ಪುತ್ತೂರು: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂಸದ ನಳಿನ್

ಪುತ್ತೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ. ಜಗನ್ನೀವಾಸ್ ರಾವ್, ಪ್ರಮುಖರಾದ ಜೀವಂಧರ್ ಜೈನ್, ಚನಿಲ ತಿಮ್ಮಪ್ಪ ಶೆಟ್ಟಿ, ಎಸ್. ಅಪ್ಪಯ್ಯ ಮಣಿಯಾಣಿ, ಆರ್.ಸಿ. ನಾರಾಯಣ್, ಚಂದ್ರಶೇಖರ್ ರಾವ್, ಪುರುಷೋತ್ತಮ ಮುಂಗ್ಲಿಮನೆ, ನಿತೇಶ್ ಶಾಂತಿವನ ಮೊದಲಾದವರು ಉಪಸ್ಥಿತರಿದ್ದರು.

ಪುತ್ತೂರು: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂಸದ ನಳಿನ್ Read More »

ಪುತ್ತೂರಿನ ಪ್ರಜ್ಞಾ ಆಶ್ರಮದ ವಿಶೇಷ ಚೇತನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಮಾನಾಥ ರೈ

ಪುತ್ತೂರು: ಮಾಜಿ ಸಚಿವ ಬಿ. ರಮಾನಾಥ ರೈ ಅವರು ತಮ್ಮ 72ನೇ ಹುಟ್ಟು ಹಬ್ಬವನ್ನು ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಆಚರಿಸಿಕೊಂಡರು. ಆಶ್ರಮದಲ್ಲಿನ ವಿಶೇಷ ಚೇತನರೊಂದಿಗೆ ಸಹಭೋಜನ ನಡೆಸಿ ತನ್ನ ಹುಟ್ಟುಹಬ್ಬ ಆಚರಿಸಿದ ರಮಾನಾಥ ರೈ ಅವರು, ನನ್ನ ರಾಜಕೀಯ ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದೇನೆ. ಅವೆಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತಾ ಬಂದಿದ್ದೇನೆ. ಇಲ್ಲಿನ ಜನರು ನನಗೆ ನೀಡಿರುವ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದರು. ಸಾರ್ವಜನಿಕ ಬದುಕಿನಲ್ಲಿ ಪ್ರೀತಿ ವಿಶ್ವಾಸ ಹಂಚಿಕೊಳ್ಳುವುದು ಸಹಜ. ಪ್ರೀತಿಯ ಸಂಬಂಧಗಳು

ಪುತ್ತೂರಿನ ಪ್ರಜ್ಞಾ ಆಶ್ರಮದ ವಿಶೇಷ ಚೇತನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಮಾನಾಥ ರೈ Read More »

ಮುಂಡಾಜೆ: ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು | ಕಳವಾದ ಚಿನ್ನಾಭರಣದ ಮೌಲ್ಯ ಸುಮಾರು 5 ಲಕ್ಷ ರೂ.!

ಬೆಳ್ತಂಗಡಿ: ಇಲ್ಲಿನ ಮುಂಡಾಜೆಯ ಮನೆಯೊಂದರಿಂದ ಚಿನ್ನಾಭರಣ ಕಳವಾದ ಘಟನೆ ಸೆ. 12ರಂದು ಬೆಳಕಿಗೆ ಬಂದಿದೆ. ಕಳವಾದ ಚಿನ್ನಾಭರಣದ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮುಂಡಾಜೆ ಗ್ರಾಮದ ನಿವಾಸಿ ಕಡಂಬಳ್ಳಿಯ ಪ್ರಮೋದ್ ವಿ. ಭಿಡೆ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮನೆ ಕೆಲಸಕ್ಕೆ ಬಂದವರ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಾಗಿದೆ. ಜುಲೈ 5ರಂದು ಮನೆ ಸಾರಣೆ ಹಾಗೂ ಪೈಂಟಿಂಗ್ ಕೆಲಸ ಪ್ರಾರಂಭಿಸಿದ್ದು, ಸುಮಾರು 10ರಿಂದ 13 ಜನ

ಮುಂಡಾಜೆ: ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು | ಕಳವಾದ ಚಿನ್ನಾಭರಣದ ಮೌಲ್ಯ ಸುಮಾರು 5 ಲಕ್ಷ ರೂ.! Read More »

ವಿವೇಕಾನಂದ ಪದವಿಪೂರ್ವ ಕಾಲೇಜು ಉಪಪ್ರಾಂಶುಪಾಲರಾಗಿ ದೇವಿಚರಣ್ ರೈ ಅಧಿಕಾರ ಸ್ವೀಕಾರ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ವಿವೇಕಾನಂದ ಪದವಿಪೂರ್ವ ಕಾಲೇಜಿನ ನೂತನ ಉಪಪ್ರಾಂಶುಪಾಲರಾಗಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ದೇವಿಚರಣ್ ರೈ ಅಧಿಕಾರ ಸ್ವೀಕರಿಸಿದರು. ಉಪಪ್ರಾಂಶುಪಾಲ ಹುದ್ದೆಯ ಅಧಿಕಾರ ನೀಡಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ವಿವೇಕಾನಂದ ಪದವಿಪೂರ್ವ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದ ದೇಗುಲವಾಗಿದೆ. ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ತೋರಿಸಿದ ಪರಿಣಾಮವಾಗಿ ಈ ವಿದ್ಯಾಸಂಸ್ಥೆಯು ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿದೆ. ಪ್ರಾಂಶುಪಾಲರು ಮತ್ತು ನೂತನ ಉಪಪ್ರಾಂಶುಪಾಲರ

ವಿವೇಕಾನಂದ ಪದವಿಪೂರ್ವ ಕಾಲೇಜು ಉಪಪ್ರಾಂಶುಪಾಲರಾಗಿ ದೇವಿಚರಣ್ ರೈ ಅಧಿಕಾರ ಸ್ವೀಕಾರ Read More »

ಸೆ. 19ರಂದೇ ರಜೆ ಘೋಷಿಸಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ | ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ದಿನೇಶ್ ಗುಂಡೂರಾವ್

ಪುತ್ತೂರು: ಗಣೇಶೋತ್ಸವದ ಸಾರ್ವತ್ರಿಕ ರಜೆಯ ಗೊಂದಲಕ್ಕೆ ತೆರೆ ಎಳೆಯಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ದ.ಕ. ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಸೆ. 19ರಂದು ಗಣೇಶೋತ್ಸವ ಹಬ್ಬ ಆಚರಣೆ ನಡೆಯಲಿದ್ದು, ಸೆ. 18ಕ್ಕೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಇದರಿಂದ ಕರಾವಳಿ ಭಾಗದಲ್ಲಿ ಗೊಂದಲ ಉಂಟಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವ ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ಸರಕಾರಿ ರಜೆಯನ್ನು ಮಾರ್ಪಡಿಸಿ ಅನುಕೂಲವಾಗುವಂತೆ ಸೆ. 19ರಂದು ರಜೆ ಘೋಷಿಸುವ ಸಂಬಂಧ

ಸೆ. 19ರಂದೇ ರಜೆ ಘೋಷಿಸಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ | ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ದಿನೇಶ್ ಗುಂಡೂರಾವ್ Read More »

ಭಕ್ತಕೋಡಿಯಲ್ಲಿ ಸ್ಕೂಟರಿಗೆ ಬೈಕ್ ಢಿಕ್ಕಿ: ವಿಶೇಷ ಚೇತನ ವಿದ್ಯಾರ್ಥಿಗೆ ಗಾಯ

ಪುತ್ತೂರು: ಸ್ಕೂಟರಿಗೆ ಬೈಕ್ ಮುಖಾಮುಖಿ ಢಿಕ್ಕಿಯಾಗಿ, ವಿಶೇಷಚೇತನ ವಿದ್ಯಾರ್ಥಿ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಭಕ್ತಕೋಡಿ ಶಾಲಾ ಬಳಿ ನಡೆದಿದೆ. ಭಕ್ತಕೋಡಿಯಲ್ಲಿ ಅಂಗಡಿ ಉದ್ಯಮ ನಡೆಸುತ್ತಿರುವ ಅಶೋಕ್ ಅವರ ಪುತ್ರ ರಕ್ಷಿತ್ ಗಾಯಾಳು. ಇವರು ವಿಶೇಷಚೇತನ ವಿದ್ಯಾರ್ಥಿಯಾಗಿದ್ದು, ಭಕ್ತಕೋಡಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ರಕ್ಷಿತ್ ಅವರನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಅಶೋಕ್ ಅವರ ಸ್ಕೂಟರಿಗೆ ಢಿಕ್ಕಿ ಹೊಡೆದಿದೆ. ರಿಕ್ಷಾವನ್ನು ಓವರ್’ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಉದಯ್, ಸ್ಕೂಟರಿಗೆ

ಭಕ್ತಕೋಡಿಯಲ್ಲಿ ಸ್ಕೂಟರಿಗೆ ಬೈಕ್ ಢಿಕ್ಕಿ: ವಿಶೇಷ ಚೇತನ ವಿದ್ಯಾರ್ಥಿಗೆ ಗಾಯ Read More »

ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಜನರು ತಿರುಗಿಬೀಳುವಂತಾಗಿದೆ: ಸಂಜೀವ ಮಠಂದೂರು | ಹೋರಾಟದ ಕಾವು ತಗ್ಗಿಸಲು ಸಂಘಟನೆಗಳಿಗೆ ಹಣ ಪೂರೈಕೆ: ಪ್ರವೀಣ್ ಕುಂಟ್ಯಾನ ಆರೋಪ | ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಮಂಗಳೂರಿನಲ್ಲಿ ಜಿಲ್ಲಾ ಹೋರಾಟ ಸಮಿತಿಯಿಂದ ಪ್ರತಿಭಟನೆ

ಮಂಗಳೂರು: ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಜನರು ತಿರುಗಿ ಬೀಳುವಂತಾಗಿದೆ. ಇಂತಹ ಒಂದು ಹೋರಾಟವನ್ನು ಮಹೇಶ್ ಶೆಟ್ಟಿ ತಿಮರೋಡಿ ಅವರು ಸಂಘಟಿಸಿದ್ದಾರೆ. ನ್ಯಾಯಪರವಾದ ಇಂತಹ ಹೋರಾಟವನ್ನು ವಿರೋಧಿಸುವುದು ಎಷ್ಟು ಸರಿ? ಅಪರಾಧಿ ಯಾರೆಂದು ತಿಳಿಯಬೇಕು ತಾನೇ? ಪ್ರಜಾಪ್ರಭುತ್ವದಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಕೆಲಸವನ್ನು ಸರ್ಕಾರ

ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಜನರು ತಿರುಗಿಬೀಳುವಂತಾಗಿದೆ: ಸಂಜೀವ ಮಠಂದೂರು | ಹೋರಾಟದ ಕಾವು ತಗ್ಗಿಸಲು ಸಂಘಟನೆಗಳಿಗೆ ಹಣ ಪೂರೈಕೆ: ಪ್ರವೀಣ್ ಕುಂಟ್ಯಾನ ಆರೋಪ | ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಮಂಗಳೂರಿನಲ್ಲಿ ಜಿಲ್ಲಾ ಹೋರಾಟ ಸಮಿತಿಯಿಂದ ಪ್ರತಿಭಟನೆ Read More »

ಕೆದಂಬಾಡಿಯಲ್ಲಿ ಬೈಕ್’ಗಳೆರಡು ಮುಖಾಮುಖಿ ಢಿಕ್ಕಿ | ಬೈಕ್ ಸಹಸವಾರನಿಗೆ ಗಾಯ

ಪುತ್ತೂರು: ಬೈಕ್’ಗಳೆರಡು ಮುಖಾಮುಖಿ ಢಿಕ್ಕಿಯಾಗಿ ಸಹಸವಾರ ಗಾಯಗೊಂಡ ಘಟನೆ ಕೆದಂಬಾಡಿಯಲ್ಲಿ ನಡೆದಿದೆ. ಬೈಕ್ ಸಹಸವಾರ ರಮೇಶ್ ಗಾಯಾಳು. ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದೆ ಘಟನೆಗೆ ಕಾರಣವಾಗಿದೆ. ಕೆದಂಬಾಡಿ ಗ್ರಾಮದ ಸಾರೆಪುಣಿ ಎಂಬಲ್ಲಿ ಬಾಬು ಎಂಬವರು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕ್’ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸಹಸವಾರ ರಮೇಶ್ ಅವರು ರಸ್ತೆಗೆ ಎಸೆಯಲ್ಪಟ್ಟು, ಗಾಯಗೊಂಡಿದ್ದಾರೆ. ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆದಂಬಾಡಿಯಲ್ಲಿ ಬೈಕ್’ಗಳೆರಡು ಮುಖಾಮುಖಿ ಢಿಕ್ಕಿ | ಬೈಕ್ ಸಹಸವಾರನಿಗೆ ಗಾಯ Read More »

ಚೈತ್ರಾ ಕುಂದಾಪುರ ಸಿಸಿಬಿ ಕಸ್ಟಡಿಗೆ: ನ್ಯಾಯಾಲಯ ಆದೇಶ

ಉಡುಪಿ: ಚೈತ್ರಾ ಕುಂದಾಪುರ ಅವರನ್ನು ಬುಧವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ. ವಂಚನೆ ಆರೋಪದಲ್ಲಿ ನಡುರಾತ್ರಿ ಹೊತ್ತಿಗೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಸಂಜೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರ ಮುಂದೆ ಚೈತ್ರಾ ಕಣ್ಣೀರು ಹಾಕಿದ್ದಾರೆ ಎಂದು ಹೇಳಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ, ಸೆಪ್ಟೆಂಭರ್ 23ರವರೆಗೆ ಸಿಸಿಬಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.

ಚೈತ್ರಾ ಕುಂದಾಪುರ ಸಿಸಿಬಿ ಕಸ್ಟಡಿಗೆ: ನ್ಯಾಯಾಲಯ ಆದೇಶ Read More »

ಕಬಕ ವಿದ್ಯಾಪುರ ಶ್ರೀ ನಾಗಪಂಚಶ್ರೀ ಭಜನಾ ಮಂಡಳಿಗೆ ಪುತ್ತಿಲ ಪರಿವಾರದಿಂದ ಸಮವಸ್ತ್ರ ವಿತರಣೆ

ಪುತ್ತೂರು: ನಾಗ ಮತ್ತು ಪಂಚ ದೈವಗಳ ಸಾನಿಧ್ಯದಲ್ಲಿ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದಲ್ಲಿ ನಡೆಸಲ್ಪಡುತ್ತಿರುವ ಕಬಕ ವಿದ್ಯಾಪುರ ಶ್ರೀ ನಾಗಪಂಚಶ್ರೀ ಭಜನೆ ಮತ್ತು ಕುಣಿತ ಭಜನಾ ಮಂಡಳಿಯವರಿಗೆ ಪುತ್ತಿಲ ಪರಿವಾರದ ಸೇವಾ ಸಮರ್ಪಣೆಯ ಅಂಗವಾಗಿ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಸಾಂಕೇತಿಕವಾಗಿ ಸಮವಸ್ತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಅನಿಲ್ ತೆಂಕಿಲ, ಮತ್ತಿತರರು ಉಪಸ್ಥಿತರಿದ್ದರು.

ಕಬಕ ವಿದ್ಯಾಪುರ ಶ್ರೀ ನಾಗಪಂಚಶ್ರೀ ಭಜನಾ ಮಂಡಳಿಗೆ ಪುತ್ತಿಲ ಪರಿವಾರದಿಂದ ಸಮವಸ್ತ್ರ ವಿತರಣೆ Read More »

error: Content is protected !!
Scroll to Top