ಬರಪೀಡಿತ ಪಟ್ಟಿಯಲ್ಲಿರದ ದಕ್ಷಿಣ ಕನ್ನಡದ ತಾಲೂಕುಗಳ್ಯಾವುವು? ಯಾಕೆ? | ಬರಪೀಡಿತ ಜಿಲ್ಲೆಯೆಂದು ಘೋಷಿಸಲು ಮುಖ್ಯಮಂತ್ರಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಒತ್ತಾಯ
ಪುತ್ತೂರು: ದ.ಕ. ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಕರಾವಳಿಯಲ್ಲಿ ಸರಾಸರಿ 4ರಿಂದ 5 ಸಾವಿರ ಮಿ.ಮೀ. ಮಳೆಯಾಗುತ್ತಿದೆ. ಈ ಬಾರಿ 3.100 ಮಿ.ಮೀ. ಮಾತ್ರ ಮಳೆಯಾಗಿದೆ. ಇದು ಕೃಷಿ ಕಾಯಕಕ್ಕೆ ಕಂಠಕವಾಗಿದ್ದು, ರೈತರು ಕೃಷಿ ಕಾರ್ಯ ಮಾಡದೆ ಕಂಗಾಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ, ಕುಡಿಯುವ ನೀರು ಸಹಿತ ಕೃಷಿಗೆ ನೀರಿನ ಅಭಾವ ಉಂಟಾಗಲಿದೆ. ಈಗಾಗಲೇ ಸರಕಾರ ಕೆಲವು ತಾಲೂಕುಗಳನ್ನು ಬರಪೀಡಿತ […]










