ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್-ಬಿಜೆಪಿ ಮೈತ್ರಿ ಸಾಧ್ಯತೆ | ಬಿಜೆಪಿ ಜತೆ ಸಖ್ಯ ಬೆಳೆಸಲು ದಿಲ್ಲಿಗೆ ತೆರಳಲಿರುವ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪರಸ್ಪರ ಕಚ್ಚಾಡಿಕೊಂಡಿದ್ದ ಜೆಡಿಎಸ್ ಮತ್ತು ಬಿಜೆಪಿ ನಡುವೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೈತ್ರಿ ಏರ್ಪಡುವ ಸಾಧ್ಯತೆಗಳು ದಟ್ಟವಾಗಿವೆ. ಈ ಮೂಲಕ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಯಾರೂ ಶಾಶ್ವತ ಮಿತ್ರರೂ ಅಲ್ಲ ಎಂಬ ಹಳೇ ಗಾದೆ ಮಾತಿಗೆ ಮತ್ತೊಂದು ನಿದರ್ಶನ ಕರ್ನಾಟಕದಲ್ಲೆ ತಯಾರಾಗುತ್ತಿದೆ. ಬಿಜೆಪಿಯನ್ನು ಕಟ್ಟಿಹಾಕಲು ಮಹಾಘಟಬಂಧನ್ ನಾಯಕರು ಬೆಂಗಳೂರಿನಲ್ಲಿ ಇಂದಿನಿಂದ ಒಗ್ಗಟ್ಟು ಪ್ರದರ್ಶನಕ್ಕೆ ಸಜ್ಜಾಗಿದ್ದಾರುವಂತೆಯೇ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಜತೆ ಸಖ್ಯ ಬೆಳೆಸಲು ದಿಲ್ಲಿಗೆ ತೆರಳಲಿದ್ದಾರೆ. ತೆನೆ […]

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್-ಬಿಜೆಪಿ ಮೈತ್ರಿ ಸಾಧ್ಯತೆ | ಬಿಜೆಪಿ ಜತೆ ಸಖ್ಯ ಬೆಳೆಸಲು ದಿಲ್ಲಿಗೆ ತೆರಳಲಿರುವ ಎಚ್.ಡಿ.ಕುಮಾರಸ್ವಾಮಿ Read More »

ಅಮೇರಿಕ ಸಂಸ್ಥಾನದ ನ್ಯೂಜೆರ್ಸಿಯಲ್ಲಿ ಪ್ರಗತಿಯಲ್ಲಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯ | ಪ್ರಗತಿ ಪರಿಶೀಲನೆಗೆ ತೆರಳುತ್ತಿರುವ  ಶ್ರೀ ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ

ಪುತ್ತೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸಂಕಲ್ಪದಂತೆ ಅಮೇರಿಕಾ ಸಂಯುಕ್ತ ಸಂಸ್ಥಾನದ ನ್ಯೂಜೆರ್ಸಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ದೇವಸ್ಥಾನದ ನಿರ್ಮಾಣ ಕಾರ್ಯದ ಪ್ರಗತಿ ಪರಿಶೀಲನೆಗಾಗಿ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಇಂದು ನ್ಯೂಜೆರ್ಸಿಯಲ್ಲಿರುವ ಶಾಖಾ ಮಠಕ್ಕೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರೂ ತೆರಳುತ್ತಿದ್ದಾರೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಶ್ರೀ ಮಠದ ಭಾರತೀಯ ಭಕ್ತದ ದಶಕಗಳ ಅಭಿಲಾಷೆಯಂತೆ 2012

ಅಮೇರಿಕ ಸಂಸ್ಥಾನದ ನ್ಯೂಜೆರ್ಸಿಯಲ್ಲಿ ಪ್ರಗತಿಯಲ್ಲಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯ | ಪ್ರಗತಿ ಪರಿಶೀಲನೆಗೆ ತೆರಳುತ್ತಿರುವ  ಶ್ರೀ ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ Read More »

ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನ

ಬೆಂಗಳೂರು: ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ (73) ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಉಮ್ಮನ್ ಚಾಂಡಿ ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಉಮ್ಮನ್ ಚಾಂಡಿ ನಿಧನಕ್ಕೆ ಕೇರಳ ಹಾಲಿ ಸಿಎಂ ಪಿಣರಾಯಿ ವಿಜಯನ್ ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಉಮ್ಮನ್ ಚಾಂಡಿ ಅವರು 1943, ಅಕ್ಟೋಬರ್ 31ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ನಲ್ಲಿ ಜನಿಸಿದ್ದು, ಪುತ್ತುಪಲ್ಲಿಯ ಸೇಂಟ್ ಜಾರ್ಜ್ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿ ಬಳಿಕ

ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನ Read More »

ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ | ಮೂವರು ಮೃತ್ಯು

ಪಿರಿಯಾಪಟ್ಟಣ : ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ನಡೆದಿದೆ. ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಕಂಪ್ಲಾಪುರ ಬಳಿ ಇಂದು ಮಂಗಳವಾರ  ಮುಂಜಾನೆ 4.30ಕ್ಕೆ ಈ ಅಪಘಾತ ಸಂಭವಿಸಿದೆ. ಪರಿಣಾಮ ಮುದಾಸೀರ್, ಮುಜಾಯಿದ್, ಅಹ್ಮದ್ ಪಾಷಾ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಪುತ್ತೂರು ಮೂಲದ ಯುವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ

ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ | ಮೂವರು ಮೃತ್ಯು Read More »

ಇನ್ನು ಮುಂದೆ ದೇವಾಲಯಗಳಲ್ಲಿ ಫೋಟೊ ಕ್ಲಿಕ್ಕಿಸುವುದಕ್ಕೆ ನಿಷೇಧ | ಸರಕಾರದಿಂದ ಆದೇಶ

ಪುತ್ತೂರು: ದೇವಾಲಯಗಳಿಗೆ ತೆರಳಿ ಪೋಟೋ ಕ್ಲಿಕ್ಕಿಸಲೆಂದೇ ತೆರಳುವವರಿಗೆ ರಾಜ್ಯ ಸರ್ಕಾರ ಶಾಕಿಂಗ್​ ನ್ಯೂಸ್​ ನೀಡಿದೆ. ಕರ್ನಾಟಕದ ದೇಗುಲಗಳಲ್ಲಿ ಮೊಬೈಲ್​ ಬಳಕೆಗೆ ನಿಷೇಧ ಹೇರಿ ನೂತನ ಆದೇಶ ಹೊರಡಿಸಿದೆ. ಇಂದು ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆ ಈ ಆದೇಶವನ್ನು ಹೊರಡಿಸಿದ್ದು ದತ್ತಿ ಇಲಾಖೆಗಳ ಅಡಿಯಲ್ಲಿ ಬರುವ ಯಾವುದೇ ದೇಗುಲಗಳಲ್ಲಿ ಇನ್ಮೇಲೆ ಮೊಬೈಲ್​ ಬಳಕೆ ಮಾಡುವಂತಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರ 30 ಸಾವಿರಕ್ಕೂ ಅಧಿಕ ದೇವಾಲಯಗಳು ಇರುತ್ತದೆ.

ಇನ್ನು ಮುಂದೆ ದೇವಾಲಯಗಳಲ್ಲಿ ಫೋಟೊ ಕ್ಲಿಕ್ಕಿಸುವುದಕ್ಕೆ ನಿಷೇಧ | ಸರಕಾರದಿಂದ ಆದೇಶ Read More »

ನಾಳೆ (ಜು.18) : ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ

ಪುತ್ತೂರು: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಜೈನ ಮುನಿಯವರ ಹತ್ಯೆಯನ್ನು ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಾಳೆ (ಜು.18) ಬೆಳಿಗ್ಗೆ 11.30 ಕ್ಕೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಹಿಂದುಗಳ  ಭೂಮಿಯನ್ನ ಕಬಳಿಸುವ ವಕ್ಫ್ ಬೋರ್ಡ್ ಕಾಯಿದೆಯನ್ನು ರದ್ದುಗೊಳಿಸಬೇಕು ಎಂಬ ಆಗ್ರಹದೊಂದಿಗೆ ಆಂದೋಲನ ನಡೆಯಲಿದೆ. ಪುತ್ತೂರಿನ ಮಿನಿ ವಿಧಾನಸೌಧ ಮುಂಭಾಗದ ಅಮರ್ ಜವಾನ್ ವೃತ್ತದ ಬಳಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ (ಜು.18) : ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ Read More »

ಬ್ಯಾಟ್ ಹಿಡಿದು ಫೀಲ್ಡ್ ಗಿಳಿದ ಪುತ್ತಿಲ ಪರಿವಾರ | ಮುಂದುವರೆದ ಮನೆ ಮನೆ ಭೇಟಿ

ಪುತ್ತೂರು: ಉಪಚುನಾವಣೆ ಎದುರಿಸುತ್ತಿರುವ ನಿಡ್ಪಳ್ಳಿಯ ಒಂದು ಕ್ಷೇತ್ರದಲ್ಲಿ ಪುತ್ತಿಲ ಪರಿವಾರ ಸಭೆ ಹಾಗೂ ಮನೆ ಮನೆ ಭೇಟಿ ನಡೆಯಿತು. ಇಲ್ಲಿಯೂ ಬ್ಯಾಟ್ ಚಿಹ್ನೆಯೇ ಸಿಕ್ಕಿರುವುದರಿಂದ  ಪುತ್ತಿಲ ಪರಿವಾರ ಪ್ರಚಾರ ಸಂದರ್ಭ ಬ್ಯಾಟ್ ಹಿಡಿದೇ ಫೀಲ್ಡ್ ಗೆ ಹೋಗುತ್ತಿದ್ದಾರೆ. ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅಧ್ಯಕ್ಷ ಪ್ರಸನ್ನ ಮಾರ್ತಾರ  ಅಧ್ಯಕ್ಷತೆಯಲ್ಲಿ ಪುತ್ತಿಲ ಪರಿವಾರದ ಸಭೆ ನಿಡ್ಪಳ್ಳಿಯಲ್ಲಿ ಜರಗಿತು.  ಹಿಂದೂ ಮುಖಂಡ ಅರುಣ್ ಪುತ್ತಿಲ, ನಿಡ್ಪಳ್ಳಿಯ ಪುತ್ತಿಲ ಪರಿವಾರದ ಅಭ್ಯರ್ಥಿ ಜಗನ್ನಾಥ ರೈ ಕೊಳಂಬೆತ್ತಿಮಾರು,  ನಿಡ್ಪಳ್ಳಿ  ಶಾಂತಾದುರ್ಗಾ ದೇವಸ್ಥಾನದ ವ್ಯವಸ್ಥಾಪನ ನಾರಾಯಣ

ಬ್ಯಾಟ್ ಹಿಡಿದು ಫೀಲ್ಡ್ ಗಿಳಿದ ಪುತ್ತಿಲ ಪರಿವಾರ | ಮುಂದುವರೆದ ಮನೆ ಮನೆ ಭೇಟಿ Read More »

ವರದಿಗಾರ ನಿಶಾಂತ್ ಬಿಲ್ಲಂಪದವು ಮೇಲೆ ದೌರ್ಜನ್ಯ | ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ

ಪುತ್ತೂರು: ಬಪ್ಪಳಿಗೆಯ ಗುರುಂಪುನಾರು ಎಂಬಲ್ಲಿ ವಿಜಯವಾಣಿ ಪತ್ರಿಕೆ ವರದಿಗಾರ ನಿಶಾಂತ್ ಬಿಲ್ಲಂಪದವು ಅವರ ಮೊಬೈಲ್ ಹುಡಿ ಮಾಡಿ ದೌರ್ಜನ್ಯಗೈದ ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಲಾಯಿತು. ಘಟನೆ ಬಪ್ಪಳಿಗೆಯ ಗುಂಪಕಲ್ಲು ಎಂಬಲ್ಲಿ ನಡೆದಿದ್ದು, ನಿಶಾಂತ್ ಅವರು ಅಪಾಯಕಾರಿ ಮರಗಳನ್ನು ಮಾನದಂಡದ ಪ್ರಕಾರ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಿರಲಿಲ್ಲ. ಅಪಾಯಕ್ಕೆ ಆಹ್ವಾನಿಸುವ ರೀತಿಯಲ್ಲಿ

ವರದಿಗಾರ ನಿಶಾಂತ್ ಬಿಲ್ಲಂಪದವು ಮೇಲೆ ದೌರ್ಜನ್ಯ | ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ Read More »

ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈಗೆ ಮುಖ್ಯಮಂತ್ರಿ ಪ್ರಶಂಸನಾ ಪತ್ರ

ಪುತ್ತೂರು: ಇಲ್ಲಿಯ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ರಾಷ್ಟೀಯ ಸೇನಾ ಯೋಜನೆಯ (ಎನ್‌ಸಿಸಿ) ಅಧಿಕಾರಿ ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈ ಅವರಿಗೆ ಎನ್‌ಸಿಸಿಯಲ್ಲಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಯಿಂದ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು. ಮಡಿಕೇರಿ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಕರ್ನಲ್  ಝೆಡ್.ಜಿ.ಅರ್ಹನ ಹಾಗೂ ಆಡಳಿತಾಧಿಕಾರಿ ಕರ್ನಲ್ ವಿ ಡಿ ಚಾಕೋ ಅವರು ಈ ಗೌರವ ಪತ್ರವನ್ನು ಮಡಿಕೇರಿ ಬೆಟಾಲಿಯನ್ ನಲ್ಲಿ ನೀಡಿ ಗೌರವಿಸಿದರು. ಭಾಮಿ ಅತುಲ್ ಶೆಣೈ

ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈಗೆ ಮುಖ್ಯಮಂತ್ರಿ ಪ್ರಶಂಸನಾ ಪತ್ರ Read More »

ರಾಮಚಂದ್ರ ಪುರುಷ ನಿಧನ

ಪುತ್ತೂರು: ನರಿಮೊಗರು ಗ್ರಾಮದ ಪುರುಷರಕಟ್ಟೆ ಸುರುಳಿಮಜಲು ನಿವಾಸಿ ರಾಮಚಂದ್ರ ಪುರುಷ ಎಂ. (65) ಸ್ವಗೃಹದಲ್ಲಿ ಭಾನುವಾರ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಮೃತರು ಮುಗೇರಡ್ಕ ಕುಟುಂಬದವರಾಗಿದ್ದರು. ಅಲ್ಲದೆ ಪ್ರತಿಷ್ಠಿತ ಸನಾತನ ನಾಥಿಯ ಪಂಥದವರಾಗಿರುವ ಅವರು ಕದ್ರಿ ಜೋಗಿ ಮಠಕ್ಕೆ ಸೇರಿದವರಾಗಿರುತ್ತಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ರಾಮಚಂದ್ರ ಪುರುಷ ನಿಧನ Read More »

error: Content is protected !!
Scroll to Top