ಸ್ಕೂಟರ್ ಬಿಟ್ಟು ಯುವಕ ನಾಪತ್ತೆ: ನದಿಗೆ ಹಾರಿರುವ ಶಂಕೆ!

ಸೇತುವೆ ಸಮೀಪ ಸ್ಕೂಟರ್ ಬಿಟ್ಟು ಯುವಕ ನಾಪತ್ತೆಯಾಗಿರುವ ಘಟನೆ ಕಾಪು ಸಮೀಪದ ಉದ್ಯಾವರ ಸೇತುವೆ ಬಳಿ ನಡೆದಿದೆ. ಯುವಕ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು, ಯುವಕನನ್ನು ಉಡುಪಿಯ ಖಾಸಗಿ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಉದ್ಯೋಗಿ ಎಂದು ಗುರುತಿಸಲಾಗಿದೆ. ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಕಾಪು ಪೋಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಸ್ಕೂಟರ್ ಬಿಟ್ಟು ಯುವಕ ನಾಪತ್ತೆ: ನದಿಗೆ ಹಾರಿರುವ ಶಂಕೆ! Read More »

“ದೆಹಲಿಗೆ ಹೋಗುತ್ತೇನೆ ಎಂದಷ್ಟೇ ಹೇಳಿದ್ದ”: ಮನೋರಂಜನ್ ತಂದೆ | ಸಂಸತ್ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳಲ್ಲೊಬ್ಬ ಮನೋರಂಜನ್

ತಾನು ದೆಹಲಿಗೆ ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ್ದ. ಏನು ಕೆಲಸ ಮಾಡುತ್ತಿದ್ದೇನೆ, ಯಾಕಾಗಿ ಹೋಗುತ್ತಿದ್ದೇನೆ ಎಂದೆಲ್ಲಾ ಹೇಳುತ್ತಿರಲಿಲ್ಲ ಎಂದು ಸಂಸತ್ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳಲ್ಲೊಬ್ಬನಾದ ಮೈಸೂರು ಮೂಲದ ಮನೋರಂಜನ್ ತಂದೆ ದೇವರಾಜೇಗೌಡ ತಿಳಿಸಿದ್ದಾರೆ. ರೈತರಾಗಿರುವ ದೇವರಾಜೇಗೌಡ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ, ಮನೋರಂಜನ್ ಮನೆಗೆ, ಸಮಾಜಕ್ಕೆ ಮನೋರಂಜನ್ ಒಳ್ಳೆಯ ಹುಡುಗ. ಕೆಟ್ಟ ಹುಡುಗನಾಗಿದ್ರೆ ಮನೆ ಬಾಗಿಲಿಗೆ ಸೇರಿಸುತ್ತಿರಲಿಲ್ಲ. ಒಳ್ಳೆಯ ಕೆಲಸ ಮಾಡುತ್ತೇನೆ ಎಂದೇ ಹೇಳುತ್ತಿದ್ದ. ಯಾಕೆ ಹೀಗೆ ಮಾಡಿದ ಎಂದೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತನಗೆ

“ದೆಹಲಿಗೆ ಹೋಗುತ್ತೇನೆ ಎಂದಷ್ಟೇ ಹೇಳಿದ್ದ”: ಮನೋರಂಜನ್ ತಂದೆ | ಸಂಸತ್ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳಲ್ಲೊಬ್ಬ ಮನೋರಂಜನ್ Read More »

ಇನ್ನು ಸಂಸತ್’ಗೆ ವೀಕ್ಷಕರ ಪಾಸ್ ಬ್ಯಾನ್!!

ಇದುವರೆಗೆ ಒಬ್ಬರು ಸಂಸದರ ಹೆಸರಿನಲ್ಲಿ ಇಬ್ಬರು ವೀಕ್ಷಕರು ತೆರಳಲು ಅವಕಾಶ ಇತ್ತು. ಆದರೆ ಇನ್ನು ಮುಂದೆ ಸಂಸತ್’ಗೆ ತೆರಳಲು ವೀಕ್ಷಕರ ಪಾಸ್ ಅನ್ನು ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಸ್ಪೀಕರ್, ಇನ್ನು ಮುಂದೆ ಸಂಸತ್’ಗೆ ವೀಕ್ಷಕರ ಪಾಸ್ ಸಿಗಲ್ಲ ಎಂದು ತಿಳಿಸಿದ್ದಾರೆ. ಸಂಸತ್ತಿಗೆ ದಾಳಿ ನಡೆದು 22ನೇ ವರ್ಷದ ದಿನವಾದ ಬುಧವಾರ ಮತ್ತೆ ಸಂಸತ್ತಿಗೆ ದಾಳಿ ನಡೆಸುವ ಪ್ರಯತ್ನ ನಡೆದಿದೆ. ದುಷ್ಕರ್ಮಿಗಳು ಸಂಸತ್ತಿಗೆ ನುಗ್ಗಿ ಕೆಮಿಕಲ್ ಸ್ಪ್ರೇ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಆದೇಶ

ಇನ್ನು ಸಂಸತ್’ಗೆ ವೀಕ್ಷಕರ ಪಾಸ್ ಬ್ಯಾನ್!! Read More »

ಗುರುತು ಪತ್ತೆ: ಸಂಸತ್ತಿಗೆ ನುಗ್ಗಿದವರು ಮೈಸೂರು ಮೂಲದವರು!!

ರಾಷ್ಟ್ರದ ಶಕ್ತಿ ಕೇಂದ್ರವಾಗಿರುವ ಸಂಸತ್ ಭವನದೊಳಗೆ ನುಗ್ಗಿದ ದುಷ್ಕರ್ಮಿಗಳ ಗುರುತು ಪತ್ತೆಯಾಗಿದ್ದು, ಮೂವರ ಪೈಕಿ ಇಬ್ಬರನ್ನು ಮೈಸೂರು ಮೂಲದವರು ಎಂದು ಹೇಳಲಾಗಿದೆ. ಒಟ್ಟು ಮೂವರು ನೂತನ ಸಂಸತ್ ಭವನದೊಳಗೆ ನುಗ್ಗಿದ್ದರು. ಅವರಲ್ಲಿ ಇಬ್ಬರು ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ಮನೋರಂಜನ್ ಇಂಜಿನಿಯರ್ ಎಂದು ಹೇಳಲಾಗಿದೆ. ಘಟನೆ ತಕ್ಷಣವೇ ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ದುಷ್ಕರ್ಮಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಗುರುತು ಪತ್ತೆ: ಸಂಸತ್ತಿಗೆ ನುಗ್ಗಿದವರು ಮೈಸೂರು ಮೂಲದವರು!! Read More »

ನೂತನ ಸಂಸತ್‌ ಭವನಕ್ಕೆ ನುಗ್ಗಿದ ಅಪರಿಚಿತ ವ್ಯಕಿಗಳು !! | ಸಂಸತ್‌ ಭವನದ ದಾಳಿಗೆ 22 ವರ್ಷದ ದಿನದಂದೆ ನಡೆದ ಘಟನೆ !!

ದೆಹಲಿ : ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಕ್ಷೇಕರ ಗ್ಯಾಲರಿಯಿಂದ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಸದನದೊಳಗೆ ಭಯದ ವಾತಾವರಣ ಸೃಷ್ಟಿಸಿದ ಘಟನೆ ಬುಧವಾರ ನಡೆದಿದೆ. ಇದೊಂದು ಭದ್ರತಾ ವೈಪಲ್ಯವಾಗಿದ್ದು, ನೂತನ ಸಂಸತ್‌ ಭವನದ ಒಳಗೆ ನುಗ್ಗಿದ ಯುವಕ ಹಾಗೂ ಯುವತಿ ಪ್ರೇಕ್ಷಕರ ಗ್ಯಾಲರಿಯಿಂದ ಕೆಳಗೆ ಹಾರಿದ್ದಾರೆ. ಕೆಮಿಕಲ್ ಸ್ಪ್ರೇ ಸಿಡಿಸಿದವರನ್ನು ಸಾಗರ್‌ ಶರ್ಮಾ ಹಾಗೂ ನೀಲಂ ಕೌರ್ ಎಂದು ಎಂದು ಗುರುತಿಸಲಾಗಿದೆ. ಶೂನ್ಯ ವೇಳೆಯಲ್ಲಿ ಒಬ್ಬ ವ್ಯಕ್ತಿ ಲೋಕಸಭೆಯ ಬೆಂಚುಗಳ ಮೇಲೆ ಜಿಗಿಯುತ್ತಿರುವುದನ್ನು ಕಂಡರೆ, ಮತ್ತೊಬ್ಬರು ಸಾರ್ವಜನಿಕ

ನೂತನ ಸಂಸತ್‌ ಭವನಕ್ಕೆ ನುಗ್ಗಿದ ಅಪರಿಚಿತ ವ್ಯಕಿಗಳು !! | ಸಂಸತ್‌ ಭವನದ ದಾಳಿಗೆ 22 ವರ್ಷದ ದಿನದಂದೆ ನಡೆದ ಘಟನೆ !! Read More »

ಕೃಷಿಕ ಸಮಸ್ಯೆ ಪರಿಹರಿಸಲು ಎಐ ಟೆಕ್ನಾಲಜಿ! | ಮರಹತ್ತುವ ಯಂತ್ರ ಅಭಿವೃದ್ಧಿಪಡಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು

ಪುತ್ತೂರು: ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಮರಹತ್ತುವ ಯಂತ್ರವನ್ನು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆರ್ಟಿಫೀಶಿಯನ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ  ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಆಧುನಿಕ ಜೀವನ ಪದ್ದತಿಗೆ ಮಾರುಹೋಗಿರುವ ಯುವ ಜನತೆ ಕೃಷಿ ಕ್ಷೇತ್ರವನ್ನು ಕಡೆಗಣಿಸಿದೆ. ಇದರಿಂದಾಗಿ ಕೆಲವು ವಿಷಯಗಳಲ್ಲಿ ನುರಿತ ಕೆಲಸಗಾರರೇ ಸಿಗುತ್ತಿಲ್ಲ. ಅಡಿಕೆಗೆ ಔಷದ ಸಿಂಪಡಣೆ ಅಡಿಕೆ ಕೊಯ್ಲು, ತೆಂಗಿನಕಾಯಿ ಕೊಯ್ಲು ಮುಂತಾದ ನಾಜೂಕಿನ ಕೆಲಸಗಳನ್ನು ಬೆರಳೆಣಿಯಷ್ಟು ಮಂದಿಯಷ್ಟೇ ಮಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ಮನಗಂಡು ಪುತ್ತೂರಿನ

ಕೃಷಿಕ ಸಮಸ್ಯೆ ಪರಿಹರಿಸಲು ಎಐ ಟೆಕ್ನಾಲಜಿ! | ಮರಹತ್ತುವ ಯಂತ್ರ ಅಭಿವೃದ್ಧಿಪಡಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು Read More »

ಕುಕ್ಕೆ ಕ್ಷೇತ್ರಕ್ಕೆ ಇಸ್ರೋ ನಿರ್ದೇಶಕ ರಾಮಕೃಷ್ಣ ಭೇಟಿ

ಸುಬ್ರಹ್ಮಣ್ಯ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಟೆಲಿಮೆಟ್ರಿ ಟ್ರ್ಯಾಕಿಂಗ್ ಆಂಡ್ ಕಮಾಂಡ್ ನೆಟ್‌ವರ್ಕ್ ನಿರ್ದೇಶಕ ಬಿ.ಎನ್. ರಾಮಕೃಷ್ಣ ಅವರು ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಶ್ರೀ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ ವಿ.ಭಟ್, ಶೋಭಾ ಗಿರಿಧರ್, ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಗಣೇಶ್ ಪ್ರಸಾದ್, ಪ್ರಾಂಶುಪಾಲ ಸಂಕೀರ್ತ್ ಹೆಬ್ಬಾರ್, ದೇವಸ್ಥಾನದ ಶಿಷ್ಟಾಚಾರ ಅಧಿಕಾರಿಗಳಾದ ಜಯರಾಮ ರಾವ್,

ಕುಕ್ಕೆ ಕ್ಷೇತ್ರಕ್ಕೆ ಇಸ್ರೋ ನಿರ್ದೇಶಕ ರಾಮಕೃಷ್ಣ ಭೇಟಿ Read More »

ಡಿ. 18ರಂದು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

ಸವಣೂರು: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಡಿ. 18ರಂದು ಷಷ್ಠಿ ಮಹೋತ್ಸವ ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಹೋತ್ಸವ ಜರಗಲಿದೆ. ಸೋಮವಾರದಂದು ನಡೆಯಲಿರುವ ಷಷ್ಠಿ ಮಹೋತ್ಸವದ ಬಳಿಕ ದೇವರ ಪ್ರಸಾದ ವಿತರಣೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 18ರಂದು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ Read More »

ಮಂಗಳಾದೇವಿ ದೇವಸ್ಥಾನದ ಹೆಸರನ್ನು ಬೋಳಾರ್‌ ಶೇಕ್‌ ಉಮರ್‌ ಸಾಹೇಬ್‌ ಕಾಂಪೌಂಡು ಎಂದು ತಿದ್ದಿದ ಕಿಡಿಗೇಡಿಗಳು!!

ಮಂಗಳೂರು: ಮಂಗಳಾದೇವಿ ನೆಲೆಯಾಗಿರುವ ಕ್ಷೇತ್ರ ಮಂಗಳಾಪುರ. ಈ ಮಂಗಳಾಪುರವೇ ಮುಂದೆ ಮಂಗಳೂರು ಎಂದಾಯಿತು ಎನ್ನುತ್ತವೆ ಇತಿಹಾಸ. ಇಂತಹ ಐತಿಹಾಸಿಕ, ಧಾರ್ಮಿಕ ಕ್ಷೇತ್ರದ ಹೆಸರನ್ನು ಗೂಗಲ್ ಮ್ಯಾಪಿನಲ್ಲಿ ತಿದ್ದಿರುವ ಘಟನೆ ನಡೆದಿದ್ದು, ಆಕ್ರೋಶ ವ್ಯಕ್ತವಾಗಿದೆ. ಬೋಳಾರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಹೆಸರನ್ನು ಗೂಗಲ್‌ ಮ್ಯಾಪ್‌ನಲ್ಲಿ “ಬೋಳಾರ್‌ ಶೇಕ್‌ ಉಮರ್‌ ಸಾಹೇಬ್‌ ಕಾಂಪೌಂಡು’ ಎಂದು ಬರೆದಿರುವುದು ಇದೀಗ ಬೆಳಕಿಗೆ ಬಂದಿದೆ. ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರುವ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯನ್ನುಂಟು ಮಾಡುವ ಮತ್ತು ಸಾಮರಸ್ಯವನ್ನು ಭಂಗ

ಮಂಗಳಾದೇವಿ ದೇವಸ್ಥಾನದ ಹೆಸರನ್ನು ಬೋಳಾರ್‌ ಶೇಕ್‌ ಉಮರ್‌ ಸಾಹೇಬ್‌ ಕಾಂಪೌಂಡು ಎಂದು ತಿದ್ದಿದ ಕಿಡಿಗೇಡಿಗಳು!! Read More »

ಗಾಳಿಯಲ್ಲಿ ತೇಲಿದ ಕಲ್ಲು: ಕಳಂಜದಲ್ಲೊಂದು ವಿಸ್ಮಯ!!

ಕೆಲವು ಸೆಕೆಂಡುಗಳ ಕಾಲ ಕಲ್ಲೊಂದು ಗಾಳಿಯಲ್ಲಿ ತೇಲಾಡುವ ಘಟನೆ ಸುಳ್ಯ ತಾಲೂಕಿನ ಕಳಂಜದ ತಂಟೆಪ್ಪಾಡಿಯಲ್ಲಿ ನಡೆದಿದೆ. ಈ ಘಟನೆ ವಿಸ್ಮಯ ಮೂಡಿಸಿದ್ದು, ಇದು ಹೇಗೆ ಸಾಧ್ಯ ಎಂಬ ಚರ್ಚೆಯೂ ನಡೆಯುತ್ತಿದೆ. ತಂಟೆಪ್ಪಾಡಿಯ ಧನುಶ್ರೀ ಎಂಬವರು ಮೊಬೈಲಿನಲ್ಲಿ ಸೆರೆ ಹಿಡಿದಿರುವ ಚಿತ್ರ ಇದಾಗಿದೆ. ಎಂದಿನಂತೆ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರಸ್ತೆ ಬದಿಯ ಕಲ್ಲೊಂದು ನೆಲ ಬಿಟ್ಟು, ಗಾಳಿಯಲ್ಲಿ ತೇಲಾಡುತ್ತಿರುವುದನ್ನು ಕಂಡಿದ್ದಾರೆ. ಅಚ್ಚರಿ ಪಟ್ಟ ಅವರು, ತಮ್ಮ ಮೊಬೈಲಿನಲ್ಲಿ ಅದನ್ನು ಸೆರೆ ಹಿಡಿದಿದ್ದಾರೆ. ಇದೀಗ ಈ ಫೊಟೋ ಸಾಮಾಜಿಕ

ಗಾಳಿಯಲ್ಲಿ ತೇಲಿದ ಕಲ್ಲು: ಕಳಂಜದಲ್ಲೊಂದು ವಿಸ್ಮಯ!! Read More »

error: Content is protected !!
Scroll to Top