ಶಿಲಾನ್ಯಾಸ ಸಂದರ್ಭ ಕೂರ್ಮಾವತಾರಿಯಾಗಿ ಪ್ರತ್ಯಕ್ಷನಾದ ಹರಿ! | ಹರನ ಶಿಲಾನ್ಯಾಸಕ್ಕೆ ಹರಿಯೇ ತಾ ಬಂದ…| ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ, ಶ್ರೀ ಕೇಪಳೇಶ್ವರ ದೇವಳದಲ್ಲಿ ಹೀಗೊಂದು ವಿಸ್ಮಯ

ಸವಣೂರು: ಪ್ರಾಚೀನ ದೇವಸ್ಥಾನವಾದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಳದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ವಿಜೃಂಭಣೆಯಿಂದ ನಡೆಯಿತು. ಇದೇ ಸಂದರ್ಭ ಶಿವನ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶುಭಕೋರುವಂತೆ ವಿಷ್ಣುವಿನ ಅವತಾರವಾದ ಕೂರ್ಮ (ಆಮೆ) ಪ್ರತ್ಯಕ್ಷವಾದ ಘಟನೆಗೆ ಬರೆಪ್ಪಾಡಿ ದೇವಳ ಸಾಕ್ಷಿಯಾಯಿತು. ದೇವಸ್ಥಾನ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಶಿಲಾನ್ಯಾಸ ನಡೆಯುತ್ತಿದೆ. ಹೀಗೆ ನಡೆಯುವ ಶಿಲಾನ್ಯಾಸಕ್ಕೆ ಒಂದು ಹೊಂಡವನ್ನು ನಿರ್ಮಿಸಲಾಗಿತ್ತು. ಶನಿವಾರ ಮುಂಜಾನೆ ಬಂದು ಶಿಲಾನ್ಯಾಸದ ಹೊಂಡ ನೋಡಿದರೆ, ಅಲ್ಲೊಂದು ಆಮೆ ಕಾರ್ಯಕ್ರಮಕ್ಕೆ ಶುಭಕೋರುವಂತೆ ಕುಳಿತಿತ್ತು. ನೆರೆದಿದ್ದ ಭಕ್ತ ಸಮೂಹಕ್ಕೆ ಆಶ್ಚರ್ಯವೋ ಆಶ್ಚರ್ಯ. […]

ಶಿಲಾನ್ಯಾಸ ಸಂದರ್ಭ ಕೂರ್ಮಾವತಾರಿಯಾಗಿ ಪ್ರತ್ಯಕ್ಷನಾದ ಹರಿ! | ಹರನ ಶಿಲಾನ್ಯಾಸಕ್ಕೆ ಹರಿಯೇ ತಾ ಬಂದ…| ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ, ಶ್ರೀ ಕೇಪಳೇಶ್ವರ ದೇವಳದಲ್ಲಿ ಹೀಗೊಂದು ವಿಸ್ಮಯ Read More »

ಅಡಿಕೆ ಕೀಳುವಾಗ ವಿದ್ಯುತ್ ಶಾಕ್: ಯುವಕ ಮೃತ್ಯು | ಬಂಟ್ವಾಳದ ಮಲಾಯಿಬೆಟ್ಟುವಿನಲ್ಲಿ ಘಟನೆ

ಬಂಟ್ವಾಳ: ಅಡಿಕೆ ತೆಗೆಯುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳದ ಮಲಾಯಿಬೆಟ್ಟು ಎಂಬಲ್ಲಿ ನಡೆದಿದೆ. ಬೋಳಿಯಾರು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ ಮೃತ ಯುವಕ. ಸಜೀಪ ಮುನ್ನೂರು ಗ್ರಾಮದ ಮೂಸಬ್ಬ ಅವರ ತೋಟದಲ್ಲಿ ಅಡಿಕೆ ತೆಗೆಯುತ್ತಿದ್ದಾಗ ಘಟನೆ ನಡೆದಿದೆ. ರಸ್ತೆಯ ಬದಿಯಲ್ಲಿ ಹಾದು ಹೋಗಿದ್ದ ಎಲ್.ಟಿ. ವಯರಿಗೆ ಫೈಬರ್ ದೋಟಿ ತಾಗಿ, ವಿದ್ಯುತ್ ಶಾಕ್ ಹೊಡೆದಿದೆ ಎಂದು ಹೇಳಲಾಗಿದೆ. ಅಡಿಕೆ ವ್ಯಾಪಾರಿಯಾಗಿರುವ ಶಾಫಿ, ಗಿಡದಿಂದಲೇ ಅಡಿಕೆಯನ್ನು ಕ್ರಯಕ್ಕೆ ಪಡೆದುಕೊಳ್ಳುತ್ತಿದ್ದರು. ನಂತರ ಅಡಿಕೆಯನ್ನು

ಅಡಿಕೆ ಕೀಳುವಾಗ ವಿದ್ಯುತ್ ಶಾಕ್: ಯುವಕ ಮೃತ್ಯು | ಬಂಟ್ವಾಳದ ಮಲಾಯಿಬೆಟ್ಟುವಿನಲ್ಲಿ ಘಟನೆ Read More »

ಜೂ. 10: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾನ್ಯಾಸ | ಜೀರ್ಣೋದ್ಧಾರ ಸಿದ್ಧತೆಯಲ್ಲಿರುವ ಪ್ರಾಚೀನ ದೇವಳ

ಸವಣೂರು: ಇಲ್ಲಿನ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪೂರ್ವಭಾವಿಯಾಗಿ ಜೂನ್ 10ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 6.58ರಿಂದ 7.55ರ ನಡುವಿನ ಸಮುಹೂರ್ತದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಆರು ಗ್ರಾಮದ ಭಕ್ತಾದಿಗಳು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಂಚಿತವಾಗಿ ಹಾಜರಿರುವಂತೆ ಕೋರಲಾಗಿದೆ. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸೀಯಾಳ, ತೆಂಗಿನಕಾಯಿ, ತರಕಾರಿ, ಹೂವು, ಬಾಳೆ ಎಲೆ ಅಗತ್ಯವಿದ್ದು, ಭಕ್ತಾದಿಗಳು ನೀಡಬಹುದು ಎಂದು ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಕಟಣೆ ತಿಳಿಸಿದೆ.

ಜೂ. 10: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾನ್ಯಾಸ | ಜೀರ್ಣೋದ್ಧಾರ ಸಿದ್ಧತೆಯಲ್ಲಿರುವ ಪ್ರಾಚೀನ ದೇವಳ Read More »

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ನೇಮಕ | 31 ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಲಾಗಿದೆ. 31 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ನಗರಕ್ಕೆ ಡಿ.ಕೆ. ಶಿವಕುಮಾರ್, ತುಮಕೂರಿಗೆ ಡಾ. ಜಿ. ಪರಮೇಶ್ವರ, ಬೆಳಗಾವಿಗೆ ಸತೀಶ್ ಜಾರಕಿಹೊಳಿ, ಕಲಬುರಗಿಗೆ ಪ್ರಿಯಾಂಕ್ ಖರ್ಗೆ ಅವರನ್ನು ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ನೇಮಕ | 31 ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ Read More »

ಮರ ಕಡಿಯುವ ವೇಳೆ ಗೆಲ್ಲು ಬಡಿದು ಮೃತ್ಯು | ತಡವಾಗಿ ಬೆಳಕಿಗೆ ಬಂದ ಪ್ರಕರಣ

ಕುಂಬ್ರ: ಮನೆ ಹಿತ್ತಲಿನ ಮರ ಕಡಿಯುವ ವೇಳೆ ಮರದ ಗೆಲ್ಲು ತಲೆಗೆ ಬಡಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದರ್ಬೆತ್ತಡ್ಕದಲ್ಲಿ ಬುಧವಾರ ಸಂಜೆ ನಡೆದಿದೆ. ದರ್ಬೆತ್ತಡ್ಕದ ಗುರುಪ್ರಸಾದ್ ಮೃತಪಟ್ಟವರು. ಬುಧವಾರ ಸಂಜೆ ಮನೆ ಹಿಂಭಾಗದಲ್ಲಿದ್ದ ಮರ ಕಡಿಯುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಮರ ಕಡಿಯುವ ವೇಳೆ ಗೆಲ್ಲು ಬಡಿದು ಮೃತ್ಯು | ತಡವಾಗಿ ಬೆಳಕಿಗೆ ಬಂದ ಪ್ರಕರಣ Read More »

ಗ್ರಾಫಿಕ್ ಡಿಸೈನರ್, ರಿಪೋರ್ಟರ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ

ಪುತ್ತೂರು: ಜನಮನದ ಪ್ರತಿಧ್ವನಿಯಾಗಿ ನೆಲೆಯೂರಿರುವ ನ್ಯೂಸ್ ಪುತ್ತೂರು ತಂಡಕ್ಕೆ ನುರಿತ ಗ್ರಾಫಿಕ್ ಡಿಸೈನರ್, ರಿಪೋರ್ಟರ್ ಹಾಗೂ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ಕಾರ್ಯಾಚರಿಸುತ್ತಿರುವ ವೆಬ್ ನ್ಯೂಸ್ ಚಾನೆಲ್‍ನಲ್ಲಿ ಈ ಉದ್ಯೋಗಾವಕಾಶಗಳಿದ್ದು, ಆಕರ್ಷಕ ವೇತನ ನೀಡಲಾಗುವುದು. ಆಸಕ್ತರು ತಮ್ಮ ಸ್ವ-ವಿವರವನ್ನು ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಸಂಪರ್ಕಕ್ಕಾಗಿ ಪ್ರಥಮ ಮಹಡಿ, ಪ್ರಭು ಬಿಲ್ಡಿಂಗ್, ಅರುಣ್ ಥಿಯೇಟರ್ ಎದುರು, ಕೆನರಾ ಬ್ಯಾಂಕ್ ಹತ್ತಿರ, ಪುತ್ತೂರು. Gmail Id :newsputtur821@gmail.com, Ph:9108382821

ಗ್ರಾಫಿಕ್ ಡಿಸೈನರ್, ರಿಪೋರ್ಟರ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ Read More »

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆಗಳ ವತಿಯಿಂದ ನೀಡಿದ 6 ಡಯಾಲಿಸಿಸ್  ಮೆಷಿನ್, ಆರ್.ಒ ಪ್ಲಾಂಟ್ ಲೋಕಾರ್ಪಣೆ

ಪುತ್ತೂರು: ರೋಟರಿ ಕ್ಲಬ್ ಸಂಸ್ಥೆಗಳಿಂದ ಡಯಾಲಿಸಿಸ್ ಮೆಷಿನ್ ನೀಡುವ ಮೂಲಕ ಒಳ್ಳೆಯ ಯೋಜನೆಯೊಂದು ಸಮಾಜಕ್ಕೆ ಅರ್ಪಣೆ ಮಾಡುವ ಕೆಲಸ ನಡೆದಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಶುಕ್ರವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಜಿಲ್ಲೆ 3181ರ ರೋಟರಿ ಕ್ಲಬ್‌ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಇಲೈಟ್, ಅಮೆರಿಕಾ ಫ್ಲೋರಿಡಾ ರೋಟರಿ ಜಿಲ್ಲೆ 5890 ರೋಟರಿ ಕ್ಲಬ್ ನ್ಯೂ ಟಾಂಪಾ ನೂನ್ ವತಿಯಿಂದ ರೋಟರಿ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬಡವರ

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆಗಳ ವತಿಯಿಂದ ನೀಡಿದ 6 ಡಯಾಲಿಸಿಸ್  ಮೆಷಿನ್, ಆರ್.ಒ ಪ್ಲಾಂಟ್ ಲೋಕಾರ್ಪಣೆ Read More »

ಸವಣೂರು ಸೀತಾರಾಮ ರೈ ಹುಟ್ಟುಹಬ್ಬ ಆಚರಣೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಗೆ ಸನ್ಮಾನ

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಕೆ.ಸೀತಾರಾಮ ರೈ ಸವಣೂರು ಅವರ 76ನೇ ಹುಟ್ಟುಹಬ್ಬದ ಸಂದರ್ಭ ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಅವರನ್ನು ಅಭಿನಂದಿಸಲಾಯಿತು. ಸವಣೂರು ಸೀತಾರಾಮ ರೈ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನುಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯ ಸುಂದರ ರೈ ಸವಣೂರು, ಸದಸ್ಯೆ ರಶ್ಮಿ ಅಶ್ವಿನ್ ಶೆಟ್ಟಿ, ಕಸ್ತೂರಿ ಕಲಾ ಎಸ್‍. ರೈ, ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ನಾರಾಯಣ ಮೂರ್ತಿ, ಉಪಪ್ರಾಂಶುಪಾಲೆ ಪುಷ್ಪಲತಾ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಸವಣೂರು ಸೀತಾರಾಮ ರೈ ಹುಟ್ಟುಹಬ್ಬ ಆಚರಣೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಗೆ ಸನ್ಮಾನ Read More »

ಸ್ವಾಗತ್ ಬೇಕರಿ ಮಾಲಕ ಜಯರಾಮ್ ಶೆಟ್ಟಿ ನಿಧನ

ಪುತ್ತೂರು: ಇಲ್ಲಿಯ  ಅರುಣಾ ಥಿಯೇಟರ್ ಬಳಿಯ ಸ್ವಾಗತ್ ಬೇಕರಿ ಮಾಲಕ, ಸಾಮೆತ್ತಡ್ಕ ನಿವಾಸಿ ಜಯರಾಮ್ ಶೆಟ್ಟಿ (72) ಗುರುವಾರ ನಿಧನರಾಗಿದ್ದಾರೆ. ಅವರು ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಮಕ್ಕಳು, ಅಳಿಯ, ಸೊಸೆ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸ್ವಾಗತ್ ಬೇಕರಿ ಮಾಲಕ ಜಯರಾಮ್ ಶೆಟ್ಟಿ ನಿಧನ Read More »

ಆರ್ ಎಸ್‍ ಎಸ್‍ ಸಕ್ರೀಯ ಕಾರ್ಯಕರ್ತ ಚಂದ್ರಶೇಖರ್ ನಿಧನ

ಬೆಂಗಳೂರು:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರೊಬ್ಬರು ರಸ್ತೆ ಅಪಘಾತದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಪ್ರಸ್ತುತ ಹಿಂದೂ ಜಾಗರಣಾ ವೇದಿಕೆ ವರ್ತೂರು ಭಾಗ ದೊಮ್ಮಸಂದ್ರ ನಗರ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಚಂದ್ರಶೇಖರ್ (48) ಮೃತಪಟ್ಟವರು. ಚಂದಾಪುರ ದೊಮ್ಮಸಂದ್ರ ರಸ್ತೆಯ ಕಗ್ಗಲೀಪುರ ಗೇಟ್ ಬಳಿ ನಡೆದ ರಸ್ತೆ ಅಪಘಾತ ದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿರುತ್ತಾರೆ, ಮೃತರು ತಾಯಿ ಪತ್ನಿ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಆರ್ ಎಸ್‍ ಎಸ್‍ ಸಕ್ರೀಯ ಕಾರ್ಯಕರ್ತ ಚಂದ್ರಶೇಖರ್ ನಿಧನ Read More »

error: Content is protected !!
Scroll to Top