ಪೆರ್ಲಂಪಾಡಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದು ಭೂಮಿಯಿಲ್ಲದ ಬಡವನನ್ನು ಭೂಮಿಯ ಒಡೆಯನನ್ನಾಗಿ ಮಾಡಿದ್ದು ಕಾಂಗ್ರೆಸ್‌ನ ಇಂದಿರಾಗಾಂಧಿ. ಅದೇ ರೀತಿ ಕರ್ನಾಟಕದಲ್ಲಿ ಕೃಷಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಕೃಷಿಕರ ಬದುಕನ್ನು ಹಸನಾಗಿಸಿದ್ದೂ ಕಾಂಗ್ರೆಸ್ ಸರಕಾರವೇ  ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು. ಪೆರ್ಲಂಪಾಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ಬಂದಾಗ ಅನೇಕ ಮಂದಿ ಭೂಮಿ ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡವರೆಲ್ಲರೂ ಇಂದಿಗೂ ಕಾಂಗ್ರೆಸ್ಸಲ್ಲೇ […]

ಪೆರ್ಲಂಪಾಡಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ Read More »

ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ವರದಿ | ಶಾಸಕ ಸಂಜೀವ ಮಠಂದೂರಿಗೆ 2ನೇ ಸ್ಥಾನ

ಪುತ್ತೂರು: ವಿಧಾನಸಭೆಯಲ್ಲಿ 2018ರಿಂದ 2022ರ ನಡುವೆ ನಡೆದಿರುವ ಅಧಿವೇಶನಗಳಲ್ಲಿ ಭಾಗಿಯಾದ ಶಾಸಕರ ಹಾಜರಾತಿಯ ವರದಿ ಪ್ರಕಟಗೊಂಡಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 2018ರಿಂದ 2022ರ ತನಕ ನಡೆದ 15 ಅಧಿವೇಶನಗಳಲ್ಲಿ ಶಾಸಕರ ಹಾಜರಾತಿ ಬಗ್ಗೆ ಕೇಳಲಾದ ಪ್ರಶ್ನೆಗಳು, ಮಸೂದೆಗಳ ಮಂಡನೆ, ಹಾಗೂ ಅಂಗೀಕಾರ ಸೇರಿ ಇತರ ಮಾಹಿತಿ ಒಳಗೊಂಢ ಅಂಶಗಳು ಈ ವರದಿಯಲ್ಲಿವೆ. ಶಾಸಕರ ಕಾರ್ಯಕ್ಷಮತೆ ಬಗ್ಗೆ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರೀಫಾರ್ಮ್ಸ್ ವರದಿ ಮಾಡಿದೆ. ಅಧಿವೇಶನದಲ್ಲಿ ಶಾಸಕರ ಹಾಜರಾತಿ ತೀವ್ರವಾಗಿ

ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ವರದಿ | ಶಾಸಕ ಸಂಜೀವ ಮಠಂದೂರಿಗೆ 2ನೇ ಸ್ಥಾನ Read More »

ಹಿಂದೂಪರ ಕೆಲಸಗಳಿಗೆ ಶಾಸಕತ್ವವೇ ಬೇಕೆ? | ದೇವಸ್ಥಾನಗಳಲ್ಲಿ ಹಣ ದುರುಪಯೋಗ ಮಾಡಿದ್ದ ಪುತ್ತಿಲ | ಅರುಣ್ ಪುತ್ತಿಲ ಸಿಂಪಥೈಸರ್ | ಆಶಾ ತಿಮ್ಮಪ್ಪ ಸಮರ್ಥರು. ಅವರ ಬಗ್ಗೆ ಅಪಪ್ರಚಾರ ತರವಲ್ಲ

ಪುತ್ತೂರು: ಹಿಂದೂಪರ ಕೆಲಸ ಮಾಡಲು ಶಾಸಕನೇ ಆಗಬೇಕೆಂದು ಹಠ ಹಿಡಿದು ನಿಲ್ಲುವುದು ಸರಿಯಲ್ಲ. ಆರ್.ಎಸ್.ಎಸ್., ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅದೆಷ್ಟೋ ಮಹನೀಯರು ಯಾವುದೇ ಹುದ್ದೆಗೆ ಆಸೆ ಪಡದೇ, ಕೆಲಸ ಮಾಡಿದ್ದಾರೆ. ಹೀಗಿರುವಾಗ ಅರುಣ್ ಕುಮಾರ್ ಪುತ್ತಿಲ ಸಿಂಪಥೈಸರ್ ಆಗಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣೆ ಬಂದಾಗ ಗಲಾಟೆಗೆ ನಿಂತು ಬಿಡುವ ಪ್ರವೃತ್ತಿ ಸರಿಯಲ್ಲ ಎಂದು ವೈದ್ಯ ಡಾ. ಎಂ.ಕೆ. ಪ್ರಸಾದ್ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತಿಲ ಅವರಲ್ಲಿ ಸಂಘಟನಾ ಶಕ್ತಿ ಇದೆ. ನನ್ನ

ಹಿಂದೂಪರ ಕೆಲಸಗಳಿಗೆ ಶಾಸಕತ್ವವೇ ಬೇಕೆ? | ದೇವಸ್ಥಾನಗಳಲ್ಲಿ ಹಣ ದುರುಪಯೋಗ ಮಾಡಿದ್ದ ಪುತ್ತಿಲ | ಅರುಣ್ ಪುತ್ತಿಲ ಸಿಂಪಥೈಸರ್ | ಆಶಾ ತಿಮ್ಮಪ್ಪ ಸಮರ್ಥರು. ಅವರ ಬಗ್ಗೆ ಅಪಪ್ರಚಾರ ತರವಲ್ಲ Read More »

ಆಶ್ಮಿ ಕಂಫರ್ಟ್ ನಲ್ಲಿ ಪುತ್ತೂರು ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ

ಪುತ್ತೂರು : ಬೈಪಾಸ್ ರಸ್ತೆಯಲ್ಲಿರುವ ಆಶ್ಮಿ ಕಂಫರ್ಟ್ ನಲ್ಲಿ ಬಿಜೆಪಿ ಚುನಾವಣಾ ಕಚೇರಿ ಗುರುವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು. ಗಣಹೋಮ ನೆರವೇರಿಸುವ ಮೂಲಕ ಕಚೇರಿ ಉದ್ಘಾಟನೆಗೊಂಡು ಚುನಾವಣೆಯ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಬೆಳಿಗ್ಗೆ ಕರ್ನಾಟಕದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲೇ  ಕಚೇರಿ ಉದ್ಘಾಟನೆಗೊಂಡಿತು. ಗಣಹೋಮ ನೆರವೇರಿದ ಬಳಿಕ ಬಿಜೆಪಿ ಮುಂಖಡರು, ಕಾರ್ಯಕರ್ತರು ಎಲ್ ಇಡಿ ಪರದೆ ಮೂಲಕ ನರೇಂದ್ರ ಮೋದಿಯರ ಭಾಷಣಕ್ಕೆ ಕಿವಿಯಾದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು,

ಆಶ್ಮಿ ಕಂಫರ್ಟ್ ನಲ್ಲಿ ಪುತ್ತೂರು ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘಕ್ಕೆ 2022-23ನೇ ಸಾಲಿನಲ್ಲಿ ಒಂದು ಕೋಟಿಗೂ ಆಧಿಕ ಲಾಭ : ಚಿದಾನಂದ ಬೈಲಾಡಿ

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ 2022-23ನೇ ಸಾಲಿನಲ್ಲಿ 400 ಕೋಟಿಗೂ ಅಧಿಕ ವ್ಯವಹಾರ ನಡೆಸಿ ಒಂದು ಕೋಟಿಗೂ ಅಧಿಕ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದ್ದಾರೆ. ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ 2002ರಲ್ಲಿ ಸಂಘ  ಆರಂಭಗೊಂಡಿದ್ದು, ಮುಖ್ಯ ಕಚೇರಿ ಸಹಿತ ಒಟ್ಟು 8 ಶಾಖೆಗಳನ್ನು ಹೊಂದಿದೆ. ಪುತ್ತೂರು ಎಪಿಎಂಸಿ ಮಾನಾಯಿ ಆರ್ಚ್ ಕಟ್ಟಡ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ಕಟ್ಟಡ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಆಲಂಕಾರು, ಕುಂಬ್ರ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘಕ್ಕೆ 2022-23ನೇ ಸಾಲಿನಲ್ಲಿ ಒಂದು ಕೋಟಿಗೂ ಆಧಿಕ ಲಾಭ : ಚಿದಾನಂದ ಬೈಲಾಡಿ Read More »

ಸುಳ್ಯ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೊಳ್ನಾರ್ಕರ್ ರಿಂದ ಪ್ರಚಾರ ಕಾರ್ಯ

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೊಳ್ನಾರ್ಕರ್ ಸುಳ್ಯ ತಾಲೂಕಿನ ಹಲವೆಡೆ ಪ್ರಚಾರ ಕಾರ್ಯ ನಡೆಸಿದರು. ಅಜ್ಜಾವರ, ಅಡ್ಕ, ಮಾವಿನಪಳ್ಳ ಸೇರಿದಂತೆ ಹಲವಾರು ಕಡೆ ಚುನಾವಣಾ ಪ್ರಚಾರ ನಡೆಸಿ, ಕಾರ್ನರ್ ಸಭೆ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಸುಮಾರು 50 ಕ್ಕೂ ಅಧಿಕ ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗುರುಪ್ರಸಾದ್ ಮೆರ್ಕಜೆ, ಖಲಂದರ್ ಎಲಿಮಲೆ, ಗಣೇಶ್ ಕುಂಡಡ್ಕ, ರಾಮಕೃಷ್ಣ ಬೀರಮಂಗಿಲ, ಸಂಶುದ್ದೀನ್ ಕೆ.ಎಂ., ವಸಂತ, ಸಿಂಚನ,

ಸುಳ್ಯ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೊಳ್ನಾರ್ಕರ್ ರಿಂದ ಪ್ರಚಾರ ಕಾರ್ಯ Read More »

ಏ.28 : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ

ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ ಏ.28 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನೇಮೋತ್ಸವದ ಅಂಗವಾಗಿ ಏ.27 ಗುರುವಾರ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಧ್ಯಾಹ್ನ 12.15 ಕ್ಕೆ ದೇವತಾ ಪ್ರಾರ್ಥನೆ, ಮಹಾಪೂಜೆ, ಸಂಜೆ 6 ಕ್ಕೆ ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ರಂಗಪೂಜೆ, ರಾತ್ರಿ 7 ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ರಾತ್ರಿ 9 ಕ್ಕೆ ತಂಬಿಲಾದಿಗಳು ನಡೆದು ಪ್ರಸಾದ ವಿತರಣೆ, 9.30 ಕ್ಕೆ ಅನ್ನಸಂತರ್ಪಣೆ

ಏ.28 : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ Read More »

ತಲೆಬೈಲು ಮಠದಲ್ಲಿ ಬೊಟ್ಯಾಡಿ ವಿಶೇಷ ಪ್ರಾರ್ಥನೆ

ಪುತ್ತೂರು: ಶತ್ರುನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ದೇವರ ಮಠದಲ್ಲಿ ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಜ್ಯದಲ್ಲಿ ಹಾಗೂ ಪುತ್ತೂರಿನಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಂತೆ ಪ್ರಾರ್ಥಿಸಿದರು. ಇದೇ ಸಂದರ್ಭ ಮಠದ ಮಂಜುನಾಥ್ ಉಡುಪ ಅವರು ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ತಲೆಬೈಲು ಮಠದಲ್ಲಿ ಬೊಟ್ಯಾಡಿ ವಿಶೇಷ ಪ್ರಾರ್ಥನೆ Read More »

ಕಾಣಿಯೂರು, ಬೆಳಂದೂರಿನಲ್ಲಿ ಮಳೆಯ ಸಿಂಚನ

ಪುತ್ತೂರು: ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಮಳೆ ಸುರಿದಿದೆ. ಈ ಮೂಲಕ ತಂಪಿನ ಸಿಂಚನ ಉಂಟಾಗಿದೆ. ಕಾಣಿಯೂರು, ಬೆಳಂದೂರು ಮುಂತಾದ ಕಡೆಗಳಲ್ಲಿ ಮಳೆ ಸುರಿಯುತ್ತಿದ್ದು, ಪುತ್ತೂರಿನಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣ ಉಂಟಾಗಿತ್ತು. ಪುತ್ತೂರಿನಲ್ಲೂ ಸಂಜೆ ವೇಳೆ ಮೋಡ ಮುಸುಕಿದ ವಾತಾವರಣವಿದ್ದು, ಗುಡುಗಿನ ಅನುರಣನ ಕೇಳಿ ಬರುತ್ತಿದ್ದು ಆದರೂ ಮಳೆ ಬರಲೇ ಇಲ್ಲ.

ಕಾಣಿಯೂರು, ಬೆಳಂದೂರಿನಲ್ಲಿ ಮಳೆಯ ಸಿಂಚನ Read More »

ದೇಶದ ಆದರ್ಶವೇ ಉದಾತ್ತ ಸೇವೆ ಮತ್ತು ಸಮರ್ಪಣೆ | ವಿವೇಕಾನಂದ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮುರಳಿಕೃಷ್ಣ ಕೆ.ಎನ್.

ಪುತ್ತೂರು: ಸೇವೆ ಎನ್ನುವ ಪರಿಕಲ್ಪನೆ ಅತ್ಯಂತ ಅದ್ಭುತವಾದುದು. ದೇಶದ ಆದರ್ಶವೇ ಸೇವೆ ಮತ್ತು ಸಮರ್ಪಣೆ. ಪರಸ್ಪರ ಸಹಕಾರ, ಸೌಹಾರ್ಧತೆಯೇ ದೇಶದ ಏಳಿಗೆಗೆ ಸಹಕಾರಿ ಎಂದು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಇದರ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಹೇಳಿದರು. ಇವರು ಮಂಗಳೂರು ವಿಶ್ವವಿದ್ಯಾಲಯ, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಮತ್ತು ಕೇಪು ಕೈಲಾಸೇಶ್ವರ ದೇವಾಲಯದ ಆಶ್ರಯದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ

ದೇಶದ ಆದರ್ಶವೇ ಉದಾತ್ತ ಸೇವೆ ಮತ್ತು ಸಮರ್ಪಣೆ | ವಿವೇಕಾನಂದ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮುರಳಿಕೃಷ್ಣ ಕೆ.ಎನ್. Read More »

error: Content is protected !!
Scroll to Top