ನೀರಿನಲ್ಲಿ ಮುಳುಗಿ ಮೃತ್ಯು !

ಸುಳ್ಯ: ಸ್ನಾನಕ್ಕೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಆರಂಬೂರು ಬಳಿಯ ಪಯಸ್ವಿನಿ ನದಿಯಲ್ಲಿ ಇಂದು ನಡೆದಿದೆ. ಮಡಿಕೇರಿ ಮದೆನಾಡು ಮೂಲದ ವೆಂಕಟರಮಣ ಮೃತಪಟ್ಟವರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿ ಮೃತದೇಹ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ನೀರಿನಲ್ಲಿ ಮುಳುಗಿ ಮೃತ್ಯು ! Read More »

ಡಿ.3: ವಿಟ್ಲ ಗೌಡರ ಯುವ ವೇದಿಕೆ ನೇತೃತ್ವದಲ್ಲಿ ‘ಕ್ರೀಡೋತ್ಸವ’

ಬಂಟ್ವಾಳ: ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ ವಿಟ್ಲದ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ಹಾಗೂ ಮಹಿಳಾ ಘಟಕದ ಸಹಕಾರದೊಂದಿಗೆ ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವ ಡಿ.3 ಭಾನುವಾರ ವಿಟ್ಲ ವಿಠಲ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಆರಂಭಗೊಳ್ಳುವ ಕ್ರೀಡೋತ್ಸವದ ಅಂಗವಾಗಿ ಪುರುಷರಿಗೆ ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್, ಗುಂಡೆಸೆತ, ಹಿರಿಯರಿಗೆ ಲಕ್ಕಿ ಗೇಮ್, ವೇಗದ ನಡಿಗೆ, ಮಹಿಳೆಯರಿಗೆ ತ್ರೋಬಾಲ್, ಸಂಗೀತ ಕುರ್ಚಿ, ಲಕ್ಕಿ ಗೇಮ್, ಹಗ್ಗಜಗ್ಗಾಟ, 5ನೇ ತರಗತಿ

ಡಿ.3: ವಿಟ್ಲ ಗೌಡರ ಯುವ ವೇದಿಕೆ ನೇತೃತ್ವದಲ್ಲಿ ‘ಕ್ರೀಡೋತ್ಸವ’ Read More »

ಸ್ಪೈಡರ್​ಮ್ಯಾನ್​ನಂತೆ ಎಸ್ಕೇಪ್ ಆದ ಚಿನ್ನ ಕಳ್ಳ​: ಖದೀಮನ ಚಾಕಚಕ್ಯತೆ ಕಂಡು ದಂಗಾದ ಪೊಲೀಸರು!!

ಆಭರಣದ ಅಂಗಡಿಯೊಂದಕ್ಕೆ ನುಗ್ಗಿ ಬರೋಬ್ಬರಿ 3 ಕೆಜಿ ತೂಕದ ಚಿನ್ನಾಭರಣಗಳನ್ನು ಕದ್ದು ಪರಾರಿ ಆಗಿದ್ದ ಖದೀಮನನ್ನು ಹಿಡಿಯಲು ಹೋದ ಪೊಲೀಸರು,​ ಆತನ ಸ್ಪೈಡರ್​ಮ್ಯಾನ್ ಸಾಹಸ ಕಂಡು ಒಂದು ಕ್ಷಣ ದಂಗಾದ ಪ್ರಸಂಗ ಜರುಗಿದೆ. ಕೊಯಮತ್ತೂರಿನ ಆಭರಣದಂಗಡಿಗೆ ನಸುಕಿನ ಜಾವದಲ್ಲಿ ಗೋಡೆಯನ್ನು ಮೊದಲು ಒಡೆಯುವ ಖದೀಮ ಕಿರಿದಾದ ಕಿಂಡಿಯನ್ನು ಮಾಡಿ, ಅದರೊಳಗೆ ನುಸುಳಿ, ಮೂರನೇ ಮಹಡಿಗೆ ಸರಸರನೇ ಏರಿ, ​ ಆಭರಣದ ಅಂಗಡಿಗೆ ನುಗ್ಗುತ್ತಾನೆ. ಇದಾದ ಬಳಿಕ ತನ್ನ ಬಟ್ಟೆಯನ್ನು ಬದಲಾಯಿಸಿಕೊಂಡು, ಎಚ್ಚರಿಕೆಯಿಂದ ಸುಮಾರು 150 ಸವರನ್​ ಅಂದರೆ,

ಸ್ಪೈಡರ್​ಮ್ಯಾನ್​ನಂತೆ ಎಸ್ಕೇಪ್ ಆದ ಚಿನ್ನ ಕಳ್ಳ​: ಖದೀಮನ ಚಾಕಚಕ್ಯತೆ ಕಂಡು ದಂಗಾದ ಪೊಲೀಸರು!! Read More »

ಬರೆಪ್ಪಾಡಿ ಕೇಪುಳೇಶ್ವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿಗೆ ಶಿಲಾನ್ಯಾಸ

ಬರೆಪ್ಪಾಡಿ: ಬರೆಪ್ಪಾಡಿ ಶ್ರೀ ಕೇಪುಳೇಶ್ವರ ಪಂಚಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿಗೆ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಸ್‍.ಅಂಗಾರ, ಶಿಲ್ಪಿ ಪ್ರಸಾದ್ ಮುನಿಯಂಗಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಚ ವಿಠಲ ಗೌಡ ಬರೆಪ್ಪಾಡಿ, ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೆದು, ಕಾಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ಉದನಡ್ಕ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಗಿರಿಶಂಕರ ಸುಲಾಯ, ಬೆಳಂದೂರು ಗ್ರಾಮ ಪಂಚಾಯಿತಿ ಮಾಜಿ

ಬರೆಪ್ಪಾಡಿ ಕೇಪುಳೇಶ್ವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿಗೆ ಶಿಲಾನ್ಯಾಸ Read More »

ದ್ವಿತೀಯ ಪಿಯು, ಎಸ್.ಎಸ್.ಎಲ್.ಸಿ. ಪರೀಕ್ಷಾ ವೇಳಾಪಟ್ಟಿ ಪ್ರಕಟ!

ಬೆಂಗಳೂರು: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಡಿ. 1ರಿಂದ ಡಿ. 15ರವರೆಗೆ ಅವಕಾಶವಿರುತ್ತದೆ. ಸದ್ಯ ಬಿಡುಗಡೆಯಾಗಿರುವ ವೇಳಾಪಟ್ಟಿ ಪ್ರಕಾರ ದ್ವಿತೀಯ ಪಿಯುಸಿ ಪರೀಕ್ಷೆಯು 2024ರ ಮಾರ್ಚ್ 2ರಿಂದ ಮಾರ್ಚ್ 22ರವರೆಗೆ ನಡೆಯಲಿದೆ. ಅದೇ ರೀತಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾರ್ಚ್ 25ರಿಂದ ಎಪ್ರಿಲ್ 6ರವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ವೇಳಾಪಟ್ಟಿ ಮಾರ್ಚ್ 2: ಕನ್ನಡ, ಅರೇಬಿಕ್ ಮಾರ್ಚ್ 4: ಇತಿಹಾಸ, ಭೌತಶಾಸ್ತ್ರ ಮಾರ್ಚ್

ದ್ವಿತೀಯ ಪಿಯು, ಎಸ್.ಎಸ್.ಎಲ್.ಸಿ. ಪರೀಕ್ಷಾ ವೇಳಾಪಟ್ಟಿ ಪ್ರಕಟ! Read More »

ಹ್ಯಾಮರ್ ತ್ರೋ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಪುತ್ತೂರು: ಪದವಿಪೂರ್ವ ಬಾಲಕಿಯರ ವಿಭಾಗದ ರಾಜ್ಯ ಮಟ್ಟದ ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ಪೃಥ್ವಿ ಕೆ. ದ್ವಿತೀಯ ಸ್ಥಾನ ಪಡೆದು, ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪೃಥ್ವಿ ಕೆ. ಬೆಳ್ಳಿ ಪದಕ ಪಡೆದರು. ಅವರು ಪುತ್ತೂರು ಸಂತ ಫಿಲೋಮಿನ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಪರ್ಪಂಜ ಸೌಗಂಧಿಕಾ ನರ್ಸರಿ ಮಾಲಕ ಚಂದ್ರ ಸೌಗಂಧಿಕಾ ಮತ್ತು ವಿದ್ಯಾಲಕ್ಷ್ಮಿ ದಂಪತಿ ಪುತ್ರಿ.

ಹ್ಯಾಮರ್ ತ್ರೋ: ರಾಷ್ಟ್ರ ಮಟ್ಟಕ್ಕೆ ಆಯ್ಕೆ Read More »

ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ!!

ಬೆಂಗಳೂರು: ಹಾಸನದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್​​ನಲ್ಲಿ ಬಂದರೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದ ಕಾರಣ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ನಡೆಯಿತು. ಇದರ ಬೆನ್ನಲ್ಲೇ ಮಗುವಿನ ಪೋಷಕರು ಹಾಗೂ ಆ್ಯಂಬುಲೆನ್ಸ್‌ ಚಾಲಕರು ನಿಮ್ಹಾನ್ಸ್‌ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಶವ ಪರೀಕ್ಷೆಯ ನಂತರ ಮಗುವಿನ ಮೃತದೇಹ ಪಡೆಯಲು ಪೋಷಕರು 24 ಗಂಟೆಗಳಿಗೂ ಹೆಚ್ಚು ಕಾಲ ಕಾಯುವಂತ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಸಂಜೆಯವರೆಗೂ ನಡೆಯಿತು. ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ

ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ!! Read More »

ಸಂಭ್ರಮಾಚರಣೆ ಮುನ್ನದಿನವೇ ಸುರತ್ಕಲ್ ಟೋಲ್ ಗೇಟ್ ಬೂತ್ ತೆರವು!!

ಸುರತ್ಕಲ್: ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್ ನ ಕೆಲವು ಟೋಲ್ ಸಂಗ್ರಹ ಬೂತ್ ಗಳನ್ನು ಹೆದ್ದಾರಿ ಪ್ರಾಧಿಕಾರ ತೆರವುಗೊಳಿಸಿದೆ. ದು ವರ್ಷದಿಂದ ಪಾಳು ಬಿದ್ದಿರುವ, ಮತ್ತೆ ಸುಂಕ ಸಂಗ್ರಹ ಆರಂಭದ ಕುರಿತು ಜನಸಾಮಾನ್ಯರಲ್ಲಿ ವದಂತಿ, ಆತಂಕಕ್ಕೆ ಇದು ಕಾರಣವಾಗಿತ್ತು. ಈ ಬಗ್ಗೆ ಮಾತನಾಡಿದ ಸುರತ್ಕಲ್‌ ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಡಿ. 1ರಂದು ಸುರತ್ಕಲ್ ಟೋಲ್ ಸಂಗ್ರಹ ರದ್ದು ಗೊಂಡು ಹೋರಾಟ ಗೆಲುವು ಸಾಧಿಸಿದ ದಿನ. ಟೋಲ್ ಗೇಟ್ ವಿರೋಧಿ ಹೋರಾಟ

ಸಂಭ್ರಮಾಚರಣೆ ಮುನ್ನದಿನವೇ ಸುರತ್ಕಲ್ ಟೋಲ್ ಗೇಟ್ ಬೂತ್ ತೆರವು!! Read More »

ರಸ್ತೆಗಡ್ಡವಾಗಿ ಉರುಳಿಬಿದ್ದ ಕೋಳಿ ಸಾಗಾಟದ ಲಾರಿ!!

ಕೋಳಿ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿಬಿದ್ದ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯ ರಾಧಾಕಟ್ಟೆ ಎಂಬಲ್ಲಿ ಶುಕ್ರವಾರ ನಡೆದಿದೆ. ವಿಟ್ಲ ಕಡೆಯಿಂದ ಸಾಲೆತ್ತೂರಿನತ್ತ ತೆರಳುತ್ತಿದ್ದ ಕೋಳಿ ಸಾಗಾಟದ ಈ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡವಾಗಿ ಉರುಳಿಬಿದ್ದಿದೆ. ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ರಸ್ತೆಗೆ ಉರುಳಿ ಬಿದ್ದಿದ್ದ ಕೋಳಿಗಳಿದ್ದ ಬಾಕ್ಸ್ ಗಳನ್ನು ಬಳಿಕ ಬೇರೆ ವಾಹನದಲ್ಲಿ ತುಂಬಿಸಿ ಕೊಂಡೊಯ್ಯಲಾಯಿತು.

ರಸ್ತೆಗಡ್ಡವಾಗಿ ಉರುಳಿಬಿದ್ದ ಕೋಳಿ ಸಾಗಾಟದ ಲಾರಿ!! Read More »

ವಿಷಕಾರಿ ಹಣ್ಣು ಸೇವಿಸಿದ 11 ವಿದ್ಯಾರ್ಥಿಗಳು ಅಸ್ವಸ್ಥ!!

ವಿಷಯುಕ್ತ ಹಣ್ಣು ತಿಂದು 11 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಒಡಿಶಾದ ಮಲ್ಕಂಗಾರಿ ಜಿಲ್ಲೆಯ ಜಾರಪಳ್ಳಿ ಪಂಚಾಯಿತಿ ವ್ಯಾಪ್ತಿಯ ತಾಳಿಮೇಟ ಗ್ರಾಮದಲ್ಲಿ ನಡೆದಿದೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಮಕ್ಕಳು ಗ್ರಾಮದ ಹೊರವಲಯದಲ್ಲಿದ್ದ ಗಿಡವೊಂದರ ವಿಷಯುಕ್ತ ಹಣ್ಣುಗಳನ್ನು ಸೇವನೆ ಮಾಡಿದ್ದಾರೆ. ಹಣ್ಣು ತಿಂದ ಕೆಲವೇ ನಿಮಿಷಗಳಲ್ಲಿ ವಾಂತಿ ಮಾಡಿಕೊಂಡಿದ್ದಾರೆ. ಅಲ್ಲದೆ, ಅತೀವ ಹೊಟ್ಟೆನೋವು ಕಾಣಿಸಿಕೊಂಡು, ಅಸ್ವಸ್ಥರಾಗಿದ್ದಾರೆ. ಕೂಡಲೇ ಸ್ಥಳೀಯರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಇದೀಗ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಷಕಾರಿ ಹಣ್ಣು ಸೇವಿಸಿದ 11 ವಿದ್ಯಾರ್ಥಿಗಳು ಅಸ್ವಸ್ಥ!! Read More »

error: Content is protected !!
Scroll to Top