ಪುತ್ತೂರು ಅಗ್ನಿಶಾಮಕ ದಳದ ರುಕ್ಮಯ್ಯ ಗೌಡರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಪುತ್ತೂರು: ಪುತ್ತೂರು ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕ ರುಕ್ಮಯ್ಯ ಗೌಡರಿಗೆ 2023ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ಬೆಂಗಳೂರಿನ ಆರ್‍.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿ ಪದಕ ಪ್ರದಾನ ಹಾಗೂ ಅಗ್ನಿಶಾಮಕ ಠಾಣಾಧಿಕಾರಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಪದಕ ಪ್ರದಾನ ಮಾಡಿದರು. 2018 ರಿಂದ ರುಕ್ಮಯ್ಯ ಗೌಡರು ಪುತ್ತೂರು ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಡಬ ತಾಲೂಕಿನ ಕೊಂಬಾರು ಗ್ರಾಮದ ದಿ.ಕೊರಗಪ್ಪ ಗೌಡ […]

ಪುತ್ತೂರು ಅಗ್ನಿಶಾಮಕ ದಳದ ರುಕ್ಮಯ್ಯ ಗೌಡರಿಗೆ ಮುಖ್ಯಮಂತ್ರಿ ಚಿನ್ನದ ಪದಕ Read More »

ಮೀನು ಮಾರಾಟ ಫೆಡರೇಷನ್’ಗೆ ಭಾರೀ ವಂಚನೆ! | ಮಂಜುನಾಥ್’ಗೆ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ಗೆ 88 ಲ.ರೂ. ವಂಚಿಸಿದ ಆರೋಪಿ ಮಂಜುನಾಥ್ ಖಾರ್ವಿ ಎಂಬಾತನಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಸಂಸ್ಥೆಯಿಂದ ಮೀನು ಖರೀದಿ ಮಾಡಿದ್ದ. ಫೆಡರೇಷನ್‌ಗೆ ಮೀನು ಮಾರಾಟವಾದ ಕಮಿಷನ್‌ ಕೂಡ ಬಾಕಿ ಇರಿಸಿದ್ದ. ಈ ಮೊತ್ತವನ್ನು ಪಾವತಿಸಲು ನೀಡಿದ್ದ ಮೂರು ಚೆಕ್‌ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿತ್ತು. ನ್ಯಾಯಾಲಯ ಮೂರು ಪ್ರಕರಣಗಳಲ್ಲಿ ಆರೋಪಿ 5

ಮೀನು ಮಾರಾಟ ಫೆಡರೇಷನ್’ಗೆ ಭಾರೀ ವಂಚನೆ! | ಮಂಜುನಾಥ್’ಗೆ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ Read More »

ಅ. 10: ಡಾ.ಶಿವರಾಮ ಕಾರಂತರ 122ನೇ ಜನ್ಮದಿನ, ಪ್ರಶಸ್ತಿ ಪ್ರದಾನ | ಐದು ಮಂದಿಯ ಸಮಿತಿಯಲ್ಲಿ ಯಾರ್ಯಾರಿದ್ದಾರೆ? | ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆ ಹೀಗೆ ನಡೆಯಲಿದೆ!!

ಪುತ್ತೂರು: ಅ.10ರಂದು ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನದಲ್ಲಿ ನಡೆಯಲಿರುವ ಕಾರಂತರ 122ನೇ ಜನ್ಮ ದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಐದು ಮಂದಿಯ ಸಮಿತಿಯನ್ನು ರಚಿಸಲಾಗಿದೆ. ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಸಮಿತಿಗೆ ಆಯ್ಕೆ ಮಾಡಲಾಗಿದೆ. ಸಮಿತಿ ಅಧ್ಯಕ್ಷರಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಪದನಿಮಿತ್ತ ಕಾರ್ಯದರ್ಶಿಯಾಗಿ ಸಹಾಯಕ ಆಯುಕ್ತ ಗಿರೀಶ್ ನಂದನ್, ಸದಸ್ಯರಾಗಿ ಬಿಳಿಯೂರುಕಟ್ಟೆ ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ, ನ್ಯಾಯವಾದಿ ಬೆಟ್ಟ

ಅ. 10: ಡಾ.ಶಿವರಾಮ ಕಾರಂತರ 122ನೇ ಜನ್ಮದಿನ, ಪ್ರಶಸ್ತಿ ಪ್ರದಾನ | ಐದು ಮಂದಿಯ ಸಮಿತಿಯಲ್ಲಿ ಯಾರ್ಯಾರಿದ್ದಾರೆ? | ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆ ಹೀಗೆ ನಡೆಯಲಿದೆ!! Read More »

ಸನಾತನ ಧರ್ಮವನ್ನು ಡೆಂಗ್ಯೂ-ಮಲೇರಿಯಾ ಎಂದಿದ್ದ ಸ್ಟಾಲಿನ್‌ಗೆ ಸಂಕಷ್ಟ!!

ನವದೆಹಲಿ: ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸರ್ಕಾರ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿ” ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ಹಾಗೂ ಡಿಎಂಕೆ ಮಾಜಿ ಸಂಸದ ಎ. ರಾಜಾ ವಿರುದ್ಧ ಅರ್ಜಿ ದಾಖಲಾಗಿದ್ದು ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ. ಸೆಪ್ಟೆಂಬರ್ 2ರಂದು ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ

ಸನಾತನ ಧರ್ಮವನ್ನು ಡೆಂಗ್ಯೂ-ಮಲೇರಿಯಾ ಎಂದಿದ್ದ ಸ್ಟಾಲಿನ್‌ಗೆ ಸಂಕಷ್ಟ!! Read More »

ಬಿಎಂಡಬ್ಲ್ಯು ಬೈಕ್ ಭೀಕರ ಅಪಘಾತ: ಪಾರ್ಟಿ ಮುಗಿಸಿ ವಾಪಾಸಾಗುತ್ತಿದ್ದ ಯುವಕರಿಬ್ಬರು ಸ್ಥಳದಲ್ಲೇ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಂಬಕ್ಕೆ ಬಿಎಂಡಬ್ಲ್ಯು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಯಶವಂತಪುರದ ಆರ್‌.ಎಂ.ಸಿ. ಯಾರ್ಡ್‌ ಬಳಿ ಮುಂಜಾನೆ 3.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಮೃತರನ್ನು 31 ವರ್ಷದ ಮನಮೋಹನ್‌ ಹಾಗೂ 25 ವರ್ಷದ ನಿಖಿಲ್‌ ಎಂದು ಗುರುತಿಸಲಾಗಿದೆ. ಯಶವಂತಪುರದಿಂದ ಆರ್‌.ಎಮ್‌.ಸಿ. ಯಾರ್ಡ್ ರೋಡ್ ಕಡೆ ಡ್ರೈವ್ ಮಾಡುತ್ತಿದ್ದ ಇವರು ಮದ್ಯ ಸೇವಿಸಿದ್ದರು ಹಾಗೂ ಅತಿವೇಗದಿಂದ ಚಾಲನೆ ಮಾಡಿದ್ದರು ಎನ್ನಲಾಗಿದೆ. ಇಬ್ಬರೂ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಸ್ನೇಹಿತರ

ಬಿಎಂಡಬ್ಲ್ಯು ಬೈಕ್ ಭೀಕರ ಅಪಘಾತ: ಪಾರ್ಟಿ ಮುಗಿಸಿ ವಾಪಾಸಾಗುತ್ತಿದ್ದ ಯುವಕರಿಬ್ಬರು ಸ್ಥಳದಲ್ಲೇ ಸಾವು Read More »

ಕೊಳ್ತಿಗೆಯಲ್ಲಿ ಸೌಹಾರ್ದ ಗಣೇಶೋತ್ಸವ, ಆರ್.ಪಿ. ಕ್ರಿಯೇಷನ್ ನೈಟ್ಸ್ 2023

ಕೊಳ್ತಿಗೆ: ಮೊಗಪ್ಪೆ ಶ್ರೀ ಮುತ್ತು ಮಾರಿಯಮ್ಮ ದೇವಾಲಯದ ಸಮೀಪದಲ್ಲಿ 8ನೇ ವರ್ಷದ ಸೌಹಾರ್ದ ಗಣೇಶೋತ್ಸವ ನಡೆದು, ಶೋಭಾಯಾತ್ರೆಯೊಂದಿಗೆ ಗಣೇಶ ಮೂರ್ತಿ ಜಲಸ್ತಂಭನಗೊಂಡಿತು. ನಾಸಿಕ್ ಬ್ಯಾಂಡ್ ಸಿಡಿಮದ್ದುಗಳ ಪ್ರದರ್ಶನಗಳೊಂದಿಗೆ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು. ಶ್ರೀ ಪ್ರದೀಪ್ ಕುಮಾರ್ ಪಾಂಬಾರು ಅವರ ನೇತೃತ್ವದಲ್ಲಿ ಸರ್ವಧರ್ಮಗಳ ಸಹಭಾಗಿತ್ವದಲ್ಲಿ ಗಣೇಶೋತ್ಸವ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಗೀತ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ರವಿ ಪಾಂಬಾರು ಅವರ ಸಾರತ್ಯದಲ್ಲಿ ಆರ್.ಪಿ. ಕ್ರಿಯೇಷನ್ ನೈಟ್ಸ್ 2023 ಅದ್ದೂರಿಯಾಗಿ ನಡೆಯಿತು. ಆರ್.ಪಿ. ಕ್ರಿಯೇಷನ್ ತಂಡದಿಂದ ವಿವಿಧ ವೇಷಭೂಷಣ

ಕೊಳ್ತಿಗೆಯಲ್ಲಿ ಸೌಹಾರ್ದ ಗಣೇಶೋತ್ಸವ, ಆರ್.ಪಿ. ಕ್ರಿಯೇಷನ್ ನೈಟ್ಸ್ 2023 Read More »

ಬ್ರಾಹ್ಮಣರ ವೈವಾಹಿಕ ಸಂಬಂಧದ ಅಧ್ಯಯನಕ್ಕಾಗಿ ತಂಡವೊಂದು ಆಗಮಿಸಿದೆ ಎಂಬ ಸಂದೇಶ ವೈರಲ್! | ಶ್ರೀ ರಾಮಚಂದ್ರಾಪುರ ಮಠ ಏನು ಹೇಳುತ್ತದೆ?

ಬೆಂಗಳೂರು: ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ವೈವಾಹಿಕ ಸಂಬಂಧಕ್ಕೆ ಕುರಿತಾಗಿ ಆಗಮಿಸುವ ತಂಡಕ್ಕೂ ಶ್ರೀ ರಾಮಚಂದ್ರಾಪುರ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ. ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ಕನ್ಯೆಯರ ಜೊತೆಗೆ ವೈವಾಹಿಕ ಸಂಬಂಧ ಏರ್ಪಡಿಸುವ ಉದ್ದೇಶದಿಂದ ಅಧ್ಯಯನಕ್ಕಾಗಿ ತಂಡವೊಂದು ಕರಾವಳಿ ಕರ್ನಾಟಕಕ್ಕೆ ಆಗಮಿಸುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶಕ್ಕೂ ಮಠಕ್ಕೂ ಸಂಬಂಧವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ – “ಈ ತಂಡದ ಜತೆ ಸಂಪರ್ಕ ಮಾಡಿದವರ ಪೈಕಿ ರಾಮಚಂದ್ರಾಪುರ

ಬ್ರಾಹ್ಮಣರ ವೈವಾಹಿಕ ಸಂಬಂಧದ ಅಧ್ಯಯನಕ್ಕಾಗಿ ತಂಡವೊಂದು ಆಗಮಿಸಿದೆ ಎಂಬ ಸಂದೇಶ ವೈರಲ್! | ಶ್ರೀ ರಾಮಚಂದ್ರಾಪುರ ಮಠ ಏನು ಹೇಳುತ್ತದೆ? Read More »

ಜೋಡಣೆ ಕಳಚಿದ ಕಾಂಕ್ರೀಟ್ ಮಿಕ್ಸರ್ ಯಂತ್ರ ಪ್ರಪಾತಕ್ಕೆ..!!

ಪುತ್ತೂರು: ಚಲಿಸುತ್ತಿದ್ದ ವಾಹನದಿಂದ ಕಾಂಕ್ರೀಟ್ ಮಿಕ್ಸರ್ ಯಂತ್ರ ಕಳಚಿ, ಪಕ್ಕದ ಬರೆಯಿಂದ ಕೆಳಗೆ ಉರುಳಿದ ಘಟನೆ ಶುಕ್ರವಾರ ಬೆಳಿಗ್ಗೆ ಬೊಳುವಾರಿನಲ್ಲಿ ನಡೆದಿದೆ. ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ವಾಹನವೊಂದಕ್ಕೆ ಜೋಡಿಸಿ, ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಕಾಂಕ್ರೀಟ್ ಮಿಕ್ಸರ್ ಯಂತ್ರ ವಾಹನದ ಜೋಡಣೆಯಿಂದ ಕಳಚಿ, ನಿಯಂತ್ರಣ ಕಳೆದುಕೊಂಡಿದೆ. ಈ ಮಿಕ್ಸರ್ ಯಂತ್ರ ಪಕ್ಕದ ಬರೆಯಿಂದ ಕೆಳಗೆ ಉರುಳಿ ಬಿದ್ದಿದೆ. ಘಟನೆಯಿಂದ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.

ಜೋಡಣೆ ಕಳಚಿದ ಕಾಂಕ್ರೀಟ್ ಮಿಕ್ಸರ್ ಯಂತ್ರ ಪ್ರಪಾತಕ್ಕೆ..!! Read More »

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಶುಭಲತಾರಿಗೆ ಅಭಿನಂದನೆ

ಪುತ್ತೂರು: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದ ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶುಭಲತಾ ಅವರನ್ನು ಆನಡ್ಕ ಬಿಲ್ಲವ ಗ್ರಾಮ ಸಮಿತಿ ಹಾಗೂ ಶ್ರೀ ಕ್ಷೇತ್ರ ಬಳಗ ಮರಕ್ಕೂರು ವತಿಯಿಂದ ಗೌರವಿಸಲಾಯಿತು. ಶುಭಲತಾ ಅವರು ವಿಶೇಷ ಬದ್ಧತೆಯಿಂದ ಸೇವೆ ಸಲ್ಲಿಸಿ ನಮ್ಮೂರ ಶಾಲೆಯ ಪ್ರಗತಿಗೆ ಶ್ರಮಿಸಿ, ಇದೀಗ 2023-24ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಅರ್ಹವಾಗಿಯೇ ಪುರಸ್ಕೃತರಾಗಿದ್ದಾರೆ ಎಂದು ಹಾರೈಸಲಾಯಿತು. ನಾರಾಯಣ ಸುವರ್ಣ, ವಿನಯ ಮರಕ್ಕೂರು, ಕಿಟ್ಟಣ್ಣ ಪೂಜಾರಿ, ಜಯನಂದ

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಶುಭಲತಾರಿಗೆ ಅಭಿನಂದನೆ Read More »

ತೀವ್ರಗೊಂಡ ಕಾವೇರಿ ಹೋರಾಟ: ಬೆಂಗಳೂರಿಗೆ ನೀರು ಪೂರೈಕೆ ನಿಲ್ಲಿಸಲು ಆಗ್ರಹ!!

ಬೆಂಗಳೂರು: ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ಕರ್ನಾಟಕದಲ್ಲಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿದೆ. ಕಾವೇರಿ ಜಲಾನಯನ ಪ್ರದೇಶಗಳ ರೈತರು ಮತ್ತು ಜನರಿಗೆ ಕುಡಿಯಲು, ವ್ಯವಸಾಯಕ್ಕೆ ನೀರು ಇಲ್ಲದಿರುವಾಗ ಬೆಂಗಳೂರಿಗೆ ಕಾವೇರಿ ನೀರನ್ನು ಕೆಲ ದಿನಗಳವರೆಗೆ ಸರಬರಾಜು ಮಾಡುವುದು ಬೇಡ ಎಂದು ವಿವಿಧ ಸಂಘಟನೆಗಳ ನಾಯಕರು, ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ರೈತ ಹಿತರಕ್ಷಣಾ ಸಮಿತಿಯು ನಾಳೆ ಶನಿವಾರ ಮಂಡ್ಯ ಬಂದ್‌ಗೆ ಕರೆ

ತೀವ್ರಗೊಂಡ ಕಾವೇರಿ ಹೋರಾಟ: ಬೆಂಗಳೂರಿಗೆ ನೀರು ಪೂರೈಕೆ ನಿಲ್ಲಿಸಲು ಆಗ್ರಹ!! Read More »

error: Content is protected !!
Scroll to Top