ನಾಳೆಯಿಂದ 2,000 ರೂ. ನೋಟು ಬದಲಾವಣೆ

ಹೊಸದಿಲ್ಲಿ : ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಾಪಸ್‌ ಪಡೆಯುವ ಪ್ರಕ್ರಿಯೆ ಬ್ಯಾಂಕ್‌ಗಳಲ್ಲಿ ಮಂಗಳವಾರದಿಂದ ಶುರುವಾಗಲಿದೆ. ಅದಕ್ಕಾಗಿ ಯಾವುದೇ ಫಾರಂಗಳನ್ನು ಭರ್ತಿ ಮಾಡುವುದು ಅಥವಾ ಗುರುತಿನ ಚೀಟಿ ನೀಡುವ ಅಗತ್ಯವಿಲ್ಲವೆಂದು ಎಸ್‌ಬಿಐ ಸ್ಪಷ್ಟಪಡಿಸಿದೆ. 2 ಸಾವಿರ ರೂ. ನೋಟು ವಿನಿಮಯ ಮಾಡಲು ಕೋರಿಕೆ ರಸೀತಿ (ರಿಕ್ವಿಸಿಷನ್‌ ಸ್ಲಿಪ್‌), ಗುರುತಿನ ಚೀಟಿ ನೀಡಬೇಕು, ಫಾರಂ ಭರ್ತಿ ಮಾಡಿಕೊಡಬೇಕು ಎಂದು ಹಲವು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ನೋಟು ವಿನಿಮಯ ಕೌಂಟರ್‌ಗಳಲ್ಲಿ ಒಂದು ಬಾರಿಗೆ ಒಬ್ಬರಿಂದ 20 ಸಾವಿರ ರೂ.ವರೆಗೆ […]

ನಾಳೆಯಿಂದ 2,000 ರೂ. ನೋಟು ಬದಲಾವಣೆ Read More »

ಹೊಸ ಸರಕಾರದ ಮೊದಲ ಅಧಿವೇಶನ ಇಂದಿನಿಂದ | ನೂತನ ಶಾಸಕರ ಪ್ರಮಾಣ ವಚನ, ಸ್ಪೀಕರ್ ಆಯ್ಕೆ ಪ್ರಕ್ರಿಯೆ

ಬೆಂಗಳೂರು: ಇಂದಿನಿಂದ ಮೂರು ದಿನ ವಿಧಾನಸಭಾ ಅಧಿವೇಶನ ನಡೆಯಲಿದೆ. ಮೊದಲ ಎರಡು ದಿನ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ, ಕೊನೆ ದಿನ ವಿಧಾನಸಭಾ ಸ್ಪೀಕರ್​​​ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸೋಮವಾರ ಬೆಳಗ್ಗೆ 11ಕ್ಕೆ ಅಧಿವೇಶನ ಆರಂಭವಾಗಲಿದೆ. ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್​ ಆರ್​.ವಿ. ದೇಶಪಾಂಡೆ ಪ್ರಮಾಣ ವಚನ ಬೋಧಿಸಲಿದ್ದಾರೆ. ವಿಧಾನಸಭೆಯ ಅವಧಿ ಮೇ 23ಕ್ಕೆ ಅಂತ್ಯವಾಗಿದ್ದು, ಅಷ್ಟರೊಳಗೆ ಶಾಸಕರ ಪ್ರಮಾಣವಚನ ಸ್ವೀಕಾರ ಪೂರ್ಣಗೊಳ್ಳಬೇಕು. ಜುಲೈ ತಿಂಗಳಿನಲ್ಲಿ ಬಜೆಟ್ ಮಂಡಿಸಲಾಗುವುದು.‌ ಸದಸ್ಯರ ಪ್ರಮಾಣ ವಚನ ಸ್ವೀಕಾರದ ಜತೆಗೆ

ಹೊಸ ಸರಕಾರದ ಮೊದಲ ಅಧಿವೇಶನ ಇಂದಿನಿಂದ | ನೂತನ ಶಾಸಕರ ಪ್ರಮಾಣ ವಚನ, ಸ್ಪೀಕರ್ ಆಯ್ಕೆ ಪ್ರಕ್ರಿಯೆ Read More »

ಕಾಂಗ್ರೆಸ್‌ ಮುಖಂಡ ಯು.ಆರ್.‌ ಸಭಾಪತಿ ನಿಧನ

ಉಡುಪಿ : ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ಯು.ಆರ್. ಸಭಾಪತಿ (71) ಮೇ 21ರಂದು ಬೆಳಿಗ್ಗೆ ನಿಧನರಾದರು. 1987ರಲ್ಲಿ ದ. ಕ. ಜಿಲ್ಲಾ ಪರಿಷತ್ ನ ಸದಸ್ಯರಾಗಿದ್ದ ಸಭಾಪತಿ ಅವರು 1994ರಲ್ಲಿ ಎಸ್. ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. 2004ರ ಚುನಾವಣೆಯಲ್ಲಿ ಬಿಜೆಪಿಯ ರಘುಪತಿ ಭಟ್ ವಿರುದ್ಧ ಪರಾಭವಗೊಂಡಿದ್ದರು.ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಳಿಕ ಪಕ್ಷದ ವಿವಿಧ ಹುದ್ದೆಗಳನ್ನು

ಕಾಂಗ್ರೆಸ್‌ ಮುಖಂಡ ಯು.ಆರ್.‌ ಸಭಾಪತಿ ನಿಧನ Read More »

`ಪುತ್ತಿಲ ಪರಿವಾರ’ದ ಲೋಗೊ ಅನಾವರಣ | ದೇಶಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆ: ಪುತ್ತಿಲ

ಪುತ್ತೂರು: ನಿರೀಕ್ಷೆಯಂತೆಯೇ ಪುತ್ತಿಲ ಪರಿವಾರ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಸೇವಾ ಸಮರ್ಪಣೆ ಸಮಾರಂಭ ಹಲವು ಕುತೂಹಲಗಳಿಗೆ ನಾಂದಿ ಹಾಡಿತ್ತು. ಆ ಎಲ್ಲಾ ಕುತೂಹಲಗಳಿಗೆ ಸಮಾರಂಭ ಉತ್ತರ ನೀಡಿದೆ. ದರ್ಬೆ ವೃತ್ತದಿಂದ ಪುತ್ತೂರು ಪೇಟೆಯಾಗಿ ಸಾಗಿ ಬಂದ ಕಾಲ್ನಡಿಗೆ ಜಾಥಾ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಬಂದು, ರಥಬೀದಿಯಲ್ಲಿ ಹಾಕಿದ್ದ ವೇದಿಕೆಗೆ ಆಗಮಿಸಿತು. ವೇದಿಕೆಗೆ ಹತ್ತಿದ ಅರುಣ್ ಕುಮಾರ್ ಪುತ್ತಿಲ ಅವರು ಸಭೆಗೆ ಸಾಷ್ಟಾಂಗ ನಮಸ್ಕರಿಸಿದರು. ನಂತರ ನಡೆದ ಸಭೆಯಲ್ಲಿ ಪುತ್ತಿಲ ಪರಿವಾರ ಲೋಗೊ ಅನಾವರಣ

`ಪುತ್ತಿಲ ಪರಿವಾರ’ದ ಲೋಗೊ ಅನಾವರಣ | ದೇಶಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆ: ಪುತ್ತಿಲ Read More »

ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ | ಕಾಲ್ನಡಿಗೆ ಜಾಥಕ್ಕೆ ದರ್ಬೆಯಲ್ಲಿ ಚಾಲನೆ

ಪುತ್ತೂರು: ಪುತ್ತಿಲ ಅಭಿಮಾನಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಕಾಲ್ನಡಿಗೆ ಜಾಥಕ್ಕೆ ದರ್ಬೆಯಲ್ಲಿ ಚಾಲನೆ ನೀಡಲಾಯಿತು. ದರ್ಬೆಯಲ್ಲಿ ಚಾಲನೆ ಪಡೆದ ಜಾಥ ಮುಖ್ಯರಸ್ತೆಯಾಗಿ ಸಂಚರಿಸಿತು. ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವು ಮಂದಿ ಜಾಥಾದಲ್ಲಿ ಬರಿಗಾಲಲ್ಲಿ ನಡೆದುಕೊಂಡು ಬಂದರು. ಜಾಥಾ ಶಿಸ್ತುಬದ್ಧವಾಗಿ ಸಾಗಿಬಂದಿತು.

ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ | ಕಾಲ್ನಡಿಗೆ ಜಾಥಕ್ಕೆ ದರ್ಬೆಯಲ್ಲಿ ಚಾಲನೆ Read More »

ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶ

ವಿಟ್ಲ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರಿಗೊಪ್ಪಿಸಿ ಎರಡು ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ನಡೆದಿದೆ. ಕಂಬಳ ಕೋಣ ಎಂದು ನೆಪವೊಡ್ಡಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಿಕಪ್ ವಾಹನವನ್ನು ತಡೆದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶ Read More »

ನರಿಮೊಗರು : ಉಚಿತ ಗ್ರಾಮೀಣ ಮಕ್ಕಳ ಉಚಿತ ಬೇಸಿಗೆ ಶಿಬಿರ ಉದ್ಘಾಟನೆ

ನರಿಮೊಗರು: ನರಿಮೊಗರು ಗ್ರಾಮ ಪಂಚಾಯತ್ ಗ್ರಂಥಾಲಯ, ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಉಚಿತ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಶಾಂತಿಗೋಡು ಹಿ.ಪ್ರಾ. ಶಾಲೆಯಲ್ಲಿ ಆರಂಭಗೊಂಡಿದೆ. ನರಿಮೊಗರು ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಕುಲಾಲ್ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ನರಿಮೊಗರು ಗ್ರಾಮ ಪಂಚಾಯತ್ ಸದಸ್ಯರಾದ ಹೊನ್ನಪ್ಪ ಪೂಜಾರಿ ಕೈಂದಾಡಿ, ಆಶಾ ಸಚ್ಚಿದಾನಂದ ಬೊಳ್ಳೆಕ್ಕು,ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಶಾಂತಿಗೋಡು ಶಾಲೆಯ ಮುಖ್ಯಗುರು ಸವಿತಾ, ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರಫುಲ್ಲ ಗಣೇಶ್ ಉಪಸ್ಥಿತರಿದ್ದರು. ನರಿಮೊಗರು ಗ್ರಂಥಾಲಯ ಮೇಲ್ವಿಚಾರಕ ವರುಣ್ ಕುಮಾರ್

ನರಿಮೊಗರು : ಉಚಿತ ಗ್ರಾಮೀಣ ಮಕ್ಕಳ ಉಚಿತ ಬೇಸಿಗೆ ಶಿಬಿರ ಉದ್ಘಾಟನೆ Read More »

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಭೇಟಿಯಾದ ಶಾಸಕ ಅಶೋಕ್ ರೈ

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆ ಸೇರಿರುವ ಹಿಂದೂ ಕಾರ್ಯಕರ್ತರನ್ನು ಶಾಸಕ ಅಶೋಕ್ ಕುಮೃ್ ರೈ ಅವರು ಭೇಟಿಯಾಗಿ ಸಾಂತ್ವನ ಹೇಳಿದರು. ಪೊಲೀಸ್ ದೌರ್ಜನ್ಯದಲ್ಲಿ ಕಾಂಗ್ರೆಸಿನ ಕೈವಾಡ ಇಲ್ಲ ಎನ್ನುವುದು ನಿಮಗೂ ತಿಳಿದಿದೆ. ಪೊಲೀಸರು ಪ್ರಕರಣವನ್ನು ಅಲ್ಲಿಂದಲ್ಲಿಗೆ ಮುಗಿಸುವ ಪ್ರಯತ್ನದಲ್ಲಿದ್ದರು. ಈ ಪ್ರಕರಣದ ವಿಷಯ ತಿಳಿಯುತ್ತಿದ್ದಂತೆ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆಯನ್ನು ನೀಡಿದ್ದೇನೆ ಎಂದ ಅವರು, ಅಗತ್ಯ ಸಹಕಾರ ಕೇಳಿ. ನನ್ನಿಂದಾಗುವ ಸಹಕಾರ ಖಂಡಿತಾ ನೀಡುತ್ತೇನೆ ಎಂದು ಭರವಸೆ ನೀಡಿದರು. ಮಾಜಿ ಶಾಸಕಿ ಶಕುಂತಳಾ

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಭೇಟಿಯಾದ ಶಾಸಕ ಅಶೋಕ್ ರೈ Read More »

ನೇತ್ರಾವತಿ ಒಡಲಲ್ಲಿ ಸೀತಾ ಮಾತೆಯ ಪಾದ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈ ಬಾರಿ ನೀರಿನ ಮಟ್ಟ ಗಣನೀಯ ಇಳಿದಿರುವ ಪರಿಣಾಮ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನದಿಯ ಮಧ್ಯೆ ಕಲ್ಲುಗಳ ಮೇಲೆ ಇರುವ ಸೀತಾದೇವಿಯ ಪಾದ ಎಂದು ಧಾರ್ಮಿಕ ನಂಬಿಕೆಯುಳ್ಳ ರಚನೆಗಳು ಗೋಚರಿಸುತ್ತಿವೆ. ನದಿಯಲ್ಲಿ ಇಂತಹ ಅನೇಕ ಕೌತುಕಗಳಿವೆಯಾದರೂ ಇತ್ತೀಚಿನ ವರ್ಷಗಳಲ್ಲಿ ಆಣೆಕಟ್ಟುಗಳ ನಿರ್ಮಾಣದಿಂದಾಗಿ ಅವುಗಳು ನೀರಿನೊಳಗಿರುತ್ತಿದ್ದವು. ಈ ಬಾರಿ ನದಿ ನೀರು ಸಂಪೂರ್ಣ ಬತ್ತಿರುವ ಕಾರಣ ನದಿಯಲ್ಲಿರುವ ವಿಶೇಷಗಳು ಕಾಣಿಸಲಾರಂಭಿಸಿವೆ. ಶಿವಲಿಂಗ, ಹೂವು, ಜಡೆ, ಬಟ್ಟಲು, ನಂದಿ, ಪಾದಗಳು ಹೀಗೆ ಹತ್ತಾರು

ನೇತ್ರಾವತಿ ಒಡಲಲ್ಲಿ ಸೀತಾ ಮಾತೆಯ ಪಾದ Read More »

ಬೀಡಿ ಬಳಕೆ ತಡೆಗೆ ಹೆಚ್ಚುವರಿ ತೆರಿಗೆ | ಅಧ್ಯಯನ ವರದಿ ಕೇಂದ್ರಕ್ಕೆ ಶಿಫಾರಸು

ಹೊಸದಿಲ್ಲಿ: ಬೀಡಿ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅದರ ಮೇಲೆ ಇನ್ನಷ್ಟು ತೆರಿಗೆ ಹಾಕಬೇಕೆಂದು ಶಿಫಾರಸು ಮಾಡಲಾಗಿದೆ. ತಂಬಾಕು ಉತ್ಪನ್ನಗಳಿಂದ ಹರಡುವ ಕ್ಯಾನ್ಸರ್‌ ಬಗ್ಗೆ ಅಧ್ಯಯನ ನಡೆಸಿರುವ ಜೋಧ್‌ಪುರದ ಏಮ್ಸ್‌ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ ಮತ್ತು ಇಂಟರ್‌ನ್ಯಾಷನಲ್‌ ಯೂನಿಯನ್‌ ಅಗೈನ್‌ಸ್ಟ್‌ ಟ್ಯುಬರ್‌ಕ್ಯುಲೋಸಿಸ್‌ ಆ್ಯಂಡ್‌ ಲಂಗ್‌ ಡಿಸೀಸ್‌ ಜಂಟಿಯಾಗಿ ನಡೆಸಿ ಸಲ್ಲಿಸಿದ ಅಧ್ಯಯನ ವರದಿ ಈ ಶಿಫಾರಸು ಮಾಡಿದೆ. ಸಿಗರೇಟ್‌ ಸೇರಿದಂತೆ ಇತರ ತಂಬಾಕು ಉತ್ಪನ್ನಗಳ ಮೇಲೆ ಹೇರಿರುವ ತೆರಿಗೆ ಮಾದರಿಯಲ್ಲೇ ಬೀಡಿ ಮೇಲೂ ಮೇಲೆ ತೆರಿಗೆ

ಬೀಡಿ ಬಳಕೆ ತಡೆಗೆ ಹೆಚ್ಚುವರಿ ತೆರಿಗೆ | ಅಧ್ಯಯನ ವರದಿ ಕೇಂದ್ರಕ್ಕೆ ಶಿಫಾರಸು Read More »

error: Content is protected !!
Scroll to Top