ಪುತ್ತೂರು ರಾಮಕ್ಷತ್ರಿಯ ಸೇವಾ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

ಪುತ್ತೂರು: ಪುತ್ತೂರು ರಾಮಕ್ಷತ್ರಿಯ ಸೇವಾ ಸಂಘ, ರಾಮಕ್ಷತ್ರಿಯ ಮಹಿಳಾ ವೃಂದ, ರಾಮಕ್ಷತ್ರಿಯ ಯುವ ವೃಂದದ ವತಿಯಿಂದ ಕೆಮ್ಮಿಂಜೆ ಅತ್ತಾಳ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು. ದ.ಕ. ರಾಮಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಪ್ರಮೋದ್ ನಾಯಕ್ ದೀಪ ಪ್ರಜ್ವಲನೆ ಮಾಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಮಕ್ಷತ್ರಿಯ ಸಮಾಜದ ಮೂಲಕ ಉತ್ತಮ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ. ಯುವಕರು ನಮ್ಮ ಸಮಾಜದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಇದರ ಮುಖಾಂತರ ನಮ್ಮ ಸಂಘದ ಅಭಿವೃದ್ಧಿ ಆಗುತ್ತದೆ. ರಾಮಕ್ಷತ್ರಿಯ ಸಂಘದ ವಾರ್ಷಿಕೋತ್ಸವದ ಮೂಲಕ ನಾವು ಸಮಾಜವನ್ನು ಒಗ್ಗೂಡಿಸುತ್ತೇವೆ […]

ಪುತ್ತೂರು ರಾಮಕ್ಷತ್ರಿಯ ಸೇವಾ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ Read More »

ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು : ಸಾಹಿತಿ ವಿ.ಬಿ.ಅರ್ತಿಕಜೆ | ಸಾಹಿತ್ಯ ಸಂಪದ, ಉಪನ್ಯಾಸ, ಗೌರವಾರ್ಪಣೆ, ಭಾವಗಾನ ಮತ್ತು ಕವಿಗೋಷ್ಟಿ ಕಾರ್ಯಕ್ರಮ

ಮುಕ್ಕೂರು : ಬೌದ್ಧಿಕ ಪ್ರಬುದ್ದತೆಗೆ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ವಿ.ಬಿ.ಅರ್ತಿಕಜೆ ಹೇಳಿದರು. ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ನಲಂದ ಪ್ರಕಾಶನ ಆಶ್ರಯದಲ್ಲಿ ಕಾನಾವಿನ ಕೋಡಿಬೈಲು ನಲಂದದಲ್ಲಿ ಸಾಹಿತ್ಯ ಸಂಪದ, ಉಪನ್ಯಾಸ, ಗೌರವಾರ್ಪಣೆ, ಭಾವಗಾನ ಮತ್ತು ಕವಿಗೋಷ್ಟಿ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಓದುವ ಹವ್ಯಾಸ ಬೆಳೆಸಿಕೊಂಡಾಗ ಬರವಣಿಗೆಯಲ್ಲಿಯು ಗಟ್ಟಿತನ ಮೂಡುತ್ತದೆ ಎಂದರು. ಕೆಲವು ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದವರು ಬರುವುದುಂಟು. ಸಂಬಂಧ, ಪರಿಚಯ ಎನ್ನುವ ಕಾರಣಕ್ಕೆ

ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು : ಸಾಹಿತಿ ವಿ.ಬಿ.ಅರ್ತಿಕಜೆ | ಸಾಹಿತ್ಯ ಸಂಪದ, ಉಪನ್ಯಾಸ, ಗೌರವಾರ್ಪಣೆ, ಭಾವಗಾನ ಮತ್ತು ಕವಿಗೋಷ್ಟಿ ಕಾರ್ಯಕ್ರಮ Read More »

ವಿವೇಕಾನಂದ ಇನ್ಟ್ಸ್ ಟ್ಯೂಟ್  ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್  ಉದ್ಘಾಟನೆ | ವಿವೇಕಾನಂದ ವಿದ್ಯಾವರ್ಧಕ ಸಂಘದ 80ನೇ ಸಂಸ್ಥೆ

ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಪುತ್ತೂರಿನಲ್ಲಿ ಪ್ರಥಮ ಬಿ.ಫಾರ್ಮ್‍ ಕಾಲೇಜು  ವಿವೇಕಾನಂದ ಇನ್ಟ್ಸ್ ಟ್ಯೂಟ್  ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್‍ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ 80ನೇ ಸಂಸ್ಥೆಯಾಗಿದ್ದು, ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಶೈಕ್ಷಣಿಕ ವಿಭಾಗವನ್ನು ಭಾರತ ಸರಕಾರದ ರಾಜ್ಯ ಆರೋಗ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದ ಪುತ್ತೂರಿನ ಈ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಕೊಡುವ ಸಂಸ್ಥೆ ಪ್ರಾರಂಭಗೊಂಡಿರುವುದು

ವಿವೇಕಾನಂದ ಇನ್ಟ್ಸ್ ಟ್ಯೂಟ್  ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್  ಉದ್ಘಾಟನೆ | ವಿವೇಕಾನಂದ ವಿದ್ಯಾವರ್ಧಕ ಸಂಘದ 80ನೇ ಸಂಸ್ಥೆ Read More »

ಎಡನೀರು ಶ್ರೀ ಮಠದಲ್ಲಿ ತೃತೀಯ ಚಾತುರ್ಮಾಸ್ಯ | ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ

ಪುತ್ತೂರು: ಎಡನೀರು ಶ್ರೀ ಮಠದಲ್ಲಿ ಸಚ್ಚಿದಾನಂದ ಶ್ರೀಗಳ ತೃತೀಯ ಚಾತುರ್ಮಾಸ್ಯ ವೃತಾಚರಣೆ ಅಂಗವಾಗಿ ಪುತ್ತೂರಿನಿಂದ ಶ್ರೀ ಮಠಕ್ಕೆ  ಹೊರೆಕಾಣಿಕೆ ಸೋಮವಾರ ಸಮರ್ಪಣೆಯಾಯಿತು. ಕಲ್ಲಾರೆ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಹೊರೆಕಾಣಿಕೆ ವಾಹನಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭಲ್ಲಿ ಪುತ್ತೂರು ವಲಯ ಸಮಿತಿ ಅಧ್ಯಕ್ಷ ಡಾ.ಭಾಸ್ಕರ್ ಎಸ್‍, ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಕಾರ್ಯದರ್ಶಿ ಯು.ಪೂವಪ್ಪ, ಪ್ರಭಾಕರ ಮುಗೇರು, ಶರತ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು

ಎಡನೀರು ಶ್ರೀ ಮಠದಲ್ಲಿ ತೃತೀಯ ಚಾತುರ್ಮಾಸ್ಯ | ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ Read More »

ವಿಟ್ಲ ಸರಕಾರಿ ಶಾಲಾ ಕಿಟಕಿಗೆ ಕಿಡಿಗೇಡಿಗಳಿಂದ ಹಾನಿ

ವಿಟ್ಲ : ಯಾರೋ ಕಿಡಿಗೇಡಿಗಳು ವಿಟ್ಲ ಸರಕಾರಿ ಪ್ರೌಢಶಾಲಾ ಕಿಟಕಿಗಳಿಗೆ ಹಾನಿ ಮಾಡಿದ ಘಟನೆ ನಡೆದಿದೆ. ಸೋಮವಾರ ಬೆಳಿಗ್ಗೆ ಶಾಲಾ ಶಿಕ್ಷಕರು ಎಂದಿನಂತೆ ಶಾಲಾಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಭಾನುವಾರ ಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ ಇದ್ದುದರಿಂದ ಪಂದ್ಯಾಟ ಮುಗಿದ ಬಳಿಕ ಗೋಡೆಗಳ ಮೇಲೆ ಅಶ್ಲೀಲ ಬರಹ ಬರೆದು, ಕಿಟಕಿಗಳಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸುತ್ತಿದ್ದಾರೆ.

ವಿಟ್ಲ ಸರಕಾರಿ ಶಾಲಾ ಕಿಟಕಿಗೆ ಕಿಡಿಗೇಡಿಗಳಿಂದ ಹಾನಿ Read More »

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್-2023

ಪುತ್ತೂರು: ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್ ಕೊಡಲಾಗುವ ಬೆಸ್ಟ್ ಕಾಂಪಿಟೇಟಿವ್ ಕೋಚಿಂಗ್ ಇನ್ಸ್ಟಿಟ್ಯೂಟ್ ಪ್ರಶಸ್ತಿಯನ್ನು ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್  ಸೆಂಟರ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರಫುಲ್ಲ ಗಣೇಶ್ ಅವರಿಗೆ ನೀಡಿ ಗೌರವಿಸಲಾಯಿತು. 2010ರಲ್ಲಿ ಸ್ಥಾಪನೆಗೊಂಡು  ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ ಐ.ಆರ್.ಸಿ.ಎಂ.ಡಿ ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರ  ಶಿಕ್ಷಣ ಕ್ಷೇತ್ರದಲ್ಲಿ ಮಗದೊಂದು ಅದ್ವಿತೀಯ ಸಾಧನೆಯನ್ನು ಮಾಡಿದೆ. ವಿದ್ಯಾರ್ಥಿಗಳನ್ನು ಎಲ್ಲಾ ರೀತಿಯ

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್-2023 Read More »

ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ವತಿಯಿಂದ ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸೇವೆಗೆ ಅಭಿನಂದನಾ ಕಾರ್ಯಕ್ರಮ

ಚಾರ್ವಾಕ : ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸತತ 10 ವರ್ಷದಲ್ಲಿ ಪ್ರಶಸ್ತಿ ಪಡೆದು ಮಾದರಿ ಸಂಘವಾಗಿ ಮೂಡಿ ಬಂದಿರುವ ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ  ಉತ್ತಮ ಸೇವೆಯನ್ನು ಪರಿಗಣಿಸಿ ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಆರ್. ಗೌಡ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಚಿಲ ವೆಂಕಪ್ಪ

ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ವತಿಯಿಂದ ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸೇವೆಗೆ ಅಭಿನಂದನಾ ಕಾರ್ಯಕ್ರಮ Read More »

ಸಂಸ್ಕೃತ ಅತ್ಯಂತ ಶ್ರೇಷ್ಠ ಹಾಗೂ ಪ್ರಸ್ತುತ ಭಾಷೆ : ಡಾ.ಗಣೇಶಕೃಷ್ಣ ಭಟ್ಟ | ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ

ಪುತ್ತೂರು: ಸಂಸ್ಕೃತ ಅತ್ಯಂತ ಶ್ರೇಷ್ಠವಾದ ಭಾಷೆ. ಮಾತ್ರವಲ್ಲದೆ ಅಂದಿಗೂ ಇಂದಿಗೂ ಎಂದಿಗೂ ಪ್ರಸ್ತುತವಾದ ಭಾಷೆ. ಸಂಸ್ಕೃತ ಅಧ್ಯಯನದಿಂದ ಅನೇಕ ಪ್ರಯೋಜನಗಳನ್ನು ನಾವು ಪಡೆಯಬಹುದು. ಬಹುಜನರು ನಂಬುವ ಜ್ಯೋತಿಷ್ಯ ಶಾಸ್ತ್ರ ಸಂಸ್ಕೃತದ ಒಂದು ಅಂಗವೇ ಆಗಿದೆ ಎಂದು ಗುರುವಾಯೂರಿನ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಜ್ಯೋತಿಷ್ಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಗಣೇಶಕೃಷ್ಣ ಭಟ್ಟ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಸ್ಕೃತ ಅತ್ಯಂತ ಶ್ರೇಷ್ಠ ಹಾಗೂ ಪ್ರಸ್ತುತ ಭಾಷೆ : ಡಾ.ಗಣೇಶಕೃಷ್ಣ ಭಟ್ಟ | ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ Read More »

ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಉದ್ಯೋಗಿ ಕೇಶವ ನಿಧನ

ಪುತ್ತೂರು: ಮರೀಲ್ ನಲ್ಲಿರುವ ಪ್ರತಿಷ್ಠಿತ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಉದ್ಯೋಗಿ ಕೇಶವ (56) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನರಾಗಿದ್ದಾರೆ. ತೆಂಕಿಲ ನಿವಾಸಿಯಾಗಿರುವ ಅವರು ಕಳೆದ 30 ವರ್ಷಗಳಿಂದ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಭಾನುವಾರ ಹಠಾತ್ತನೇ ಅಸೌಖ್ಯಕ್ಕೊಳಗಾಗಿ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.  

ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಉದ್ಯೋಗಿ ಕೇಶವ ನಿಧನ Read More »

ಕತ್ತು ಕೊಯ್ದು ಶಿಕ್ಷಕನ ಕೊಲೆ ಮಾಡಿದ 14 ರ ಬಾಲಕ

  ದೆಹಲಿ : ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಶಿಕ್ಷಕನನ್ನು 14 ವರ್ಷದ ಬಾಲಕ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. 28ರ ಹರೆಯದ ಶಿಕ್ಷಕ ಬಾಲಕನಿಗೆ ನಿತ್ಯ ನಿಂದನೆ ಮಾಡುತ್ತಿದ್ದು, ಹಲ್ಲೆ ಮಾಡಿ ವಿಡಿಯೋ ಕೂಡ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯ ನಡೆದ ಮೂರು ದಿನಗಳ ಬಳಿಕ  ಕೊಲೆ ಆರೋಪಿ ವಿದ್ಯಾರ್ಥಿಗೆ ಬಂಧಿಸಲಾಗಿದೆ. ಆಗಸ್ಟ್ 30 ರಂದು ಮಧ್ಯಾಹ್ನ 2.15 ರ ಸುಮಾರಿಗೆ ಜಾಮಿಯಾ ನಗರದ ಬಟ್ಲಾ ಹೌಸ್‌ನ  ಎರಡನೇ ಮಹಡಿಯ

ಕತ್ತು ಕೊಯ್ದು ಶಿಕ್ಷಕನ ಕೊಲೆ ಮಾಡಿದ 14 ರ ಬಾಲಕ Read More »

error: Content is protected !!
Scroll to Top