ಪುರುಷರಕಟ್ಟೆ ಉದಯಭಾಗ್ಯ ಹೊಟೇಲ್ ಮಾಲಕ ಸುರೇಶ್ ಪ್ರಭು ನಿಧನ

ಪುತ್ತೂರು: ತಾಲೂಕಿನ ಪುರುಷರಕಟ್ಟೆಯಲ್ಲಿನ ಉದಯಭಾಗ್ಯ ಹೊಟೇಲ್ ಮಾಲಕ ಸುರೇಶ್ ಪ್ರಭು (72) ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಪುರುಷರಕಟ್ಟೆ ವೃತ್ತದ ಬಳಿ ಕಳೆದ ಹಲವು ವರ್ಷಗಳಿಂದ ಹೊಟೇಲ್ ನಡೆಸುತ್ತಿದ್ದ ಸುರೇಶ್ ಪ್ರಭು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಅವರ ನಿಧನದ ಹಿನ್ನಲೆಯಲ್ಲಿ ಹೊಟೇ;ಲ್ ನಡೆಸುವ ಬಿಲ್ಡಿಂಗ್ ಇತರರು ತಮ್ಮ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂತಾಪ ಸೂಚಿಸಿದರು.

ಪುರುಷರಕಟ್ಟೆ ಉದಯಭಾಗ್ಯ ಹೊಟೇಲ್ ಮಾಲಕ ಸುರೇಶ್ ಪ್ರಭು ನಿಧನ Read More »

ಕಾರು- ಟ್ರಾಕ್ಟರ್ ಅಪಘಾತ: ನೆರವಿಗೆ ಧಾವಿಸಿದ ಪುತ್ತಿಲ

ಪುತ್ತೂರು: ಕಾರು ಹಾಗೂ ಟ್ರಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಘಟನೆ ನರಿಮೊಗರು ಸಮೀಪದ ಪಾಪೆತ್ತಡ್ಕ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಅಪಘಾತದಿಂದ ಟ್ರಾಕ್ಟರ್ ಚಾಲಕ ಸಣ್ಣಪುಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ಪರಿಣಾಮ ಟ್ರಾಕ್ಟರ್ ನಜ್ಜುಗುಜ್ಜಾಗಿದ್ದು, ಕಾರು ಬೆಂಗಳೂರಿನಿಂದ ಕಾಣಿಯೂರು ಮಾರ್ಗವಾಗಿ ಬರುತ್ತಿತ್ತು. ಕಾರಿನಲ್ಲಿದ್ದ ಐದು ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ವಿಶ್ವನಾಥ ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕಾರು- ಟ್ರಾಕ್ಟರ್ ಅಪಘಾತ: ನೆರವಿಗೆ ಧಾವಿಸಿದ ಪುತ್ತಿಲ Read More »

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್’ನಿಂದ ಕುಟುಂಬ ಸಮ್ಮಿಲನ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಕುಲ್ಕುಂದ ಕುಮಾರಧಾರ ಹೋಂ ಸ್ಟೇ ರೆಸಾರ್ಟಿನಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿದ್ದ ಲಯನ್ಸ್ ಜಿಲ್ಲಾ ಎಕ್ಸ್’ಟೆನ್ಷನ್ ಚೇಯರ್ಮೆನ್ ಜಯರಾಮ ದೇರಪ್ಪಜ್ಜನ ಮನೆ ಮಾತನಾಡಿ, ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯೇ ಒಂದು ದೊಡ್ಡ ಕುಟುಂಬ. ಈ ಕುಟುಂಬದಲ್ಲಿರುವ ಎಲ್ಲಾ ಲಯನ್ಸ್ ಸದಸ್ಯರು ಸೇವಾ ಮನೋಭಾವನೆಯನ್ನು ಹೊಂದಿದ್ದಾರೆ. ಅಶಕ್ತರಿಗೆ, ಅಗತ್ಯ ಉಳ್ಳವರಿಗೆ, ಬಡತನದಲ್ಲಿರುವವರಿಗೆ ಸಹಾಯ ಮಾಡುವುದೇ ನಮ್ಮ ಉದ್ದೇಶ. ಲಯನ್ಸ್ ಸಂಸ್ಥೆಯಲ್ಲಿ ಹಿಂದಿಗಿಂತಲೂ ಅಧಿಕ ಸದಸ್ಯರು ಸೇರ್ಪಡೆಯಾಗುತ್ತಾರೆ. ಸುಬ್ರಮಣ್ಯ

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್’ನಿಂದ ಕುಟುಂಬ ಸಮ್ಮಿಲನ Read More »

ಕುಮಾರ ಪರ್ವತ ಚಾರಣ ನಿರ್ಬಂಧ ಮುಕ್ತ! | ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ಚಾರಣಿಗರು

ಸುಬ್ರಹ್ಮಣ್ಯ: ಅರಣ್ಯ ಇಲಾಖೆ ಮೇ ತಿಂಗಳಿನಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಚಾರಣಕ್ಕೆ ಹೇರಿದ್ದ ನಿರ್ಬಂಧವನ್ನು ಇದೀಗ ಮುಕ್ತಗೊಳಿಸಿದೆ. ಮೇ ತಿಂಗಳಿನಿಂದ ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ಪ್ರತಿ ವರ್ಷ ಚಾರಣಿಗರ ಸಂಖ್ಯೆ ಜಾಸ್ತಿಯಾಗುತ್ತದೆ. ಈ ವರ್ಷ ಮೇ ತಿಂಗಳಿನಿಂದ ಅರಣ್ಯ ಇಲಾಖೆಯವರು ಚಾರಣಕ್ಕೆ ಪ್ರವಾಸಿಗರಿಗೆ /ಚಾರಣಿಗರಿಗೆ ನಿರ್ಬಂಧ ಗೋಳಿಸಿದ್ದರು. ಇದೀಗ ನಿರ್ಬಂಧ ಮುಕ್ತಗೊಳಿಸಿ ಚಾರಣಿಗರಿಗೆ ಅರಣ್ಯ ಇಲಾಖೆಯವರು ಅವಕಾಶ ನೀಡಿರುತ್ತಾರೆ. ನಿರ್ಬಂಧ ಮುಕ್ತಗೊಳಿಸಿದ ಬೆನ್ನಲ್ಲೇ ಶನಿವಾರ ಬೃಹತ್ ಸಂಖ್ಯೆಯಲ್ಲಿ ಅಂದರೆ ಸುಮಾರು 750ಕ್ಕೂ ಅಧಿಕ ಚಾರಣಿಗರು

ಕುಮಾರ ಪರ್ವತ ಚಾರಣ ನಿರ್ಬಂಧ ಮುಕ್ತ! | ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ಚಾರಣಿಗರು Read More »

2000 ರೂ. ನೋಟು ವಿನಿಮಯ ಗಡು ವಿಸ್ತರಣೆ | ಎಷ್ಟು ದಿನ ಇನ್ನು ಕಾಲಾವಕಾಶ ಇದೆ ಗೊತ್ತೇ?

ನವದೆಹಲಿ: 2000 ರೂ. ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ನೀಡಿರುವ ಗಡುವನ್ನು ಮತ್ತೆ ವಿಸ್ತರಿಸಿದೆ. ಇದಕ್ಕೂ ಮೊದಲು ಆರ್ ಬಿಐ ಸೆಪ್ಟೆಂಬರ್ 30ರಂದು ನೋಟು ವಿನಿಮಯಕ್ಕೆ ಕೊನೆ ದಿನವೆಂದು ಘೋಷಿಸಿತ್ತು. ಅದರಂತೆ ಹೆಚ್ಚಿನ ಗ್ರಾಹಕರು ಬ್ಯಾಂಕ್ ಗೆ ತೆರಳಿ ನೋಟು ವಿನಿಮಯ ಮಾಡಿಕೊಂಡಿದ್ದಾರೆ. ಆದರೆ ಆರ್ ಬಿಐ ಇಂದು ಹೊಸ ಪ್ರಕಟಣೆ ಹೊರಡಿಸಿದ್ದು, ಅದರಂತೆ ನೋಟು ವಿನಿಮಯ ಮಾಡಿಕೊಳ್ಳದೆ ಬಾಕಿ ಉಳಿದಿರುವ ಗ್ರಾಹಕರು ಅಕ್ಟೋಬರ್ 7ರವರೆಗೆ ಅವಕಾಶ ಕಲ್ಪಿಸಿದೆ. ಅದರಂತೆ ಗ್ರಾಹಕರು ಒಂದು ವೇಳೆ

2000 ರೂ. ನೋಟು ವಿನಿಮಯ ಗಡು ವಿಸ್ತರಣೆ | ಎಷ್ಟು ದಿನ ಇನ್ನು ಕಾಲಾವಕಾಶ ಇದೆ ಗೊತ್ತೇ? Read More »

ಎಂ.ಜಿ. ಕಾವೇರಮ್ಮನವರಿಗೆ ಅಚಲ ಪ್ರಕಾಶನದಿಂದ ಅಭಿನಂದನೆ

ಸುಳ್ಯ: ಅರೆಭಾಷೆ ಲೇಖಕಿ ಕಾವೇರಮ್ಮ ಎಂ.ಜಿ. ಅವರಿಗೆ ಸುಳ್ಯದ ಅಚಲ ಪ್ರಕಾಶನದಿಂದ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕಾವೇರಮ್ಮ ಎಂ.ಜಿ. ಅವರು ತನ್ನ ಇಳಿವಯಸ್ಸಿನಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಾಟ್ಸಾಪ್, ಫೇಸ್ಬುಕ್ ಗಳಲ್ಲಿ ವ್ಯವಹರಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಗಮನಿಸಿ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಅಚಲ ಪ್ರಕಾಶನದ ಅಧ್ಯಕ್ಷ ಚಂದ್ರಶೇಖರ ಬಿಳಿನೆಲೆ ಮತ್ತು ಸಂಚಾಲಕಿ ಡಾ. ಅನುರಾಧಾ ಕುರುಂಜಿ ಸನ್ಮಾನಿಸಿದರು. ಅಂಶಲ್ ಬಿಳಿನೆಲೆ ಮತ್ತು ಅಂಕಣಗಾರ್ತಿ ಚಂದ್ರಾವತಿ ಬಡ್ಡಡ್ಕ

ಎಂ.ಜಿ. ಕಾವೇರಮ್ಮನವರಿಗೆ ಅಚಲ ಪ್ರಕಾಶನದಿಂದ ಅಭಿನಂದನೆ Read More »

ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದಿಂದ ಡಾ. ಅನುರಾಧಾ ಕುರುಂಜಿಯವರಿಗೆ ಗೌರವ

ಕುಶಾಲನಗರ: ಉಪನ್ಯಾಸಕಿ, ವ್ಯಕ್ತಿತ್ವ ವಿಕಸನ ತರಬೇತುದಾರೆ ಡಾ. ಅನುರಾಧಾ ಕುರುಂಜಿ ಅವರನ್ನು ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದಿಂದ ಗೌರವಿಸಲಾಯಿತು. ಕಾವೇರಿ ನಿಸರ್ಗಧಾಮದಲ್ಲಿ ನಡೆದ “ಸಿರಿ ಸಂಭ್ರಮ” ಕವಿಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಅತಿಥಿಗಳ ಸಮ್ಮುಖದಲ್ಲಿ ಗೌರವಿಸಿದರು. ಡಾ. ಅನುರಾಧಾ ಕುರುಂಜಿ ಅವರಿಗೆ ಇತ್ತೀಚೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. ವೇದಿಕೆಯಲ್ಲಿ ವಿಜಯ ವಿಷ್ಣು ಭಟ್, ಉಷಾ, ಸಂತೋಷ ಕುಡೆಕಲ್ಲು, ರಂಗಸ್ವಾಮಿ,

ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದಿಂದ ಡಾ. ಅನುರಾಧಾ ಕುರುಂಜಿಯವರಿಗೆ ಗೌರವ Read More »

ಸಾರ್ವಜನಿಕರಂತೆ ಸರತಿಯಲ್ಲೇ ಸಾಗಿ ಶಾಸಕರಿಗೆ ಮನವಿ ನೀಡಿದ ಅಶೋಕ್ ರೈ ಸಹೋದರಿ!!

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ಸಹೋದರಿ ನಳಿನಿ ಶೆಟ್ಟಿ ಶನಿವಾರದಂದು ಶಾಸಕರನ್ನು ಭೇಟಿಯಾಗಲು ಶಾಸಕರ ಕಚೇರಿಗೆ ಬಂದಿದ್ದರು. ಶಾಸಕರನ್ನು ಭೇಟಿಯಾಗಲು ಬಂದಿರುವ ಸಾರ್ವಜನಿಕರ ಸಂಖ್ಯೆಯೂ ಅಪಾರವಾಗಿತ್ತು. ತನ್ನ ಸಹೋದರಿ ತನಗಾಗಿ ಕಾಯುತ್ತಿದ್ದಾರೆ ಎಂಬ ವಿಚಾರ ಶಾಸಕರಿಗೆ ಗೊತ್ತಿತ್ತು. ಆದರೆ ಶಾಸಕರು ತನ್ನ ಸಹೋದರಿಯನ್ನು ಕರೆಯಲಿಲ್ಲ. ‌ಸರತಿ ಸಾಲಿನಲ್ಲೇ ಬಂದ ನಳಿನಿ ಶೆಟ್ಟಿಯವರು ಅರ್ಜಿ ಸಲ್ಲಿಸಿ ಅಲ್ಲಿಂದ ತೆರಳಿದರು. ‌ಶಾಸಕರ ಈ ನ್ಯಾಯದ ನಡೆ ಅಲ್ಲಿದ್ದವರಿಗೆ ಶಾಸಕರ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿತು. ಅಧಿಕಾರದಲ್ಲಿರುವವರು ರಾಜಧರ್ಮ

ಸಾರ್ವಜನಿಕರಂತೆ ಸರತಿಯಲ್ಲೇ ಸಾಗಿ ಶಾಸಕರಿಗೆ ಮನವಿ ನೀಡಿದ ಅಶೋಕ್ ರೈ ಸಹೋದರಿ!! Read More »

ಗಡಿ ನುಸುಳುವಿಕೆ ಯತ್ನ ವಿಫಲ: ಇಬ್ಬರು ಉಗ್ರರ ಹತ್ಯೆ | ಉಗ್ರರಲ್ಲಿ ಪತ್ತೆಯಾಯ್ತು ಪಾಕ್ ಕರೆನ್ಸಿ!!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಶನಿವಾರ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸುವ ಮೂಲಕ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಕಾಶ್ಮೀರ ಜಿಲ್ಲೆಯ ಮಚಿಲ್ ಸೆಕ್ಟರ್‌ನ ಕುಮ್ಕಾಡಿ ಪ್ರದೇಶದಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ. “ಕುಪ್ವಾರ ಪೊಲೀಸರು ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಮಚಲ್ ಸೆಕ್ಟರ್‌ನ ಕುಮ್ಕಾಡಿ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇದುವರೆಗೆ ಒಳನುಸುಳುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ”

ಗಡಿ ನುಸುಳುವಿಕೆ ಯತ್ನ ವಿಫಲ: ಇಬ್ಬರು ಉಗ್ರರ ಹತ್ಯೆ | ಉಗ್ರರಲ್ಲಿ ಪತ್ತೆಯಾಯ್ತು ಪಾಕ್ ಕರೆನ್ಸಿ!! Read More »

3ನೇ ತರಗತಿ ವಿದ್ಯಾರ್ಥಿನಿ ಪತ್ರಕ್ಕೆ ಸಿಎಂ ಕಚೇರಿ ಸ್ಪಂದನೆ!! | ಮಾದಕ ವಸ್ತು ಅಕ್ರಮ ಮಾರಾಟದ ಅಂಗಡಿಗೆ ಪೊಲೀಸ್ ದಾಳಿ

ಸುಬ್ರಹ್ಮಣ್ಯ: ಅಂಗಡಿ ಮಾಲಕರೊಬ್ಬರು ನಿಷೇಧದ ನಡುವೆಯೇ ಶಾಲಾ ಕಾಲೇಜು ಬಳಿ ತಂಬಾಕು ಮಾರಾಟ ಮಾಡುತ್ತಿರುವ ಕುರಿತು ಶಾಲಾ ಬಾಲಕಿಯೊಬ್ಬಳು ಮುಖ್ಯಮಂತ್ರಿಗೆ ಕಳುಹಿಸಿದ ಪತ್ರದಿಂದ ಶೀಘ್ರ ಸ್ಪಂದನೆ ದೊರಕಿದೆ. ಪತ್ರ ತಲುಪಿದ ಸ್ವಲ್ಪ ಹೊತ್ತಿನಲ್ಲೇ ಅಂಗಡಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇದು ಕಡಬ ತಾಲೂಕಿನ ಸುಬ್ರಹ್ಮಣ್ಯ ಬಳಿಯ ಕೈಕಂಬದಲ್ಲಿ ನಡೆದಿದೆ. ಕೈಕಂಬ ಪಿಲಿಕಜೆ ನಿವಾಸಿ 3ನೇ ತರಗತಿ ವಿದ್ಯಾರ್ಥಿನಿ ಅಯೊರ ಪತ್ರ ಬರೆದ ಬಾಲಕಿ. ಕೆಲ ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದಿದ್ದ ಧಾರ್ಮಿಕ ಕೇಂದ್ರಗಳ ಬಳಿಯ ಮಾದಕ ವಸ್ತು

3ನೇ ತರಗತಿ ವಿದ್ಯಾರ್ಥಿನಿ ಪತ್ರಕ್ಕೆ ಸಿಎಂ ಕಚೇರಿ ಸ್ಪಂದನೆ!! | ಮಾದಕ ವಸ್ತು ಅಕ್ರಮ ಮಾರಾಟದ ಅಂಗಡಿಗೆ ಪೊಲೀಸ್ ದಾಳಿ Read More »

error: Content is protected !!
Scroll to Top