ್ಯಾತ ಪಾತಕಿ, ಬಿಎಸ್‌ಪಿ ನಾಯಕ ಅತೀಕ್‌ ಅಹ್ಮದ್‌ ಹತ್ಯೆ

ಮಗ ಎನ್‌ಕೌಂಟರ್‌ಗೆ ಬಲಿಯಾದ ಎರಡೇ ದಿನದಲ್ಲಿ ತಂದೆಯ ಹತ್ಯೆ ಲಖನೌ : ನೂರಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವ ಉತ್ತರ ಪ್ರದೇಶದ ದರೋಡೆಕೋರ ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ಅಹ್ಮದ್‌ನನ್ನು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯುತ್ತಿದ್ದಾಗ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಪತ್ರಕರ್ತರ ಸೋಗಿನಲ್ಲಿ ಬಂದ ಹಂತಕರು ಅಹ್ಮದ್‌ ಸಹೋದರರನ್ನು ಪೊಲೀಸರು ಮತ್ತು ಪತ್ರಕರ್ತರ ಎದುರೇ ಅತಿ ಸಮೀಪದಿಂದ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿ ಕೊಂದಿದ್ದಾರೆ. ಇಡೀ ಹತ್ಯೆ ಕೃತ್ಯ

ಪೊಲೀಸ್, ಪತ್ರಕರ್ತರ ಎದುರೇ ಕುಖ್ಯಾತ ಪಾತಕಿ, ಬಿಎಸ್‌ಪಿ ನಾಯಕ ಅತೀಕ್‌ ಅಹ್ಮದ್‌ ಹತ್ಯೆ Read More »

‘ಅಜೇಯʼಕ್ಕೆ ಐವತ್ತು ತುಂಬಿತು

ಭಾರತದ ಮಹಾ ಕ್ರಾಂತಿಕಾರಿಗಳ ಪರಿಚಯ ಮಾಡಿದ ಅದ್ಭುತ ಕೃತಿ ನಾನು ಒಂಬತ್ತನೇ ತರಗತಿಯಲ್ಲಿ ಇದ್ದಾಗ 600 ಪುಟಗಳ ಆ ಪುಸ್ತಕ ನನ್ನ ಕೈ ಸೇರಿತ್ತು. ನನ್ನ ತೀವ್ರ ಓದಿನ ಹುಚ್ಚಿನ ದಿನಗಳು ಅವು. ಬಾಬು ಕೃಷ್ಣಮೂರ್ತಿ ಎಂಬ ಮಹಾನ್ ಲೇಖಕ ಈ ಪುಸ್ತಕವನ್ನು ಎಷ್ಟೊಂದು ಅದ್ಭುತವಾಗಿ ಬರೆದಿದ್ದರು ಎಂದರೆ ಅದನ್ನು ಓದಿದ ನಂತರ ನನ್ನ ಬದುಕಿನ ರೀತಿಯೇ ಬದಲಾಯ್ತು. ರಾಷ್ಟ್ರಪ್ರೇಮ ನನ್ನ ರಕ್ತದ ಒಳಗೆ ಇಂಜೆಕ್ಟ್ ಮಾಡಿದ ಪುಸ್ತಕ ಅದು. ಇದು ಚಂದ್ರಶೇಖರ್ ಆಜಾದ್ ಕತೆ 1974ರಲ್ಲಿ

‘ಅಜೇಯʼಕ್ಕೆ ಐವತ್ತು ತುಂಬಿತು Read More »

ಮಹತ್ವ ಪಡೆದುಕೊಂಡ ಬಿ.ಎಲ್. ಸಂತೋಷ್ ಪುತ್ತೂರು ಭೇಟಿ | ಅಭ್ಯರ್ಥಿಗಳೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾತುಕತೆ

ಪುತ್ತೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್ ಅವರು ಶನಿವಾರ ಪುತ್ತೂರಿಗೆ ಭೇಟಿ ನೀಡಿ, ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಚುನಾವಣೆ ಹಿನ್ನೆಲೆಯಲ್ಲಿ ಬಿ.ಎಲ್. ಸಂತೋಷ್ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. ಪುತ್ತೂರಿನ ಅಭ್ಯರ್ಥಿ ಆಶಾ ತಿಮ್ಮಪ್ಪ, ಸುಳ್ಯ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರೊಂದಿಗೆ ಮಾತುಕತೆ ನಡೆಸಿದರು. ಪುತ್ತೂರು ಬಿಜೆಪಿ ಕಚೇರಿಗೆ ಆಗಮಿಸಿದ ಅವರು ಮುಖಂಡರು, ಕಾರ್ಯಕರ್ತರೊಂದಿಗೆ ಮಾತನಾಡಿ, ಚುನಾವಣಾ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

ಮಹತ್ವ ಪಡೆದುಕೊಂಡ ಬಿ.ಎಲ್. ಸಂತೋಷ್ ಪುತ್ತೂರು ಭೇಟಿ | ಅಭ್ಯರ್ಥಿಗಳೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾತುಕತೆ Read More »

ವರುಣ ಕೃಪೆಗೆ ಗಂಗಾರತಿ | ಶ್ರೀ ಮಹಾಲಿಂಗೇಶ್ವರ ಪುಷ್ಕರಣಿಗೆ ಭಕ್ತರ ಆರತಿ

ಪುತ್ತೂರು: ಜಾತ್ರೆಯ ಸಡಗರದಲ್ಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ವರುಣನ ಕೃಪೆಗಾಗಿ ಗಂಗಾರತಿ ನಡೆಯಿತು. ದೇವಸ್ಥಾನದಲ್ಲಿ ದೇವರ ಬಲಿ ಹೊರಟು, ಕಟ್ಟೆಪೂಜೆ ನಡೆಯುವ ವೇಳೆಯಲ್ಲಿ ಗಂಗಾರತಿ ನಡೆಯಿತು. ಹಿನ್ನೆಲೆಯಲ್ಲಿ ಮಂತ್ರೋಚ್ಛಾರ ಕೇಳಿ ಬರುತ್ತಿದ್ದಂತೆ, ಪುಷ್ಕರಣಿಯ ನಾಲ್ಕು ದಿಕ್ಕುಗಳಲ್ಲಿ ನೆರೆದ ಭಕ್ತರು ತಮ್ಮ ಕೈಯಾರೆ ಆರತಿ ಬೆಳಗಿದರು. ಪುಷ್ಕರಣಿಯ ಕಟ್ಟೆ ನಾವೀನ್ಯಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ವರುಣನ ವಿಗ್ರಹ ಕಂಡು ಭಕ್ತರು ಪುನೀತಗೊಂಡಿದ್ದರು. ಬಿರುಬೇಸಗೆಯಿಂದ ಕಂಗೆಟ್ಟ ಜನರು ಇದೀಗ ಗಂಗಾರತಿ ಮಾಡಿ, ತಮ್ಮ ಮನದ ಅಭಿಲಾಷೆ

ವರುಣ ಕೃಪೆಗೆ ಗಂಗಾರತಿ | ಶ್ರೀ ಮಹಾಲಿಂಗೇಶ್ವರ ಪುಷ್ಕರಣಿಗೆ ಭಕ್ತರ ಆರತಿ Read More »

ಏ. 18ರಂದು ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಕೆ | ಮುರುಳ್ಯಗೆ ಸಿಂಗಂ ಖ್ಯಾತಿಯ ಅಣ್ಣಾಮಲೈ ಸಾಥ್

ಸುಳ್ಯ: ಭಾಗೀರಥಿ ಮುರುಳ್ಯ ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಏ. 18ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ತಮಿಳುನಾಡು ಬಿಜೆಪಿ ಅಧ್ಯಕ್ಷ, ಐಪಿಎಸ್ ಮಾಜಿ ಅಧಿಕಾರಿ ಅಣ್ಣಾಮಲೈ ಜೊತೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಭಾಗೀರಥಿ ಮುರುಳ್ಯ ಅವರು ಏ. 18ರಂದು ಬೆಳಿಗ್ಗೆ 10ರಿಂದ 12 ಗಂಟೆಯ ನಡುವಿನಲ್ಲಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಏ. 18ರಂದು ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಕೆ | ಮುರುಳ್ಯಗೆ ಸಿಂಗಂ ಖ್ಯಾತಿಯ ಅಣ್ಣಾಮಲೈ ಸಾಥ್ Read More »

ಕ್ರಿಮಿನಾಶಕ ಸೇವಿಸಿ ವ್ಯಕ್ತಿ ಸಾವು

ಸುಳ್ಯ : ಕ್ರಿಮಿನಾಶಕ ಸೇವಿಸಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿ ಏ.13 ರಂದು ಸಂಭವಿಸಿದೆ. ವಸಂತ್‌ ಕುಮಾರ್‌ ಎಂಬವರೇ ಮೃತಪಟ್ಟ ವ್ಯಕ್ತಿ. ಮದ್ಯಪಾನ ದುಶ್ಚಟ ಹೊಂದಿದ್ದ ಇವರು ಏ.13 ರಂದು ಕ್ರಿಮಿನಾಶಕ ಸೇವಿಸಿದ್ದು, ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿರುತ್ತಾರೆ. ಈ ಕುರಿತು ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ರಿಮಿನಾಶಕ ಸೇವಿಸಿ ವ್ಯಕ್ತಿ ಸಾವು Read More »

error: Content is protected !!
Scroll to Top