ನಾಳೆ (ಸೆ.11) : ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಪುತ್ತೂರು: ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ಸೆ. 11 ಸೋಮವಾರ ನಡೆಯಲಿದೆ.ಬೆಳಿಗ್ಗೆ 10 ಗಂಟೆಗೆ ಸಂಪ್ಯ ಸಹಕಾರಿ ಸಂಘದ ಪ್ರಧಾನ ಕಚೇರಿ ಸಭಾಭವನದಲ್ಲಿ ಮಹಾಸಭೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.

ನಾಳೆ (ಸೆ.11) : ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ Read More »

ಪುತ್ತೂರು ನಗರ ಠಾಣಾ ಪಿಎಸ್‍ಐ ಆಗಿ ಆಂಜನೇಯ ರೆಡ್ಡಿ

ಪುತ್ತೂರು: ಪುತ್ತೂರು ನಗರ ಠಾಣಾ ಪಿಎಸ್ಐ ಆಗಿ ಆಂಜನೇಯ ರೆಡ್ಡಿ ನೇಮಕಗೊಂಡಿದ್ದಾರೆ. ಈ ಹಿಂದೆ ಪಿಎಸ್‍ಐ ಆಗಿ ಕರ್ತವ್ಯದಲ್ಲಿದ್ದ ಶ್ರೀಕಾಂತ್ ರಾಥೋಡ್ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಆಂಜನೇಯ ರೆಡ್ಡಿಯವರನ್ನು ನೇಮಕ ಮಾಡಲಾಗಿದೆ. ಆಂಜನೇಯ ರೆಡ್ಡಿ ಈ ಮೊದಲು ಕಡಬ, ಬೆಳ್ಳಾರೆ ಸಹಿತ ಜಿಲ್ಲೆಯ ಕೆಲವು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಮಾಣಿಕ ಸೇವೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪುತ್ತೂರು ನಗರ ಠಾಣಾ ಪಿಎಸ್‍ಐ ಆಗಿ ಆಂಜನೇಯ ರೆಡ್ಡಿ Read More »

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ಪುಣಚ ಶ್ರೀದೇವಿ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾಭಾರತಿ ಸಂಯೋಜಿತ ಶಾಲೆಗಳ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು,  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ (17ರ ವಯೋಮಾನದ) – ಪ್ರಮಥ ಎಂ. ಭಟ್ (10ನೇ ತರಗತಿ) ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮಹಮ್ಮದ್ ರಿಹಾನ್ (10ನೇ ತರಗತಿ) ತೃತೀಯ ಸ್ಥಾನ ಪಡೆದಿರುತ್ತಾರೆ. ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ (14ರ ವಯೋಮಾನದ) ವರ್ಷಿ ರೈ (7ನೇ ತರಗತಿ)

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ Read More »

ಕಾಮಗಾರಿಯ ಅನುದಾನಕ್ಕೆ ನಿಮ್ಮದೇ ತೆರಿಗೆ ಹಣ | ಶಾಂತಿಗೋಡು ಸ.ಹಿ.ಪ್ರಾ. ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟಿಸಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ನಿಮ್ಮ ಊರಿನ ಕಾಮಗಾರಿಗೆ ಸರಕಾರದಿಂದ ಅನುದಾನ ಬಂದಿದ್ದರೆ ಅದು ನಿಮ್ಮದೇ ಹಣ. ನೀವು ಕಟ್ಟಿದ ಟ್ಯಾಕ್ಸ್ ಸೇರಿದಂತೆ ವಿವಿಧ ಮೂಲಗಳಿಂದ ನಿಮ್ಮಿಂದಲೇ ಸಂಗ್ರಹಿಸಿದ ಹಣವನ್ನು ಯಾವುದೇ ಕಾಮಗಾರಿಗೆ ಬಳಕೆ ಮಾಡುತ್ತಾರೆ. ಯಾವ ಜನಪ್ರತಿನಿಧಿಯೂ ಸ್ವಂತ ಹಣವನ್ನು ಕಾಮಗಾರಿಗೆ ನೀಡುತ್ತಿಲ್ಲ, ನೀಡುವುದೂ ಇಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು. ಶಾಂತಿಗೋಡು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ವಿವೇಕ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿಮ್ಮ ಊರಿನ ಬೇಡಿಕೆ, ಸಮಸ್ಯೆಗಳು ಏನೆಂಬುದು ನಿಮಗೆ ಗೊತ್ತಿರುತ್ತದೆ. ಸಾರ್ವಜನಿಕರು ಬೇಡಿಕೆ ಮತ್ತು

ಕಾಮಗಾರಿಯ ಅನುದಾನಕ್ಕೆ ನಿಮ್ಮದೇ ತೆರಿಗೆ ಹಣ | ಶಾಂತಿಗೋಡು ಸ.ಹಿ.ಪ್ರಾ. ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟಿಸಿ ಶಾಸಕ ಅಶೋಕ್ ಕುಮಾರ್ ರೈ Read More »

ಪುತ್ತೂರು ಪೇಟೆಯಲ್ಲಿ ಅಟ್ಟಿಮಡಕೆಯ ವೈಭವ

ಪುತ್ತೂರು : ವಿಶ್ವ ಹಿಂದೂ ಪರಿಷತ್ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ ಅಂಗವಾಗಿ ಪುತ್ತೂರು ಮೊಸರು ಕುಡಿಕೆ ಉತ್ಸವ ಹಾಗೂ ವೈಭವದ ಶೋಭಾಯಾತ್ರೆಗೆ ಶನಿವಾರ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು. ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ವೈದ್ಯ ಡಾ.ಎಂ.ಕೆ.ಪ್ರಸಾದ್ ಚಾಲನೆ ನೀಡಿದರು. ನಗರದ ಪ್ರಮುಖ ಕಡೆಗಳಲ್ಲಿ ಅಟ್ಟಿ ಮಡಿಕೆಗಳನ್ನು ಅಳವಡಿಸಲಾಗಿದ್ದು, ವೀರ ಹಿಂದೂ ಯುವಕರಿಂದ ಅಟ್ಟಿ ಮಡಿಕೆ ಒಡೆಯುವ

ಪುತ್ತೂರು ಪೇಟೆಯಲ್ಲಿ ಅಟ್ಟಿಮಡಕೆಯ ವೈಭವ Read More »

ನೆಲ್ಲಿಕಟ್ಟೆ ಸ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾಜ್ಯೋತಿ ಎಲ್‍.ಕೆ.ಜಿ., ಯುಕೆಜಿ ತರಗತಿ ಉದ್ಘಾಟನೆ

ಪುತ್ತೂರು : ನೆಲ್ಲಿಕಟ್ಟೆ ಸರಕಾರಿ ಹಿ ಪ್ರಾ ಶಾಲೆಯಲ್ಲಿ ರೋಟರಿ‌ಕ್ಲಬ್ ಪುತ್ತೂರು ಸಿಟಿ ,ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ವಿದ್ಯಾ ಜ್ಯೋತಿ ಎಲ್ ಕೆ ಜಿ ಮತ್ತು ಯುಕೆಜಿ ಹಾಗೂ ಅಂಗನವಾಡಿ ಪುನಶ್ಚೇತನ ರೋಟರಿ ಜಿಲ್ಲಾ ಯೋಜನೆಯನ್ನು ಶನಿವಾರ ಉದ್ಘಾಟಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿ ಮಾತನಾಡಿ, ಸರಕಾರ ಮಾಡಬೇಕಾದ ಕೆಲಸವನ್ನು ರೋಟರಿ ಕ್ಲಬ್ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ಒಂದು ವರ್ಷದೊಳಗೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್ ಕೆ

ನೆಲ್ಲಿಕಟ್ಟೆ ಸ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾಜ್ಯೋತಿ ಎಲ್‍.ಕೆ.ಜಿ., ಯುಕೆಜಿ ತರಗತಿ ಉದ್ಘಾಟನೆ Read More »

ಸಮರ್ಪಣಾ ಚಾರಿಟೇಬಲ್ ಟ್ರಸ್ಟ್’ನ “ನ್ಯೂಸ್ ಪುತ್ತೂರು” ನೂತನ ಕಚೇರಿಗೆ ವಿದ್ಯುಕ್ತ ಚಾಲನೆ

ಪುತ್ತೂರಿನ ಹೆಸರನ್ನು ನ್ಯೂಸ್ ಪುತ್ತೂರು ಹತ್ತೂರಿಗೆ ಪಸರಿಸಲಿ: ಶಾಸಕ ಅಶೋಕ್ ರೈ ಪುತ್ತೂರು ಬೆಳೆಯುತ್ತಿರುವ ನಗರ. ಒಂದಷ್ಟು ಉದ್ಯಮಗಳು ಬರುತ್ತಿವೆ. ಜನಸಂಖ್ಯೆ ಹೆಚ್ಚಾಗ್ತಾ ಇದೆ. ಪುತ್ತೂರಿಗೆ ಎಲ್ಲಾ ಉದ್ಯಮಗಳು ಬರಬೇಕು ಎನ್ನುವ ಆಶೆ ನಮ್ಮದು. ಇದರೊಂದಿಗೆ ಉತ್ತಮ ವಿಚಾರ ಎಂಬಂತೆ ನ್ಯೂಸ್ ಪುತ್ತೂರು ಎನ್ನುವ ಮಾಧ್ಯಮ ಪುತ್ತೂರಿಗೆ ಪರಿಚಯಗೊಂಡಿದೆ. ಎಲ್ಲಿ ಹೋದರೂ ಭ್ರಷ್ಟಾಚಾರ ಎದ್ದು ಕಾಣುವ ಇಂದಿನ ದಿನದಲ್ಲಿ, ಬಡವರಿಗೆ ನ್ಯಾಯ ಸಿಗುವ ಕೆಲಸ ಆಗಬೇಕು. ಮಾಧ್ಯಮದ ಮೂಲಕ ಬಡವರಿಗೆ ಆಗುತ್ತಿರುವ ಅನ್ಯಾಯವನ್ನು ಎತ್ತಿ ತೋರಿಸುವ ಅಗತ್ಯವಿದೆ.

ಸಮರ್ಪಣಾ ಚಾರಿಟೇಬಲ್ ಟ್ರಸ್ಟ್’ನ “ನ್ಯೂಸ್ ಪುತ್ತೂರು” ನೂತನ ಕಚೇರಿಗೆ ವಿದ್ಯುಕ್ತ ಚಾಲನೆ Read More »

ಮೇರಿಮಾತೆ ಜನ್ಮ ದಿನಾಚರಣೆ ಅಂಗವಾಗಿ ಚರ್ಚ್‌ಗಳಲ್ಲಿ ಮೊಂತಿ ಫೆಸ್ಟ್ | ಮಾಯಿದೆ ದೇವುಸ್ ಚರ್ಚ್‍ನಲ್ಲಿ ಬೈಬಲ್ ವಾಚಿಸಿ ಸಂದೇಶ ನೀಡಿದ ಧರ್ಮಗುರು

ಪುತ್ತೂರು : ಯೇಸುಕ್ರಿಸ್ತ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ ‘ಮೊಂತಿ ಫೆಸ್ತ್(ತೆನೆ ಹಬ್ಬ)-ಕುಟುಂಬದ ಹಬ್ಬ’ ವನ್ನು ನಗರದ ಮಾಯಿದೆ ದೇವುಸ್ ಚರ್ಚ್‍ನಲ್ಲಿ ಶುಕ್ರವಾರ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಬೈಬಲ್ ವಾಚಿಸಿ ಹಬ್ಬದ ಸಂದೇಶ ನೀಡಲಾಯಿತು. ಭತ್ತದ ತೆನೆಗಳನ್ನು ಆಯಾ ಚರ್ಚ್‌ನಲ್ಲಿ ಪ್ರಮುಖರು ಸಂಗ್ರಹಿಸಿ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯವಾಗಿದ್ದು, ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆ, ಸಿಹಿತ ಪ್ರತೀಕವಾಗಿ ಕಬ್ಬನ್ನು ಆಯಾ ಚರ್ಚ್‌ಗಳಲ್ಲಿ ಭಕ್ತರಿಗೆ

ಮೇರಿಮಾತೆ ಜನ್ಮ ದಿನಾಚರಣೆ ಅಂಗವಾಗಿ ಚರ್ಚ್‌ಗಳಲ್ಲಿ ಮೊಂತಿ ಫೆಸ್ಟ್ | ಮಾಯಿದೆ ದೇವುಸ್ ಚರ್ಚ್‍ನಲ್ಲಿ ಬೈಬಲ್ ವಾಚಿಸಿ ಸಂದೇಶ ನೀಡಿದ ಧರ್ಮಗುರು Read More »

ನಗರಸಭೆಯಲ್ಲಿ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಕ್ರಮ

ಪುತ್ತೂರು : ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿಯ ವ್ಯಾಪಾರಕ್ಕೆ ಪ್ರಥಮ ಹಂತದ ಕಿರುಸಾಲ ಪಡೆದ ಫಲಾನುಭವಿಗಳಿಗೆ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸುವ ಕುರಿತು, ಇದರಿಂದ ದೊರೆಯುವ 8 ಕಲ್ಯಾಣ ಯೋಜನೆಗಳ ಸೌಲಭ್ಯಗಳ ಬಗ್ಗೆ ತರಭೇತಿ ಕಾರ್ಯಕ್ರಮ ಶುಕ್ರವಾರ ನಗರಸಭೆ ಸಭಾಭವನದಲ್ಲಿ ನಡೆಯಿತು. ಪೌರಾಯುಕ್ತ ಮಧು ಎಸ್. ಮನೋಹರ್ ಗಿಡಕ್ಕೆ ನೀರೆರೆಯುವ ಮೂಲಕ ತರಭೇತಿಗೆ ಚಾಲನೆ ನೀಡಿ, ಪಿ.ಎಂ.ಸ್ವ-ನಿಧಿಯ ಸೌಲಭ್ಯವನ್ನು ಪಡೆಯುವ ವಿಧಾನದ ಬಗ್ಗೆ ವಿವರಿಸಿದರು. ಕೆನರಾ ಬ್ಯಾಂಕ್ ನ ಅರುಣ್, ಉತ್ತಮ್, ವನಜಾ ಪ್ರಸಾದ್ ಮತ್ತು

ನಗರಸಭೆಯಲ್ಲಿ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಕ್ರಮ Read More »

ರೇವತಿ ಬಾಳಪ್ಪ ಪೂಜಾರಿ ತಿಂಗಳಾಡಿ – ನಿಧನ

ಪುತ್ತೂರು: ತಾಲೂಕಿನ ತಿಂಗಳಾಡಿ ಕನ್ನಡಮೂಲೆಯ ದಿ. ಬಾಳಪ್ಪ ಪೂಜಾರಿ ಅವರ ಧರ್ಮಪತ್ನಿ ರೇವತಿ  ಬಾಳಪ್ಪ ಪೂಜಾರಿ (76) ಅವರು ಸೆ.7 ರಂದು ಸ್ವಗೃಹದಲ್ಲಿ ನಿಧನರಾದರು. ಮನೆಯಲ್ಲಿದ್ದ ಸಂದರ್ಭ ಹೃದಯಾಘಾತ ಉಂಟಾಗಿ ಅವರು ನಿಧನರಾದರು. ಮೃತರು ನಾಲ್ವರು ಪುತ್ರರು, ಒಬ್ಬರು ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ರೇವತಿ ಬಾಳಪ್ಪ ಪೂಜಾರಿ ತಿಂಗಳಾಡಿ – ನಿಧನ Read More »

error: Content is protected !!
Scroll to Top