ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪಿ ಬಂಧನ

ಉಪ್ಪಿನಂಗಡಿ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಓರ್ವನನ್ನು ಪೋಕ್ಸೊ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಪೆರಿಯಡ್ಕ ನಿವಾಸಿ ಮುಹಮ್ಮದ್ ಮುಸ್ತಫ (40) ಬಂಧಿತ ಆರೋಪಿ. ಈತ ಎರಡು ತಿಂಗಳಿಂದ ಬಾಲಕಿಯನ್ನು ಬಸ್ ನಿಲ್ದಾಣದಿಂದ ಹಿಂಬಾಲಿಸುತ್ತಿದ್ದು, ನ.29ರಂದು ಮನೆಗೆ ಕರೆದಿದ್ದಾನೆ ಎಂದು ಬಾಲಕಿಯ ಸಹೋದರ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು […]

ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪಿ ಬಂಧನ Read More »

ದುರ್ಬಲ ಬೌಲಿಂಗ್‌, ಕಳಪೆ ಫೀಲ್ಡಿಂಗ್‌ನಿಂದಾಗಿ ಸೋತ ಭಾರತ

358 ರನ್‌ ಮಾಡಿದರೂ ಗೆಲ್ಲಲಾಗದೆ ಸರಣಿ 1-1 ಸಮಬಲ ರಾಯ್‌ಪುರ : ಬರೋಬ್ಬರಿ ಎರಡು ಶತಕಗಳ ನೆರವಿನೊಂದಿಗೆ 358 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿದರೂ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿದೆ. ರಾಂಚಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು ಕೊನೆಯ ಓವರ್​ನಲ್ಲಿ ಗೆದ್ದಿಕೊಂಡಿದ್ದ ಟೀಂ ಇಂಡಿಯಾ ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಕೊನೆಯ ಓವರ್​ನಲ್ಲಿ ಸೋತಿದೆ. ಕಳಪೆ ಫೀಲ್ಡಿಂಗ್, ಬೌಲಿಂಗ್‌ಗೆ ಭಾರತ ಭಾರಿ ಬೆಲೆತೆತ್ತಿದೆ. ಟೀಂ ಇಂಡಿಯಾ ಬ್ಯಾಟರ್​ಗಳು ಕಲೆಹಾಕಿದ್ದ 358 ರನ್​ಗಳನ್ನು ತಂಡದ

ದುರ್ಬಲ ಬೌಲಿಂಗ್‌, ಕಳಪೆ ಫೀಲ್ಡಿಂಗ್‌ನಿಂದಾಗಿ ಸೋತ ಭಾರತ Read More »

ಉದ್ಯೋಗ ವಾರ್ತೆ: ಆಫೀಸ್ ಅಡ್ಮಿನ್ ಹುದ್ದೆಗೆ ಅರ್ಜಿ ಆಹ್ವಾನ

ಸಂಪ್ಯ: ಪುತ್ತೂರಿನ ಆರಕ್ಷಕ ಠಾಣೆಯ ಬಳಿ ಕಾರ್ಯಾಚರಿಸುತ್ತಿರುವ ತರಬೇತಿ ಸಂಸ್ಥೆ ವಿದತ್ (VIDATH) ಇದರ ಆಡಳಿತ ಮಂಡಳಿಯವರು ಕಚೇರಿ ನಿರ್ವಾಹಕ (Office Admin) ಹುದ್ದೆಗೆ ನೇಮಕಾತಿ ಮಾಡಲಿದ್ದು ಆಸಕ್ತರನ್ನು ಆಹ್ವಾನಿಸಿದ್ದಾರೆ. ಕಚೇರಿ ವೇಳೆಯಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರರಾಗಿರುವ ಶುಭಾ ಅವರು ತಿಳಿಸಿದ್ದಾರೆ.

ಉದ್ಯೋಗ ವಾರ್ತೆ: ಆಫೀಸ್ ಅಡ್ಮಿನ್ ಹುದ್ದೆಗೆ ಅರ್ಜಿ ಆಹ್ವಾನ Read More »

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಅವಕಾಶವಿರುವ ಸರ್ಕಾರಿ ಅಧಿಕಾರಿ ಹುದ್ದೆಗಳನ್ನು ಪಡೆಯಲು ಕೆಎಎಸ್,ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ಯಶಸ್ಸನ್ನು ಪಡೆಯಲು ಪಿಯುಸಿಯ ವಿದ್ಯಾರ್ಥಿಗಳು ಈ ಹಂತದಲ್ಲಿಯೇ ಸಿದ್ಧತೆ ಮಾಡಿಕೊಳ್ಳಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದರು. ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಜ್ಞಾನಾರ್ಜನೆಗಾಗಿ ಶಿಕ್ಷಣದ ಜೊತೆಗೆ ಸಾಮಾಜಿಕ ಋಣವನ್ನು ತೀರಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಿರಿಯ ಉಪನ್ಯಾಸಕಿಯಾದ ಭಾಗ್ಯಲಕ್ಷ್ಮಿ

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ Read More »

ಅಪ್ರಾಪ್ತ ಬಾಲಕಿಯನ್ನು ಮನೆಗೆ ಕರೆದ ಆರೋಪಿ ಪೊಲೀಸರ ಬಲೆಗೆ

ಉಪ್ಪಿನಂಗಡಿ: ಅಪ್ರಾಪ್ತ ಬಾಲಕುಯೊಬ್ಬಳನ್ನು ಹಿಂಬಾಲಿಸಿ, ತನ್ನ ಮನೆಗೆ ಕರೆದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹಮ್ಮದ್ ಮುಸ್ತಫಾ (40) ಎಂದು ಗುರುತಿಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಆರೋಪಿ ಮುಸ್ತಫಾ ಅಪ್ರಾಪ್ತ ಬಾಲಕಿಯನ್ನು ಬಸ್ಸು ನಿಲ್ದಾಣದಿಂದ ಹಿಂಬಾಲಿಸುವ ಕೆಲಸ ಮಾಡುತ್ತಿದ್ದನು. ಆ ಬಳಿಕ ಆಕೆಯನ್ನು ತನ್ನ ಮನೆಗೆ ಬರುವಂತೆ ಕರೆದಿದ್ದಾನೆ. ಈ ವಿಚಾರವನ್ನು ಬಾಲಕಿ ತನ್ನ ಮನೆಯಲ್ಲಿ ತಿಳಿಸಿದ್ದು, ಮನೆಯವರು ಮುಸ್ತಫಾನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

ಅಪ್ರಾಪ್ತ ಬಾಲಕಿಯನ್ನು ಮನೆಗೆ ಕರೆದ ಆರೋಪಿ ಪೊಲೀಸರ ಬಲೆಗೆ Read More »

ಸುಳ್ಳು ಸುದ್ದಿ ಹಬ್ಬಿಸಿ‌ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದವರ ‌ವಿರುದ್ಧ ಮಧು ಬಂಗಾರಪ್ಪ ಗರಂ

ಬೆಂಗಳೂರು: ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಭಯ, ಗೊಂದಲ, ಆತಂಕ ಹುಟ್ಟಿಸುವವರ ವಿರುದ್ಧ ಸಚಿವ ಮಧು ಬಂಗಾರಪ್ಪ ಗುಡುಗಿದ್ದಾರೆ. SSLC – PUC ಗೆ ಕಳೆದ ವರ್ಷದಂತೆ ಈ ವರ್ಷ ಸಹ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ, ಗೊಂದಲ ಸೃಷ್ಟಿ ಮಾಡುವವರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ಇಲಾಖೆ ಉತ್ತೀರ್ಣವಾಗಲು 33% ಅಂಕಗಳನ್ನು ಪಡೆಯಬೇಕು ಎಂದಿದೆ. ಅದರಂತೆ ಪರೀಕ್ಷಾ ವಿಧಾನದಲ್ಲೂ ಮಾರ್ಪಾಡು ತಂದಿದೆ. ಮೂರನೇ ಪರೀಕ್ಷೆಯನ್ನು ಸರ್ಕಾರ ಕೈಬಿಟ್ಟಿದೆ ಎಂಬುದಾಗಿ ಕೆಲವು

ಸುಳ್ಳು ಸುದ್ದಿ ಹಬ್ಬಿಸಿ‌ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದವರ ‌ವಿರುದ್ಧ ಮಧು ಬಂಗಾರಪ್ಪ ಗರಂ Read More »

ಭಾರತ ಜಾತ್ಯಾತೀತವಾಗಿರುವುದಕ್ಕೆ ಕಾರಣ ಹಿಂದೂಗಳ ಉದಾರತೆ: ಕೆ.ಕೆ. ಮುಹಮ್ಮದ್

ಕೋಝಿಕ್ಕೋಡ್: ಹಿಂದೂಗಳಿಗೆ ಅಯೋಧ್ಯೆಯ ಶ್ರೀ ರಾಮ ಮಂದಿರ ಮಾತ್ರವಲ್ಲ ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್ಟು ಕೊಡಬೇಕಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ. ಕೆ. ಮುಹಮ್ಮದ್ ತಿಳಿಸಿದ್ದಾರೆ. ನಾನು ಈ ಹಿಂದೆಯೇ ಹೇಳಿದ್ದೆ. ಮುಸಲ್ಮಾನರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆಬಿಟ್ಟು ಕೊಡಬೇಕಾಗುತ್ತದೆ ಎಂದು. ಶ್ರೀ ಕೃಷ್ಣನ ಜನ್ಮಸ್ಥಾನವಾದ ಮಥುರಾ, ಶಿವನಿಗೆ ಸಂಬಂಧಿಸಿದ ಕಾಶೀಯಲ್ಲಿನ ಜ್ಞಾನವಾಪಿ ‌ಮಸೀದಿಗಳಿಗೆ ಸಂಬಂಧಿಸಿದ ಹಾಗೆ ಅವರು ಮಾಧ್ಯಮಗಳಿಗೆ ಈ ಹೇಳಿಕೆ ನೀಡಿರುವುದಾಗಿದೆ. ಮುಸಲ್ಮಾನರಿಗಾಗಿ ಭಾರತೀಯರು

ಭಾರತ ಜಾತ್ಯಾತೀತವಾಗಿರುವುದಕ್ಕೆ ಕಾರಣ ಹಿಂದೂಗಳ ಉದಾರತೆ: ಕೆ.ಕೆ. ಮುಹಮ್ಮದ್ Read More »

ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊಣಾಜೆಯ ಸರ್ವಮತ ಸಮ್ಮೇಳನ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಮಂಗಳೂರು: ಶ್ರೀ ನಾರಾಯಣ ಗುರು-ಮಹಾತ್ಮ ಗಾಂಧೀಜಿ ಸಂವಾದ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಿರುವ ಶ್ರೀ ಮಹಾಗುರುವಿನ ಮಹಾಸಮಾಧಿ ಶತಾಬ್ದಿ ಸರ್ವಮತ ಸಮ್ಮೇಳನ ಶತಮಾನೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮತ್ತು ಮಕ್ಕಳ ಕಲ್ಯಾಣ ಸಚಿವೆ

ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ Read More »

ದಿಬ್ಬಣದ ಬಸ್ಸಿನೊಳಗಿತ್ತು ಭಾರಿ ಗಾತ್ರದ ಹೆಬ್ಬಾವು

ಪುತ್ತೂರಿನಿಂದ ಮೂಡುಬಿದಿರೆ ತನಕ ಪ್ರಯಾಣಿಸಿ ಬಂದಿದ್ದ ಹೆಬ್ಬಾವು ಮೂಡುಬಿದಿರೆ : ಭಾರಿ ಗಾತ್ರದ ಹೆಬ್ಬಾವೊಂದು ಮದುವೆ ದಿಬ್ಬಣದ ಬಸ್ಸಿನಲ್ಲಿ ಪುತ್ತೂರಿನಿಂದ ಮೂಡುಬಿದಿರೆಯ ತನಕ ಪ್ರಯಾಣಿಸಿ ಬಂದ ಘಟನೆ ಮಂಗಳವಾರ ಸಂಭವಿಸಿದೆ. ಮೂಡುಬಿದಿರೆಯ ಜೈನ್ ಪೇಟೆಯ ಗೋಳಿಬಜೆ ಸೆಂಟರ್ ಹೋಟೆಲ್ ಬಳಿ ಉಪಾಹಾರ ಸೇವಿಸಲು ಬಸ್‌ ನಿಲ್ಲಿಸಿದಾಗ ಬಸ್ಸಿನೊಳಗೆ ಆರು ಅಡಿಗೂ ಉದ್ದ ಇರುವ ಹಾವು ಸುರುಳಿ ಸುತ್ತಿಕೊಂಡು ಮಲಗಿರುವುದು ಕಂಡುಬಂದಿದೆ. ಮದುವೆಯ ಬೆಂಗಾವಲು ಬಸ್ಸಿನೊಳಗೆ ಈ ಹಾವು ಇತ್ತು. ಪುತ್ತೂರಿನಿಂದ ಹೆಬ್ರಿ ಕಡೆಗೆ ಈ ಬಸ್‌ ಹೋಗುತ್ತಿತ್ತು.

ದಿಬ್ಬಣದ ಬಸ್ಸಿನೊಳಗಿತ್ತು ಭಾರಿ ಗಾತ್ರದ ಹೆಬ್ಬಾವು Read More »

ಟೀಕೆಗೆ ಗುರಿಯಾದ ಸಿಎಂ-ಡಿಸಿಎಂ ದುಬಾರಿ ಬೆಲೆಯ ಕೈಗಡಿಯಾರ

ಹ್ಯೂಬ್ಲೋಟ್ ಹಗರಣವನ್ನು ನೆನಪಿಸಿ ಕಾಲೆಳೆದ ಬಿಜೆಪಿ ಬೆಂಗಳೂರು : ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಟಿಕೋಳಿ ಸಾರು ಜೊತೆಗೆ ಬಿಸಿಬಿಸಿ ಇಡ್ಲಿಯ ಬ್ರೇಕ್‌ಫಾಸ್ಟ್‌ ಸವಿದ ಬಳಿಕ ವಿವಾದವೊಂದು ಮೆಲ್ಲನೆ ತಲೆ ಎತ್ತಿದೆ. ಈ ವಿವಾದಕ್ಕೆ ಕಾರಣ ಬ್ರೇಕ್‌ಫಾಸ್ಟ್‌ ಅಲ್ಲ ಬದಲಾಗಿ ಸಿಎಂ ಮತ್ತು ಡಿಸಿಎಂ ಕಟ್ಟಿಕೊಂಡಿದ್ದ ದುಬಾರಿ ಬೆಲೆಯ ಕೈಗಡಿಯಾರ ಎನ್ನುವುದೊಂದು ವಿಶೇಷ. ಕೈಗಡಿಯಾರ ಎಂದ ಕೂಡಲೇ ಸಿದ್ದರಾಮಯ್ಯನವರ ಕಳೆದ ಅವಧಿಯಲ್ಲಿ ಭಾರಿ ವಿವಾದಕ್ಕೊಳಗಾಗಿದ್ದ 75 ಲಕ್ಷ ರೂ. ಬೆಲೆಯ ಹ್ಯೂಬ್ಲೋಟ್ ಕೈಗಡಿಯಾರದ ವಿವಾದ

ಟೀಕೆಗೆ ಗುರಿಯಾದ ಸಿಎಂ-ಡಿಸಿಎಂ ದುಬಾರಿ ಬೆಲೆಯ ಕೈಗಡಿಯಾರ Read More »

error: Content is protected !!
Scroll to Top