ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಧರ್ಮಸ್ಥಳ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಜನಜಾಗೃತಿ ಸಭೆಯಲ್ಲಿ ನಡೆಸಲಾಯಿತು. ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಲೋಕೇಶ್ ಹೆಗ್ಡೆ, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಕೋಶಾಧಿಕಾರಿಯಾಗಿ ಪ್ರವೀಣ್ ಚಂದ್ರ ಆಳ್ವ ಆಯ್ಕೆಯಾದರು. ಉಪ್ಪಿನಂಗಡಿ ವಲಯಾಧ್ಯಕ್ಷರುಗಳಾಗಿ ಲೋಕೇಶ್ ಬೆತ್ತೋಡಿ, ಕುಂಬ್ರ ವಲಯಾಧ್ಯಕ್ಷರಾಗಿ ಪ್ರಕಾಶ್ಚಂದ್ರ ಕೈಕಾರ, ಕೆದಂಬಾಡಿ ವಲಯಾಧ್ಯಕ್ಷರಾಗಿ ಶ್ಯಾಮ್ ಸುಂದರ್ ರೈ, ಬೆಟ್ಟಂಪಾಡಿ ವಲಯಾಧ್ಯಕ್ಷರಾಗಿ ರವಿ ಕಟೀಲ್ತಡ್ಕ, ಬನ್ನೂರು ವಲಯಾಧ್ಯಕ್ಷರಾಗಿ ರಾಮಣ್ಣ ಗೌಡ ಗುಂಡೋಲೆ, ಪುತ್ತೂರು ವಲಯಾಧ್ಯಕ್ಷರಾಗಿ […]

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಆಯ್ಕೆ Read More »

7.3 ಕೋಟಿ ಮೌಲ್ಯದ 3.6 ಟನ್‌ ಗಾಂಜಾ ವಶ

ಅಗರ್ತಲಾ : ತ್ರಿಪುರಾ ಪೊಲೀಸರು ಗುರುವಾರ 7.3 ಕೋಟಿ ಮೌಲ್ಯದ 3,660 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಪವಿಭಾಗೀಯ ಪೊಲೀಸ್ ಅಧಿಕಾರಿ ಕಮಲ್ ದೆಬ್ಬರ್ಮಾ ನೇತೃತ್ವದ ಪೊಲೀಸ್ ತಂಡವು ಉನಕೋಟಿ ಜಿಲ್ಲೆಯ ಪೆಚಾರ್ತಲ್‌ನಲ್ಲಿ ಚೆಕ್ ಗೇಟ್‌ನಲ್ಲಿ ಅಸ್ಸಾಂನಿಂದ ಬಂದ ಹತ್ತು ಚಕ್ರಗಳ ತೈಲ ಟ್ಯಾಂಕರ್ ಅನ್ನು ತಡೆದು 3,660 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಪೊಲೀಸರು ವಾಹನದ ಚಾಲಕ ಪ್ರಿಯಾಲಾಲ್ ದೆಬ್ಬರ್ಮಾ (27)

7.3 ಕೋಟಿ ಮೌಲ್ಯದ 3.6 ಟನ್‌ ಗಾಂಜಾ ವಶ Read More »

ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ : ಡೊನಾಲ್ಡ್‌ ಟ್ರಂಪ್‌

ನ್ಯೂಯಾರ್ಕ್ : 2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಲಿಚಿತ್ರ ತಾರೆಯೋರ್ವಳಿಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನ್ಯಾಯಾಲಯದಿಂದ ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಮ್ಯಾನ್‌ಹಾಟನ್‌ನ ಗ್ರ್ಯಾಂಡ್‌ ಜ್ಯೂರಿ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದು, ಇದರಿಂದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಯಸಿರುವ ಡೊನಾಲ್ಡ್‌ ಟ್ರಂಪ್‌ ತೀವ್ರ ಮುಜುಗರ ಅನುಭವಿಸುವಂತಾಗಿದೆ. 76 ವರ್ಷದ

ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ : ಡೊನಾಲ್ಡ್‌ ಟ್ರಂಪ್‌ Read More »

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಗೆ ಕಾರಣ : ಸಾಲಬಾಧೆ

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕರುಣಾ ಲಾಡ್ಜ್‌ನಲ್ಲಿ ನಡೆದಿದೆ.ದೇವೇಂದ್ರ (48), ನಿರ್ಮಲಾ(48), ಚೈತ್ರಾ(09), ಚೈತನ್ಯ (09), ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಇವರು ಮೂಲತಃ ಮೈಸೂರಿನ ವಿಜಯನಗರ ಮೂಲದವರಾಗಿದ್ದರು.ಕರುಣಾ ಲಾಡ್ಜ್‌ನಲ್ಲಿ ಘಟನೆ ನಡೆದಿದ್ದು, ಮೈಸೂರು ಮೂಲದ ದಂಪತಿ ಮತ್ತು ಅವಳಿ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಡೆತ್‌ ನೋಟ್‌ ಸಿಕ್ಕಿದ್ದು, ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಂಗಳೂರು ಪೊಲೀಸರು ಭೇಟಿ ನೀಡಿ,

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಗೆ ಕಾರಣ : ಸಾಲಬಾಧೆ Read More »

ಮಂಗಳೂರು ದೇವಸ್ಥಾನಕ್ಕೆ ಪುತ್ತೂರಿನಿಂದ ಹೊರೆಕಾಣಿಕೆ

ಪುತ್ತೂರು: ಮಂಗಳೂರು ಶ್ರೀ ವಿನಾಯಕ ಕಾಳಿಕಾಂಭ ದೇವಸ್ಥಾನದ ವಾರ್ಷಿಕ ಯುಗಾದಿ ಜಾತ್ರಾ ಮಹೋತ್ಸವಕ್ಕಾಗಿ ಪುತ್ತೂರಿನಿಂದ ವಿಶ್ವಕರ್ಮ ಬಂಧುಗಳು ಹೊರೆಕಾಣಿಕೆಯನ್ನು ಸಮರ್ಪಣೆ ಮಾಡಿದರು. ಬೊಳುವಾರು ವಿಶ್ವಕರ್ಮ ಸಭಾಭವನದಿಂದ ಹೊರಟ ಹೊರೆಕಾಣಿಕೆಯನ್ನು ಮಂಗಳೂರು ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಮಂಗಳೂರು ಶ್ರೀ ಕಾಳಿಕಾಂಭ ವಿನಾಯಕ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ವಿ. ಪುರುಷೋತ್ತಮ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಪುತ್ತೂರು ವಲಯ ಸಂಚಾಲಕ ಜಗದೀಶ್ ಎಸ್.ಎನ್., ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ್ ಕೆ., ವಿಶ್ವಕರ್ಮ ಮಹಿಳಾ ಮಂಡಳಿ ಜತೆ ಕಾರ್ಯದರ್ಶಿ ಪ್ರಭಾ ಹರೀಶ್,

ಮಂಗಳೂರು ದೇವಸ್ಥಾನಕ್ಕೆ ಪುತ್ತೂರಿನಿಂದ ಹೊರೆಕಾಣಿಕೆ Read More »

ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ

ಮೈಸೂರಿನ ವಾಣಿವಿಲಾಸದ ಕುಟುಂಬ ಮಂಗಳೂರು : ನಗರದ ಕೆ.ಎಸ್‌. ರಾವ್‌ ರಸ್ತೆಯ ಲಾಡ್ಜ್‌ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಮೈಸೂರಿನ ವಾಣಿವಿಲಾಸದವರೆಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿಯೇ ಡೆತ್‌ನೋಟ್‌ ಪತ್ತೆಯಾಗಿದೆ. ನಾಲ್ವರಲ್ಲಿ ಓರ್ವ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉಳಿದ ಮೂವರು ಮಲಗಿದ ಸ್ಥಿತಿಯಲ್ಲಿದ್ದರು. ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.ಒಂದೇ ಕುಟುಂಬದ ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಮಂಗಳೂರಿನ

ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ Read More »

ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ

ನಾಲ್ಕು ಹಂತಗಳ ಪರಿಶೀಲನೆ ಬಳಿಕ ಅಭ್ಯರ್ಥಿ ಹೆಸರು ಘೋಷಣೆ ಬೆಂಗಳೂರು : ಬಿಜೆಪಿ ಈ ಸಲ ಟಿಕೆಟ್‌ ಹಂಚಿಕೆಗೆ ಮತದಾನದ ಪದ್ಧತಿ ಅಳವಡಿಸಿಕೊಂಡಿದೆ. ಜಿಲ್ಲಾವಾರು ಪದಾಧಿಕಾರಿಗಳು ಮತದಾನ ಮಾಡಲಿದ್ದು, ಬಳಿಕ ಎರಡು ದಿನ ಬೆಂಗಳೂರಿನಲ್ಲಿ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ. ಬಿಜೆಪಿಯಲ್ಲಿ ಪ್ರತಿ ಕ್ಷೇತ್ರಕ್ಕೆ ಅನೇಕ ಮಂದಿ ಅಕಾಂಕ್ಷಿಗಳು ಇರುವುದು ಮತ್ತು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎನ್ನುವ ಕಾರಣಕ್ಕೆ ಈ ಸಲ ಕರ್ನಾಟಕದಲ್ಲಿ ಕೇಸರಿ ಪಕ್ಷ

ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ Read More »

ಮೊಸರಿನ ಪ್ಯಾಕೆಟ್‌ ಮೇಲಿರುವ ದಹಿ ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ

ಕರ್ನಾಟಕ, ತಮಿಳುನಾಡಿನ ವಿರೋಧದ ಬಳಿಕ ಕ್ರಮ ದೆಹಲಿ : ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮೊಸರಿನ ಪ್ಯಾಕೆಟ್‌ಗಳ ಮೇಲೆ ಹಿಂದಿಯಲ್ಲಿ ದಹಿ ಎಂದು ಮುದ್ರಿಸುವಂತೆ ಹೊರಡಿಸಿದ್ದ ಆದೇಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹಿಂಪಡೆದಿದೆ.ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಟುವಾಗಿ ಟೀಕೆ ಮಾಡಿದ ಬೆನ್ನಲ್ಲೇ ಎಫ್‌ಎಸ್‌ಎಸ್‌ಎಐಯ ಈ ನಿರ್ಧಾರ ಹೊರಬಿದ್ದಿದೆ. ಹಿಂದಿ ಹೇರಿಕೆಯ ನಾಚಿಕೆಯಿಲ್ಲದ ಒತ್ತಾಯಗಳು ಎಷ್ಟರ ಮಟ್ಟಿಗೆ ಅಂದರೆ, ಮೊಸರು ಪ್ಯಾಕೆಟ್‌

ಮೊಸರಿನ ಪ್ಯಾಕೆಟ್‌ ಮೇಲಿರುವ ದಹಿ ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ Read More »

ಮೋದಿ ಕುಲನಾಮ ನಿಂದನೆ ಮಾಡಿದ ರಾಹುಲ್‌ಗೆ ಇನ್ನೊಂದು ಸಮನ್ಸ್‌

ಪಾಟ್ನ : ಮೋದಿ ಕುಲನಾಮ ಕುರಿತು ರಾಹುಲ್‌ ಗಾಂಧಿ ನೀಡಿರುವ ಅವಹೇಳನಕಾರಿ ಹೇಳಿಕೆಯಿಂದ ಅವರಿಗೆ ಉಂಟಾಗಿರುವ ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಈ ಪ್ರಕರಣದಲ್ಲಿ ಈಗಾಗಲೇ ದೋಷಿ ಎಂದು ಸೂರತ್​​ ನ್ಯಾಯಾಲಯ ತೀರ್ಪು ಪ್ರಕಟಿಸಿ ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇದೀಗ ಇದೇ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಬಿಹಾರದ ಪಾಟ್ನ ನ್ಯಾಯಾಲಯ ರಾಹುಲ್​ ಗಾಂಧಿಗೆ ಸಮನ್ಸ್ ನೀಡಿದೆ. 2019ರ ಲೋಕಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಅವರು ಮೋದಿ ಸರ್​ನೇಮ್​ ಕುರಿತು ನೀಡಿದ್ದ ಹೇಳಿಕೆ ವಿರುದ್ಧ ಗುಜರಾತ್‌ನಲ್ಲಿ ಮಾಜಿ

ಮೋದಿ ಕುಲನಾಮ ನಿಂದನೆ ಮಾಡಿದ ರಾಹುಲ್‌ಗೆ ಇನ್ನೊಂದು ಸಮನ್ಸ್‌ Read More »

ರಾಹುಲ್‌ ಗಾಂಧಿ ದುರ್ಬಲಗೊಳಿಸಲು ಮತ್ತು ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ

ಆಪ್ತ ಸಲಹೆಗಾರರೆ ರಾಹುಲ್‌ ಗಾಂಧಿ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದ ಬಿಜೆಪಿ ನಾಯಕ ಬೆಂಗಳೂರು : ರಾಹುಲ್‌ ಗಾಂಧಿಯ ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ನಾಯಕರೊಬ್ಬರು ಮಾಡಿದ ಆರೋಪ ಸಂಚಲನವುಂಟು ಮಾಡಿದೆ. ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿರುವ ಲೆಹರ್‌ ಸಿಂಗ್‌ ಸಿರೋಯಾ ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ರಾಹುಲ್‌ ಗಾಂಧಿಯನ್ನು ಹರಕೆಯ ಕುರಿಯಂತೆ ಬಲಿಕೊಡಲು ಮುಂದಾಗಿದೆ ಎಂಬುದು ಸಿರೋಯ ಹೇಳಿದ್ದಾರೆ. ರಾಹುಲ್‌ ಗಾಂಧಿ ಶುದ್ಧ ಹ್ರದಯದ ವ್ಯಕ್ತಿ, ಆದರೆ ಅವರನ್ನು ದುರ್ಬಲಗೊಳಿಸುವ

ರಾಹುಲ್‌ ಗಾಂಧಿ ದುರ್ಬಲಗೊಳಿಸಲು ಮತ್ತು ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ Read More »

error: Content is protected !!
Scroll to Top