ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮ ರದ್ದು | ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ನಿಧನ ಹಿನ್ನೆಲೆ

ಪುತ್ತೂರು: ಶನಿವಾರ ಸಂಜೆ ಪುತ್ತೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮ ರದ್ದಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವ ನಾರಾಯಣ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸಿನ ಪ್ರಕಟಣೆ ತಿಳಿಸಿದೆ. ಕಾಂಗ್ರೆಸಿನ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಹಲವು ಯೋಜನೆಗಳ ಪ್ರಚಾರಾರ್ಥವಾಗಿ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಕಾರ್ಯಕ್ರಮ ರದ್ದಾಗಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮವನ್ನು ಅಜೆಂಡಾವನ್ನು ಪ್ರತಿ ಮನೆಮನೆಗೆ ತಲುಪಿಸುವಂತೆ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮ ರದ್ದು | ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ನಿಧನ ಹಿನ್ನೆಲೆ Read More »

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ : ಪ್ರಾಂಶುಪಾಲೆ ಸೇರಿ ಐವರ ಬಂಧನ

ಹಳೆಬೀಡು ವಸತಿ ಶಾಲೆಯಲ್ಲಿ ನಡೆದ ಕೃತ್ಯ ಹಾಸನ : ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬೇಲೂರು ತಾಲೂಕಿನ ವಸತಿ ಶಾಲೆಯ ಪ್ರಾಂಶುಪಾಲೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಕೆಲ ತಿಂಗಳುಗಳಿಂದ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು.ಪುನೀತ್ (28), ಶಿಕ್ಷಕ ಶಿವಯ್ಯ (32), ಪ್ರಾಂಶುಪಾಲೆ ಗೀತಾಬಾಯಿ (38), ಭದ್ರತಾ ಸಿಬ್ಬಂದಿ ಶ್ರುತಿ ಬಿ.ಸಿ. (30), ಶಿಕ್ಷಕ ವಿಜಯಕುಮಾರ (39) ಬಂಧಿತ ಆರೋಪಿಗಳು. ಕೆಲವು ತಿಂಗಳುಗಳಿಂದ ವಸತಿ

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ : ಪ್ರಾಂಶುಪಾಲೆ ಸೇರಿ ಐವರ ಬಂಧನ Read More »

ಪುತ್ತೂರು ಜಾತ್ರೆಯ ಆಮಂತ್ರಣ ಬಿಡುಗಡೆ | ವರ್ಷಂಪ್ರತಿಯಂತೆ ಏ. 1ಕ್ಕೆ ಗೊನೆ ಮುಹೂರ್ತ, ಏ. 10ರಿಂದ ಜಾತ್ರೆ | ಆಮಂತ್ರಣ ಪತ್ರ ಅನಾವರಣಗೊಳಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಹತ್ತೂರಿನ ಜನರು ತದೇಕಚಿತ್ತದಿಂದ ವೀಕ್ಷಿಸುವ ಪುತ್ತೂರು ಜಾತ್ರೆಯ ಆಮಂತ್ರಣ ಪತ್ರ ಮಾರ್ಚ್ 11ರಂದು ಬೆಳಿಗ್ಗೆ ಶಾಸಕ ಸಂಜೀವ ಮಠಂದೂರು ಬಿಡುಗಡೆಗೊಳಿಸಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ, ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಆಡಳಿತಾಧಿಕಾರಿ ನವೀನ್ ಭಂಡಾರಿ, ಗೌರಿ ಬನ್ನೂರು, ಪಿ.ಜಿ. ಜಗನ್ನೀವಾಸ್ ರಾವ್, ರಾಜೇಶ್ ಬನ್ನೂರು, ಐತ್ತಪ್ಪ ನಾಯ್ಕ್, ವೀಣಾ ಆಚಾರ್ಯ, ಗೌರಿ ಬನ್ನೂರು, ದೀಕ್ಷಾ ಪೈ, ಸಾಜಾ ರಾಧಾಕೃಷ್ಣ

ಪುತ್ತೂರು ಜಾತ್ರೆಯ ಆಮಂತ್ರಣ ಬಿಡುಗಡೆ | ವರ್ಷಂಪ್ರತಿಯಂತೆ ಏ. 1ಕ್ಕೆ ಗೊನೆ ಮುಹೂರ್ತ, ಏ. 10ರಿಂದ ಜಾತ್ರೆ | ಆಮಂತ್ರಣ ಪತ್ರ ಅನಾವರಣಗೊಳಿಸಿದ ಶಾಸಕ ಸಂಜೀವ ಮಠಂದೂರು Read More »

ಮಾ.12 ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮೋದಿಯಿಂದ ಲೋಕಾರ್ಪಣೆ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ ವೇ ಲೋಕಾರ್ಪಣೆ ಸೇರಿಸಿದಂತೆ ಸುಮಾರು 16 ಸಾವಿರ ಕೋಟಿ ರೂ. ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ.ಭಾನುವಾರ ಮಧ್ಯಾಹ್ನ 12 ಗಂಟೆಗೆ ಮೋದಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ 3:15ಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವರ್ಷದ ಆರಂಭದಿಂದ ರಾಜ್ಯ ಪ್ರವಾಸದಲ್ಲಿರುವ

ಮಾ.12 ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮೋದಿಯಿಂದ ಲೋಕಾರ್ಪಣೆ Read More »

ಮರುಭೂಮಿಯನ್ನೂ ಮೀರಿಸಿ ಹೆಚ್ಚುತ್ತಿರುವ ಕರಾವಳಿಯ ತಾಪಮಾನ

ಕೇರಳದಲ್ಲಿ 54 ಡಿಗ್ರಿ ಸೆಲ್ಸಿಯಸ್‌ ದಾಖಲು ತಿರುವನಂತಪುರಂ : ಕರಾವಳಿ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕದಲ್ಲಿ ತಾಪಮಾನ ಮರುಭೂಮಿಯನ್ನೂ ಮೀರಿಸಿ ಹೆಚ್ಚುತ್ತಿದೆ. ನಿನ್ನೆ ಕೇರಳದಲ್ಲಿ ತಾಪಮಾನ ಹೊಸ ದಾಖಲೆ ಬರೆದಿದ್ದು, ಕೋಝಿಕ್ಕೋಡ್ ಮತ್ತು ತಿರುವನಂತಪುರಂನಲ್ಲಿ ಗರಿಷ್ಠ ಉಷ್ಣಾಂಶ 54 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಇದು ರಾಜಸ್ಥಾನದ ಮರುಭೂಮಿಯಲ್ಲಿ ಕಡುಬೇಸಿಗೆಯಲ್ಲಿ ದಾಖಲಾಗುವ ತಾಪಮಾನದ ಆಸುಪಾಸಿನಲ್ಲಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಕೆಎಸ್‌ಡಿಎಂಎ) ಗುರುವಾರ ದಿನನಿತ್ಯದ ಶಾಖ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಉಷ್ಣಗಾಳಿ ಬೀಸುವ ಸಾಧ್ಯತೆ ಇದೆ ಎಚ್ಚರಿಕೆ ನೀಡಿದೆ.ಗುರುವಾರ

ಮರುಭೂಮಿಯನ್ನೂ ಮೀರಿಸಿ ಹೆಚ್ಚುತ್ತಿರುವ ಕರಾವಳಿಯ ತಾಪಮಾನ Read More »

ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ರಚನೆ

ಬೊಮ್ಮಾಯಿ ಅಧ್ಯಕ್ಷ : ಯಡಿಯೂರಪ್ಪ, ಕಟೀಲ್‌ ಸದಸ್ಯರು ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷರಾಗಿರುವ ಚುನಾವಣಾ ಪ್ರಚಾರ ಸಮಿತಿಯನ್ನು ಬಿಜೆಪಿ ರಚಿಸಿದೆ. ಈ ಸಮಿತಿಯಲ್ಲಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೂ ಸ್ಥಾನವಿದ್ದು, ಸದಸ್ಯರಾಗಿ ಅವರ ಹೆಸರನ್ನು ಸೇರಿಸಲಾಗಿದೆ.ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವೆ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ, ಸಚಿವ

ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ರಚನೆ Read More »

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಹೃದಯಾಘಾತದಿಂದ ನಿಧನ

ಸಂಸದ, ಶಾಸಕರಾಗಿ ಸೇವೆ ಸಲ್ಲಿಸಿದ್ದ ಜನನಾಯಕ ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್. ಧ್ರುವ ನಾರಾಯಣ ಅವರು ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಕೂಡಲೇ ಅವರನ್ನು ಮೈಸೂರಿನ ಡಿಆರ್​ಎಂಎಸ್​​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.ಶನಿವಾರ ಬೆಳಗ್ಗೆ 6.30ರ ವೇಳೆಗೆ ಧ್ರುವನಾರಾಯಣ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ, ಕೂಡಲೇ ಅವರು ಡ್ರೈವರ್‌ಗೆ ಕರೆ ಮಾಡಿದ್ದಾರೆ, ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಹೃದಯಾಘಾತದಿಂದ ನಿಧನ Read More »

ಸಭಾಕಂಪನವನ್ನು ಗೆಲ್ಲಲು ಸಾಧ್ಯ

ಒಳಗಿನ ಒತ್ತಡ ನಿರ್ವಹಣೆಗೆ ಇಲ್ಲಿವೆ ಒಳ್ಳೆಯ ಟಿಪ್ಸ್ ಈ ಸಭಾಕಂಪನ (ಸ್ಟೇಜ್ ಫಿಯರ್‌) ಎನ್ನುವುದು ನೂರಾರು ಒಳ್ಳೆಯ ಭಾಷಣದ ಪ್ರತಿಭೆಗಳನ್ನು ಕೊಂದುಹಾಕಿದೆ. ಈ ಕಂಪನವನ್ನು ಗೆಲ್ಲಲು ಸಾಧ್ಯ ಇದೆಯೇ?ಭಾಷಣ ಎನ್ನುವುದು ಒಂದು ಶ್ರೇಷ್ಟವಾದ ಕಲೆ. ಶ್ರೇಷ್ಠವಾದ ಭಾಷಣಕಾರ ಒಂದು ಇಡೀ ಸಮೂಹವನ್ನು ಪ್ರಭಾವಿಸಬಲ್ಲ. ಸಾವಿರಾರು ಮಂದಿಗೆ ಏಕಕಾಲದಲ್ಲಿ ಪ್ರೇರಣೆ ಕೊಡಬಲ್ಲ. ಮಾಹಿತಿಗಳ ರವಾನೆಗೆ ಭಾಷಣ ಅತ್ಯುತ್ತಮ ಮಾಧ್ಯಮ ಆಗಿದೆ. ಭಾಷಣದ ಮೂಲಕ ಮನರಂಜನೆ ಕೊಡುವ ಒಳ್ಳೆಯ ಭಾಷಣಕಾರರ ಸಂಖ್ಯೆ ಕೂಡ ತುಂಬಾ ದೊಡ್ಡದಿದೆ. ಒಬ್ಬ ಪ್ರಬುದ್ಧ ಭಾಷಣಕಾರ

ಸಭಾಕಂಪನವನ್ನು ಗೆಲ್ಲಲು ಸಾಧ್ಯ Read More »

ಜಿಲ್ಲೆಯ 11 ಮಂದಿ ಜಿಲ್ಲೆಯಿಂದ 6 ತಿಂಗಳು ಗಡಿಪಾರು | ಗಡಿಪಾರಿಗೊಳಗಾದವರಲ್ಲಿ ಐವರು ಪುತ್ತೂರಿನವರು | ಚುನಾವಣೆಗೆ ಜಿಲ್ಲಾಡಳಿತದ ತಯಾರಿ ಹೀಗಿದೆ

ಪುತ್ತೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಪೊಲೀಸರು ಜಾಗೃತರಾಗಿದ್ದಾರೆ. ಅಪರಾಧ ಹಿನ್ನೆಲೆಯುಳ್ಳವರನ್ನು ಗುರುತಿಸಿ, ಅವರನ್ನು ಗಡಿಪಾರುಗೊಳಪಡಿಸುವ ಕೆಲಸ ನಡೆಯುತ್ತಿದೆ. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರತಿ ಚುನಾವಣೆ ಎದುರಾದಾಗಲೂ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿಗಳ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ಗಡಿಪಾರಿಗೆ ಆದೇಶ ನೀಡುತ್ತಾರೆ. ಈ ಬಾರಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 11 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಇದರಲ್ಲಿ ಐವರು ಪುತ್ತೂರು ತಾಲೂಕಿನವರು. ಮಾರ್ಚ್ 6ರಿಂದಲೇ

ಜಿಲ್ಲೆಯ 11 ಮಂದಿ ಜಿಲ್ಲೆಯಿಂದ 6 ತಿಂಗಳು ಗಡಿಪಾರು | ಗಡಿಪಾರಿಗೊಳಗಾದವರಲ್ಲಿ ಐವರು ಪುತ್ತೂರಿನವರು | ಚುನಾವಣೆಗೆ ಜಿಲ್ಲಾಡಳಿತದ ತಯಾರಿ ಹೀಗಿದೆ Read More »

`ನಾವು ಬಿಜೆಪಿಯ ಸಕ್ರೀಯ ಕಾರ್ಯಕರ್ತರು’ | ಕಾಂಗ್ರೆಸ್ ಸೇರ್ಪಡೆ ಎಂಬ ವರದಿಯೇ ಸುಳ್ಳು! | ಚಂದ್ರ ಬೋಸ್ ಹಾಗೂ ಸಂಗಡಿಗರ ವೀಡಿಯೋ ಹೇಳಿಕೆ ವೈರಲ್

ಪುತ್ತೂರು: ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆಂದು ತಮ್ಮ ಬಗ್ಗೆ ಸುಳ್ಳು ಸುದ್ದಿ ನೀಡಿದ್ದು, ತಾವು ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತರು ಎಂದು ಬಿಜೆಪಿ ಕಾರ್ಯಕರ್ತ ಚಂದ್ರ ಬೋಸ್ ವೀಡಿಯೋ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಎಂಬಂತೆ ಬಿಂಬಿಸಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಚಂದ್ರಬೋಸ್ ಹಾಗೂ ಅವರ ಸಂಗಡಿಗರು ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ಆ ವರದಿಯಲ್ಲಿ ಸತ್ಯಾಂಶವಿಲ್ಲ ಎಂದು ಆರೋಪಿಸಿದ್ದಾರೆ. ಚಂದ್ರ ಬೋಸ್ ಹಾಗೂ ಸಂಗಡಿಗರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋದ

`ನಾವು ಬಿಜೆಪಿಯ ಸಕ್ರೀಯ ಕಾರ್ಯಕರ್ತರು’ | ಕಾಂಗ್ರೆಸ್ ಸೇರ್ಪಡೆ ಎಂಬ ವರದಿಯೇ ಸುಳ್ಳು! | ಚಂದ್ರ ಬೋಸ್ ಹಾಗೂ ಸಂಗಡಿಗರ ವೀಡಿಯೋ ಹೇಳಿಕೆ ವೈರಲ್ Read More »

error: Content is protected !!
Scroll to Top