ಅಯ್ಯಪ್ಪ ವೃತಧಾರಿ ನೇಣು ಬಿಗಿದು ಆತ್ಮಹತ್ಯೆ !

ಪುತ್ತೂರು: ಅಯ್ಯಪ್ಪ ವೃತಧಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹವೊಂದು ಇದೀಗ ಸೇವಾಜೆ ಬಳಿ ಪತ್ತೆಯಾಗಿದೆ. ದೇವಚಳ್ಳ ಗ್ರಾಮದ ದೇವ ದಿ.ಹೊನ್ನಪ್ಪ ಎಂಬವರ ಪುತ್ರ ಪದ್ಮನಾಭ (26) ಮೃತ ವ್ಯಕ್ತಿ. ಸೇವಾಜೆ ಬಳಿಯ ಆಶ್ರಮದಲ್ಲಿ ಅಯ್ಯಪ್ಪ ಮಾಲೆ ಧರಿಸಿ ವೃತಾಚರಣೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಮೃತ ಪದ್ಮನಾಭ ಅವರ ಸಹೋದರ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು ಎನ್ನಲಾಗಿದೆ. ಇದೀಗ ಇನ್ನೊಬ್ಬ ಮಗನನ್ನು ಕಳೆದುಕೊಂಡು ತಾಯಿ ಒಬ್ಬಂಟಿಯಾಗಿದ್ದಾರೆ.

ಅಯ್ಯಪ್ಪ ವೃತಧಾರಿ ನೇಣು ಬಿಗಿದು ಆತ್ಮಹತ್ಯೆ ! Read More »

ಅಡಿಕೆ ಆಮದು ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು | ಅಡಿಕೆ ಬೆಳೆಗಾರರ ಸಂಘ ಒತ್ತಾಯ

ಪುತ್ತೂರು: ಅಡಿಕೆ ಆಮದು ಕುರಿತು ಸುದ್ದಿಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದು, ಪರಿಣಾಮ ಅಡಿಕೆ ಮಾರುಕಟ್ಟೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಆಮದು ತಡೆಗೆ ಸರಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಜಿಲ್ಲೆಯ ಸಂಸದರಿಗೆ ಪತ್ರದ ಮೂಲಕ ಒತ್ತಾಯಿಸಿದೆ. ಅಡಿಕೆ ಬೆಳೆಗಾರರು ಈಗಾಗಲೇ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಆದರೆ ಕೆಲವು ಸಮಯಗಳಿಂದ ಉತ್ತಮ ಧಾರಣೆಯ ಕಾರಣದಿಂದ ಕೃಷಿ ಕೆಲಸಗಳು ಸರಾಗ ಸಾಗುತ್ತಿತ್ತು. ಕೃಷಿ

ಅಡಿಕೆ ಆಮದು ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು | ಅಡಿಕೆ ಬೆಳೆಗಾರರ ಸಂಘ ಒತ್ತಾಯ Read More »

ಜಾತಿ ನಿಂದನೆ, ಜೀವ ಬೆದರಿಕೆ | ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

ಸುಳ್ಯ: ಜಮೀನು ಸ್ವಾಧೀನ ವಿಚಾರದಲ್ಲಿ ಮಹಿಳೆಯೊಬ್ಬರಿಗೆ ಜಾತಿನಿಂದನೆ ಮಾಡಿ, ಜೀವಬೆದರಿಕೆ ಹಾಕಿದ ಘಟಕದ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದಲ್ಲಿ ನಡೆದಿದೆ. ತಿಮ್ಮಪ್ಪ ಗೌಡ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಮುರುಳ್ಯ ಗ್ರಾಮದ ಚೋಮಣ್ಣ ನಾಯ್ಕ (60) ಎಂಬವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ನಿಂತಿಕಲ್ಲು ಎಂಬಲ್ಲಿ ಜಮೀನು ಹೊಂದಿದ್ದು, ಜಮೀನಲ್ಲಿ ಸಣ್ಣ ಹೊಟೇಲ್ ವ್ಯಾಪಾರ ಮಾಡುತ್ತಿದ್ದರು. ಜಮೀನಿನ ಪಕ್ಕದ ಕಟ್ಟಡ ಹೊಂದಿರುವ ತಿಮ್ಮಪ್ಪ ಗೌಡ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದರು ಎಂದು

ಜಾತಿ ನಿಂದನೆ, ಜೀವ ಬೆದರಿಕೆ | ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು Read More »

1777ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ | ಎಂಟು ದಿನಗಳ ಕಾಲ ನಡೆಯಲಿದೆ ಶಿಬಿರ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಪುತ್ತೂರು ತಾಲೂಕು ಯೋಜನೆ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ 1777ನೇ ಮದ್ಯವರ್ಜನ ಶಿಬಿರಕ್ಕೆ ಗುರುವಾರ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಚಾಲನೆ ನೀಡಲಾಯಿತು. ಎಂಟು ದಿನಗಳ ಕಾಲ ನಡೆಯುವ ಮದ್ಯವರ್ಜನ ಶಿಬಿರಕ್ಕೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿ ಮಾತನಾಡಿ, ಮಹಾತ್ಮಾಗಾಂಧೀ ಅವರ ವ್ಯಸನಮುಕ್ತ ಸಮಾಜ ಕಲ್ಪನೆಯನ್ನು ತನ್ನ ದೂರದೃಷ್ಟಿತ್ವದ ಮೂಲಕ, ಧಾರ್ಮಿಕ ಕ್ಷೇತ್ರದ ಮೂಲಕ ಸಾಕಾರಗೊಳಿಸುವಲ್ಲಿ

1777ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ | ಎಂಟು ದಿನಗಳ ಕಾಲ ನಡೆಯಲಿದೆ ಶಿಬಿರ Read More »

ಕಾರು ಅಪಘಾತ | ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಮೃತ್ಯು

ಉಡುಪಿ: ಭೀಕರ ಕಾರು ಅಪಘಾತದಲ್ಲಿ ಉದ್ಯಾವರ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಉದ್ಯಾವರ ಸಂಪಿಗೆನಗರ ನಿವಾಸಿ ರೋಬರ್ಟ್‍ ಕ್ಯಾಸ್ಟಲಿನೋ ಅವರ ಪುತ್ರ ಜೋಯಿಸ್ಸನ್ ಕ್ಯಾಸ್ಟಲಿನೋ (22) ಮೃತಪಟ್ಟವರು. ಲೆಸ್ಟನ್ ಪಿಂಟೋ (22), ಜಸ್ಟಿನ್ ಕರ್ಡೊಜ (22), ವಿಲ್ಸನ್ ಮಾರ್ಟಿಸ್ (23) ಹಾಗೂ ಗ್ಲಾಡ್‍ಸನ್‍ ಡಿಸಿಲ್ವ (23) ಗಾಯಗೊಂಡವರು. ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಉಡುಪಿ ಕಡೆಗೆ ಬರುತ್ತಿದ್ದಾಗ ಕೋಟೇಶ್ವರ ಬಳಿ ಕೆಟ್ಟು ನಿಂತಿದ್ದ ಟ್ರಕ್‍ ಗೆ

ಕಾರು ಅಪಘಾತ | ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಮೃತ್ಯು Read More »

ಪೆರ್ನಾಜೆಯಲ್ಲಿ ಒಂಟಿ ಸಲಗದ ರಂಪಾಟ | ಕೃಷಿ ತೋಟಗಳಿಗೆ ಹಾನಿ

ಪೆರ್ನಾಜೆ: ಪುತ್ತೂರು ಸುಳ್ಯ ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು ಡಿ 20ರಂದು ಮುಂಜಾನೆ ತೋಟಗಳಿಗೆ ದಾಳಿ ಮಾಡಿದೆ. ಪೆರ್ನಾಜೆ ನಿವಾಸಿ ಕುಮಾರ್ ಪೆರ್ನಾಜೆ ಅವರ ತೆಂಗಿನ ಮರ, ಎರಡು ಅಡಿಕೆ ಮರ, ಮೂರು ಬಾಳೆಗಿಡ, ಹಲಸು ಮರವನ್ನು ಚೂರು ಚೂರು ಮಾಡಿದೆ. ಸಮೀಪದ ರಾಘವೇಂದ್ರ ಭಟ್ ಅವರ ತೋಟಕ್ಕೂ ನುಗ್ಗಿ ಮೂರು ಬಾಳೆ ಗಿಡಗಳನ್ನು ನಾಶ ಮಾಡಿದೆ ಈಗಾಗಲೇ ಮಂಡೆಕೋಲು ಮೂರೂರು ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ

ಪೆರ್ನಾಜೆಯಲ್ಲಿ ಒಂಟಿ ಸಲಗದ ರಂಪಾಟ | ಕೃಷಿ ತೋಟಗಳಿಗೆ ಹಾನಿ Read More »

ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ದ್ವಿತೀಯ ವಾರ್ಷಿಕೋತ್ಸವ | ಸೌತಡ್ಕ ಕ್ಷೇತ್ರದಲ್ಲಿ ತಾಳಮದ್ದಳೆ

ಸೌತಡ್ಕ: ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಶ್ರೀ ಮಹಾಭಾರತ ಸರಣಿಯ ರಾಜಸೂಯಾಧ್ವರ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಲಂತಿಲ, ಹಿಮ್ಮೇಳದಲ್ಲಿ ಮುರಳಿಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ಅಂಬಾಪ್ರಸಾದ ಪಾತಾಳ(ಧರ್ಮರಾಯ), ಗೋಪಾಲ ಶೆಟ್ಟಿ ಕಳೆಂಜ(ಮಾಗಧ), ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ), ಹರೀಶ ಆಚಾರ್ಯ ಬಾರ್ಯ(ಭೀಮಸೇನ), ಪುಷ್ಪಲತಾ

ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ದ್ವಿತೀಯ ವಾರ್ಷಿಕೋತ್ಸವ | ಸೌತಡ್ಕ ಕ್ಷೇತ್ರದಲ್ಲಿ ತಾಳಮದ್ದಳೆ Read More »

ಮುಂದಿನ ಒಂದು ತಿಂಗಳೊಳಗೆ 100 ಕೋಟಿ ರೂ. ಕಾಮಗಾರಿಗೆ ಶಿಲಾನ್ಯಾಸ | ಪುಣ್ಯಕುಮಾರ್ ದೈವಸ್ಥಾನ ರಸ್ತೆ ಉದ್ಘಾಟಿಸಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಮುಂದಿನ ಒಂದು ತಿಂಗಳೊಳಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 100 ೧೦೦ ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಶಿಲಾನ್ಯಾಸ ಕಾರ್ಯ ನಡೆಯಲಿದ್ದು, ಮುಂದಿನ ಐದು ವರ್ಷದೊಳಗೆ ಪುತ್ತೂರಿನ ಸಮಗ್ರ ಅಭಿವೃದ್ದಿಯಾಗುವುದರಲ್ಲಿ ಯಾವುದೇ ಸಂಶಯ ಬೇಡ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಕಬಕ ಗ್ರಾಮದ ಮುರ ಪುಣ್ಯಕುಮಾರ್ ದೈವಸ್ಥಾನದ ನೂತನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 27 ದಿನಗಳ ಹಿಂದೆ ಈ ರಸ್ತೆಗೆ ಶಿಲಾನ್ಯಾಸ ನಡೆಸಲಾಗಿದ್ದು, ರಸ್ತೆ

ಮುಂದಿನ ಒಂದು ತಿಂಗಳೊಳಗೆ 100 ಕೋಟಿ ರೂ. ಕಾಮಗಾರಿಗೆ ಶಿಲಾನ್ಯಾಸ | ಪುಣ್ಯಕುಮಾರ್ ದೈವಸ್ಥಾನ ರಸ್ತೆ ಉದ್ಘಾಟಿಸಿ ಶಾಸಕ ಅಶೋಕ್ ಕುಮಾರ್ ರೈ Read More »

ಸರ ಕಳ್ಳತನ : ಇಬ್ಬರು ಮಹಿಳೆಯರ ಬಂಧನ

ಬೆಳ್ತಂಗಡಿ: ಮಹಿಳೆಯೊಬ್ಬರು ಸರಕಾರಿ ಬಸ್ ಗೆ ಹತ್ತುವಾಗ ಕರಿಮಣಿ ಸರ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿದ ಬೆಳ್ತಂಗಡಿ ಪೊಲೀಸರು ಇಬ್ಬರು ತಮಿಳುನಾಡು ರಾಜ್ಯದ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಕಾರಿ ಉದ್ಯೋಗಿ ಮಹಿಳೆ ಬೆಳ್ತಂಗಡಿಯಲ್ಲಿ ಸರಕಾರಿ ಬಸ್ ಗೆ ಡಿ.12 ರಂದು ಹತ್ತುವ ವೇಳೆ 24 ಗ್ರಾಂ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು‌. ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ

ಸರ ಕಳ್ಳತನ : ಇಬ್ಬರು ಮಹಿಳೆಯರ ಬಂಧನ Read More »

ಎರಡು ಕಾರುಗಳು ಮುಖಾಮುಖಿ ಡಿಕ್ಕಿ !

ಪುತ್ತೂರು: ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಘಟನೆ ನೆಹರುನಗರದಲ್ಲಿ ನಡೆದಿದೆ. ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ  ಕರೆದೊಯ್ಯಲಾಗಿದೆ. ಅಪಘಾತದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾಲೇಜು ಬಸ್ಸಿಗೂ ಕಾರು ಡಿಕ್ಕಿಯಾಗಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಎರಡು ಕಾರುಗಳು ಮುಖಾಮುಖಿ ಡಿಕ್ಕಿ ! Read More »

error: Content is protected !!
Scroll to Top