ಪ್ರವಾಸಿತಾಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವಕ ಮೋರಿ ಪಕ್ಕ ಪತ್ತೆ!

ಕೊಟ್ಟಿಗೆಹಾರ: ಪ್ರವಾಸಿತಾಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವಕನೋರ್ವ, ಇದೀಗ ಮನೆ ಸಮೀಪದ ಮೋರಿ ಸಮೀಪ ಪತ್ತೆಯಾಗಿದ್ದಾನೆ. ಮೂಡಿಗೆರೆ ತಾಲೂಕಿನ ಐತಿಹಾಸಿಕ ಹಾಗೂ ಪ್ರವಾಸಿ ತಾಣ ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದೀಕ್ಷಿತ್ (27) ಅಕ್ಟೋಬರ್ 10 ರಂದು ಮಂಗಳವಾರ ಸಂಜೆ ನಾಪತ್ತೆಯಾಗಿದ್ದ. ಇದೀಗ ಆಕ್ಟೋಬರ್ 11 ರಂದು ಬೆಳಗ್ಗೆ ಮನೆಯ ಹತ್ತಿರದ ಮೋರಿ ಬಳಿ ಕುಳಿತಿದ್ದನ್ನು ಊರವರು ಪತ್ತೆ ಹಚ್ಚಿ ಮನೆಗೆ ಸೇರಿಸಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ […]

ಪ್ರವಾಸಿತಾಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವಕ ಮೋರಿ ಪಕ್ಕ ಪತ್ತೆ! Read More »

ನಿವೃತ್ತ ಎಸ್‍.ಐ. ಗೋಪಾಲ್ ಎಂ. ನಿಧನ

ಪುತ್ತೂರು: ನಿವೃತ್ತ ಎಸ್‍.ಐ. ಕೊಡಿಪ್ಪಾಡಿ ನಿವಾಸಿ ಗೋಪಾಲ್ ಎಂ. (64) ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಚಿಕ್ಕಮಗಳೂರು ಪೊಲೀಸ್ ಇಲಾಖೆ ಸೇರಿದಂತೆ ಹಲವಾರು ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು 35 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ನಿವೃತ್ತ ಎಸ್‍.ಐ. ಗೋಪಾಲ್ ಎಂ. ನಿಧನ Read More »

ದೈವಸ್ಥಾನದಲ್ಲಿ ನೇಣು ಬಿಗಿದು ಆತ್ಮಹತ್ಯೆ

ಪಣಂಬೂರು: ವ್ಯಕ್ತಿಯೊಬ್ಬರು ಪಣಂಬೂರು ಸಮೀಪದ ಬಬ್ಬುಸ್ವಾಮಿ ದೈವಸ್ಥಾನದ ಪ್ರಾಂಗಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಗೋಪಾಲ (64) ಈ ಕೃತ್ಯ ಎಸಗಿದವರು. ಗೋಪಾಲ ಅವರು ಮಡಿಕೇರಿಯಿಂದ ತಣ್ಣೀರು ಬಾವಿ ಬೀಚ್ ಗೆ ಬಂದಿದ್ದು, ಬಳಿಕ ದೈವಸ್ಥಾನ ಪ್ರಾಂಗಣದಲ್ಲಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೈವಸ್ಥಾನದಲ್ಲಿ ನೇಣು ಬಿಗಿದು ಆತ್ಮಹತ್ಯೆ Read More »

ಇಂದು ಕರೆ ಮುಹೂರ್ತ: ಡಿಕೆಶಿಗೆ ಆಹ್ವಾನ

ಪುತ್ತೂರು: ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ  ನಡೆಯಲಿರುವ ಬೆಂಗಳೂರು ‌ಕಂಬಳದ ಕರೆ‌ಮುಹೂರ್ತ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಆಹ್ವಾನ‌ ನೀಡಲಾಯಿತು. ನ.25 ಹಾಗೂ 26 ರಂದು ಬೆಂಗಳೂರು‌ಕಂಬಳ ನಡೆಯಲಿದ್ದು ಕರೆ ಮುಹೂರ್ತ ಕಾರ್ಯಕ್ರಮ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬೆಂಗಳೂರು‌ ಕಂಬಳ ಸಮಿತಿ‌ ಅಧ್ಯಕ್ಷ ಶಾಸಕ ಅಶೋಕ್ ರೈ, ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿ , ಮುರಳೀಧರ್ ರೈ ಮಠಂತಬೆಟ್ಟು ಸಹಿತಿ ಕಂಬಳ

ಇಂದು ಕರೆ ಮುಹೂರ್ತ: ಡಿಕೆಶಿಗೆ ಆಹ್ವಾನ Read More »

ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪ್ರಧಾನಿ

ಹೊಸದಿಲ್ಲಿ: ಇಸ್ರೇಲ್ ದೇಶ ಎದುರಿಸುತ್ತಿರುವ ಸಂಕಷ್ಟದ ಸನ್ನಿವೇಶದಲ್ಲಿ ಭಾರತ ದೇಶದ ಜನರು ಇಸ್ರೇಲ್ ಜನತೆಯ ಪರವಾಗಿ ಬಲವಾಗಿ ನಿಲ್ಲುತ್ತಾರೆ ಎಂದು ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಭರವಸೆ ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಅವರಿಗೆ ಇಸ್ರೇಲ್‌ನ ಸದ್ಯದ ಸ್ಥಿತಿಗತಿಗಳ ಕುರಿತಾಗಿ ಬೆಂಜಮಿನ್ ನೆತನ್ಯಾಹು ಮಾಹಿತಿ ನೀಡಿದರು. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೂರವಾಣಿ ಕರೆ ಮಾಡಿದ್ದಕ್ಕೆ

ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪ್ರಧಾನಿ Read More »

ಪುತ್ತೂರು: ಮಳೆ ಜೊತೆ ಟ್ರಾಫಿಕ್ ಜಾಮ್ ಕಿರಿಕಿರಿ!!

ಪುತ್ತೂರು: ಜಿಟಿಜಿಟಿ ಮಳೆ ಸುರಿಯಲು ಆರಂಭವಾಗುತ್ತಿದ್ದಂತೆ ಪುತ್ತೂರು ಪೇಟೆಯ ಮುಖ್ಯರಸ್ತೆಯಲ್ಲಿ ಲಘು ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆಯಿತು. ಕಲ್ಲಾರೆಯಿಂದ ಅರುಣಾ ಥಿಯೇಟರ್ ನಡುವಿನ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಯಿತು. ವಾಹನಗಳು ಹಾರನ್ ಮೊಳಗಿಸುತ್ತಾ, ತೆವಳುತ್ತಾ ಸಾಗುವಂತಾಯಿತು. ಪುತ್ತೂರಿನಲ್ಲಿ ಮಂಗಳವಾರ ಸಂಜೆ ಮಳೆ ಸುರಿಯಿತು. ಅಷ್ಟರಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಯಿತು. ಅದರಲ್ಲೂ ಪುತ್ತೂರಿನಿಂದ ದರ್ಬೆ ಕಡೆಗೆ ಸಾಗುವ ಒಂದು ರಸ್ತೆಯಲ್ಲಿ ವಾಹನಗಳ ಸರತಿ ಸಾಲು ಕಂಡುಬಂದಿತು.

ಪುತ್ತೂರು: ಮಳೆ ಜೊತೆ ಟ್ರಾಫಿಕ್ ಜಾಮ್ ಕಿರಿಕಿರಿ!! Read More »

ವಜ್ರದೇಹಿ ಶ್ರೀಗೆ ಸಿಸಿಬಿ ನೋಟೀಸ್!?

ಮಂಗಳೂರು: ದಕ್ಷಿಣ ಕನ್ನಡದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಬಿಜೆಪಿ ಟಿಕೆಟ್ ಡೀಲ್ ವಿಷಯವಾಗಿ ಹಿಂದೂ ಮುಖಂಡೆ ಚೈತ್ರ ಕುಂದಾಪುರ ಹಾಗೂ ಹಾಲಶ್ರೀ ಸ್ವಾಮಿಜಿ ಬಂಧನವಾಗಿ ತಿಂಗಳು ಕಳೆದಿದೆ. ಇದೀಗ  ಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಣಾ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಬೆಂಗಳೂರು ಸಿಸಿಬಿ ಸಹಾಯಕ ಪೊಲೀಸ್ ಕಮಿಷನರ್ ರೀನಾ ಸುವರ್ಣ ಅವರು ಶ್ರೀಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಚೈತ್ರ ಇಡಿಗೆ ಬರೆದ ಪತ್ರದಲ್ಲಿ ವಜ್ರದೇಹಿ ಮಠದ

ವಜ್ರದೇಹಿ ಶ್ರೀಗೆ ಸಿಸಿಬಿ ನೋಟೀಸ್!? Read More »

ಗಡಿಯಿಂದ ಘಾಟ್’ವರೆಗೆ ಸ್ವಚ್ಛತೆ, ಬೀಜ ಬಿತ್ತುವ ಅಭಿಯಾನ

ಸುಬ್ರಹ್ಮಣ್ಯ: ಇಲ್ಲಿನ ರೋಟರಿ, ಲಯನ್ಸ್, ಇನ್ನರ್ ವ್ಹೀಲ್ ಕ್ಲಬ್, ಅರಣ್ಯ ಇಲಾಖೆ ಆಶ್ರಯದಲ್ಲಿ ಬೀಜ ಬಿತ್ತುವ ಹಾಗೂ ಬೃಹತ್ ಸ್ವಚ್ಚತಾ ಅಭಿಯಾನಕ್ಕೆ ಕುಲುಕುಂದ ಶ್ರೀ ಚಾಮುಂಡೇಶ್ವರಿ ಗಡಿಯಲ್ಲಿ ಚಾಲನೆ ನೀಡಲಾಯಿತು. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಮಲ್ ಬಾಬು, ಅರಣ್ಯ ಪೋಷಣೆ, ಬೆಳವಣಿಗೆ ಹಾಗೂ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಇದರೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ

ಗಡಿಯಿಂದ ಘಾಟ್’ವರೆಗೆ ಸ್ವಚ್ಛತೆ, ಬೀಜ ಬಿತ್ತುವ ಅಭಿಯಾನ Read More »

ಸವಣೂರು, ಉಪ್ಪಿನಂಗಡಿ ಗ್ರಾ.ಪಂ.ಗೆ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ

ಪುತ್ತೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸವಣೂರು ಹಾಗೂ ಉಪ್ಪಿನಂಗಡಿ ಗ್ರಾ.ಪಂ.ಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಿದರು. ಕೋಟತಟ್ಟುವಿನ ಡಾ. ಶಿವರಾಮ ಕಾರಂತ ಥೀಂ ಪಾರ್ಕಿನಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ಸ್ವೀಕರಿಸಿದ 9 ಗ್ರಾಮ ಪಂಚಾಯತುಗಳಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್‌, ಕಾರಂತ ಟ್ರಸ್ಟ್‌, ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಕಾರಂತೋತ್ಸವದಲ್ಲಿ ಕಾರಂತ

ಸವಣೂರು, ಉಪ್ಪಿನಂಗಡಿ ಗ್ರಾ.ಪಂ.ಗೆ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ Read More »

ಶರಣ್ ಪಂಪ್‌ವೆಲ್’ಗೆ ಉಡುಪಿ ಜಿಲ್ಲಾ ಪ್ರವೇಶ ನಿರ್ಬಂಧ! | ಹೆಜಮಾಡಿಯಿಂದಲೇ ವಾಪಾಸ್ಸಾದರೇ ವಿ.ಎಚ್.ಪಿ. ಪ್ರಾಂತ ಸಹಕಾರ್ಯದರ್ಶಿ!!

ಉಡುಪಿ: ವಿಎಚ್ ಪಿ- ಬಜರಂಗದಳ ವತಿಯಿಂದ ಉಡುಪಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ ಹಾಗೂ ಹಿಂದೂ ಸಮಾಜೋತ್ಸವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆದೇಶದಂತೆ ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಗೆ ಉಡುಪಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇತ್ತೀಚೆಗೆ ನಡೆದ ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ಪ್ರತಿಭಟನೆಯಲ್ಲಿ ಶರಣ್ ಪಂಪ್‌ವೆಲ್ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು. ಈ ಸಂಬಂಧ ಅವರ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ

ಶರಣ್ ಪಂಪ್‌ವೆಲ್’ಗೆ ಉಡುಪಿ ಜಿಲ್ಲಾ ಪ್ರವೇಶ ನಿರ್ಬಂಧ! | ಹೆಜಮಾಡಿಯಿಂದಲೇ ವಾಪಾಸ್ಸಾದರೇ ವಿ.ಎಚ್.ಪಿ. ಪ್ರಾಂತ ಸಹಕಾರ್ಯದರ್ಶಿ!! Read More »

error: Content is protected !!
Scroll to Top