ಪ್ರವಾಸಕ್ಕೆ ತೆರಳಿದ ಹಿರೇಬಂಡಾಡಿ ನಿವಾಸಿ ಅಝೀಂ ನೀರಿನಲ್ಲಿ ಮುಳುಗಿ ಮೃತ್ಯು

ಪುತ್ತೂರು: ವಯನಾಡ್‍ ಗೆ ಪ್ರವಾಸಕ್ಕೆ ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ನಡೆದಿದೆ. ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಅಡೆಕ್ಕಲ್ ನಿವಾಸಿ ಅಝೀಂ (20) ಮೃತಪಟ್ಟ ಯುವಕ ಅಝೀಂ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ರಾತ್ರಿ ಸ್ನೇಹಿತರೆಲ್ಲಾ ಸೇರಿಕೊಂಡು ವಯನಾಡ್ ಗೆ ಪ್ರವಾಸಕ್ಕೆ ತೆರಳಿದ್ದರು. ಶುಕ್ರವಾರ ರಾತ್ರಿ ತೆರಳಿದವರು ರೂಮ್ ಅಲ್ಲಿ ಸ್ಟೇ ಆಗಿದ್ದು, ಇಂದು ಬೆಳಿಗ್ಗೆ ಪಯ್ಯನೂರು ಸಮೀಪ ಕೆರೆಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. […]

ಪ್ರವಾಸಕ್ಕೆ ತೆರಳಿದ ಹಿರೇಬಂಡಾಡಿ ನಿವಾಸಿ ಅಝೀಂ ನೀರಿನಲ್ಲಿ ಮುಳುಗಿ ಮೃತ್ಯು Read More »

`ನನ್ನ ಮಣ್ಣು ನನ್ನ ದೇಶ’ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ

ಪುತ್ತೂರು: ದೇಶದಾದ್ಯಂತ ನಡೆಯುವ ’ನನ್ನ ಮಣ್ಣು ನನ್ನ ದೇಶ’ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಶನಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಚಾಲನೆ ನೀಡಲಾಯಿತು. ದೇಶಕ್ಕಾಗಿ ಹುತಾತ್ಮರಾದ ಯೋಧರ ತ್ಯಾಗವನ್ನು ಸ್ಮರಿಸಿ ಗೌರವಿಸುವ ಮತ್ತು ದೇಶದ ಏಕತೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ನಡೆಯುವ ಈ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಮೃತ್ತಿಕೆಯನ್ನು ಕಲಶಕ್ಕೆ ಅರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ, ದೇಹ ಸರಿ

`ನನ್ನ ಮಣ್ಣು ನನ್ನ ದೇಶ’ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ Read More »

ಯಾರನ್ನು ಕೇಳಿ ಮೈತ್ರಿ ಮಾಡಿದ್ರಿ: ಗುಡುಗಿದ ಜೆಡಿಎಸ್ ರಾಜ್ಯಾಧ್ಯಕ್ಷ?

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್‌ ನಡುವೆ ನಡೆದಿರುವ ಚುನಾವಣಾ ಮೈತ್ರಿಯ ವಿರುದ್ಧ ಜೆಡಿಎಸ್‌ ರಾಜ್ಯಾದ್ಯಕ್ಷ ಸಿಎಂ. ಇಬ್ರಾಹಿಂ ಅಬ್ಬರಿಸಿದ್ದಾರೆ. ʻʻಇಬ್ಬರು ಕೂತು ಮಾತನಾಡಿದರೆ ಮೈತ್ರಿ ಆಗಲ್ಲ. ನಾನು ರಾಜ್ಯಾಧ್ಯಕ್ಷನಿದ್ದೇನೆ. ಚುನಾಯಿತ ಆಧ್ಯಕ್ಷನಿದ್ದೇನೆʼʼ ಎಂದು ಗುಡುಗಿದ ಅವರು, ಮೈತ್ರಿಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಅಕ್ಟೋಬರ್‌ 16ರಂದು ಕರೆದಿರುವ ಸಮಾನ ಮನಸ್ಕರ ಸಭೆಯಲ್ಲಿ ಮುಂದಿನ ನಡೆಯನ್ನು ನಿರ್ಧರಿಸುವುದಾಗಿ ಪ್ರಕಟಿಸಿದರು. ಅಂದು ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಮೈತ್ರಿಯ ಬಳಿಕ ಮಾಜಿ ಮುಖ್ಯಮಂತ್ರಿ

ಯಾರನ್ನು ಕೇಳಿ ಮೈತ್ರಿ ಮಾಡಿದ್ರಿ: ಗುಡುಗಿದ ಜೆಡಿಎಸ್ ರಾಜ್ಯಾಧ್ಯಕ್ಷ? Read More »

ಪಿಲಿಗೊಬ್ಬು’, `ಫುಡ್ ಫೆಸ್ಟ್’ಗೆ ಚಪ್ಪರ ಮುಹೂರ್ತ

ಪುತ್ತೂರು: ವಿಜಯ ಸಾಮ್ರಾಟ್ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಪಿಲಿಗೊಬ್ಬು ಸ್ಪರ್ಧೆ ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮದ ಚಪ್ಪರ ಮುಹೂರ್ತ ಶನಿವಾರ ನಡೆಯಿತು. ಪುತ್ತೂರು ವಿಜಯ ಸಾಮ್ರಾಟ್ ನ ಸ್ಥಾಪಕಾಧ್ಯಕ್ಷ ಸಹಜ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಕಾರ್ಯಕ್ರಮದ ಚಪ್ಪರ ಮುಹೂರ್ತವನ್ನು ದೇವಸ್ಥಾನದ ಅರ್ಚಕ ಉದಯಕೃಷ್ಣ ಭಟ್ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಹಜ್ ರೈ ಬಳಜ್ಜ, ನಾಗರಾಜ್ ನಡುವಡ್ಕ, ಶರತ್ ಕುಮಾರ್ ಮಾಡಾವು, ಶಂಕರ್ ಭಟ್

ಪಿಲಿಗೊಬ್ಬು’, `ಫುಡ್ ಫೆಸ್ಟ್’ಗೆ ಚಪ್ಪರ ಮುಹೂರ್ತ Read More »

ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಪುತ್ತೂರಿನಲ್ಲಿರುವುದು ಅಭಿನಂದನಾರ್ಹ : ಅಶೋಕ್ ರೈ | ಮ್ಯಾಟ್ ಅಂಕಣ ಪ್ರೋ ಮಾದರಿಯ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಕಬಡ್ಡಿ ಪಂದ್ಯಾಟ

ಪುತ್ತೂರು: ಪುತ್ತೂರಿನಂತ ಗ್ರಾಮೀಣ ಭಾಗದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟುಗಳಿರುವುದು ಅಭಿನಂದನಾರ್ಹ ಮತ್ತು ಕಬಡ್ಡಿ ಕ್ರೀಡಾಪಟುಗಳನ್ನು ಸೃಷ್ಟಿಸಿದ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಸೇವೆ ಶ್ಲಾಘನೀಯ ಎಂದು ಶಾಸಕ ಅಶೋಕ್ ರೈ ಹೇಳಿದರು. ಶನಿವಾರ ಪುತ್ತೂರು ಕಿಲ್ಲೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಶನ್, ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಹಾಗೂ ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಆಶ್ರಯದಲ್ಲಿ ನಡೆದ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಮ್ಯಾಟ್ ಅಂಕಣದ ಪ್ರೋ ಮಾದರಿಯ ಅಹರ್ನಿಶಿ ಕಬಡ್ಡಿ ಪಂದ್ಯಾಟದ ಉದ್ಘಾಟನಾ

ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಪುತ್ತೂರಿನಲ್ಲಿರುವುದು ಅಭಿನಂದನಾರ್ಹ : ಅಶೋಕ್ ರೈ | ಮ್ಯಾಟ್ ಅಂಕಣ ಪ್ರೋ ಮಾದರಿಯ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಕಬಡ್ಡಿ ಪಂದ್ಯಾಟ Read More »

ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕ ಅಶೋಕ್ ರೈ ಪ್ರಾರ್ಥನೆ

ಪುತ್ತೂರು: ನ. 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕ ಅಶೋಕ್ ರೈ ಅವರು ಕೋಡಿಂಬಾಡಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರು ಕಂಬಳವು ಅಭೂತಪೂರ್ವ ಯಶಸ್ವಿಯಾಗಲಿ ಎಂದು ತನ್ನ ಊರಿನ ದೇವಾಲಯದಲ್ಲಿ ಶನಿವಾರ ಶಾಸಕರು ಪ್ರಾರ್ಥನೆ ಸಲ್ಲಿಸಿದರು. ಪ್ರಥಮ ಭಾರಿಗೆ ರಾಜ್ಯದ ರಾಜಧಾನಿಯಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ಆಯೋಜಿಸಲಾಗಿದ್ದು, ಕಂಬಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಾಗಲೇ ಸಿದ್ದತೆಗಳು ಆರಂಭಗೊಂಡಿದೆ.

ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕ ಅಶೋಕ್ ರೈ ಪ್ರಾರ್ಥನೆ Read More »

ಸವಣೂರು: ವೈಜ್ಞಾನಿಕ ತರಕಾರಿ ಬೇಸಾಯ ತರಬೇತಿ ಕಾರ್ಯಾಗಾರ, ತರಕಾರಿ ಬೀಜ ವಿತರಣೆ

ಸವಣೂರು: 2023-24ನೇ ಸಾಲಿನ ಜಿಲ್ಲಾ ವಲಯ ಪ್ರಚಾರ ಸಾಹಿತ್ಯ ಯೋಜನೆಯ ಅಂಗವಾಗಿ ವೈಜ್ಞಾನಿಕ ತರಕಾರಿ ಬೇಸಾಯ ತರಬೇತಿ ಕಾರ್ಯಾಗಾರ, ತರಕಾರಿ ಬೀಜ ವಿತರಣೆ ಕಾರ್ಯಕ್ರಮ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು. ದ.ಕ.ಜಿ.ಪಂ., ತೋಟಗಾರಿಕೆ ಇಲಾಖೆ ಪುತ್ತೂರು, ಡೆ. ಎನ್.ಆರ್.ಎಲ್. ಎಂ ಯೋಜನೆ ತಾ.ಪಂ. ಕಡಬ, ಸವಣೂರು ಗ್ರಾ.ಪಂ., ಕಾಣಿಯೂರು -ಸವಣೂರು ರೈತ ಉತ್ಪಾದಕ ಕಂಪೆನಿ ಇದರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜರಗಿತು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಅವರು, ತೋಟಗಾರಿಕೆ ಇಲಾಖೆಯ ವತಿಯಿಂದ ದೊರಕುವ

ಸವಣೂರು: ವೈಜ್ಞಾನಿಕ ತರಕಾರಿ ಬೇಸಾಯ ತರಬೇತಿ ಕಾರ್ಯಾಗಾರ, ತರಕಾರಿ ಬೀಜ ವಿತರಣೆ Read More »

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಮೃತ್ಯು!!

ಬೈಂದೂರು: ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ದಂಪತಿ ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಮಹಾಬಲ ದೇವಾಡಿಗ (58) ಮತ್ತು ಲಕ್ಷ್ಮಿ ಮಹಾಬಲ ದೇವಾಡಿಗ (48) ಮೃತಪಟ್ಟವರು. ಹೆಮ್ಮಾಡಿ ಗ್ರಾಮದ ಸುಳ್ಸೆ ಭಟ್ರು ಮನೆ ತೋಟದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಧ್ಯಾಹ್ನದ ವೇಳೆ ಮನೆ ಕೆಲಸಕ್ಕೆ ಹೋಗುವಾಗ ಪತಿಗೆ ವಿದ್ಯುತ್ ಶಾಕ್ ತಗುಲಿದ್ದು ಅವರನ್ನು ಪತ್ನಿ ರಕ್ಷಿಸಲು ಹೋಗಿ ಇಬ್ಬರೂ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಮೃತ್ಯು!! Read More »

ಜಿಲ್ಲಾ ಮಟ್ಟದ ಈಜು ಸ್ಪರ್ಧೆ: ಅಂಬಿಕಾದ ಅನಿಕೇತ್ ಮತ್ತು ಧನ್ವಿತ್ ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಾದ ಧನ್ವಿತ್ ಹಾಗೂ ಅನಿಕೇತ್ ಎನ್. ಅವರು ಜಿಲ್ಲಾ ಮಟ್ಟದ ಈಜು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಘಟಕ ಹಾಗೂ ಮಂಗಳೂರಿನ ಬಲ್ಮಠದ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಆಶ್ರಯದಲ್ಲಿ ಮಂಗಳೂರಿನ ಮಂಗಳ ಈಜು ಕ್ಲಬ್’ನಲ್ಲಿ ಸ್ಪರ್ಧೆ ನಡೆದಿತ್ತು. ಪುತ್ತೂರು ಮರೀಲಿನ ಕೇಶವ ಕುಮಾರ್ ಕೆ.ಎಂ. ಮತ್ತು ಮೀನಾಕ್ಷಿ ದಂಪತಿ ಪುತ್ರ ಧನ್ವಿತ್ 100 ಮೀಟರ್ ಫ್ರೀ

ಜಿಲ್ಲಾ ಮಟ್ಟದ ಈಜು ಸ್ಪರ್ಧೆ: ಅಂಬಿಕಾದ ಅನಿಕೇತ್ ಮತ್ತು ಧನ್ವಿತ್ ರಾಜ್ಯಮಟ್ಟಕ್ಕೆ ಆಯ್ಕೆ Read More »

ವೈಭವದಿಂದ ನಡೆಯಲಿದೆ ಪುತ್ತೂರು ಶಾರದೋತ್ಸವ : ಆಮಂತ್ರಣ ಪತ್ರಿಕೆ, ಲೋಗೋ ಬಿಡುಗಡೆ

ಪುತ್ತೂರು: ಅ.15 ರಿಂದ 24ರ ತನಕ ನಡೆಯುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶಾರದಾ ಭಜನಾ ಮಂದಿರದ 89ನೇ ವರ್ಷದ ವೈಭವದ ಪುತ್ತೂರು ಶಾರದೋತ್ಸವದ ಲಾಂಛನ ಮತ್ತು ಆಮಂತ್ರಣ ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಡಾ.ಸುರೇಶ್ ಪುತ್ತೂರಾಯ ಲಾಂಛನ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿ ಕಾರ್ಯದರ್ಶಿ ಅಜಿತ್ ರೈ ಹೊಸಮನೆ,

ವೈಭವದಿಂದ ನಡೆಯಲಿದೆ ಪುತ್ತೂರು ಶಾರದೋತ್ಸವ : ಆಮಂತ್ರಣ ಪತ್ರಿಕೆ, ಲೋಗೋ ಬಿಡುಗಡೆ Read More »

error: Content is protected !!
Scroll to Top