ಗ್ರಾಮ ಪಂಚಾಯಿತಿ ಸದಸ್ಯರು ಆಸ್ತಿ ವಿವರ ಸಲ್ಲಿಕೆ ಕುರಿತು ಹೈಕೋರ್ಟ್ ಮಹತ್ವದ ತೀರ್ಪು | ಮೂರು ತಿಂಗಳೊಳಗೆ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ

ಬೆಂಗಳೂರು : ಗ್ರಾಮ ಪಂಚಾಯಿತಿ ಸದಸ್ಯರ ಆಸ್ತಿ ವಿವರ ಸಲ್ಲಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಮೂರು ತಿಂಗಳೊಳಗೆ ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದೆ. ಆಸ್ತಿ ವಿವರ ಸಲ್ಲಿಸಲು ವಿಫಲವಾದರೆ ಶೋಕಾಸ್ ನೋಟಿಸ್ ನೀಡದೇ ಸದಸ್ಯತ್ವದಿಂದ ಅನರ್ಹಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಇದಕ್ಕೆ ಉದಾಹರಣೆ ಎಂಬಂತೆ ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ಮೊಘಾ ಗ್ರಾಪಂ ಸದಸ್ಯೆ ಲಲಿತಾಬಾಯಿ ಪಾಟೀಲ್ ಎಂಬವರನ್ನು ರಾಜ್ಯ ಚುನಾವಣಾ ಆಯೋಗ ಸದಸ್ಯತ್ವದಿಂದ ಅನರ್ಹಗೊಳಿಸಿದ್ದು, ಇದನ್ನು […]

ಗ್ರಾಮ ಪಂಚಾಯಿತಿ ಸದಸ್ಯರು ಆಸ್ತಿ ವಿವರ ಸಲ್ಲಿಕೆ ಕುರಿತು ಹೈಕೋರ್ಟ್ ಮಹತ್ವದ ತೀರ್ಪು | ಮೂರು ತಿಂಗಳೊಳಗೆ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ Read More »

ಜು.11 : ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷರ ಪದಗ್ರಹಣ ಸಮಾರಂಭ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷರಾಗಿ ಆಯ್ಕೆಯಾದ ರೊ.ಡಾ.ರಾಜೇಶ್ ಬೆಜ್ಜಂಗಳ ಅವರ ಪದಗ್ರಹಣ ಸಮಾರಂಭ ಜು.11 ಮಂಗಳವಾರ ಬೈಪಾಸ್ ರಸ್ತೆಯಲ್ಲಿರುವ ಅಶ್ವಿನಿ ಕಂಫಾರ್ಟ್ಸ್ ನಲ್ಲಿ ಸಂಜೆ 6.30 ಕ್ಕೆ ನಡೆಯಲಿದೆ. ರೋಟರಿ ಜಿಲ್ಲೆ3181 ರ ಪೂರ್ವ ಜಿಲ್ಲಾ ಗವರ್ನರ್ ರೊ.ಡಾ.ಆರ್.ಎಸ್.ನಾರಾರ್ಜುನ ಪದಗ್ರಹಣ ಸಮಾರಂಭ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿ, ರೊ.ನವೀನ್ ಚಂದ್ರ ನಾಯ್ಕ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ರೊ.ಸುಂದರ್ ಬೈಕಾಡಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ

ಜು.11 : ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷರ ಪದಗ್ರಹಣ ಸಮಾರಂಭ Read More »

ನಾಳೆಯಿಂದ ಅನ್ನಭಾಗ್ಯ ಯೋಜನೆ ಜಾರಿಗೆ | ಬಿಪಿಎಲ್, ಅಂತ್ಯೋದಯ ಫಲಾನುಭವಿಗಳ ಖಾತೆಗೆ ನೇರ ಜಮೆ

ಬೆಂಗಳೂರು:: ರಾಜ್ಯ ಸರ್ಕಾರ ತನ್ನ ಐದು ಗ್ಯಾರಂಟಿಗಳಲ್ಲಿ ಈಗಾಗಲೇ 2 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ನಾಳೆಯಿಂದ ಮೂರನೇ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಕೂಡ ಜಾರಿಗೆ ಬರಲಿದ್ದು ನಾಳೆಯಿಂದ ನೇರವಾಗಿ ಬಿಪಿಎಲ್​ ಹಾಗೂ ಅಂತ್ಯೋದಯ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. ಸೋಮವಾರ ಸಂಜೆ ಐದು ಗಂಟೆಗೆ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಜ್ಯ ಸರ್ಕಾರವು ಐದು ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ್ದು ಉಳಿದ ಐದು ಕೆಜಿ ಅಕ್ಕಿಯ ಬದಲಾಗಿ 170 ರೂಪಾಯಿಗಳನ್ನು ನೀಡಲಿದೆ. ಈ

ನಾಳೆಯಿಂದ ಅನ್ನಭಾಗ್ಯ ಯೋಜನೆ ಜಾರಿಗೆ | ಬಿಪಿಎಲ್, ಅಂತ್ಯೋದಯ ಫಲಾನುಭವಿಗಳ ಖಾತೆಗೆ ನೇರ ಜಮೆ Read More »

ಕಾರು ಅಪಘಾತದಲ್ಲಿ ಮೃತಪಟ್ಟ ಹನಾ ಅವರ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ

ಪುತ್ತೂರು: ಎರಡು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಮೃತಪಟ್ಟ ಹನಾ ಅವರ ಮನೆಗೆ ಶಾಸಕ ಅಶೋಕ್ ಕುಮಾರ್ ಶನಿವಾರ ಭೇಡಿ ನೀಡಿದರು. ಹನಾ ಅವರ ಕುಟುಂಬದೊಂದಿಗೆ ಮಾತನಾಡಿ, ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ನ ಪ್ರಸನ್ನ ರೈ, ಮೃತ ಹನಾ ಅವರ ತಂದೆ ಮಜೀದ್, ಮನೆಯವರು ಉಪಸ್ಥಿತರಿದ್ದರು.

ಕಾರು ಅಪಘಾತದಲ್ಲಿ ಮೃತಪಟ್ಟ ಹನಾ ಅವರ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ Read More »

ಸಿದ್ಧರಾಮಯ್ಯ ಸರಕಾರದ ಬಜೆಟ್ ಎಲ್ಲರೂ ಮೆಚ್ಚುವ ಸಮತೋಲನದ ಬಜೆಟ್ : ಪಿ.ಸಿ.ಜಯರಾಮ

ಸುಳ್ಯ : ಸುಳ್ಯ:ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಎಲ್ಲರೂ ಮೆಚ್ಚುವ ಸಮತೋಲನದ ಬಜೆಟ್ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಶ್ಲಾಘಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ರಾಜ್ಯದಲ್ಲಿ ಇರುವುದು ನುಡಿದಂತೆ ನಡೆಯುವ ಸರಕಾರ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸುವತ್ತ ದಿಟ್ಟ ಹೆಜ್ಜೆ ಇರಿಸಿದೆ‌.ಗ್ಯಾರಂಟಿಗಳಅನುಷ್ಠಾನಕ್ಕೆ 52 ಸಾವಿರ ಕೋಟಿಗಳನ್ನು ಮೀಸಲಿರಿಸಿದೆ.ಶಕ್ತಿ ಯೋಜನೆ, ಅನ್ನ ಭಾಗ್ಯ,ಗೃಹಜ್ಯೋತಿ, ಈಗಾಗಲೇ ಜಾರಿ ಮಾಡಿದೆ.ಉಳಿದ ಎರಡು ಗ್ಯಾರಂಟಿಗಳನ್ನು ಶೀಘ್ರ ಅನುಷ್ಠಾನ ಮಾಡಲಿದೆ. ಬಜೆಟ್ ಶೇ.90 ಜನರಿಗೆ ನೇರವಾಗಿ

ಸಿದ್ಧರಾಮಯ್ಯ ಸರಕಾರದ ಬಜೆಟ್ ಎಲ್ಲರೂ ಮೆಚ್ಚುವ ಸಮತೋಲನದ ಬಜೆಟ್ : ಪಿ.ಸಿ.ಜಯರಾಮ Read More »

ಮುಖ್ಯಮಂತ್ರಿ ಸಿದ್ದರಾಮಯ್ಯರ ಬಜೇಟ್ ಅಲ್ಪಸಂಖ್ಯಾತ ಓಲೈಕೆ ಬಜೆಟ್: ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಕಳೆದ ಬಾರಿ ಸಿದ್ದರಾಮಯ್ಯರ ಆಡಳಿತದಲ್ಲಿ ಇದ್ದಂತೆ ಈ ಬಾರಿಯೂ ಸಿದ್ದರಾಮಯ್ಯ ಬಜೇಟ್ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಬಜೇಟ್ ನಂತಾಗಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮೆಟ್ರಿಕ್ ನಂತರದ  ವಿದ್ಯಾರ್ಥಿಗಳಿಗೆ   ವಿದ್ಯಾರ್ಥಿವೇತನಕ್ಕಾಗಿಯೇ 60 ಕೋಟಿ ರೂ. ಅನುದಾನ, ಹೊಸದಾಗಿ 10 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸುವುದು ಮತ್ತು ನೂರಾರು ಕೋಟಿ ಅನುದಾನ,  ಮೌಲನ ಅಜಾದ್ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ,  ಸಿ.ಇ.ಟಿ ಮೂಲಕ ಪ್ರವೇಶ ಪಡೆದ ಇಂಜಿನಿಯರಿಂಗ್‌, ವೈದ್ಯಕೀಯ

ಮುಖ್ಯಮಂತ್ರಿ ಸಿದ್ದರಾಮಯ್ಯರ ಬಜೇಟ್ ಅಲ್ಪಸಂಖ್ಯಾತ ಓಲೈಕೆ ಬಜೆಟ್: ಅರುಣ್ ಕುಮಾರ್ ಪುತ್ತಿಲ Read More »

ನರೇಂದ್ರ ಮೋದಿಯವರ 9 ವರ್ಷ ಸಾಧನೆಯನ್ನು ಜನರಿಗೆ ತಲುಪಿಸಿ : ಮಾಜಿ ಶಾಸಕ ಸಂಜೀವ ಮಠಂದೂರು | ಪುಣಚ ಮಹಾಶಕ್ತಿ ಕೇಂದ್ರದ ಸಭೆ

ವಿಟ್ಲ : ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ 9ವರ್ಷ ಪೂರೈಸಿದ ಸಾಧನೆಯ ಸಂಭ್ರಮವನ್ನು ಜನರಿಗೆ ತಲುಪಿಸಲು ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಶನಿವಾರ ವಿಟ್ಲ ಪುಣಚ ಮಹಾಶಕ್ತಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ಮಾತನಾಡಿ, ಪ್ರತಿ ಬೂತಿನಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಂಘಟಿತ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಕೆಲವು ದಿನಗಳಿಂದ

ನರೇಂದ್ರ ಮೋದಿಯವರ 9 ವರ್ಷ ಸಾಧನೆಯನ್ನು ಜನರಿಗೆ ತಲುಪಿಸಿ : ಮಾಜಿ ಶಾಸಕ ಸಂಜೀವ ಮಠಂದೂರು | ಪುಣಚ ಮಹಾಶಕ್ತಿ ಕೇಂದ್ರದ ಸಭೆ Read More »

ನಗರದ ಲಾಡ್ಜ್ ನಲ್ಲಿ ಕುಳಿತ ಸ್ಥಿತಿಯಲ್ಲೇ ಮೃತದೇಹ ಪತ್ತೆ

ಪುತ್ತೂರು: ನಗರದ ಮುಖ್ಯರಸ್ತೆಯಲ್ಲಿರುವ ಲಾಡ್ಜ್ ನ ರೂಂ ಒಂದರಲ್ಲಿ ಕುಳಿತಲ್ಲೇ ಮೃತಪಟ್ಟ ಮೃತದೇಹ ಶನಿವಾರ ಸಂಜೆ ಪತ್ತೆಯಾಗಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ತಂಪು ಪಾನೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ (40) ಎಂದು ಗುರತಿಸಲಾಗಿದೆ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಕಳೆದ ಹಲವಾರು ವರ್ಷಗಳಿಂದ ತಂಪು ಪಾನೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ ಕೆಲವೊಮ್ಮೆ ಇದೇ ಲಾಡ್ಜ್ ನಲ್ಲಿ ರೂಮ್ ಪಡೆದು ತಂಗುತ್ತಿದ್ದರು ಎನ್ನಲಾಗಿದೆ. ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ

ನಗರದ ಲಾಡ್ಜ್ ನಲ್ಲಿ ಕುಳಿತ ಸ್ಥಿತಿಯಲ್ಲೇ ಮೃತದೇಹ ಪತ್ತೆ Read More »

ಭಾರತೀಯ ಕಿಸಾನ್ ಸಂಘದಿಂದ ಬಿದಿರು ಬೆಳೆ ಕುರಿತು ಮಾಹಿತಿ ಕಾರ್ಯಾಗಾರ

ಪುತ್ತೂರು : ಬಿದಿರು ಕೃಷಿಯು ಅಡಿಕೆಗೆ ಪರ್ಯಾಯ ಕೃಷಿಯಲ್ಲ. ಕೃಷಿ ಪದ್ದತಿಗೆ ಪೂರಕವಾಗಿ ಬಿದಿರು ಬೆಳೆಯಬಹುದು. ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆ, ತಾಪಮಾನ ಉತ್ತಮವಾಗಿದ್ದು ಇಲ್ಲಿ ಹಲವು ತಳಿಯ ಬಿದಿರು ಬೆಳೆಯಲು ಅನುಕೂಲವಿದೆ. ಇಲ್ಲಿ ನೈಸರ್ಗಿಕವಾಗಿ ಬಿದಿರನ್ನು ಬೆಳೆಯಬಹುದು. ಬಿದಿರಿನ ಬೇಸಾಯಕ್ಕೆ ತಂತ್ರಜ್ಞಾನದ ಆವಶ್ಯಕತೆಯಿಲ್ಲ ಎಂದು ಪೊನ್ನಂಪೇಟೆ ಅರಣ್ಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ರಾಮಕೃಷ್ಣ ಹೆಗಡೆ ಹೇಳಿದರು. ಭಾರತೀಯ ಕಿಸಾನ್ ಸಂಘದ ವತಿಯಿಂದ ಶನಿವಾರ ಪಂಚವಟಿ ಸಭಾ ಭವನದಲ್ಲಿ ನಡೆದ ಬಿದಿರು ತಳಿಗಳು, ಅವುಗಳನ್ನು ಬೆಳೆಸುವ ವಿಧಾನ

ಭಾರತೀಯ ಕಿಸಾನ್ ಸಂಘದಿಂದ ಬಿದಿರು ಬೆಳೆ ಕುರಿತು ಮಾಹಿತಿ ಕಾರ್ಯಾಗಾರ Read More »

ಹವಾಮಾನ ವೈಪರೀತ್ಯ : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡವಾಗಿ ಲ್ಯಾಂಡ್ ಆದ ವಿಮಾನ

ಮಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ವಿಮಾನ ತಡವಾಗಿ ಲ್ಯಾಂಡಿಂಗ್ ಆಗಿದೆ. ಹೈದರಾಬಾದ್‌ನಿಂದ ಆಗಮಿಸಿರುವ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಗೋವಾಕ್ಕೆ ತೆರಳಿ ಮತ್ತೆ ಹಿಂತಿರುಗಿ ಬಂದು ಲ್ಯಾಂಡ್ ಆಗಿದೆ. ಭಾರಿ ಮಳೆಯಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಹವಾಮಾನ ವೈಪರೀತ್ಯ : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡವಾಗಿ ಲ್ಯಾಂಡ್ ಆದ ವಿಮಾನ Read More »

error: Content is protected !!
Scroll to Top