ಶಾಲೆಗಳಿಗೆ ಬಾಂಬ್ ಬೆದರಿಕೆ: ಇ ಮೇಲ್ ಸಂದೇಶ ರವಾನೆ!! | ಪತ್ತೆಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಗರದ ಕೆಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದವರ ಮೂಲ ಪತ್ತೆಹಚ್ಚುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಗರದ ಹಲವು ಖಾಸಗಿ ಶಾಲೆಗಳಿಗೆ ಈ ರೀತಿ ಬಾಂಬ್ ಬೆದರಿಕೆ ಕರೆಗಳು ಪುನರಾವರ್ತನೆಯಾಗುತ್ತಿರುತ್ತವೆ. ಇಂತಹ ಘಟನೆಗಳು ನಡೆದರೆ ಪೋಷಕರು, ಮಕ್ಕಳು ಮತ್ತು ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಆತಂಕಗೊಳ್ಳುತ್ತಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಇಂತಹ ಹುಸಿ ಬಾಂಬ್ ಬೆದರಿಕೆಯನ್ನು ಯಾರು […]

ಶಾಲೆಗಳಿಗೆ ಬಾಂಬ್ ಬೆದರಿಕೆ: ಇ ಮೇಲ್ ಸಂದೇಶ ರವಾನೆ!! | ಪತ್ತೆಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ Read More »

ಹಾಸನ ಶಿಕ್ಷಕಿ ಕಿಡ್ನಾಪ್: ಆರೋಪಿ ನೆಲ್ಯಾಡಿಯಲ್ಲಿ ಪೊಲೀಸ್ ವಶ

ನೆಲ್ಯಾಡಿ: ಹಾಸನದಲ್ಲಿ ನಡೆದಿದ್ದ ಶಾಲಾ ಶಿಕ್ಷಕಿ ಕಿಡ್ನ್ಯಾಪ್ ಪ್ರಕರಣವನ್ನು ಪೊಲೀಸರು ಭೇಧಿಸಿದ್ದಾರೆ. ಕಡಬ ತಾಲೂಕಿನ ನೆಲ್ಯಾಡಿ ಬಳಿ ಅಪಹರಣಕಾರರನ್ನು ಪತ್ತೆ ಹಚ್ಚಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿವಾಹ ಮಾಡಿ ಕೊಡಲು ಒಪ್ಪದ ಕಾರಣಕ್ಕೆ ಹಾಸನ ನಗರದ ಹೊರ ವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲೆ ಶಿಕ್ಷಕಿಯನ್ನು ರಾಮು ಎಂಬಾತ ಅಪಹರಣ ಮಾಡಿದ್ದನು. ನೆಲ್ಯಾಡಿ ಬಳಿ ಕಿಡ್ನಾಪ್ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿದ ಹಾಸನ ಪೊಲೀಸರು ವಶಕ್ಕೆ ಪಡೆದು, ಅಪಹರಣಕ್ಕೊಳಗಾದ ಶಾಲಾ ಶಿಕ್ಷಕಿಯನ್ನು ಹಾಸನಕ್ಕೆ ಕರೆದೊಯ್ದಿದ್ದಾರೆ.ಮದುವೆಗೆ ಒಪ್ಪದ ಅತ್ತೆ

ಹಾಸನ ಶಿಕ್ಷಕಿ ಕಿಡ್ನಾಪ್: ಆರೋಪಿ ನೆಲ್ಯಾಡಿಯಲ್ಲಿ ಪೊಲೀಸ್ ವಶ Read More »

ಡಿ.3: ‘ನಾರೀ ಶಕ್ತಿ ಸಂಗಮ’ ಮಹಿಳಾ ಸಮಾವೇಶ

ಪುತ್ತೂರು: ಪುತ್ತೂರು ಜಿಲ್ಲೆ ಮಹಿಳಾ ಸಮನ್ವಯ ಹಾಗೂ ಕೇಶವ ಸ್ಮೃತಿ ಸಂವರ್ಧನ ಸಮಿತಿ ಜಂಟಿ ಆಶ್ರಯದಲ್ಲಿ ಮಹಿಳೆ ಇಂದು ಮತ್ತು ನಾಳೆ ಕುರಿತು  ‘ನಾರಿ ಶಕ್ತಿ ಸಂಗಮ’ ಡಿ.3 ಭಾನುವಾರ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಮಹಿಳಾ ಸಮನ್ವಯ ಪುತ್ತೂರು ಜಿಲ್ಲಾ ಸಂಚಾಲಕಿ ರೂಪಲೇಖ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2025ನೇ ಇಸವಿಗೆ ಆರ್‍ ಎಸ್‍ಎಸ್‍ ಗೆ 100 ವರ್ಷ ತುಂಬಲಿದ್ದು, ಈ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಹಿಳೆಯರಲ್ಲಿ ಜಾಗೃತಿ, ರಾಷ್ಟ್ರೀಯ

ಡಿ.3: ‘ನಾರೀ ಶಕ್ತಿ ಸಂಗಮ’ ಮಹಿಳಾ ಸಮಾವೇಶ Read More »

ಸುಬ್ರಹ್ಮಣ್ಯದಲ್ಲಿ ಒಕ್ಕಲಿಗ ಗೌಡ ಗ್ರಾಮ ಸಮಾವೇಶ

ಸುಬ್ರಹ್ಮಣ್ಯ: ಕಡಬ ಒಕ್ಕಲಿಗ ಗೌಡ ಸೇವಾ ಸಂಘ, ಸುಬ್ರಹ್ಮಣ್ಯ ಗ್ರಾಮ ಸಮಿತಿ ವತಿಯಿಂದ ಗ್ರಾಮ ಸಮಾವೇಶ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ನಿವೃತ್ತ ಉಪನ್ಯಾಸಕ ಅಂಬೆಕಲ್ ಮುತ್ತಯ್ಯ ಗೌಡ ಸಮಾವೇಶವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನಿವೃತ್ತ ಪ್ರಾಂಶುಪಾಲ ಅಶೋಕ್ ಕುಮಾರ್ ಮೂಲೆಮಜಲು ಒಕ್ಕಲಿಗ ಗೌಡರು ಹಿಂದಿನಿಂದ ನಡೆದುಕೊಂಡು ಬಂದ ರೀತಿ, ಹಿನ್ನೆಲೆ, ಇತಿಹಾಸ, ಆಚಾರ ವಿಚಾರಗಳು , ಸಂಸ್ಕಾರ, ಸಂಸ್ಕೃತಿಗಳ ಕುರಿತು ಮಾಹಿತಿಗಳನ್ನು ನೀಡಿದರು. ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ಡಾl ಎ.ಎ.ತಿಲಕ್ ಅಧ್ಯಕ್ಷತೆ ವಹಿಸಿದ್ದರು

ಸುಬ್ರಹ್ಮಣ್ಯದಲ್ಲಿ ಒಕ್ಕಲಿಗ ಗೌಡ ಗ್ರಾಮ ಸಮಾವೇಶ Read More »

ಜನೌಷಧಿ ಕೇಂದ್ರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ, ಸಂವಾದ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಶವಂತಪುರ ಸುಬೇದಾರ್ ಛತ್ರಂ ರಸ್ತೆಯಲ್ಲಿರುವ “ಪ್ರಧಾನಮಂತ್ರಿಗಳ ಜನೌಷಧಿ ಕೇಂದ್ರ”ಕ್ಕೆ ಭೇಟಿ ನೀಡಿ ಜನರ ಜೊತೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರ್ಖಂಡ್‍ನ ದಿಯೋಘರ್‍ನ ಏಮ್ಸ್‍ನಲ್ಲಿ 10 ಸಾವಿರನೇ ಜನೌಷಧಿ ಕೇಂದ್ರವನ್ನು ಜನತೆಗೆ ಸಮರ್ಪಿಸಿದ್ದಾರೆ. ಮಧ್ಯಮ ವರ್ಗ ಮತ್ತು ಬಡಜನರಲ್ಲಿ ಜನೌಷಧಿ ಕೇಂದ್ರಗಳ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಕೆಲವು ಔಷಧಿಗಳು ಶೇ 70ರಷ್ಟು ಕಡಿಮೆ ದರಕ್ಕೆ ಲಭಿಸುತ್ತವೆ. ಕಳೆದ 9 ವರ್ಷಗಳಲ್ಲಿ, ದೇಶಾದ್ಯಂತ

ಜನೌಷಧಿ ಕೇಂದ್ರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ, ಸಂವಾದ Read More »

ಡಿ.3: ಕಸಾಪ ಪುತ್ತೂರು ತಾಲೂಕು ನೇತೃತ್ವದಲ್ಲಿ ದಿವ್ಯಾಂಗ ಪ್ರತಿಭೆಗಳ ಸಾಹಿತ್ಯ ಸಂಭ್ರಮ | ದಿವ್ಯಂಗ ಸಾಧಕ ಪ್ರಶಸ್ತಿಗೆ ಐದು ಮಂದಿ ಆಯ್ಕೆ

ಪುತ್ತೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಪುತ್ತೂರು ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಪುತ್ತೂರು ತಾಲೂಕು ವಿವಿದೋದ್ದೇಶ, ಗ್ರಾಮೀಣ, ನಗರ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಹಕಾರದೊಂದಿಗೆ ದಿವ್ಯಾಂಗ ಪ್ರತಿಭೆಗಳ ಸಾಹಿತ್ಯ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮ ಡಿ.3ರಂದು ಪುತ್ತೂರಿನ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಶ್ವ ವಿಕಲಚೇತನ ದಿನದಂದು ವಿಕಲಚೇತನರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತಂದು ಸಮಾಜಕ್ಕೆ ಪರಿಚಯಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಿನ್ನ ಸಾಮರ್ಥ್ಯದ ಪ್ರತಿಭೆಗಳಿಗಾಗಿ ಕವಿಗೋಷ್ಠಿ,

ಡಿ.3: ಕಸಾಪ ಪುತ್ತೂರು ತಾಲೂಕು ನೇತೃತ್ವದಲ್ಲಿ ದಿವ್ಯಾಂಗ ಪ್ರತಿಭೆಗಳ ಸಾಹಿತ್ಯ ಸಂಭ್ರಮ | ದಿವ್ಯಂಗ ಸಾಧಕ ಪ್ರಶಸ್ತಿಗೆ ಐದು ಮಂದಿ ಆಯ್ಕೆ Read More »

ಶ್ರೀರಾಮನ ಕೈಂಕರ್ಯದಿಂದ ಪ್ರಾಣ ಪ್ರತಿಷ್ಠೆಗೆ ಅರ್ಥ| ಅಯೋಧ್ಯೆಯ ಮಂತ್ರಾಕ್ಷತೆ ಹಂಚಿಕೆ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಸ್ವಾಮೀಜಿ

ಪುತ್ತೂರು: ಹಿಂದೂ ಧರ್ಮದಲ್ಲಿ ಗೊಂದಲಗಳಿದ್ದು, ಸ್ವಧರ್ಮಿಯರಿಂದಲೇ ಚಿಂತೆ ಕಾಡುವಂತಾಗಿದೆ. ಈ ನಿಟ್ಟಿನಲ್ಲಿ ಧರ್ಮ- ಧಾರ್ಮಿಕ ಆಚರಣೆಯೊಂದಿಗೆ ಪ್ರತಿಯೊಬ್ಬ ಹಿಂದೂ ಬೆರೆಯಬೇಕಾದ ಅಗತ್ಯವಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ನುಡಿದರು. ಅವರು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸಭಾಮಂದಿರದಲ್ಲಿ ಅಯೋಧ್ಯೆ ರಾಮಜನ್ಮ ಭೂಮಿ ಮಂದಿರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ.22 ರಂದು ಶ್ರೀರಾಮ ಪ್ರಾಣಪ್ರತಿಷ್ಠೆ ಅಂಗವಾಗಿ ಅಯೋಧ್ಯೆಯಿಂದ ತರಲಾದ ಮಂತ್ರಾಕ್ಷತೆಯನ್ನು ವಿವಿಧ ತಾಲೂಕುಗಳಿಗೆ ಕಳುಹಿಸಿಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಹಿಂದೂ ಧರ್ಮದಲ್ಲಿ

ಶ್ರೀರಾಮನ ಕೈಂಕರ್ಯದಿಂದ ಪ್ರಾಣ ಪ್ರತಿಷ್ಠೆಗೆ ಅರ್ಥ| ಅಯೋಧ್ಯೆಯ ಮಂತ್ರಾಕ್ಷತೆ ಹಂಚಿಕೆ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಸ್ವಾಮೀಜಿ Read More »

ಅಸ್ವಸ್ಥಗೊಂಡು ಮಹಿಳೆ ಮೃತ್ಯು

ಬೆಳ್ತಂಗಡಿ: ದಿಢೀರ್ ಅಸ್ವಸ್ಥಗೊಂಡು ವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ಎಂಬಲ್ಲಿ ನಡೆದಿದೆ. ಚಿಬಿದ್ರೆ ಗ್ರಾಮದ ಅನ್ನಾರು ನಿವಾಸಿ ಚಂದ್ರಕಲಾ (31) ಮೃತಪಟ್ಟವರು. ಹಲವು ವರ್ಷಗಳಿಂದ ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿ ಅನಾರೋಗ್ಯದಿಂದ ಚಂದ್ರಕಲಾ ಅವರು ಬಳಲುತ್ತಿದ್ದರು. ಸಂಜೆ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.

ಅಸ್ವಸ್ಥಗೊಂಡು ಮಹಿಳೆ ಮೃತ್ಯು Read More »

ಏರ್ ಇಂಡಿಯಾ ಎಕ್ಸ್ ಪ್ರೆಸ್‍ ಹಾರಾಟ ಸಮಯ ಬದಲಾವಣೆ

ಮಂಗಳೂರು-ಬೆಂಗಳೂರು ನಡುವಿನ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಸಮಯವನ್ನು ನ.30 ರಿಂದ ಡಿ. 8ರ ವರೆಗೆ ಬದಲಾಯಿಸಲಾಗಿದೆ. ಐಎಕ್ಸ್ 782 ವಿಮಾನವು ಬೆಂಗಳೂರಿನಿಂದ ಬೆಳಗ್ಗೆ 9.40 ಕ್ಕೆ ಆಗಮಿಸಲಿದ್ದು, ಬೆಳಗ್ಗೆ 10.10ಕ್ಕೆ ಫ್ಲೈಟ್ 678 ಆಗಿ ಬೆಂಗಳೂರಿಗೆ ಹೊರಡಲಿದೆ. ಕಣ್ಣೂರು-ಬೆಂಗಳೂರು-ಮಂಗಳೂರು-ಬೆಂಗಳೂರು-ತಿರುವನಂತಪುರಂ ವಲಯದಲ್ಲಿ ಕಾರ್ಯನಿರ್ವಹಿಸುವ ವಿಮಾನ ಐಎಕ್ಸ್ 1795 ಬೆಂಗಳೂರಿನಿಂದ ರಾತ್ರಿ 7.20 ಕ್ಕೆ ಬಂದು ಸಂಜೆ 7.50ಕ್ಕೆ ಫ್ಲೈಟ್ ಐಎಕ್ಸ್ 792 ಆಗಿ ಬೆಂಗಳೂರಿಗೆ ಹೊರಡಲಿದೆ (ಪ್ರಸ್ತುತ ಸಂಜೆ 7.35 ಮತ್ತು ರಾತ್ರಿ 8.15ಕ್ಕೆ ನಿರ್ಗಮನ).

ಏರ್ ಇಂಡಿಯಾ ಎಕ್ಸ್ ಪ್ರೆಸ್‍ ಹಾರಾಟ ಸಮಯ ಬದಲಾವಣೆ Read More »

ರೈ ಚಾರಿಟೇಬಲ್ ಟ್ರಸ್ಟ್ ನಿಂದ ಕಾರ್ಮಿಕ ಕಾರ್ಡ್ ವಿತರಣೆ

ಪುತ್ತೂರು: ಬಡ ಜನರ ಸೇವೆಗೆಂದು ಕಳೆದ 11 ವರ್ಷಗಳಿಂದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ರಚನೆ ಮಾಡಲಾಗಿದ್ದು, ಮುಂದೆಯೂ ಟ್ರಸ್ಟ್ ನ ಸಮಾಜ ಸೇವೆ ಮುಂದುವರೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ, ಶಾಸಕ ಅಶೋಕ್ ರೈ ಹೇಳಿದರು. ಅವರು ಗುರುವಾರ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಮಿಕ ಕಾರ್ಡ್ ವಿತರಿಸಿ ಮಾತನಾಡಿದರು. ಒಟ್ಟು 5400 ಕಾರ್ಮಿಕ ಕಾರ್ಡುಗಳನ್ನು ವಿತರಿಸಲಾಗಿದೆ.‌ ಕಾರ್ಮಿಕರ ಕಾರ್ಡು ನೀಡುವ ಮೂಲಕ ಬಡವರ ಬದುಕಿನಲ್ಲಿ‌ಭರವಸೆ ಮೂಡಿಸುವ ಕೆಲಸ ಟ್ರಸ್ಟಿನಿಂದ ನಡೆಯುತ್ತಿದೆ. ಮುಂದಿನ‌ ದಿನಗಳಲ್ಲಿ‌ಇನ್ನಷ್ಟು

ರೈ ಚಾರಿಟೇಬಲ್ ಟ್ರಸ್ಟ್ ನಿಂದ ಕಾರ್ಮಿಕ ಕಾರ್ಡ್ ವಿತರಣೆ Read More »

error: Content is protected !!
Scroll to Top