‘ಕಾಂತಾರ 2’ ಮುಹೂರ್ತ ಫಿಕ್ಸ್!

ಪಂಜುರ್ಲಿ – ಗುಳಿಗ ದೈವಗಳ ಕಥಾ ಹಂದರವಿದ್ದ ಕಾಂತಾರ ಸಿನಿಮಾ ಭಾರತ ಸಿನಿ ರಂಗದಲ್ಲಿ ಹೊಸ ಭಾಷ್ಯ ಬರೆದಿತ್ತು. ಇದೀಗ ಕಾಂತಾರ 2 ಸಿನಿಮಾಕ್ಕೆ ವೇದಿಕೆ ಸಿದ್ಧಗೊಂಡಿದೆ. ಹೌದು, ನವಂಬರ್ 27ಕ್ಕೆ ಕುಂದಾಪುರದ ಕುಂಭಾಶಿ ದೇವಸ್ಥಾನದಲ್ಲಿ ಕಾಂತಾರ 2 ಸಿನಿಮಾಕ್ಕೆ ಮುಹೂರ್ತ ನೆರವೇರಲಿದೆ. ಕಾಂತಾರ ಸಿನಿಮಾಕ್ಕೂ ಇದೇ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿತ್ತು. ಈ ಚಿತ್ರದ ಕಥೆ 14ನೇ ಶತಮಾನದಿಂದ ಆರಂಭವಾಗಲಿದೆಯಂತೆ. ಮೊದಲ ಚಿತ್ರದಂತೆ ಈ ಚಿತ್ರದ ಮುಹೂರ್ತವನ್ನೂ ಸರಳವಾಗಿ ಮಾಡಲು ನಿರ್ಮಾಣ ಸಂಸ್ಥೆ ಯೋಚಿಸಿದೆ. ಈ […]

‘ಕಾಂತಾರ 2’ ಮುಹೂರ್ತ ಫಿಕ್ಸ್! Read More »

350 ರೂ.ಗಾಗಿ ಅಪ್ರಾಪ್ತನಿಂದ ಯುವಕನ ಹತ್ಯೆ!! | ಕೊಂದು ಕುಣಿದು ಕುಪ್ಪಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!!

ಕೇವಲ 350 ರೂಪಾಯಿಗಾಗಿ ಅಪ್ರಾಪ್ತ ಬಾಲಕನೋರ್ವ ಯುವಕನನ್ನು 60ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆಗೈದ ಭೀಭತ್ಸ ಘಟನೆ ಈಶಾನ್ಯ ದೆಹಲಿಯ ವೆಲ್ ಕಮ್ ರಸ್ತೆಯಲ್ಲಿ ನಡೆದಿದೆ. ಹತ್ಯೆಯ ಬಳಿಕ ಶವದ ಬಳಿ ಡ್ಯಾನ್ಸ್ ಮಾಡುತ್ತಿರುವ ಬಾಲಕನ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಇರಿತಕ್ಕೊಳಗಾದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಯುವಕನ ಹತ್ಯೆಗೆ ಮೊದಲು ಬಾಲಕ ಹಣಕ್ಕಾಗಿ ಪೀಡಿಸಿದ್ದಾನೆ. ಹಣ ಕೊಡಲು ನಿರಾಕರಿಸಿದಾಗ, ಯುವಕನ ಕತ್ತು ಹಿಸುಕಿದ್ದಾನೆ.

350 ರೂ.ಗಾಗಿ ಅಪ್ರಾಪ್ತನಿಂದ ಯುವಕನ ಹತ್ಯೆ!! | ಕೊಂದು ಕುಣಿದು ಕುಪ್ಪಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!! Read More »

ದೇಶ ಸೇವೆಗಾಗಿ ಪ್ರಾಣತೆತ್ತ MRPL ನಿವೃತ್ತ ಎಂ.ಡಿ.ಯ ಸುಪುತ್ರ!

ಮಂಗಳೂರು: ಜಮ್ಮು – ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಸೇನೆಯ ಇಬ್ಬರು ಕ್ಯಾಪ್ಟನ್‌ಗಳು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮೇಜರ್‌ ಮತ್ತು ಯೋಧ ಗಾಯಗೊಂಡಿದ್ದು, ಅವರನ್ನು ಉಧಂಪುರದ ಕಮಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಓರ್ವರಾದ ಕ್ಯಾ. ಎಂ.ವಿ. ಪ್ರಾಂಜಲ್ (29) ಅವರು ಎಂ.ಆರ್.ಪಿ.ಎಲ್.ನ ನಿವೃತ್ತ ಎಂ.ಡಿ. ಎಂ. ವೆಂಕಟೇಶ್ ಅವರ ಏಕೈಕ ಪುತ್ರ. ಪ್ರಾಂಜಲ್‌ ಎಂ.ವಿ. ಅವರು ಎಸೆಸೆಲ್ಸಿವರೆಗೆ ಎಂಆರ್‌ಪಿಎಲ್‌ ಸಮೀಪವೇ ಇರುವ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ನ್ಯಾಶನಲ್‌ ಡಿಫೆನ್ಸ್‌

ದೇಶ ಸೇವೆಗಾಗಿ ಪ್ರಾಣತೆತ್ತ MRPL ನಿವೃತ್ತ ಎಂ.ಡಿ.ಯ ಸುಪುತ್ರ! Read More »

ಡಿ. 3: ವಿದ್ಯಾಮಾತಾ ಅಕಾಡೆಮಿಯಿಂದ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆ | ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಿಲ್ಲಿದೆ ಭರ್ಜರಿ ಬಹುಮಾನದ ಮೊತ್ತ!

ಪುತ್ತೂರು: ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯ ಸಂಯೋಜನೆಯಲ್ಲಿ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜಿಸುವ ದೃಷ್ಟಿಯಿಂದ ಮಾದರಿ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆ ಡಿ. 3ರಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ (ಸ್ವಾಯತ್ತ) ನಡೆಯಲಿದೆ. ಪುತ್ತೂರು ನಗರ ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆ ನಡೆಯಲಿದೆ. ಕೆ.ಎ.ಎಸ್, ಎಫ್.ಡಿ.ಎ, ಎಸ್.ಡಿ.ಎ,  ಪಿ.ಎಸ್.ಐ, ಪಿ.ಸಿ, ಪಿ.ಡಿ.ಒ, ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯಲ್ಲಿರುವವರಿಗೆ ಪ್ರೇರಣೆ ನೀಡಲು ರಾಜ್ಯದಲ್ಲೇ ಪ್ರಥಮ ಬಾರಿಗೆ ಸ್ಪರ್ಧೆಯನ್ನು

ಡಿ. 3: ವಿದ್ಯಾಮಾತಾ ಅಕಾಡೆಮಿಯಿಂದ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆ | ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಿಲ್ಲಿದೆ ಭರ್ಜರಿ ಬಹುಮಾನದ ಮೊತ್ತ! Read More »

ಲಾಡ್ಜ್ ರೂಮ್ ನಲ್ಲಿ ಬೆಂಕಿ, ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ!!

ಮಂಗಳೂರು: ಇಲ್ಲಿನ ಲಾಡ್ಜ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವ್ಯಕ್ತಿಯೋರ್ವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಯಶ್ರಾಜ್ ಎಸ್.‌ ಸುವರ್ಣ (43) ಎಂದು ಗುರುತಿಸಲಾಗಿದೆ. ಯಶ್ರಾಜ್ ಅವರು ಲಾಡ್ಜ್ ರೂಂನಲ್ಲಿ ಮಲಗಿದ್ದು, ಬಾಗಿಲು ತೆರೆದು ಒಳಪ್ರವೇಶಿಸಿದಾಗ ರೂಂ ಪೂರ್ತಿ ಬೆಂಕಿ ಆವರಿಸಿಕೊಂಡಿತ್ತು ಎನ್ನಲಾಗಿದೆ. ಬೆಂದೂರ್ ವೆಲ್ ಸಮೀಪದ ಲಾಡ್ಜಿನಲ್ಲಿ ರಾತ್ರಿ 12.35ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ. ಪಾಂಡೇಶ್ವರ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ಶಮನಗೊಳಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾಡ್ಜ್ ರೂಮ್ ನಲ್ಲಿ ಬೆಂಕಿ, ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ!! Read More »

ಬೈಕ್ ಅಪಘಾತ: 20 ಫೀಟ್ ದೂರ ಎಸೆಯಲ್ಪಟ್ಟ ಸವಾರ!!

ವಿಟ್ಲ: ಬೈಕ್ ಅಪಘಾತವಾಗಿ ಸವಾರ ಸುಮಾರು 20 ಫೀಟ್ ದೂರ ಎಸೆಯಲ್ಪಟ್ಟು, ಗಂಭೀರ ಗಾಯಗೊಂಡ ಘಟನೆ ವಿಟ್ಲದ ವೀರಕಂಭ ಗ್ರಾಮದ ಕೆಲಿಂಜದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಬೈಕ್ ಸವಾರ ಕುಂಡಡ್ಕ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಕಲ್ಲಡ್ಕದಿಂದ ವಿಟ್ಲ ಕಡೆಗೆ ಬರುತ್ತಿದ್ದ ಬೈಕ್, ಕೆಲಿಂಜ ಬಸ್ ಸ್ಟ್ಯಾಂಡಿಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸವಾರ ಎಸೆಯಲ್ಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡ ಸವಾರನನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ರವಾನಿಸಿದ್ದಾರೆ

ಬೈಕ್ ಅಪಘಾತ: 20 ಫೀಟ್ ದೂರ ಎಸೆಯಲ್ಪಟ್ಟ ಸವಾರ!! Read More »

ನಳಿನ್ ಕುಮಾರ್ ಕಟೀಲ್ ಗೆಲ್ಲಿಸಿ ಕೊಡಿರೆಂದ ಬಿಜೆಪಿ ರಾಜ್ಯಾಧ್ಯಕ್ಷ!

ಮಂಗಳೂರಿಗೆ ಆಗಮಿಸಿದ್ದ  ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಪರ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ನಳಿನ್ ಕುಮಾರ್ ಕಟೀಲ್ ಅವರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥೀ ಎನ್ನುವುದನ್ನು ಸಾರಿದಂತಾಗಿದೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮತ್ತೆ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಮತ್ತೊಮ್ಮೆ ನಮ್ಮ ಪಕ್ಷದ ಅಭ್ಯರ್ಥಿಯಾದ

ನಳಿನ್ ಕುಮಾರ್ ಕಟೀಲ್ ಗೆಲ್ಲಿಸಿ ಕೊಡಿರೆಂದ ಬಿಜೆಪಿ ರಾಜ್ಯಾಧ್ಯಕ್ಷ! Read More »

ಶ್ರೀ ಸಿದ್ಧಿವಿನಾಯಕ ವೃತ ಪೂಜೆಯ ಆಮಂತ್ರಣ ಬಿಡುಗಡೆ

ಪುತ್ತೂರು: ಪುತ್ತಿಲ ಪರಿವಾರ ಕುರಿಯ-ಕೆಮ್ಮಿಂಜೆ ಗ್ರಾಮಾಂತರ ಸಮಿತಿ ವತಿಯಿಂದ ನೈತಾಡಿ ಕಲ್ಲುಗುಡ್ಡೆ ಮೈದಾನದಲ್ಲಿ ನಡೆಯಲಿರುವ ಶ್ರೀ ಸಿದ್ಧಿವಿನಾಯಕ ವೃತ ಪೂಜೆಯ ಆಮಂತ್ರಣ ಬಿಡುಗಡೆ ಬುಧವಾರ ನಡೆಯಿತು. ಡಿ. 12ರಂದು ಪೂಜೆ ನಡೆಯಲಿದ್ದು, ಉದಯಗಿರಿ ಶ್ರೀ ವಿಷ್ಣುಮೂರ್ತಿ ಸನ್ನಿಧಿಯಲ್ಲಿ ಆಮಂತ್ರಣ ಬಿಡುಗಡೆ ಮಾಡಲಾಯಿತು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಮಂತ್ರಣ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ರಾಜೀವ ಸುವರ್ಣ, ಅರುಣ್ ರೈ ಡಿಂಬ್ರಿ, ರಾಜಾರಾಮ್ ನೆಲ್ಲಿತಾಯ, ಪೂಜಾ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ರಾವ್,

ಶ್ರೀ ಸಿದ್ಧಿವಿನಾಯಕ ವೃತ ಪೂಜೆಯ ಆಮಂತ್ರಣ ಬಿಡುಗಡೆ Read More »

ರೌಡಿ ಶೀಟರ್‌ಗೆ ನೀಡಿದ್ದ ‘ರಾಜ್ಯೋತ್ಸವ ಪ್ರಶಸ್ತಿ’ ವಾಪಸ್!!

ರೌಡಿ ಶೀಟರ್​ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಸ್ತಿಯನ್ನು ವಾಪಸ್ಸು ಪಡೆಯಲು ಮೈಸೂರು ಜಿಲ್ಲಾಡಳಿತ‌ ಮುಂದಾಗಿದೆ. ಮೈಸೂರಿನ ಲಷ್ಕರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಅಶೋಕ್ ಅವರು ಕಾಂಗ್ರೆಸ್ ಮುಖಂಡ ಎಂಬ ಕಾರಣಕ್ಕೆ ನವೆಂಬರ್ 1ರಂದು ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ನೀಡಿರುವ ಪ್ರಶಸ್ತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಹೇಳಿದ್ದಾರೆ. ಮೈಸೂರಿನ ಲಷ್ಕರ್ ಪೊಲೀಸ್‌ ಠಾಣೆಯಲ್ಲಿ ಕಾಂಗ್ರೆಸ್‌ ಮುಖಂಡ ಡಾ. ಕೆ.ಎಂ.

ರೌಡಿ ಶೀಟರ್‌ಗೆ ನೀಡಿದ್ದ ‘ರಾಜ್ಯೋತ್ಸವ ಪ್ರಶಸ್ತಿ’ ವಾಪಸ್!! Read More »

ಟ್ರಕ್ಕಿಗೆ ಢಿಕ್ಕಿ ಹೊಡೆದ ವಿದ್ಯಾರ್ಥಿಗಳಿದ್ದ ಆಟೋ | ಅಪಘಾತದ ರಭಸಕ್ಕೆ ಗಾಳಿಯಲ್ಲಿ ಎಗರಿಬಿದ್ದ ಶಾಲಾ ಮಕ್ಕಳು: ಭೀಕರ ವೀಡಿಯೋ!!

ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಟ್ರಕ್ಕೊಂದು ಢಿಕ್ಕಿ ಹೊಡೆದ ಪರಿಣಾಮ 8 ಮಕ್ಕಳು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬುಧವಾರ (ನ. 22ರಂದು) ನಡೆದಿದೆ. ಮುಂಜಾನೆ 7:35ರ ಸಮಯಕ್ಕೆ ಮಕ್ಕಳು ಆಟೋದಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ವಿಶಾಖಪಟ್ಟಣಂನ ಸಂಗಮ್ ಶರತ್ ಥಿಯೇಟರಿನ ಅಂಡರ್‌ ಪಾಸ್‌ ರಸ್ತೆಯಿಂದ ನುಗ್ಗಿದ ಆಟೋ ಹೆದ್ದಾರಿಯಲ್ಲಿ ಬರುತ್ತಿದ್ದ ಟ್ರಕ್ಕಿಗೆ ಢಿಕ್ಕಿ ಹೊಡೆದಿದೆ. ರಸ್ತೆ ದಾಟಲು ವೇಗವಾಗಿ ಹೋಗುತ್ತಿದ್ದ ರಿಕ್ಷಾ, ಟ್ರಕ್ಕಿಗೆ ಢಿಕ್ಕಿ ಹೊಡೆದಿದೆ. ಕ್ಷಣ ಮಾತ್ರದಲ್ಲಿ ಆಟೋ ಪಲ್ಟಿಯಾಗಿದ್ದು,

ಟ್ರಕ್ಕಿಗೆ ಢಿಕ್ಕಿ ಹೊಡೆದ ವಿದ್ಯಾರ್ಥಿಗಳಿದ್ದ ಆಟೋ | ಅಪಘಾತದ ರಭಸಕ್ಕೆ ಗಾಳಿಯಲ್ಲಿ ಎಗರಿಬಿದ್ದ ಶಾಲಾ ಮಕ್ಕಳು: ಭೀಕರ ವೀಡಿಯೋ!! Read More »

error: Content is protected !!
Scroll to Top