ಜನಪ್ರಿಯತೆ ಕಳೆದುಕೊಂಡ ಕಾಂಗ್ರೆಸ್: ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವ್ಯಂಗ್ಯ

ಮಂಗಳೂರು: ಅಧಿಕಾರಕ್ಕೆ ಬಂದು ಆರೇ ತಿಂಗಳಿಗೆ ಜನಪ್ರಿಯತೆಯನ್ನು ಕಳೆದುಕೊಂಡ ಸರ್ಕಾರ ಎಂದರೆ ಅದು ಕಾಂಗ್ರೆಸ್ ಮಾತ್ರ ಎಂದು ಬಿಜೆಪಿ ನೂತನ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರಿಗೆ ಸೇಬು ಹಣ್ಣಿನ ಹಾರ ಹಾಕುವ ಮೂಲಕ ಭರ್ಜರಿ ಸ್ವಾಗತ ಮಾಡಲಾಯಿತು. ಈ ವೇಳೆ ಬ್ಯಾಂಡ್‌ನವರು ನುಡಿಸಿದ ಮುದುಡಿದ ತಾವರೆ ಅರಳಿದೆ… ಹಾಡು ಕಾರ್ಯಕರ್ತರಲ್ಲಿ ಹೊಸ ಸಂಚಲನವನ್ನು ಸೃಷ್ಟಿ ಮಾಡಿದೆ. ಈ ವೇಳೆ […]

ಜನಪ್ರಿಯತೆ ಕಳೆದುಕೊಂಡ ಕಾಂಗ್ರೆಸ್: ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವ್ಯಂಗ್ಯ Read More »

19ರ ಹರೆಯದ ತರುಣನ ಹತ್ಯೆಗೈದ ಅಪ್ರಾಪ್ತರ ತಂಡ!! | ಯುವಕನ ಪಾಲಿಗೆ ಮುಳುವಾಯ್ತೇ ಡ್ರಗ್ಸ್ ಜಾಲ ವಿರುದ್ಧದ ಕಾರ್ಯಾಚರಣೆ ??

19 ವರ್ಷದ ಯುವಕನೋರ್ವನನ್ನು ನಾಲ್ವರ ತಂಡ ಹತ್ಯೆಗೈದ ಘಟನೆ ತಿರುವನಂತಪುರಂನ ಕರಿಮಾಡೋಮ್‌ನ ಟರ್ಫ್‌ನಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಅರ್ಷದ್ ಎಂದು ಗುರುತಿಸಲಾಗಿದೆ. ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನುಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಆರೋಪಿಗಳು ಅಪ್ರಾಪ್ತರು ಎಂದು ಹೇಳಲಾಗಿದೆ. ಹಿಂದಿನ ದ್ವೇಷದಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಅರ್ಷದ್ ತನ್ನ ಸ್ನೇಹಿತರೊಂದಿಗೆ ಕಾಲೋನಿಯಲ್ಲಿ ಡ್ರಗ್ಸ್ ಜಾಲ ತಡೆಯುವ ತಡೆಯುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಾದಕ ವ್ಯಸನದ ವಿರುದ್ಧ ಹೋರಾಡಲು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಅರ್ಷದ್

19ರ ಹರೆಯದ ತರುಣನ ಹತ್ಯೆಗೈದ ಅಪ್ರಾಪ್ತರ ತಂಡ!! | ಯುವಕನ ಪಾಲಿಗೆ ಮುಳುವಾಯ್ತೇ ಡ್ರಗ್ಸ್ ಜಾಲ ವಿರುದ್ಧದ ಕಾರ್ಯಾಚರಣೆ ?? Read More »

ರೋಟರಿಯ ಸಕ್ರೀಯ ಸದಸ್ಯ ಡಾ. ಕುಶಾಲಪ್ಪ ಅಭಿಕಾರ್ ನಿಧನ

ಪುತ್ತೂರು: ಇಲ್ಲಿನ ದರ್ಬೆ ನಿವಾಸಿ ಡಾ. ಕುಶಾಲಪ್ಪ ಅಭಿಕಾರ್ (90 ವ.) ಅವರು ಅಲ್ಪಕಾಲದ ಅನಾರೋಗ್ಯದಿಂದ ನ. 22ರಂದು ಮಗಳ ಮನೆಯಾದ ಇಡ್ಯಡ್ಕದಲ್ಲಿ ನಿಧನರಾದರು. ಮೂಲತಃ ಚಾರ್ವಕಾದ ಅಭಿಕಾರ್ ಕುಟುಂಬದವರಾದ ಡಾ. ಕುಶಾಲಪ್ಪ ಅಭಿಕಾರ್ ಅವರು ಕೆನಡಾದಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಮುಗಿಸಿದ್ದರು. ನಂತರ ಅಲ್ಲೇ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ನಿವೃತ್ತಿಯ ಬಳಿಕ ಪುತ್ತೂರಿಗೆ ಆಗಮಿಸಿ ರೋಟರಿ ಸೇರಿದಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಪುತ್ತೂರು ರೋಟರಿ ಕ್ಲಬ್ಬಿನ ಸಕ್ರೀಯ ಸದಸ್ಯರಾಗಿದ್ದ ಡಾ. ಕುಶಾಲಪ್ಪ ಗೌಡ ಅಭಿಕಾರ್ ಅವರು, ಕೊಡುಗೈ

ರೋಟರಿಯ ಸಕ್ರೀಯ ಸದಸ್ಯ ಡಾ. ಕುಶಾಲಪ್ಪ ಅಭಿಕಾರ್ ನಿಧನ Read More »

50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿಗೆ, 4 ದಿನ ಕದನ ವಿರಾಮ!

ಟೆಲ್‌ ಅವಿವ್‌: ಹಮಾಸ್ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿಗೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಗಾಜಾದಲ್ಲಿ 4 ದಿನಗಳ ಕದನ ವಿರಾಮವನ್ನು ಇಸ್ರೇಲ್‌ ಅನುಮೋದಿಸಿದೆ. ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವ ಕತಾರ್‌ ಮತ್ತು ಅಮೆರಿಕದ ಅಧಿಕಾರಿಗಳು, ಇಸ್ರೇಲ್ ಮತ್ತು ಹಮಾಸ್‌ ಒಪ್ಪಂದವು ಸನ್ನಿಹಿತವಾಗಿದೆ ಎಂದು ಕೆಲ ದಿನಗಳಿಂದ ಹೇಳುತ್ತಿದ್ದರು. ಈಗ ಅದು ನಿಜವಾಗಿದೆ. ನಾಲ್ಕು ದಿನಗಳಲ್ಲಿ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯುದ್ಧ ವಿರಾಮ ನೀಡಲಾಗುವುದು ಎಂದು

50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿಗೆ, 4 ದಿನ ಕದನ ವಿರಾಮ! Read More »

ಸಿಲಿಂಡರ್‌ ಸ್ಫೋಟಕ್ಕೆ ಮನೆಯೇ ಛಿದ್ರ; ಒಂದೇ ಕುಟುಂಬದ 7 ಮಂದಿ ಗಂಭೀರ

ಮನೆಯೊಳಗಡೆ ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ ಏಳು ಮಂದಿ ಗಾಯಗೊಂಡ ಘಟನೆ ಬೆಂಗಳೂರಿನ ಅಂಜನಾಪುರ ಸಮೀಪದ ವೀವರ್ಸ್ ಕಾಲೋನಿಯ ಮಾರುತಿ ಲೇಔಟ್‌ನಲ್ಲಿ ನಡೆದಿದೆ. ಮಾರ್ಟಿನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಐದು ಮಂದಿ ಬಾಡಿಗೆ ಪಡೆದು ವಾಸವಾಗಿದ್ದರು. ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್ (32), ನಾಜಿಯಾ (22) ಹಾಗೂ ಇರ್ಫಾನ್ (21), ಗುಲಾಬ್ (18), ಶಹಜಾದ್ (9) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬುಧವಾರ ಮುಂಜಾನೆ 5:30ರ ಸುಮಾರಿಗೆ ಅಡುಗೆ ಮನೆಯ ಲೈಟ್‌

ಸಿಲಿಂಡರ್‌ ಸ್ಫೋಟಕ್ಕೆ ಮನೆಯೇ ಛಿದ್ರ; ಒಂದೇ ಕುಟುಂಬದ 7 ಮಂದಿ ಗಂಭೀರ Read More »

ಮನೆ ಬಾಗಿಲಿಗೆ ಬರುತ್ತೆ ಮತ್ಸ್ಯ ವಾಹಿನಿ; ಬೆಳಗ್ಗೆ ತಾಜಾ ಮೀನು, ಸಂಜೆ ಮೀನು ಖಾದ್ಯ!

ಬೆಂಗಳೂರು: ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅವರನ್ನು ಆರ್ಥಿಕವಾಗಿ ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ. ಮಂಗಳವಾರ (ನ. 22) ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆ ದಿನದಂದು ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳ ಸೇವೆಗೆ ಚಾಲನೆ ದೊರೆತಿದೆ. ಈ ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಮೂಲಕ ತಾಜಾ ಮೀನುಗಳು ಇನ್ನು ಬೆಂಗಳೂರಿನ ಮನೆ ಮನೆ ತಲುಪಲಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ರೂಪಿಸಿದೆ. ಇದರ ಹಿಂದೆ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕೊಡಿಸುವ ಆಶಯವನ್ನು

ಮನೆ ಬಾಗಿಲಿಗೆ ಬರುತ್ತೆ ಮತ್ಸ್ಯ ವಾಹಿನಿ; ಬೆಳಗ್ಗೆ ತಾಜಾ ಮೀನು, ಸಂಜೆ ಮೀನು ಖಾದ್ಯ! Read More »

ಆಟವಾಡುತ್ತಿದ್ದಾಗ ಕಳಚಿಬಿದ್ದ ಗೇಟ್‌: 3 ವರ್ಷದ ಮಗು ಸಾವು

ಗೆಸ್ಟ್‌ ಹೌಸ್‌ ಒಂದರ ಗೇಟ್‌ ಕಳಚಿಬಿದ್ದು ಆಲ್ಲೇ ಆಟವಾಡುತ್ತಿದ್ದ ಮಗು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ಉಡುಪಿ ಬಳಿ ನಡೆದಿದೆ. ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯಲ್ಲಿ ಘಟನೆ ನಡೆದಿದ್ದು, ಸುಧೀರ್ ಮೊಗವೀರ ಅವರ ಪುತ್ರ ಸುಶಾಂತ್ (3) ಮೃತಪಟ್ಟ ಮಗು. ಪುಟ್ಟ ಮಗು ಸುಶಾಂತ್‌ ಪ್ರತಿನಿತ್ಯವೂ ಮನೆ ಪಕ್ಕದ ಗೆಸ್ಟ್ ಹೌಸ್ ಬಳಿ ಆಟವಾಡುತ್ತಿದ್ದ. ಮಂಗಳವಾರ ಅಚಾನಕ್‌ ಆಗಿ ಗೆಸ್ಟ್‌ ಹೌಸ್‌ನ ಗೇಟ್‌ ಕಳಚಿ ಬಿದ್ದಿದ್ದು, ಆಟವಾಡುತ್ತಿದ್ದ ಮಗುವಿನ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು

ಆಟವಾಡುತ್ತಿದ್ದಾಗ ಕಳಚಿಬಿದ್ದ ಗೇಟ್‌: 3 ವರ್ಷದ ಮಗು ಸಾವು Read More »

ಸೇತುವೆಯಿಂದ ನೀರಿಗೆ ಹಾರಿ ಆತ್ಮಹತ್ಯೆ ! | ದೇಹಕ್ಕಾಗಿ ಶೋಧ ಕಾರ್ಯ

ಮಂಗಳೂರು: ವ್ಯಕ್ತಿಯೊಬ್ಬರು ಅದ್ದೂರು ಸೇತುವೆಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೂಲತಃ ಆಕಾಶಭವನದ ನಿವಾಸಿ ಪ್ರಶಾಂತ್ (41) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಸ್ನೇಹಿತ ದೇವಿಪ್ರಸಾದ್ ಜೊತೆಗೆ ಎರಡು ದಿನಗಳ ಕಾಲ ನಗರದ ವಿವಿಧ ದೇವಸ್ಥಾನಕ್ಕೆ ತೆರಳಿ ಇಂದು ಗುರುಪುರದ ಸೇತುವೆ ಬಳಿ ಬಂದಿದ್ದರು. ಈ ನಡುವೆ ಪ್ರಶಾಂತ್ ಸೇತುವೆಯಿಂದ ನದಿಗೆ ಹಾರಿ ನೀರಿನಲ್ಲಿ ಮುಳುಗುತ್ತಿರುವುದನ್ನು ದೇವಿಪ್ರಸಾದ್ ನೋಡಿದ್ದು, ಕೂಡಲೇ ಬಂಟ್ವಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪ್ರಶಾಂತ್

ಸೇತುವೆಯಿಂದ ನೀರಿಗೆ ಹಾರಿ ಆತ್ಮಹತ್ಯೆ ! | ದೇಹಕ್ಕಾಗಿ ಶೋಧ ಕಾರ್ಯ Read More »

ಅಕ್ರಮ ಗೋಸಾಗಾಟ : ಇಬ್ಬರ ಬಂಧನ

ಮೂಡುಬಿದಿರೆ: ತಾಲೂಕಿನ ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ನಸುಕಿನ ಜಾವ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಎರಡು ಹಸು ಹಾಗೂ ಎರಡು ಕರುಗಳನ್ನು ರಕ್ಷಿಸಿದ್ದಾರೆ. ವಾಹನ ಚಾಲಕ ವೇಣೂರಿನ ನಡ್ತಿಕಲ್ಲು ನಿವಾಸಿ ಹೈದರ್‌ ಹಾಗೂ ಪಣಪಿಲದ ಶೈಲೇಶ್ ಮಡಿವಾಳ ಬಂಧಿತ ವ್ಯಕ್ತಿಗಳು. ಗಂಟಾಲ್ಕಟ್ಟೆಯ ಫಾರೂಕ್, ನಿಸಾರ್ ಹಾಗೂ ಪಣಪಿಲದ ಹೆರಾಲ್ಡ್ ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಕುಮಾರ್ ನೇತೃತ್ವದ ತಂಡ

ಅಕ್ರಮ ಗೋಸಾಗಾಟ : ಇಬ್ಬರ ಬಂಧನ Read More »

ನೇಣು ಬಿಗಿದುಕೊಂಡು ಆತ್ಮಹತ್ಯೆ !!

ಉಳ್ಳಾಲ: ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಡಿಪು ಬಳಿಯ ಕಾರ್ ಗ್ಯಾರೇಜ್‌ನಲ್ಲಿ ನಡೆದಿದೆ. ಕಿಶೋರ್ (25) ಆತ್ಮಹತ್ಯೆ ಮಾಡಿಕೊಂಡವರು. ಮುಡಿಪುವಿನಲ್ಲಿ ಕಾರು ಗ್ಯಾರೇಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿಶೋರ್‌ ಕಂಕನಾಡಿಯ ಕಾರ್ ಶೋ ರೂಂನಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ನ.20 ರಂದು ಕೆಲಸಕ್ಕೆ ಹೋಗಿದ್ದು ತಡವಾದರೂ ಮನೆಗೆ ಬಂದಿರಲಿಲ್ಲ. ಮನೆಯವರು, ಸಂಬಂಧಿಕರ ಹುಡುಕಾಡಿದರೂ ಕಿಶೋರ್ ಪತ್ತೆಯಾಗಿರಲಿಲ್ಲ. ಕೊನೆಗೆ ಕಿಶೋರ್‌ ಪ್ರತಿದಿನ ಕೆಲಸ ಬಿಟ್ಟು ಕೆಲ ಹೊತ್ತು ಕುಳಿತುಕೊಳ್ಳುತ್ತಿದ್ದ ಮುಡಿಪುವಿನ ಗ್ಯಾರೇಜ್‌ ನಲ್ಲಿ ಹುಡುಕಾಟ

ನೇಣು ಬಿಗಿದುಕೊಂಡು ಆತ್ಮಹತ್ಯೆ !! Read More »

error: Content is protected !!
Scroll to Top