ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು: ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

ಕಡಬ: ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇಲ್ಲಿನ ವಾರ್ಷಿಕೋತ್ಸವ ಡಿ. 13 ರಂದು ನಡೆಯಲಿದ್ದು, ಆ ಹಿನ್ನೆಲೆ ಇಂದು ಹಿರಿಯ ವಿದ್ಯಾರ್ಥಿ ಸಂಘದ ಕ್ರೀಡಾಕೂಟ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಚಂದ್ರ ಬರೆಪ್ಪಾಡಿ, ಕಾರ್ಯದರ್ಶಿ ನಾಗೇಶ್ ಕೆಡೆಂಜಿ, ಮುಖ್ಯ ಗುರು ಮಿನಿ ವರ್ಗೀಸ್, ಎಸ್.ಡಿ.ಎಂ.ಸಿ. ಅಧ್ಯಕ್ಷ ದೇವರಾಜ್ ನೂಜಿ, ಕೋಶಾಧಿಕಾರಿ ಯಶೋದರ ಕೆಡೆಂಜಿಕಟ್ಟ , ಯೋಗೀಶ್ ಬರೆಪ್ಪಾಡಿ ,ಉಮೇಶ್ ಕೆರೆನಾರು,ಚಿದಾನಂದ ಕೆರೆನಾರು,ನಿವೃತ್ತ ಮುಖ್ಯ ಗುರುಗಳಾದ ಕುಶಾಲಪ್ಪ ಗೌಡ ಬರಮೇಲು ಸೇರಿದಂತೆ […]

ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು: ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ Read More »

ಮಾನಹಾನಿಕರ ಪೋಸ್ಟ್: ಪೊಲೀಸರಿಗೆ ದೂರು ನೀಡಿದ ಬಿಜೆಪಿ ನಾಯಕಿ ಆಶಾ ತಿಮ್ಮಪ್ಪ

ಪುತ್ತೂರು: ಪ್ರಧಾನಿ ಮೋದಿ ಅವರು ಉಡುಪಿಗೆ ಬಂದು ಹೋದ ವಿಚಾರದಲ್ಲಿ ವಿರೋಧಿಗಳ ಅಪಪ್ರಚಾರ ಹೆಚ್ಚಾಗಿದ್ದು, ಇದು ಸಾರ್ವಜನಿಕ ವಲಯದಲ್ಲೂ ‌ಸಾಕಷ್ಟು ಪ್ರಶ್ನೆಗಳನ್ನು ಸೃಷ್ಟಿಸಿದೆ. ಕಳೆದ ಬಾರಿ ಬಿಜೆಪಿಯಿಂದ ವಿಧಾನಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಶಾ ತಿಮ್ಮಪ್ಪ ಅವರಿಗೆ ಸಂಬಂಧಿಸಿದ ಹಾಗೆಯೂ ‌ಮಾನಹಾನಿಕರ ಪೋಸ್ಟ್ ಒಂದು ಹರಿದಾಡುತ್ತಿದ್ದು, ಈ ಬಗ್ಗೆ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. “ಪ್ರಧಾನಿ ಮೋದಿ ಅವರು ಉಡುಪಿಗೆ ಬಂದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ನನಗೂ ಅವರನ್ನು ನೋಡುವ ಭಾಗ್ಯ ಸಿಗಬಹುದು ಎಂದುಕೊಂಡಿದ್ದೆ. ಆದರೆ ಈಗ

ಮಾನಹಾನಿಕರ ಪೋಸ್ಟ್: ಪೊಲೀಸರಿಗೆ ದೂರು ನೀಡಿದ ಬಿಜೆಪಿ ನಾಯಕಿ ಆಶಾ ತಿಮ್ಮಪ್ಪ Read More »

ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ

ಸರ್ಕಾರದ ಮೇಲೆ ದಾಳಿ ಮಾಡಲು ವಿಪಕ್ಷ ಸರ್ವಸನ್ನದ್ಧ ಬೆಳಗಾವಿ: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭಗೊಳ್ಳಲಿದೆ. ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಪ್ರತಿವರ್ಷ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತದೆ. ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷದ ಕೈಯಲ್ಲಿ ಸಾಕಷ್ಟು ವಿಷಯಗಳು ಇದ್ದು, ಈ ಅಧಿವೇಶನವೂ ಕಾವೇರುವ ಎಲ್ಲ ಸಾಧ್ಯತೆ ಇದೆ. ಬೆಳೆಗಳಿಗೆ ಬೆಂಬಲ ಬೆಲೆ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಯಾಗಿದ್ದು, ಈ ಸಲ ಅಧಿವೇಶನಕ್ಕೂ ಮೊದಲೇ ಇದು ಬಹಳಷ್ಟು

ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ Read More »

ಬೊಳುವಾರು ಆಂಜನೇಯ ಯಕ್ಷಗಾನ ಸಂಘದ 57 ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಡಿ. 25ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ಜರಗಲಿರುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ *ಶ್ರೀ ಆಂಜನೇಯ -57 ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಢೆ ಬಿಡುಗಡೆಗೊಳಿಸಿ ಸಮಾರಂಭಕ್ಕೆ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿದಿಯಲ್ಲಿ ಕಾರ್ಯಕ್ರಮದ ಯಶಸ್ವಿಗೆ ಶ್ರೀ ಆಂಜನೇಯ ಉಭಯ ಸಂಘಗಳ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಜರಗಿದ ಪಂಚವಟಿ ತಾಳಮದ್ದಳೆಯಲ್ಲಿ ಭಾಗವತರಾಗಿ ಯಲ್. ಯನ್. ಭಟ್

ಬೊಳುವಾರು ಆಂಜನೇಯ ಯಕ್ಷಗಾನ ಸಂಘದ 57 ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ನಿರ್ಮಲಾ ಸೀತಾರಾಮನ್‌ಗೆ ಏಕವಚನ ಪ್ರಯೋಗ : ಸಿದ್ದರಾಮಯ್ಯ ವಿರುದ್ಧ ಅಶೋಕ್‌ ಕಿಡಿ

ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿಯನ್ನು ಹೀಗೆ ಕರೆಯುತ್ತೀರಾ ಎಂದು ಪ್ರಶ್ನೆ ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸಿದ್ದರಾಮಯ್ಯ ಏಕವಚನದಲ್ಲಿ ಸಂಬೋಧಿಸಿರುವುದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಎಕ್ಸ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಖಂಡನೆ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದ ಗೌರವಾನ್ವಿತ ಹಣಕಾಸು ಸಚಿವೆ ಅವರನ್ನು ಹೀಗೆ ಏಕವಚನದಲ್ಲಿ, ಅಗೌರವದಿಂದ ಸಂಬೋಧನೆ ಮಾಡುವುದು ಯಾವ ಸಂಸ್ಕೃತಿ ಸ್ವಾಮಿ? ಇದು ಮನುವಾದನಾ? ಅಥವಾ ಸಿದ್ದರಾಮಯ್ಯವಾದನಾ? ಅಥವಾ ರಾಹುಲ್

ನಿರ್ಮಲಾ ಸೀತಾರಾಮನ್‌ಗೆ ಏಕವಚನ ಪ್ರಯೋಗ : ಸಿದ್ದರಾಮಯ್ಯ ವಿರುದ್ಧ ಅಶೋಕ್‌ ಕಿಡಿ Read More »

ಮತಾಂತರವಾಗದಿದ್ದರೆ 32 ತುಂಡು ಮಾಡುವ ಬೆದರಿಕೆಯೊಡ್ಡಿದ ಲಿವಿಂಗ್‌ ಪಾರ್ಟ್ನರ್‌ : ಯುವತಿಯಿಂದ ದೂರು

ಲವ್‌ ಜಿಹಾದ್‌ ಮಾಡಿದ್ದಾನೆಂದು ಅಳಲು ತೋಡಿಕೊಂಡ ಯುವತಿ ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ವರದಿಯಾಗಿದ್ದು ತಾನು ಪ್ರೀತಿಸಿದ್ದ ಹಿಂದೂ ಯುವತಿ ಮುಸ್ಲಿಂ ಮತಕ್ಕೆ ಮತಾಂತರವಾಗದಿದ್ರೆ ಆಕೆಯನ್ನು ಕೊಂದು 32 ತಂಡು ಮಾಡುತ್ತೇನೆ ಎಂದು ಮುಸ್ಲಿಂ ಯುವಕನೋರ್ವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಸಂತ್ರಸ್ತ ಹಿಂದೂ ಯುವತಿ ಮಾಧ್ಯಮಗಳೊಂದಿಗೆ ತನ್ನ ಅಳಲು ತೋಡಿಕೊಂಡಿದ್ದು, ಮತಾಂತರಗೊಂಡರಷ್ಟೇ ಮದುವೆಯಾಗ್ತೀನಿ, ಇಲ್ಲವಾದ್ರೆ ದೆಹಲಿ ಮಾದರಿಯಲ್ಲಿ ಕೊಂದು 32 ಪೀಸ್​ ಮಾಡಿ ಬಳಿಕ ಎರಡನೇ ಮದುವೆಯಾಗ್ತೀನಿ

ಮತಾಂತರವಾಗದಿದ್ದರೆ 32 ತುಂಡು ಮಾಡುವ ಬೆದರಿಕೆಯೊಡ್ಡಿದ ಲಿವಿಂಗ್‌ ಪಾರ್ಟ್ನರ್‌ : ಯುವತಿಯಿಂದ ದೂರು Read More »

ಡ್ರಗ್ಸ್‌ ಸಾಗಿಸಿದ ಅಪರಾಧಿಗಳಿಗೆ 12ರಿಂದ 14 ವರ್ಷ ಜೈಲು ಶಿಕ್ಷೆ

ವಿದೇಶಿ ಪ್ರಜೆ ಸೇರಿ ಐವರಿಗೆ ಕಠಿಣ ಕಾರಾಗೃಹ ವಾಸ ವಿಧಿಸಿದ ನ್ಯಾಯಾಲಯ ಮಂಗಳೂರು : ಡ್ರಗ್ಸ್‌ ಸಾಗಾಟ ಐವರು ಆರೋಪಿಗಳಿಗೆ 12ರಿಂದ 14 ವರ್ಚಗಳ ಕಠಿಣ ಜೈಲು ಶೀಕ್ಷೆ ವಿಧಿಸಿ ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯಾಲಯ ಮಹತ್ವದ ತೀರ್ಪ ನೀಡಿದೆ. ಅಪರಾಧಿಗಳಲ್ಲಿ ವಿದೇಶಿ ಪ್ರಜೆಯೂ ಸೇರಿದ್ದಾನೆ. ಬೆಂಗಳೂರಿನಿಂದ ಮಂಗಳೂರಿಗೆ ಎಂಡಿಎಂಎ ಮಾದಕವಸ್ತು ಸಾಗಿಸುವಾಗ ಈ ಅಪರಾಧಿಗಳು ಸಿಕ್ಕಿಬಿದ್ದಿದ್ದರು. ಅಪರಾಧಿಗಳಾದ ಬೆಂಗಳೂರು ವರ್ತೂರಿನ ಗುಂಟೂರ್ ಪಾಳ್ಯದ ಲುವಾಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ, ಉಪ್ಪಳದ ಮುಹಮ್ಮದ್ ರಮೀಜ್

ಡ್ರಗ್ಸ್‌ ಸಾಗಿಸಿದ ಅಪರಾಧಿಗಳಿಗೆ 12ರಿಂದ 14 ವರ್ಷ ಜೈಲು ಶಿಕ್ಷೆ Read More »

ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ

ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗಳ ಅಮೋಘ ಗೆಲುವು ವಿಶಾಖಪಟ್ಟಣಂ: ಯಶಸ್ವಿ ಜೈಸ್ವಾಲ್‌ ಶತಕ ಹಾಗೂ ರೋಹಿತ್‌ ಶರ್ಮ ಹಾಗೂ ವಿರಾಟ್‌ ಕೊಹ್ಲಿ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ. ಆ ಮೂಲಕ ಏಕದಿನ ಸರಣಿಯನ್ನು 2-1ಕೈವಶ ಮಾಡಿಕೊಂಡು ಟೆಸ್ಟ್‌ ಸರಣಿ ಸೋಲಿನ ಸೇಡು ತೀರಿಸಿಕೊಂಡಿದೆ. ಮೂರು ಪಂದ್ಯಗಳ ಸರಣಿ ಈಗಾಗಲೇ 1-1ರಲ್ಲಿ ಸಮಬಲಗೊಂಡಿದ್ದರಿಂದ ಟೀಂ ಇಂಡಿಯಾಕ್ಕೆ 39 ವರ್ಷಗಳ

ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ Read More »

ಗೋವಾದ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ಅವಘಡ : 23 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

ಗ್ಯಾಸ್‌ ಸಿಲಿಂಡರ್‌ ಸ್ಫೋಟಿಸಿ ಸಂಭವಿಸಿದ ಭೀಕರ ದುರಂತ ಪಣಜಿ : ಉತ್ತರ ಗೋವಾದ ಅರ್‌ಪೋರಾದಲ್ಲಿರುವ ನೈಟ್​​ ಕ್ಲಬ್‌ನಲ್ಲಿ ಶನಿವಾರ ಮಧ್ಯರಾತ್ರಿ ನಡೆದ ಭೀಕರ ಅಗ್ನಿ ದುರಂತದಲ್ಲಿ 23 ಜನ ದುರ್ಮರಣ ಹೊಂದಿದ್ದಾರೆ. ಮಧ್ಯರಾತ್ರಿ ಅಡುಗೆ ಮನೆಯಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ನೈಟ್​​ ಕ್ಲಬ್ ಹೊತ್ತಿ ಉರಿದಿದೆ. ಈ ವೇಳೆ ಹಲವರು ಸಜೀವ ದಹನವಾಗಿದ್ದರೆ, ಉಳಿದವರಿಗೆ ಗಂಭೀರ ಗಾಯಗಳಾಗಿವೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು

ಗೋವಾದ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ಅವಘಡ : 23 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ Read More »

ಕರ್ನಾಟಕ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಿಂಚಿದ ಸೋನಿಕಾ ಜನಾರ್ದನ್ ಸಂವಿಧಾನ ಪೀಠಿಕೆ ಗಾಯನ

ಮೈಸೂರು: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಅವರಪರಿನಿರ್ವಾಣ ದಿನಾಚರಣೆಯ ಉದ್ಘಾಟನ ಕಾರ್ಯಕ್ರಮದಲ್ಲಿ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ದನ್ ಸಂವಿಧಾನ ಪೀಠಿಕೆ ಗಾಯನದ ಮೂಲಕ ಅಪಾರ ಮೆಚ್ಚುಗೆ ಗಳಿಸಿದರು. ಮೈಸೂರಿನ ದಸರಾ ವಸ್ತು ಪ್ರದರ್ಶನ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಬಾಲ ಕಲಾವಿದೆ ಸೋನಿಕಾ ಜನಾರ್ದನ್ ಅವರನ್ನು ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ

ಕರ್ನಾಟಕ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಿಂಚಿದ ಸೋನಿಕಾ ಜನಾರ್ದನ್ ಸಂವಿಧಾನ ಪೀಠಿಕೆ ಗಾಯನ Read More »

error: Content is protected !!
Scroll to Top