ಸೆ.10 :ಪುತ್ತೂರಿನ ಜೇಸಿ ಸಪ್ತಾಹದಲ್ಲಿ ವಿಶೇಷ ತಳಿಗಳ ಶ್ವಾನ, ಬೆಕ್ಕು ‘ಸಾಕುಪ್ರಾಣಿ’ಗಳ ಪ್ರದರ್ಶನ.

ಪುತ್ತೂರು: ಭಾರತಾದ್ಯಂತ ಒಂದು ವಾರಗಳ ಕಾಲ ನಡೆಯುವ ‘ಜೇಸಿ ಸಪ್ತಾಹ’ದ ಅಂಗವಾಗಿ ಪುತ್ತೂರು ಜೆಸಿಐ ಸಂಸ್ಥೆಯ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರು ಜೆಸಿಐ ಸೆ. 9 ರಿಂದ 15ರ ತನಕ ‘ಜೆಸಿಐ ಸಪ್ತಾಹ’ ದ ಅಂಗವಾಗಿ ಸೆ.10 ಭಾನುವಾರ, ಅಪರಾಹ್ನ ಗಂಟೆ 2 ರಿಂದ ಇಳಿ ಸಂಜೆ ತನಕ ಪುತ್ತೂರು ಕ್ಲಬ್ ಆವರಣದಲ್ಲಿ ವಿಶೇಷ ತಳಿಗಳ ಶ್ವಾನ, ಬೆಕ್ಕು ಮೊದಲಾದ ‘ಸಾಕುಪ್ರಾಣಿ’ಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಪುತ್ತೂರು ಕ್ಲಬ್ ಅಧ್ಯಕ್ಷ ಡಾ. […]

ಸೆ.10 :ಪುತ್ತೂರಿನ ಜೇಸಿ ಸಪ್ತಾಹದಲ್ಲಿ ವಿಶೇಷ ತಳಿಗಳ ಶ್ವಾನ, ಬೆಕ್ಕು ‘ಸಾಕುಪ್ರಾಣಿ’ಗಳ ಪ್ರದರ್ಶನ. Read More »

ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ | ಎಸ್‍ಎಸ್‍ಎಲ್‍ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಕರ ದಿನಾಚರಣೆಯಂದೇ ಸಿಹಿ ಸುದ್ದಿ ನೀಡಿದ  ರಾಜ್ಯ ಸರಕಾರ

ಮಂಗಳೂರು: ಶಿಕ್ಷಕರ ದಿನಾಚರಣೆಯಂದೇ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ 24ನೇ ಶೈಕ್ಷಣಿಕ ಸಾಲಿನಿಂದ ಎಸ್ಎಸ್ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದುವರೆಗೆ ವರ್ಷಕ್ಕೆ 2 ಪರೀಕ್ಷೆ ಮಾತ್ರ ನಡೆಸುತ್ತಿದ್ದ ಶಿಕ್ಷಣ ಇಲಾಖೆ ಇನ್ಮುಂದೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ. ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ, ಜ್ಞಾನಧಾರಣೆ ವೃದ್ಧಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ತರಲಾಗಿದ್ದು, ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ | ಎಸ್‍ಎಸ್‍ಎಲ್‍ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಕರ ದಿನಾಚರಣೆಯಂದೇ ಸಿಹಿ ಸುದ್ದಿ ನೀಡಿದ  ರಾಜ್ಯ ಸರಕಾರ Read More »

ಗುರುವಂದನೆ- ಶಿಕ್ಷಕರ ದಿನಾಚರಣೆಗೆ ಮುಳಿಯ ಜ್ಯುವೆಲ್ಸ್‌ನಿಂದ ವಿಶೇಷ ಕೊಡುಗೆ

ಪುತ್ತೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ಪುತ್ತೂರಿನ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್  ‘ಗುರುವಂದನೆ’ ಆಯೋಜಿಸಿದೆ. ಶಿಕ್ಷಕರಿಗೆ ವಿಶೇಷ ಕೊಡುಗೆಯಾಗಿ ಪ್ರತಿ ಗ್ರಾಂ ಚಿನ್ನ ಖರೀದಿಯ ಮೇಲೆ 2 ಗ್ರಾಂ ಬೆಳ್ಳಿಯ ಆಭರಣಗಳ / ಪರಿಕರಗಳನ್ನು ಕೊಡುಗೆಯಾಗಿ ಪಡೆಯುವ ಅವಕಾಶವನ್ನು ಮುಳಿಯ ಜ್ಯುವೆಲ್ಸ್‌ ಒದಗಿಸಿದೆ. ಗ್ರಾಹಕರು ತಮ್ಮ ಗುರುತಿನ ಚೀಟಿ (ಐಡಿ ಕಾರ್ಡ್‌) ತೋರಿಸಿ ವಿಶೇಷ ರಿಯಾಯಿತಿಯನ್ನು ಪಡೆಯುವಂತೆ ಮುಳಿಯ ಜ್ಯುವೆಲ್ಸ್ ಪ್ರಕಟಣೆ ಕೋರಿದೆ. ಈ ಕೊಡುಗೆ ಅಕ್ಟೋಬರ್ 31ರ ವರೆಗೆ ಮಾತ್ರ ಲಭ್ಯವಿದೆ. ಮುಳಿಯ ಜ್ಯುವೆಲ್ಸ್‌ನ

ಗುರುವಂದನೆ- ಶಿಕ್ಷಕರ ದಿನಾಚರಣೆಗೆ ಮುಳಿಯ ಜ್ಯುವೆಲ್ಸ್‌ನಿಂದ ವಿಶೇಷ ಕೊಡುಗೆ Read More »

ಕಬಡ್ಡಿ ಪಂದ್ಯಾಟ : ದರ್ಬೆ ಲಿಟ್ಲ್ ಫ್ಲವರ್ ಶಾಲಾ ತಂಡ ಜಿಲ್ಲಾ ಮಟ್ಟಕ್ಕೆ

ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಶಾಲೆ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ ತಂಡವನ್ನು ಜೆನಿಟ ಸಿಂಧು ಪಸನ್ನ, ಜುವೆನ್ನ ಡ್ಯಾಜಲ್ ಕುಟಿನಾ, ಸನ್ನಿಧಿ, ಜಸ್ಮಿತಾ, ಫಾತಿಮತ್ ಶೈಮ, ನಿಶ್ಮಿತಾ ಕೆ, ಹಾರ್ದಿಕ, ಘನಶ್ರೀ, ಆರಾಧನ, ದ್ರಿಶಾ, ಫಾತಿಮತ್ ಅಫ್ರ, ರಶ್ಮಿತಾ, ವೈಷ್ಣವಿ ರೈ, ಸಾಕ್ಷಿ,

ಕಬಡ್ಡಿ ಪಂದ್ಯಾಟ : ದರ್ಬೆ ಲಿಟ್ಲ್ ಫ್ಲವರ್ ಶಾಲಾ ತಂಡ ಜಿಲ್ಲಾ ಮಟ್ಟಕ್ಕೆ Read More »

ಮಾದಕ‌ ವ್ಯಸನ ಚಟ : ಯುವಕ ನೇಣುಬಿಗಿದು ಆತ್ಮಹತ್ಯೆ

ಮಂಗಳೂರು : ಮಾದಕ ವ್ಯಸನಕ್ಕೆ ತುತ್ತಾದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಘಟನೆ ನಡೆದಿದೆ. ತಲಪಾಡಿ ಪಡೀಲ್‍ ನಾರ್ಲ ನಿವಾಸಿ ಪೈಸಲ್ (24) ಆತ್ಮಹತ್ಯೆ ಮಾಡಿಕೊಂಡವ. ತಲಪಾಡಿ ನಾರ್ಲ ಬಳಿಯ ತನ್ನ ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೈದಿದ್ದಾನೆ. ಮನೆಯಲ್ಲಿ ಫೈಸಲ್ ತಾಯಿ, ತಂಗಿ ಮತ್ತು ಅಜ್ಜಿ ಇದ್ದು ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೈಸಲ್‍ ಗೆ ,ಮಾದಕ ವ್ಯಸನದ ಚಟವಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಗೈದಿರಬೇಕು

ಮಾದಕ‌ ವ್ಯಸನ ಚಟ : ಯುವಕ ನೇಣುಬಿಗಿದು ಆತ್ಮಹತ್ಯೆ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಪುತ್ತೂರು: ಪ್ರತೀ ವ್ಯಕ್ತಿಯು ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಗುರವಿಗೆ ನೀಡುತ್ತಾರೆ. ಶಿಕ್ಷಣದ ಮೂಲ ಅರ್ಥವನ್ನು ತಿಳಿಸಿ ವ್ಯಕ್ತಿಯ ಬದುಕನ್ನು ಬೆಳಗುವವರು ಶಿಕ್ಷಕರಾಗಿರುವುದರಿಂದ ಇಡೀ ಪ್ರಪಂಚವೇ ಇವರನ್ನು ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತದೆ .ಎಂದು ನರೇಂದ್ರ ಪ.ಪೂ  ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು. ಗುರುಕುಲ ಶಿಕ್ಷಣದಿಂದ ಹಿಡಿದು ಇಂದಿನ ಶಿಕ್ಷಣದವರೆಗೂ ಶಿಕ್ಷಕರು ಇತರರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಜೀವನದ ಪ್ರತಿಯೊಂದು

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ Read More »

ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಎಸ್ ಎಸ್ ಎಫ್ ಸಮ್ಮೇಳನ ದಲ್ಲಿ ಸೌಜನ್ಯಳಿಗೆ ನ್ಯಾಯ ಒದಗಿಸಲು ಒತ್ತಾಯ; ಸಮ್ಮೇಳನವನ್ನು ಉದ್ಘಾಟಿಸಲಿರುವ ಸಿದ್ದರಾಮಯ್ಯ | ಸೌಜನ್ಯಳ ಅತ್ಯಾಚಾರ ಮಾಡಿದವರು ಯಾರೇ ಇರಲಿ, ಶಿಕ್ಷೆ ನೀಡಲೇಬೇಕು : ಎಸ್. ಎಸ್. ಎಫ್

ಬೆಳ್ತಂಗಡಿ : ಸೌಜನ್ಯ ಹೋರಾಟದ ಕಿಚ್ಚು ದೇಶಾದ್ಯಂತ ಕಾಡಿಚ್ಚಿನಂತೆ ಭೀಕರವಾಗಿ ಹಬ್ಬುತ್ತಿದ್ದಂತೆಯೇ ಅತ್ತ ಜಾಗತಿಕವಾಗಿಯೂ ಮುಗ್ಧ ಹೆಣ್ಣು ಮಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಹಲವು ಸಂಘಟನೆಗಳು ಹೋರಾಟದತ್ತ ಮುಖ ಮಾಡಿವೆ. ಹಿಂದೂ ಹುಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಈಗಾಗಲೇ ಬೃಹತ್ ಪ್ರತಿಭಟನೆಗಳು ನಡೆದಿವೆ. ನಿನ್ನೆಯಷ್ಟೇ ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಪರ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ, ಸೌಜನ್ಯ ಹೋರಾಟದ ಅಧ್ಯಕ್ಷೆ ಪ್ರಸನ್ನ ರವಿ, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣವರ್, ಶ್ರೀ ರಾಮ ಸೇನೆ ಮುಖ್ಯಸ್ಥ

ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಎಸ್ ಎಸ್ ಎಫ್ ಸಮ್ಮೇಳನ ದಲ್ಲಿ ಸೌಜನ್ಯಳಿಗೆ ನ್ಯಾಯ ಒದಗಿಸಲು ಒತ್ತಾಯ; ಸಮ್ಮೇಳನವನ್ನು ಉದ್ಘಾಟಿಸಲಿರುವ ಸಿದ್ದರಾಮಯ್ಯ | ಸೌಜನ್ಯಳ ಅತ್ಯಾಚಾರ ಮಾಡಿದವರು ಯಾರೇ ಇರಲಿ, ಶಿಕ್ಷೆ ನೀಡಲೇಬೇಕು : ಎಸ್. ಎಸ್. ಎಫ್ Read More »

ಮೂರ್ತಿಕಲಾ ರಚನಾ ಸ್ಪರ್ಧೆ – ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ವತಿಯಿಂದ ಕಲಬುರಗಿ ಜಿಲ್ಲೆಯ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್ ನಲ್ಲಿ ನಡೆದ ರಾಜ್ಯಮಟ್ಟದ ಗಣಿತ -ವಿಜ್ಞಾನ ಮೇಳದ  ಮೂರ್ತಿಕಲಾ ರಚನಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಕಿಶಾನ್ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಹರೀಶ್ ಗೌಡ ಮತ್ತು ಸವಿತಾ ದಂಪತಿ ಪುತ್ರ ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕ ರುಕ್ಮಯ ತರಬೇತಿ ನೀಡಿರುತ್ತಾರೆ.

ಮೂರ್ತಿಕಲಾ ರಚನಾ ಸ್ಪರ್ಧೆ – ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ಮಂಗಳೂರು ಐಪಿಎಸ್ ಗಳ  ವರ್ಗಾವಣೆ  

ಮಂಗಳೂರು: ರಾಜ್ಯ ಸರ್ಕಾರ ಅಧಿಕಾರಿಗಳನ್ನು ಹಲವು ಐಪಿಎಸ್ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು, ನಗರದ ನೂತನ ಪೊಲೀಸ್ ಆಯುಕ್ತರಾಗಿ ಐಪಿಎಸ್‌ ಅಧಿಕಾರಿ ಅನುಪಮ್ ಅಗರ್ವಾಲ್ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರವೂ ಹಾಲಿ ಮಂಗಳೂರು ಪೊಲೀಸ್ ಕಮೀಷನರ್ ಆಗಿರುವ ಕುಲದೀಪ್ ಕುಮಾರ್ ಆರ್ ಜೈನ್ ಅವರು ಸೇರಿದಂತೆ 35 ಐಪಿಎಸ್ ಅಧಿಕಾರಿಗಳನ್ನು ಬೆಳ್ಳಂಬೆಳಗ್ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕುಲದೀಪ್ ಅವರಿಗೆ ಯಾವುದೆ ಹುದ್ದೆ ತೋರಿಸಿದೆ ವರ್ಗಾವಣೆ ಮಾಡಿದೆ. ಕುಲದೀಪ್ ಅವರು ಖಡಕ್ ಆಫೀಸರ್ ದಕ್ಷ ಮತ್ತು ಪ್ರಾಮಾಣಿಕ

ಮಂಗಳೂರು ಐಪಿಎಸ್ ಗಳ  ವರ್ಗಾವಣೆ   Read More »

ಶ್ರೀ ಆದಿಚುಂಚನಗಿರಿ ಬಿಜಿಎಸ್ ಎಜ್ಯುಕೇಶನ್ ಸೆಂಟರ್ ಶಾಲೆಯಲ್ಲಿ ಬಾಲ ಮುಕುಂದ ಕೃಷ್ಣವೇಷ ಸ್ಪರ್ಧೆ | ಮಕ್ಕಳೊಂದಿಗೆ ಸಂಭ್ರಮಿಸಿದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು : ಹಿನ್ನೆಲೆಯಲ್ಲಿ ಮಂಗಳೂರಿನ ಕಾವೂರಿನಲ್ಲಿರುವ ಶ್ರೀ ಆದಿಚುಂಚನಗಿರಿ ಬಿಜಿಎಸ್ ಎಜ್ಯುಕೇಷನ್ ಸೆಂಟರ್ (ಸಿಬಿಎಸ್ಇ) ಶಾಲೆಯಲ್ಲಿ ಏರ್ಪಡಿಸಲಾಗಿದ್ದ ‘ಬಾಲಮುಕುಂದ’ ಕೃಷ್ಣವೇಶ ಸ್ಪರ್ಧೆಯಲ್ಲಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡು ಸಂಭ್ರಮಿಸಿದರು. ಬಿಜಿಎಸ್ ಕಾವೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಮಕ್ಕಳೊಂದಿಗೆ ಮಕ್ಕಳಾಗಿ ಸಂಭ್ರಮಿಸಿದರು. ಪಾಲ್ಗೊಂಡ ಎಲ್ಲ ಮಕ್ಕಳಿಗೆ ನಾಲ್ಕು ಕೆಟಗೆರಿಯಲ್ಲಿ ಸ್ಪರ್ಧೆ ಮಾಡಿ ಪದಕ -ನಗದು ಬಹುಮಾನವನ್ನು ವಿತರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ಸುಬ್ಬ ಕಾರಡ್ಕ, ಸಿಬಿಎಸ್ ಇ ಶಾಲೆಯ ಪ್ರಾಂಶುಪಾಲೆ ರೇಷ್ಮಾ ಸಿ ನಾಯರ್ , ಪ್ರಥಮ ದರ್ಜೆ

ಶ್ರೀ ಆದಿಚುಂಚನಗಿರಿ ಬಿಜಿಎಸ್ ಎಜ್ಯುಕೇಶನ್ ಸೆಂಟರ್ ಶಾಲೆಯಲ್ಲಿ ಬಾಲ ಮುಕುಂದ ಕೃಷ್ಣವೇಷ ಸ್ಪರ್ಧೆ | ಮಕ್ಕಳೊಂದಿಗೆ ಸಂಭ್ರಮಿಸಿದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ Read More »

error: Content is protected !!
Scroll to Top