ವಿಷ ಸೇವಿಸಿದ ಸಹೋದರರು: ವಿಟ್ಲ ಆಸ್ಪತ್ರೆಗೆ ದಾಖಲು

ವಿಟ್ಲ: ಇಲ್ಲಿನ ಕುದ್ದುಪದವು ನಿವಾಸಿಗಳಾದ ಸಹೋದರರು ವಿಷಪ್ರಾಶನ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನು ವಿಟ್ಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೈರ ಮೂಲದ ಕುದ್ದುಪದವು ನಿವಾಸಿ ಪವನ್ ಹಾಗೂ ಪೃಥ್ವಿರಾಜ್ ವಿಷ ಸೇವನೆ ಮಾಡಿದವರು ಎಂದು ತಿಳಿದು ಬಂದಿದೆ. ಎರಡು ಪ್ರತ್ಯೇಕ ತುರ್ತುವಾಹನಗಳ ಮೂಲಕ ಅಸ್ವಸ್ಥರನ್ನು ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಓರ್ವರನ್ನು ಮಂಗಳೂರಿಗೆ ಹಾಗೂ ಇನ್ನೋರ್ವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ವಿಷ ಸೇವಿಸಿದ ಸಹೋದರರು: ವಿಟ್ಲ ಆಸ್ಪತ್ರೆಗೆ ದಾಖಲು Read More »

ಒಡೆಯನಿಗಾಗಿ ಪ್ರಾಣ ತೆತ್ತ ಸೇನೆಯ ಶ್ವಾನ! | ‘ಆಪರೇಷನ್ ಸುಜಲಿಗಂಗಾ’ದಲ್ಲಿ ಮುಂಚೂಣಿಯಲ್ಲಿದ್ದ 6 ವರ್ಷದ ಲ್ಯಾಬ್ರಡರ್ ಕೆಂಟ್! | ಕಾರ್ಯಾಚರಣೆಯಲ್ಲಿ ಓರ್ವ ಸೈನಿಕನೂ ಹುತಾತ್ಮ, ಉಗ್ರನೊಬ್ಬನ ಹತ್ಯೆ

ರಾಜೌರಿ: ತ್ಯಾಗ- ಬಲಿದಾನದ ಸುಧೀರ್ಘ ಪರಂಪರೆಯನ್ನು ಮುಂದುವರಿಸಿದ ಸೇನೆಯ ಶ್ವಾನಪಡೆಯ ಆರು ವರ್ಷದ ಲ್ಯಾಬ್ರಡಾರ್, ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದ ಎನ್ಕೌಂಟರ್ ವೇಳೆ ತನ್ನ ಒಡೆಯನ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಘಟನೆ ವರದಿಯಾಗಿದೆ. 21 ಸೇನಾ ಶ್ವಾನದಳದ ಆರು ವರ್ಷದ ಹೆಣ್ಣು ನಾಯಿ ಕೆಂಟ್, ಭಯೋತ್ಪಾದಕರನ್ನು ಓಡಿಸುವ ಪ್ರಾಯೋಗಿಕ ಕಾರ್ಯಾಚರಣೆಯಲ್ಲಿ ಸೈನಿಕರ ತಂಡದ ನೇತೃತ್ವ ವಹಿಸಿತ್ತು. ಈ ಕಾರ್ಯಾಚರಣೆ ವೇಳೆ ತಂಡದ ಮೇಲೆ ಭಾರಿ ಗುಂಡಿನ ದಾಳಿ ನಡೆಯಿತು. ತನ್ನನ್ನು ನಿರ್ವಹಿಸುತ್ತಿದ್ದ ಒಡೆಯನ ರಕ್ಷಣೆಗೆ

ಒಡೆಯನಿಗಾಗಿ ಪ್ರಾಣ ತೆತ್ತ ಸೇನೆಯ ಶ್ವಾನ! | ‘ಆಪರೇಷನ್ ಸುಜಲಿಗಂಗಾ’ದಲ್ಲಿ ಮುಂಚೂಣಿಯಲ್ಲಿದ್ದ 6 ವರ್ಷದ ಲ್ಯಾಬ್ರಡರ್ ಕೆಂಟ್! | ಕಾರ್ಯಾಚರಣೆಯಲ್ಲಿ ಓರ್ವ ಸೈನಿಕನೂ ಹುತಾತ್ಮ, ಉಗ್ರನೊಬ್ಬನ ಹತ್ಯೆ Read More »

ಸೆ. 15 – 19: ಇತಿಹಾಸ ಪ್ರಸಿದ್ಧ ಸುಳ್ಳಮಲೆ – ಬಲ್ಲಮಲೆಯಲ್ಲಿ ಪುಣ್ಯ ಗುಹಾ ತೀರ್ಥ ಸ್ನಾನ

ಮಾಣಿ: ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ತಂಗಿದ್ದರು ಎಂದು ನಂಬಲಾಗಿರುವ ಇತಿಹಾಸ ಪ್ರಸಿದ್ಧ ಅನಂತಾಡಿ ಸಮೀಪದ ಸುಳ್ಳಮಲೆ – ಬಲ್ಲಮಲೆಯಲ್ಲಿ ಸೆ. 15ರಿಂದ ಸೆ. 19ರವರೆಗೆ ಗುಹಾ ತೀರ್ಥ ಸ್ನಾನ ನಡೆಯಲಿದೆ. ಸೋಣ ಅಮಾವಾಸ್ಯೆಯಂದು ಗುಹಾ ತೀರ್ಥ ಸ್ನಾನಕ್ಕೆ ಸಂಪ್ರದಾಯ ಪ್ರಕಾರ ಕೇರ್ಪು (ಬಿದಿರಿನ ಏಣಿ) ಇಡುವ ಮೂಲಕ ಗುಹಾ ತೀರ್ಥಸ್ನಾನಕ್ಕೆ ಚಾಲನೆ ದೊರಕಲಿದೆ. ಶುಕ್ಲ ಪಕ್ಷದ ಚೌತಿಯವರೆಗೆ ಅಂದರೆ ಸೆ. 19ರವರೆಗೆ ತೀರ್ಥ ಸ್ನಾನಕ್ಕೆ ಇಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ

ಸೆ. 15 – 19: ಇತಿಹಾಸ ಪ್ರಸಿದ್ಧ ಸುಳ್ಳಮಲೆ – ಬಲ್ಲಮಲೆಯಲ್ಲಿ ಪುಣ್ಯ ಗುಹಾ ತೀರ್ಥ ಸ್ನಾನ Read More »

ಸೆ. 28ರಿಂದ ಅ. 4: ಧರ್ಮಸ್ಥಳದಲ್ಲಿ 25ನೇ ವರ್ಷದ ಭಜನಾ ಕಮ್ಮಟ | ಪುತ್ತೂರು ತಾಲೂಕು ಬಿ.ಸಿ. ಟ್ರಸ್ಟ್ ವತಿಯಿಂದ ಪೂರ್ವಭಾವಿ ಸಭೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕು ವತಿಯಿಂದ ಭಜನಾ ಮಂಡಳಿ ಪರಿಷತ್ ಸಭೆ ನಡೆಯಿತು. ಸೆ. 28ರಿಂದ ಅ. 4ರವರೆಗೆ ಧರ್ಮಸ್ಥಳ ಕ್ಷೇತ್ರದಲ್ಲಿ ನಡೆಯುವ 25ನೇ ವರ್ಷದ ಭಜನಾ ಕಮ್ಮಟ ಕಾರ್ಯಕ್ರಮದಲ್ಲಿ ಭಜನಾ ಪರಿಷತ್ ಮಂಡಳಿಯ ಸದಸ್ಯರು ಪಾಲ್ಗೊಳ್ಳುವ ಕುರಿತು ಚರ್ಚಿಸಲಾಯಿತು. ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಪಿ.ಕೆ. ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಭಜನಾ ಪರಿಷತ್ ತಾಲೂಕು ಅಧ್ಯಕ್ಷ ಸುಬ್ಬಯ್ಯ ರೈ , ಕಾರ್ಯದರ್ಶಿ ಲೋಕೇಶ್ ಬೆತ್ತೋಡಿ

ಸೆ. 28ರಿಂದ ಅ. 4: ಧರ್ಮಸ್ಥಳದಲ್ಲಿ 25ನೇ ವರ್ಷದ ಭಜನಾ ಕಮ್ಮಟ | ಪುತ್ತೂರು ತಾಲೂಕು ಬಿ.ಸಿ. ಟ್ರಸ್ಟ್ ವತಿಯಿಂದ ಪೂರ್ವಭಾವಿ ಸಭೆ Read More »

ಚೈತ್ರಾ ಕುಂದಾಪುರ ಅವರನ್ನು ಬಂಧಿಸಿರುವುದು ಉಡುಪಿ ರಾಜಾಂಗಣದಿಂದ. ತನ್ನ ಮನೆಯಿಂದಲ್ಲ. ಹಾಗಾಗಿ ನನಗೆ ನೋಟಿಸ್ ಬಂದಿದೆ ಎನ್ನುವುದು ಸುಳ್ಳು ಸುದ್ದಿ!! | ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಕಾಂಗ್ರೆಸ್‌ನ ಸುರಯ್ಯಾ ಅಂಜುಮ್‌ ಹೇಳಿಕೆ!!

ಉಡುಪಿ: ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಚೈತ್ರಾ ಕುಂದಾಪುರ ಅವರಿಗೆ ತಾನು ಆಶ್ರಯ ನೀಡಿಲ್ಲ. ನನಗೆ ಯಾವುದೇ ನೋಟಿಸ್ ಬಂದಿಲ್ಲ. ಎಲ್ಲವೂ ಸುಳ್ಳು ಎಂದು ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ಹೇಳಿಕೆ ನೀಡಿದ್ದಾರೆ. ಘಟನೆಯ ಸಂಬಂಧ ಸುರಯ್ಯಾ ಅಂಜುಮ್ ಅವರಲ್ಲಿ ಮಾಧ್ಯಮದ ಪ್ರತಿನಿಧಿಗಳು ಕರೆ ಮಾಡಿ ಮಾತನಾಡಿಸಿದಾಗ, ”ಚೈತ್ರಾ ಕುಂದಾಪುರ ಅವರಿಗೆ ನಾನು ಆಶ್ರಯ ನೀಡಿದ್ದೇನೆ. ಹಾಗಾಗಿ ನೋಟಿಸ್ ಬಂದಿದೆ ಎಂಬುದು ಸುಳ್ಳು. ಆಕೆಯನ್ನು ನಿನ್ನೆ ರಾತ್ರಿ ಉಡುಪಿಯ ಕೃಷ್ಣಮಠದ ರಾಜಾಂಗಣದ ಬಳಿ ಪೊಲೀಸರು

ಚೈತ್ರಾ ಕುಂದಾಪುರ ಅವರನ್ನು ಬಂಧಿಸಿರುವುದು ಉಡುಪಿ ರಾಜಾಂಗಣದಿಂದ. ತನ್ನ ಮನೆಯಿಂದಲ್ಲ. ಹಾಗಾಗಿ ನನಗೆ ನೋಟಿಸ್ ಬಂದಿದೆ ಎನ್ನುವುದು ಸುಳ್ಳು ಸುದ್ದಿ!! | ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಕಾಂಗ್ರೆಸ್‌ನ ಸುರಯ್ಯಾ ಅಂಜುಮ್‌ ಹೇಳಿಕೆ!! Read More »

ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳ | ಮಂಗಳೂರು ಸೇರಿದಂತೆ ಕರ್ನಾಟಕ ಗಡಿಗಳಲ್ಲಿ ಕಟ್ಟೆಚ್ಚರ

ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿಕೆಗೊಂಡಿದೆ. ಇದರ ಬೆನ್ನಲ್ಲೇ ಮಂಗಳೂರು ಸೇರಿದಂತೆ ಕರ್ನಾಟಕ – ಕೇರಳ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳವಾರ ಕೇರಳದ ಕೋಝಿಕ್ಕೋಡಿನಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು. ಇಬ್ಬರಲ್ಲಿ ಸೋಂಕು ಸಾಧ್ಯತೆ ಪತ್ತೆಯಾದ ಬೆನ್ನಲ್ಲೇ, ಅವರ ಸಂಬಂಧಿಕರನ್ನು ಐಸಿಯು ನಿಗಾದಲ್ಲಿರಿಸಲಾಗಿತ್ತು. ಇದೀಗ ಸೋಂಕಿತರ ಸಂಖ್ಯೆ ಹೆಚ್ಚಳಗೊಂಡಿದ್ದು, ಕೇರಳ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಇದರ ಬೆನ್ನಲ್ಲೇ ಕೇರಳ ರಾಜ್ಯಕ್ಕೆ ಹೊಂದಿಕೊಂಡಂತಿರುವ ಕರ್ನಾಟಕದ ಗಡಿಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಜಾಗೃತಿ ಮಾಹಿತಿ ರವಾನೆ ಮಾಡಿದ್ದು,

ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳ | ಮಂಗಳೂರು ಸೇರಿದಂತೆ ಕರ್ನಾಟಕ ಗಡಿಗಳಲ್ಲಿ ಕಟ್ಟೆಚ್ಚರ Read More »

ಪ್ರತಿಷ್ಠಿತ ಸಂಸ್ಥೆಯ ಪ್ರಮುಖ ಹುದ್ದೆಗೆ ಅರ್ಜಿ ಆಹ್ವಾನ

ಪುತ್ತೂರು: ಇಲ್ಲಿನ ಪ್ರತಿಷ್ಠಿತ ಸಂಸ್ಥೆಯೊಂದು ಕಚೇರಿ ಹುದ್ದೆ ಭರ್ತಿಗೆ ಮುಂದಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಯಾವುದೇ ಪದವಿ ಪಡೆದುಕೊಂಡಿರಬೇಕು. ಇದರೊಂದಿಗೆ ಕಂಪ್ಯೂಟರ್ ಜ್ಞಾನ, ಕನ್ನಡ – ಇಂಗ್ಲೀಷ್ ಟೈಪಿಂಗ್ ಕಡ್ಡಾಯವಾಗಿ ತಿಳಿದಿರಬೇಕು. ಸಂವಹನ ಕೌಶಲ್ಯ ಅಗತ್ಯ. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರಗಳೊಂದಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಸಂಪರ್ಕಕ್ಕೆ: Email id : info@myprerana.in, Ph no.: 8904877721, 7204977721

ಪ್ರತಿಷ್ಠಿತ ಸಂಸ್ಥೆಯ ಪ್ರಮುಖ ಹುದ್ದೆಗೆ ಅರ್ಜಿ ಆಹ್ವಾನ Read More »

ರಾಜ್ಯದ 195 ತಾಲೂಕುಗಳು ಬರ ಪೀಡಿತ! | ಸಿಎಂಗೆ ಶಿಫಾರಸು ಮಾಡಲು ಸಂಪುಟ ಸಭೆ ತೀರ್ಮಾನ | ಈ ಹಿಂದೆ 62 ತಾಲೂಕುಗಳು ಬರಪೀಡಿತವಾಗಿತ್ತೆಂದು ಮಾಹಿತಿ ನೀಡಿದ ಸಚಿವ

ಬೆಂಗಳೂರು: ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.ಸಂಪುಟ ಉಪಸಮಿತಿಯ ಸಭೆಯ ಬಳಿಕ ಕೃಷ್ಣ ಭೈರೇಗೌಡ ಈ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದರು. ಬರಪೀಡಿತ ತಾಲೂಕುಗಳಿಗೆ ಪರಿಹಾರದ ಅಗತ್ಯವಿದೆ. ಆದರೆ ಅದಕ್ಕೂ ಮೊದಲು ಬರಪೀಡಿತ ತಾಲೂಕುಗಳ ಘೋಷಣೆ ಆಗಬೇಕಿದೆ. ಆದ್ದರಿಂದ ಘೋಷಣೆಗಾಗಿ ಸಿಎಂಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು. ಈ ಹಿಂದೆ 62 ತಾಲೂಕುಗಳು ಬರಪೀಡಿತವಾಗಿತ್ತು. ಆದರೆ ಈ ಬಾರಿಯ ಮಳೆ ಕೊರತೆಯಿಂದಾಗಿ ಬರದ ಸಮಸ್ಯೆ

ರಾಜ್ಯದ 195 ತಾಲೂಕುಗಳು ಬರ ಪೀಡಿತ! | ಸಿಎಂಗೆ ಶಿಫಾರಸು ಮಾಡಲು ಸಂಪುಟ ಸಭೆ ತೀರ್ಮಾನ | ಈ ಹಿಂದೆ 62 ತಾಲೂಕುಗಳು ಬರಪೀಡಿತವಾಗಿತ್ತೆಂದು ಮಾಹಿತಿ ನೀಡಿದ ಸಚಿವ Read More »

ಸಂಪಾದನೆಯ ನಿರ್ದಿಷ್ಟ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಿ | ಉಪ್ಪಿನಂಗಡಿಯ ಹಿರಿಯರ ಸೇವಾ ಪ್ರತಿಷ್ಠಾನದ ಸಭೆಯಲ್ಲಿ ಡಿ. ಚಂದಪ್ಪ ಮೂಲ್ಯ

ಉಪ್ಪಿನಂಗಡಿ: ಸಂಪಾದನೆಯ ನಿರ್ದಿಷ್ಟ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಿ ಸಮಸ್ಯೆಗಳಿಗೆ ಸ್ಪಂದಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ತಿಳಿಸಿದರು. ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಜರಗಿದ ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸೇನಾ ಪಡೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೆಲವು ರೋಚಕ ಘಟನೆಗಳ ಕುರಿತ ಮಾಹಿತಿಯನ್ನು ಅವರು ನೀಡಿದರು. ಉಪ್ಪಿನಂಗಡಿ ಶ್ರೀ

ಸಂಪಾದನೆಯ ನಿರ್ದಿಷ್ಟ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಿ | ಉಪ್ಪಿನಂಗಡಿಯ ಹಿರಿಯರ ಸೇವಾ ಪ್ರತಿಷ್ಠಾನದ ಸಭೆಯಲ್ಲಿ ಡಿ. ಚಂದಪ್ಪ ಮೂಲ್ಯ Read More »

ಗಣೇಶ ಹಬ್ಬಕ್ಕಿಲ್ಲ ಸರ್ಕಾರಿ ರಜೆ! | ಗೌರಿ ಹಬ್ಬದ ದಿನವೇ ಚೌತಿ ಎಂದು ನಮೂದಿಸಿರುವ ಸರ್ಕಾರಿ ಕ್ಯಾಲೆಂಡರ್ | ಚೌತಿಯಂದೇ ರಜೆ ನೀಡಲು ಪೋಷಕರಿಂದ ಶಾಲಾ – ಕಾಲೇಜುಗಳಿಗೆ ಮನವಿ

ಪುತ್ತೂರು: ಈ ಬಾರಿ ಗಣೇಶ ಚೌತಿಗೆ ಸರ್ಕಾರಿ ರಜೆ ಇಲ್ಲ! ಬದಲಾಗಿ ಒಂದು ದಿನದ ಮೊದಲು ಆಚರಿಸುವ ಗೌರಿ ಹಬ್ಬಕ್ಕಷ್ಟೇ ಸರ್ಕಾರಿ ರಜೆ ನೀಡಲಾಗಿದೆ. ಸೆ. 19ರಂದು ದೇಶಾದ್ಯಂತ ಗಣೇಶ ಚೌತಿ ಆಚರಣೆ ವಿಜೃಂಭಣೆಯಿಂದ ನಡೆಯಲಿದೆ. ಆದರೆ ಸರ್ಕಾರಿ ಕ್ಯಾಲೆಂಡರಿನಲ್ಲಿ ಚೌತಿಯನ್ನು ಸೆ. 18ರಂದು ಎಂದು ನಮೂದಿಸಲಾಗಿದೆ. ಹಾಗಾಗಿ ಸರ್ಕಾರಿ ರಜೆ ಘೋಷಿಸುವಲ್ಲಿ ಎಡವಟ್ಟಾಗಿದೆ. ರಾಜ್ಯ ಸರ್ಕಾರ ಪ್ರಕಟಿಸಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಸೆ. 18ರಂದು ವರಸಿದ್ಧಿವಿನಾಯಕ ವೃತ ರಜೆ ಎಂದಿದೆ. ಪಂಚಾಂಗ ಪ್ರಕಾರ ಸೆ.

ಗಣೇಶ ಹಬ್ಬಕ್ಕಿಲ್ಲ ಸರ್ಕಾರಿ ರಜೆ! | ಗೌರಿ ಹಬ್ಬದ ದಿನವೇ ಚೌತಿ ಎಂದು ನಮೂದಿಸಿರುವ ಸರ್ಕಾರಿ ಕ್ಯಾಲೆಂಡರ್ | ಚೌತಿಯಂದೇ ರಜೆ ನೀಡಲು ಪೋಷಕರಿಂದ ಶಾಲಾ – ಕಾಲೇಜುಗಳಿಗೆ ಮನವಿ Read More »

error: Content is protected !!
Scroll to Top