ಆಕೆ ನಿಜವಾಗಿಯೂ ಬೆಂಕಿಯಲ್ಲಿ ಅರಳಿದ ಹೂವು

ಉಪ್ಪಿನಕಾಯಿ ಮಾರಿ ಬದುಕು ಕಟ್ಟಿಕೊಂಡ ಕೃಷ್ಣಾ ಯಾದವ್ 30 ವರ್ಷಗಳ ಹಿಂದೆ ಮದುವೆಯಾಗಿ ಉತ್ತರ ಪ್ರದೇಶದ ಒಂದು ಹಳ್ಳಿಯಿಂದ ಬುಲಂದ್‌ಶಹರ್ ಎಂಬ ನಗರಕ್ಕೆ ಬಂದಾಗ ಆಕೆಯ ಕೈಯ್ಯಲ್ಲಿ ಒಂದು ರೂಪಾಯಿ ಇರಲಿಲ್ಲ. ಎರಡು ವರ್ಷ ಆಗುವಾಗ ಎರಡು ಪುಟ್ಟ ಮಕ್ಕಳ ಆಕೆಯ ಮಡಿಲನ್ನು ಸೇರಿದ್ದವು. ಆದರೆ 1995ರಲ್ಲಿ ಗಂಡನಿಗೆ ತೀವ್ರವಾದ ಮಾನಸಿಕ ಕಾಯಿಲೆಯು ಕಾಡಿದಾಗ ಆಕೆಯು ನಿಜವಾಗಿಯೂ ಕಂಗೆಟ್ಟರು.ಸಂಬಂಧಿಕರು, ಗಂಡನ ಮನೆಯವರು ಯಾರೂ ಆಕೆಯ ನೆರವಿಗೆ ನಿಲ್ಲಲಿಲ್ಲ. ಮಕ್ಕಳು ಹಸಿವೆಯಿಂದ ಅಳುತ್ತಿದ್ದರೆ ಅಮ್ಮನ ಕರುಳು ಕಿತ್ತು ಬರುತ್ತಿತ್ತು. […]

ಆಕೆ ನಿಜವಾಗಿಯೂ ಬೆಂಕಿಯಲ್ಲಿ ಅರಳಿದ ಹೂವು Read More »

ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆ

ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಮಿತ್ತಬೈಲು ನಿವಾಸಿ, ಶಾಲಾ ಬಾಲಕನೋರ್ವನ ಮೃತದೇಹ ಶನಿವಾರ ತಡರಾತ್ರಿ ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ಕೆರೆಯಲ್ಲಿ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ, ಬಿ.ಸಿ.ರೋಡಿನ ಖಾಸಗಿ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಅಝೀಂ (13)  ಮೃತ ಬಾಲಕ. ಶನಿವಾರ ಮಧ್ಯಾಹ್ನದ ವೇಳೆಗೆ ಪಾಣೆಮಂಗಳೂರು ಅಜ್ಜಿ ಮನೆಗೆ ಬಂದಿದ್ದ ಬಾಲಕ ಮಧ್ಯಾಹ್ನದ ಬಳಿಕ ಬಾಲಕ ಕಾಣೆಯಾಗಿದ್ದ. ಹುಡುಕಾಟವೂ ಸಫಲರಾಗಿರಲಿಲ್ಲ ಎನ್ನಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು

ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆ Read More »

ಕರ್ನಾಟಕ ಶಾಸ್ತ್ರೀಯ ಸಂಗೀತ : ಸೌಜನ್ಯ ಎಸ್. ಜೈನ್ ಗೆ ಡಿಸ್ಟಿಂಕ್ಷನ್

ಪುತ್ತೂರು: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ 2022-23ನೇ ಸಾಲಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ ಸೌಜನ್ಯ ಎಸ್. ಜೈನ್ ಶೇ.93.25 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಪುತ್ತೂರು ಗಾನಸರಸ್ವತಿ ಸಂಗೀತ ಕಲಾ ಶಾಲೆಯ ವಿದುಷಿ ವೀಣಾ ರಾಘವೇಂದ್ರ ಅವರ ಶಿಷ್ಯೆಯಾಗಿದ್ದಾರೆ. ಪುತ್ತೂರು ಸುದಾನ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ವಿಟ್ಲ ಅಳಕೆಮಜಲು ನಿವಾಸಿ ಶ್ರೀಮಂದರ ಜೈನ್ ಮತ್ತು ಅನುಪಮ ಜೈನ್ ದಂಪತಿ ಪುತ್ರಿ.

ಕರ್ನಾಟಕ ಶಾಸ್ತ್ರೀಯ ಸಂಗೀತ : ಸೌಜನ್ಯ ಎಸ್. ಜೈನ್ ಗೆ ಡಿಸ್ಟಿಂಕ್ಷನ್ Read More »

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಇಂಟರ್‍ಯಾಕ್ಟಿವ್ ಸ್ಮಾಟ್ ಬೋರ್ಡ್ ಅನಾವರಣ

ಪುತ್ತೂರು: ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಣ ಪರಿಕರಗಳು ಪ್ರಮುಖ ಪಾತ್ರ ವಹಿಸುತ್ತವೆ. ಆಧುನಿಕ ತಂತ್ರಜ್ಞಾನಗಳ ಮೂಲಕ ನಡೆಯುವ ಪಾಠ ಪ್ರವಚನಗಳು ವಿದ್ಯಾರ್ಥಿಗಳಿಗೆ ಸುಲಭವಾಗಿ ಮನನವಾಗುತ್ತವೆ. ಆ ದಿಸೆಯಲ್ಲಿ ಶೈಕ್ಷಣಿಕ ಕ್ಷೇತ್ರ ಆಧುನಿಕತೆಗೆ ತನ್ನನ್ನು ತಾನು ತೆರೆದುಕೊಳ್ಳುವುದು ಅಗತ್ಯ ಎಂದು ಅಂಬಿಕಾ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಡಾ.ವಿವೇಕ್ ಕಜೆ ಹೇಳಿದರು. ಅವರು ನಗರದ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್ ಇ ವಿದ್ಯಾಲಯದಲ್ಲಿ ನೂತನವಾಗಿ ಅಳವಡಿಸಿರುವ ಇಂಟರ್‍ಯಾಕ್ಟಿವ್ ಸ್ಮಾರ್ಟ್ ಬೋರ್ಡ್ ನ್ನು  ಉದ್ಘಾಟಿಸಿ ಮಾತನಾಡಿದರು. ನಾವಿಂದು ಅನೇಕ ತಂತ್ರಜ್ಞಾನಗಳ ಮೂಲಕ

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಇಂಟರ್‍ಯಾಕ್ಟಿವ್ ಸ್ಮಾಟ್ ಬೋರ್ಡ್ ಅನಾವರಣ Read More »

ಬೊಳುವಾರಿನಿಂದ ಮೆರವಣಿಗೆಯಲ್ಲಿ ಸಾಗಿಬಂದ ಹೊರೆಕಾಣಿಕೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ಜಾತ್ರಾ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಬೊಳುವಾರಿನಿಂದ ಸಾಗಿಬಂದ ಮೆರವಣಿಗೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಬೊಳುವಾರು ಶ್ರೀ ಶಕ್ತಿ ಆಂಜನೇಯ ದೇವಸ್ಥಾನದ ಮುಂಭಾಗ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹೊರೆಕಾಣಿಕೆ ಮೆರವಣಿಗೆಯಲ್ಲಿ ಚೆಂಡೆ ವಾದ್ಯದೊಂದಿಗೆ ಕಲಶ ಹಿಡಿದ ಮಹಿಳೆಯರು, ಕುಣಿತ ಭಜನೆ ಸಾಗಿಬಂದಿತು. ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ,

ಬೊಳುವಾರಿನಿಂದ ಮೆರವಣಿಗೆಯಲ್ಲಿ ಸಾಗಿಬಂದ ಹೊರೆಕಾಣಿಕೆ Read More »

ನಾಲಿಗೆ ಕತ್ತರಿಸುವೆ ಎಂಬ ಕಾಂಗ್ರೆಸ್ಸಿಗರ ಹೇಳಿಕೆಗೆ ಬಿಜೆಪಿ ತಿರುಗೇಟು

ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದ್ದಕ್ಕಾಗಿ ಸೂರತ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ನಾಲಿಗೆಯನ್ನು ಕತ್ತರಿಸುವುದಾಗಿ ದಿಂಡುಗಲ್‌ನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಣಿಕಂದನ್ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 2019ರ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿದ ನ್ಯಾಯಾಧೀಶರ ನಾಲಿಗೆಯನ್ನು ಕತ್ತರಿಸುವುದಾಗಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕಾಂಗ್ರೆಸ್ ಪಕ್ಷದವರು

ನಾಲಿಗೆ ಕತ್ತರಿಸುವೆ ಎಂಬ ಕಾಂಗ್ರೆಸ್ಸಿಗರ ಹೇಳಿಕೆಗೆ ಬಿಜೆಪಿ ತಿರುಗೇಟು Read More »

ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನಮ್ಮ ಗುರಿಯಾಗಲಿ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪದವಿ ಪ್ರಧಾನ ಸಮಾರಂಭದಲ್ಲಿ ಡಾ. ವಿಶ್ವೇಶ್ವರಯ್ಯ ಪ್ರಕಾಶ್

ಪುತ್ತೂರು: ಭಾರತದಲ್ಲಿ ವಿದ್ಯಾಭ್ಯಾಸ ಪಡೆದು ವಿದೇಶಕ್ಕೆ ಹೋಗಿ ವೃತ್ತಿ ಜೀವನ ಸಾಗಿಸುವುದಕ್ಕಿಂತ ನಮ್ಮ ದೇಶದಲ್ಲೇ ಇದ್ದು ಉದ್ಯೋಗ ಪಡೆಯುವುದು ಉತ್ತಮ. ನಮ್ಮ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವುದರಲ್ಲಿ ನಮ್ಮ ಪಾತ್ರವು ಮುಖ್ಯ ಎಂದು ಮೈಸೂರಿನ ಸಿ.ಎಫ್.ಟಿ.ಆರ್.ಐ.ನ ಪೂರ್ವ ನಿರ್ದೇಶಕ ಹಾಗೂ ಹೆಸರಾಂತ ವಿಜ್ಞಾನಿ ಪದ್ಮಶ್ರೀ ಡಾ.ವಿಶ್ವೇಶ್ವರಯ್ಯ ಪ್ರಕಾಶ್ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ 2021-22ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಇಂಜಿನಿಯರಿಂಗ್ ಮತ್ತು ಎಂಬಿಎ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ

ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನಮ್ಮ ಗುರಿಯಾಗಲಿ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪದವಿ ಪ್ರಧಾನ ಸಮಾರಂಭದಲ್ಲಿ ಡಾ. ವಿಶ್ವೇಶ್ವರಯ್ಯ ಪ್ರಕಾಶ್ Read More »

ಭಾರತ ವಿಶ್ವದಲ್ಲಿ 2 ನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರ

85 ಸಾವಿರ ಕೋಟಿ ರೂ. ಮೌಲ್ಯದ ಜಂಗಮವಾಣಿ ರಫ್ತು ದೆಹಲಿ : ಮಾ. 31 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತವು 85,000 ಕೋಟಿ ರೂ.ಗಿಂತ ಹೆಚ್ಚಿನ ಮೊಬೈಲ್ ರಫ್ತು ಮಾಡಿದೆ ಎಂಬುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ​​( ಐಸಿಇಎ) ಐಎಎನ್‌ಎಸ್‌ಗೆ ಈ ಬಗ್ಗೆ ಮಾಹಿತಿ ಒದಗಿಸಿದ್ದು, ಸ್ಥಳೀಯ ಉತ್ಪಾದನೆಯತ್ತ ಸರ್ಕಾರದ ಪ್ರೋತ್ಸಾಹದಿಂದ ಉತ್ತೇಜನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅಂಕಿ ಅಂಶಗಳು ವಿವರಿಸಿವೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಭಾರತದಿಂದ

ಭಾರತ ವಿಶ್ವದಲ್ಲಿ 2 ನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರ Read More »

ಮಹಾಲಿಂಗೇಶ್ವರ ಜಾತ್ರೆಗೆ ಚಿಕ್ಕಮುಡ್ನೂರಿನಿಂದ ಹೊರೆಕಾಣಿಕೆ

ಪುತ್ತೂರು: ಶನಿವಾರ ಸಂಜೆ ಶ್ರೀ ಮಹಾಲಿಂಗೇಶ್ವರ ಜಾತ್ರೆಯ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆ, ಚಿಕ್ಕಮುಡ್ನೂರು ಭಾಗದಿಂದಲೂ ಹೊರೆಕಾಣಿಕೆ ಸಮರ್ಪಣೆ ಮಾಡಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಹಿನ್ನೆಲೆಯಲ್ಲಿ ದರ್ಬೆ ಹಾಗೂ ಬೊಳುವಾರಿನಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಈ ಮೆರವಣಿಗೆಗೆ ಚಿಕ್ಕಮುಡ್ನೂರು ಭಾಗದ ಭಕ್ತಾದಿಗಳು ಹೊರೆಕಾಣಿಕೆ ಸಮರ್ಪಿಸಿದರು. ಚಿಕ್ಕಮುಡ್ನೂರು ಗ್ರಾಮದ ಬೀರಿಗ, ಕೆಮ್ಮಾಯಿ, ಬೀರ್ನಹಿತ್ಲು, ಕೃಷ್ಣನಗರ ಮೊದಲಾದ ಭಾಗದ ಭಕ್ತಾದಿಗಳು ಹೊರೆಕಾಣಿಕೆ ಸಮರ್ಪಿಸಿ ಪುನೀತರಾದರು.

ಮಹಾಲಿಂಗೇಶ್ವರ ಜಾತ್ರೆಗೆ ಚಿಕ್ಕಮುಡ್ನೂರಿನಿಂದ ಹೊರೆಕಾಣಿಕೆ Read More »

ಮಹಾಲಿಂಗೇಶ್ವರನ ಜಾತ್ರೆಗೆ ಹೊರೆಕಾಣಿಕೆ ಸಮರ್ಪಣೆ | ಏಕಕಾಲದಲ್ಲಿ ಎರಡೂ ಕಡೆಗಳಿಂದ ಆಗಮಿಸಿದ ಹೊರೆಕಾಣಿಕೆ ಮೆರವಣಿಗೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 10ರಿಂದ 20ರ ತನಕ ನಡೆಯಲಿರುವ ವೈಭವದ ಜಾತ್ರೋತ್ಸವಕ್ಕೆ ಶನಿವಾರ ಹೊರೆಕಾಣಿಕೆ ಸಮರ್ಪಣೆಯಾಯಿತು. ಅಪರಾಹ್ನ 3.30ಕ್ಕೆ ಹೊರೆಕಾಣಿಕೆ ಮೆರವಣಿಗೆಗೆ ಪುತ್ತೂರು ಸೀಮೆ ಹಾಗೂ ವಿವಿಧ ಧಾರ್ಮಿಕ ಕ್ಷೇತ್ರಗಳಿಂದ ಹೊರೆಕಾಣಿಕೆ ದರ್ಬೆ ವೃತ್ತ ಹಾಗೂ ಬೊಳುವಾರಿನ ಸುಬ್ರಹ್ಮಣ್ಯ ನಗರದಲ್ಲಿ ಸೇರಿ ಏಕಕಾಲದಲ್ಲಿ ಚಾಲನೆ ನೀಡಲಾಯಿತು. ದರ್ಬೆ ವೃತ್ತದಲ್ಲಿ‌ ಶ್ರಿ ವಜ್ರದೇಹಿ ಮಠದ‌ ಶ್ರೀ ರಾಜಶೇಖರಾನಂದ‌ ಸ್ವಾಮಿಜಿ ತೆಂಗಿನಕಾಯಿ‌ ಒಡೆಯುವ ಮೂಲಕ‌ ಉದ್ಘಾಟಿಸಿದರು. ಬಳಿಕ ಹೊರೆಕಾಣಿಕೆ ಮೆರವಣಿಗೆ ಕೊಂಬು, ಕಹಳೆ,

ಮಹಾಲಿಂಗೇಶ್ವರನ ಜಾತ್ರೆಗೆ ಹೊರೆಕಾಣಿಕೆ ಸಮರ್ಪಣೆ | ಏಕಕಾಲದಲ್ಲಿ ಎರಡೂ ಕಡೆಗಳಿಂದ ಆಗಮಿಸಿದ ಹೊರೆಕಾಣಿಕೆ ಮೆರವಣಿಗೆ Read More »

error: Content is protected !!
Scroll to Top