ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ಹಿಂಸಾಚಾರ | ಒಂಭತ್ತು ಮಂದಿ ಮೃತ್ಯು

ಕೊಲ್ಕತ್ತಾ: ಪಂಚಾಯಿತಿ ಚುನಾವಣೆ ವೇಳೆ ಹಿಂಸಾಚಾರ ಭುಗಿಲೆದ್ದ ಪರಿಣಾಮ ಒಂಭತ್ತು ಮಂದಿ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆ ವೇಳೆ ತೀವ್ರ ಹಿಂಸಾಚಾರ ನಡೆದಿತ್ತು. ಪರಿಣಾಮ ಟಿಎಂಸಿ ಕಾರ್ಯಕರ್ತ ಸಹಿತ ಒಂಭತ್ತು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಮತದಾನ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು ಮುರ್ಷಿದಾಬಾದ್‌ನಲ್ಲಿ ತಡರಾತ್ರಿ ಟಿಎಂಸಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಮನೆಯೊಂದನ್ನು ಧ್ವಂಸಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ಹಿಂಸಾಚಾರ | ಒಂಭತ್ತು ಮಂದಿ ಮೃತ್ಯು Read More »

ಪುತ್ತಿಲ ಪರಿವಾರದೊಂದಿಗೆ ರಹಸ್ಯ ಸಭೆ ನಡೆಸಿದ ಬಿ.ಎಲ್.ಸಂತೋಷ್ | ಸಂಧಾನಕ್ಕೆ ಯತ್ನ

ಪುತ್ತೂರು : ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಭದ್ರಕೋಟೆಯನ್ನು ಅಲುಗಾಡಿಸಿರುವ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣ್ ಕುಮಾರ್ ಪುತ್ತಿಲರ ಬಿಜೆಪಿ ಜತೆಗಿನ ಸಂಧಾನ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು ಇದೀಗ ಬಹಿರಂಗಗೊಂಡಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪುತ್ತಿಲರನ್ನು ದೆಹಲಿಗೆ ಕರೆಸಿ ರಹಸ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ  ಚುನಾವಣೆ ಪೂರ್ವ ಹಾಗೂ ನಂತರ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದ್ದು, ಈ ಸಭೆ ಜೂನ್‍ನಲ್ಲೇ ನಡೆದಿದೆ ಎಂಬುದು ಇದೀಗ ಬಹಿರಂಗವಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆ

ಪುತ್ತಿಲ ಪರಿವಾರದೊಂದಿಗೆ ರಹಸ್ಯ ಸಭೆ ನಡೆಸಿದ ಬಿ.ಎಲ್.ಸಂತೋಷ್ | ಸಂಧಾನಕ್ಕೆ ಯತ್ನ Read More »

ವೈವಿಧ್ಯ ಇಂಟೀರಿಯರ್ಸ್ ಎರಡನೇ ವರ್ಷಕ್ಕೆ ಪಾದಾರ್ಪಣೆ

ಪುತ್ತೂರು : ನಗರದ ಅರುಣಾ ಥಿಯೇಟರ್ ಎದುರಿನ ಪ್ರಭು ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ವೈವಿಧ್ಯ ಇಂಟೀರಿಯರ್ಸ್ ಶನಿವಾರ ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿತು. ಕಳೆದ ಒಂದು ವರ್ಷದಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದು, ಪಾದಾರ್ಪಣೆ ಪ್ರಯುಕ್ತ ಬೆಳಿಗ್ಗೆ ಸಂಸ್ಥೆಯಲ್ಲಿ ಗಣಪತಿ ಹೋಮ ನಡೆಯಿತು. ಸಂಸ್ಥೆಯು ಮನೆ ಮತ್ತು ವಾಣಿಜ್ಯ ಮಳಿಗೆಗಳ ಒಳಾಂಗಣ ವಿನ್ಯಾಸದಲ್ಲಿ ವೈವಿಧ್ಯತೆಗೆ ಹೆಸರುವಾಸಿಯಾಗಿರುವುದಲ್ಲದೆ, ಇಸ್ಕಾ ಮಾರ್ಬಲ್ ಶೀಟ್, ಡಬ್ಲ್ಯೂಪಿಸಿ ರಾಫ್ಟರ್ ಲೂವರ್ಸ್, ಪೋಮ್ ಶೀಟ್, ಪಿವಿಸಿ ಡೆಕೋರೇಟಿವ್, ವಾಲ್ ಮತ್ತು ಸೀಲಿಂಗ್ ಪ್ಯಾನಲ್ಸ್, ಎಚ್ ವಿಎಲ್‍ ಎಸ್

ವೈವಿಧ್ಯ ಇಂಟೀರಿಯರ್ಸ್ ಎರಡನೇ ವರ್ಷಕ್ಕೆ ಪಾದಾರ್ಪಣೆ Read More »

ವಿಪತ್ತು ನಿರ್ವಹಣೆ, ಸಾಮಾಜಿಕ ಕಾರ್ಯ | ಇರ್ದೆ-ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪುತ್ತೂರು ತಾಲೂಕಿನಲ್ಲಿ ದ್ವಿತೀಯ ಸ್ಥಾನ

ನಿಡ್ನಳ್ಳಿ: ಇರ್ದೆ-ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪುತ್ತೂರು ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಪುತ್ತೂರು ಪುರಭವನದಲ್ಲಿ ಜು.7ರಂದು ನಡೆದ ನವಜೀವನ ಸದಸ್ಯರ ಸಮಾವೇಶ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಅತಿಥಿಗಳು ಪ್ರಶಸ್ತಿ ನೀಡಿ ತಂಡವನ್ನು ಗೌರವಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಘಟಕ ವಿಪತ್ತು ನಿರ್ವಹಣೆ ಮತ್ತು ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿ ಉತ್ತಮ ಕೆಲಸ ಕಾರ್ಯ ಮಾಡಿ ಜನಮನ್ನಣೆ ಗಳಿಸಿತ್ತು. ಘಟಕದ ಅಧ್ಯಕ್ಷ ಆನಂದ,

ವಿಪತ್ತು ನಿರ್ವಹಣೆ, ಸಾಮಾಜಿಕ ಕಾರ್ಯ | ಇರ್ದೆ-ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪುತ್ತೂರು ತಾಲೂಕಿನಲ್ಲಿ ದ್ವಿತೀಯ ಸ್ಥಾನ Read More »

ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ವಿಟ್ಲ : ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಕನಸು ಕಾಣಬೇಕು, ನಾನು ಮುಂದೆ ಏನಾಗಬೇಕು ಎಂಬುದರ ಬಗ್ಗೆ ದೊಡ್ಡ ಕನಸು ಕಾಣಬೇಕು. ಗುರಿಯಿಲ್ಲದ ಜೀವನದಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ವಿಟ್ಲ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ದುಡ್ಡಿದ್ದವ ಮಾತ್ರ ಯಶಸ್ಸು ಕಾಣುತ್ತಾನೆ ಎಂಬ ಮನೋಭಾವ ಬಿಟ್ಟು ಬಿಡಬೇಕು. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇಂಗ್ಲೀಷ್ ಮತ್ತು ಹಿಂದಿ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು

ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ Read More »

ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

ಧರ್ಮಸ್ಥಳ : ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ರಾತ್ರಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು

ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ Read More »

ತೋಡಿಗೆ ಬಿದ್ದು ಮಹಿಳೆ ಸಾವು

ಕಾರ್ಕಳ:  ಮಹಿಳೆಯೊಬ್ಬರು ಆಕಸ್ಮಿಕವಾಗಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ನದಾಯಿಪಾಲ್ಕೆಯಲ್ಲಿ ನಡೆದಿದೆ. ಬೇಬಿ ಶೆಟ್ಟಿ (57) ಮೃತಪಟ್ಟ ಮಹಿಳೆ ಶುಕ್ರವಾರ ಮಧ್ಯಾಹ್ನ ದನವನ್ನು ಹುಡುಕಿಕೊಂಡು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಭಾರಿ ಮಳೆ ಯಾಗುತಿದ್ದರಿಂದ ತೋಡಿನಲ್ಲಿ ಭಾರಿ ಪ್ರಮಾಣದಲ್ಲಿ ಹರಿಯುತಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮುಳುಗಿ ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತೋಡಿಗೆ ಬಿದ್ದು ಮಹಿಳೆ ಸಾವು Read More »

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಕೊಯಮತ್ತೂರು ಡಿಐಜಿ ವಿಜಯಕುಮಾರ್

ಕೊಯಮತ್ತೂರು: ಕೊಯಮತ್ತೂರು ಡಿಐಜಿ ವಿಜಯಕುಮಾರ್ ಅವರು ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. 2009ರ ಐಪಿಎಸ್ ಬ್ಯಾಚ್‌ನವರಾಗಿದ್ದ ಇವರು, 2022 ಜನವರಿ 6ರಂದು ಚೆನ್ನೈನ ಅಣ್ಣಾನಗರ ಡೆಪ್ಯುಟಿ ಕಮಿಷನರ್‌ನಿಂದ ಕೊಯಮತ್ತೂರು ಡಿಐಜಿಯಾಗಿ ಭಡ್ತಿ ಪಡೆದಿದ್ದರು ಎನ್ನಲಾಗಿದೆ. ಕಾಂಚೀಪುರಂ, ಕಡಲೂರು, ನಾಗಪಟ್ಟಿಣಂ ಮತ್ತು ತಿರುವರೂರ್ನಲ್ಲಿ ಡಿಎಸ್ಪಿಯಾಗಿ ಕೆಲಸ ಮಾಡಿದ್ದಾರೆ. ಈ ಕುರಿತು ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಐಪಿಎಸ್ ಅಧಿಕಾರಿ ತಮ್ಮ ಬೆಳಗಿನ ವಾಕಿಂಗ್ ಬಳಿಕ

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಕೊಯಮತ್ತೂರು ಡಿಐಜಿ ವಿಜಯಕುಮಾರ್ Read More »

ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ  ಮೋಹನ್ ಆಳ್ವ ಭೇಟಿ

ಪುತ್ತೂರು: ಸರಳತೆಯ ಸಾಕಾರ ಮೂರ್ತಿ ಸಾಹಿತ್ಯ ಮತ್ತು ಕಲಾಪೋಷಕರಾದ ಮೋಹನ್ ಆಳ್ವ ಅವರು  ಪುತ್ತೂರು  ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಭೇಟಿ ನೀಡಿದರು. ರೋಟರಿ ಕ್ಲಬ್ ಪುತ್ತೂರು ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅವರು ವಿನಂತಿಯ ಮೇರೆಗೆ ತಡರಾತ್ರಿ 10:30 ಆದರೂ ಕನ್ನಡ ಹಾಗೂ ಸಾಹಿತ್ಯ ಪರಿಷತ್ ಮೇಲಿನ ಅಭಿಮಾನದಿಂದ ಕಚೇರಿಗೆ ಆಗಮಿಸಿ ಪುತ್ತೂರು ತಾಲೂಕು  ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಕುರಿತು ಪ್ರಶಂಶಿಸಿದರು  ಜೊತೆಗೆ ಕನ್ನಡ ಶಾಲೆಗಳ ಅಭಿವೃದ್ಧಿಯ  ಕುರಿತು ಒಂದಿಷ್ಟು ಯೋಚನೆಗಳನ್ನು ನೀಡಿದರು.  ಮುಂದಿನ

ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ  ಮೋಹನ್ ಆಳ್ವ ಭೇಟಿ Read More »

ಬಡ ಕುಟುಂಬದ ಮಹಿಳೆಯೊಬ್ಬರ ಅಂತ್ಯಸಂಸ್ಕಾರಕ್ಕೆ ನೆರವಾದ ಪುತ್ತಿಲ ಪರಿವಾರ

ಕಡಬ : ಕಡಬ ತಾಲೂಕಿನ ಕಡು ಬಡತನದ ಮಹಿಳೆಯೊಬ್ಬರು ಶುಕ್ರವಾರ ಪುತ್ತೂರು ಸರಕಾರಿ ಆಸ್ಪತ್ರೆ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರಲ್ಲಿ ಹಣಕಾಸಿನ ವ್ಯವಸ್ಥೆ ತೊಂದರೆ ಪಡುವಂತಾಯಿತು. ಇದನ್ನು ತಕ್ಷಣ ಮನಗಂಡ ಪುತ್ತಿಲ ಪರಿವಾರದ ಕಡೆಯಿಂದ ಅಂಬುಲೆನ್ಸ್ ಮತ್ತು  ಅಂತ್ಯಕ್ರಿಯೆಯನ್ನು ನಡೆಸಲು ಬೇಕಾದ ವ್ಯವಸ್ಥೆಯನ್ನು  ಮಾಡಿ, ಕುಟುಂಬದ ದುಃಖದಲ್ಲಿ ಪುತ್ತಿಲ ಪರಿವಾರ ಭಾಗಿಯಾಯಿತು, ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ನಗರ ಸಮಿತಿಯ ಅಧ್ಯಕ್ಷ ಅನಿಲ್ ತೆಂಕಿಲ , ಕಿಶೋರ್ ಕುಮಾರ್  , ಗೀತೇಶ ಹಾಗೂ ಪುತ್ತಿಲ ಪರಿವಾರದ

ಬಡ ಕುಟುಂಬದ ಮಹಿಳೆಯೊಬ್ಬರ ಅಂತ್ಯಸಂಸ್ಕಾರಕ್ಕೆ ನೆರವಾದ ಪುತ್ತಿಲ ಪರಿವಾರ Read More »

error: Content is protected !!
Scroll to Top