ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತರಿಂದ ತಯಾರಿಸಲಾಗುತ್ತಿದೆ 108 ಅಡಿ ಉದ್ದದ ಅಗರಬತ್ತಿ

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಈ ನಡುವೆ ಭಕ್ತರಿಂದ ರಾಮಮಂದಿರಕ್ಕೆ ವಿಶೇಷ ಇದು ಗುಜರಾತ್‌ನ ವಡೋದರದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕಾಗಿ ವಿಶೇಷವಾದ ಅಗರಬತ್ತಿ ತಯಾರಿಸಲಾಗುತ್ತಿದೆ. ಅಗರಬತ್ತಿಯನ್ನು ರಾಮಮಂದಿರದ ಪ್ರತಿಷ್ಠಾಪನೆಗೂ ಮೊದಲೇ ಅಯೋಧ್ಯೆಗೆ ಕಳುಹಿಸಲಾಗುತ್ತದೆ. ಉಡುಗೊರೆಗಳನ್ನು ಕೊಡೋದಕ್ಕೆ ಬೃಹತ್ ಗಾತ್ರದ ಅಗರಬತ್ತಿಯನ್ನು ತಯಾರಿಸಲಾಗುತ್ತಿದೆ. ಈ ಅಗರಬತ್ತಿ 108 ಅಡಿ ಉದ್ದವಿದ್ದು, ಸುಮಾರು 3,428 ಕಿಲೋ ತೂಕವಿದೆ. ಇದನ್ನು 10ಕ್ಕೂ ಹೆಚ್ಚು ಕಬ್ಬಿಣದ ಟ್ರೈಪಾಡ್ ಸ್ಟ್ಯಾಂಡ್ ಅಳವಡಿಸಿ ತಯಾರಿಸಲಾಗುತ್ತಿದೆ. ಅವುಗಳ ಮೇಲೆ ಅಗರಬತ್ತಿಯನ್ನು […]

ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತರಿಂದ ತಯಾರಿಸಲಾಗುತ್ತಿದೆ 108 ಅಡಿ ಉದ್ದದ ಅಗರಬತ್ತಿ Read More »

ಡಿ.24-25 : ಶ್ರೀನಿವಾಸ ಕಲ್ಯಾಣೋತ್ಸವ | ಕಾರ್ಯಕ್ರಮ ವಿಶೇಷತೆ ಹೇಗಿರಲಿದೆ | ಇಲ್ಲಿದೆ ವಿವರ

ಪುತ್ತೂರು: ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಡಿ.24-25 ರಂದು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮಕ್ಕೆ ಭರದ ಸಿದ್ಧತೆಗಳು ನಡೆದಿದ್ದು, ಕಾರ್ಯಕ್ರಮದ ವಿಶೇಷತೆ ಹೀಗಿದೆ. 50 ಸಾವಿರ ಶ್ರೀನಿವಾಸ ಕಲ್ಯಾಣ ಲಡ್ಡು ಪ್ರಸಾದ ಸೇವೆ ಸೇರಿದಂತೆ ಅನ್ನದಾನ ಸೇವೆ, ಸರ್ವ ಸೇವೆ, ಫಲಪಂಚಾಮೃತ ಅಭಿಷೇಕ  ಸೇವೆ , ಮಹಾನಿವೇದನಾ ಸೇವೆ , ಸುಪ್ರಭಾತ ಸೇವೆ ಹಾಗೂ ಈಗಾಗಲೇ ನೋಂದಾಣಿಯಾಗಿದೆ. ಅಂದಾಜು 1.25 ಲಕ್ಷ ಜನ ಎರಡು ದಿನ ಭಾಗವಹಿಸಲಿದ್ದು, ಬೆಳಿಗ್ಗೆ ಫಲಹಾರ,

ಡಿ.24-25 : ಶ್ರೀನಿವಾಸ ಕಲ್ಯಾಣೋತ್ಸವ | ಕಾರ್ಯಕ್ರಮ ವಿಶೇಷತೆ ಹೇಗಿರಲಿದೆ | ಇಲ್ಲಿದೆ ವಿವರ Read More »

ಡಿ.24 : ಆದಿದ್ರಾವಿಡ ಸಮಾವೇಶ -2023 | ಪುತ್ತೂರಿನಿಂದ 2 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಪುತ್ತೂರು: ತುಳು ಭಾಷಿಕರಾದ ಆದಿ ದ್ರಾವಿಡ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಆದಿದ್ರಾವಿಡ ಸಮಾವೇಶ -2023 ಮಂಗಳೂರಿನ ಪುರಭವನದಲ್ಲಿ ಡಿ.24ರಂದು ಬೆಳಗ್ಗೆ 10ರಿಂದ ರಾತ್ರಿ 8ವರೆಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಬಾಬು ಮರಿಕೆ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ನಡೆಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಅಧ್ಯಕ್ಷ ಶಿವಾನಂದ ಬಲ್ಲಾಳ್

ಡಿ.24 : ಆದಿದ್ರಾವಿಡ ಸಮಾವೇಶ -2023 | ಪುತ್ತೂರಿನಿಂದ 2 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ Read More »

ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಇಂದಿನಿಂದ ಆರು ದಿನ ನಿರ್ಬಂಧ | ಯಾಕಾಗಿ ? ಇಲ್ಲಿದೆ ವಿವರ

ಚಿಕ್ಕಮಗಳೂರು: ಇಂದಿನಿಂದ 6 ದಿನಗಳ ಕಾಲ ಪಶ್ಚಿಮ ಘಟ್ಟಗಳ ಸಾಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಾ ಸೇರಿದಂತೆ ಎಲ್ಲ ಪ್ರವಾಸಿ ತಾಣಗಳು ಬಂದ್ ಆಗಲಿವೆ. ಇಂದಿನಿಂದ ರಿಂದ ಡಿ.27 ರವರೆಗೆ 6 ದಿನಗಳ ಕಾಲ ಗಿರಿ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಡಿ.24, 25, 26ರಂದು ದತ್ತಪೀಠದಲ್ಲಿ ದತ್ತಜಯಂತಿ  ಸಂಭ್ರಮ ಹಿನ್ನೆಲೆ 20 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆಗಳಿವೆ. ಆದ್ದರಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಪ್ರವಾಸಕ್ಕೆ ನಿರ್ಬಂಧ ಹೇರಿದೆ. ಈ

ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಇಂದಿನಿಂದ ಆರು ದಿನ ನಿರ್ಬಂಧ | ಯಾಕಾಗಿ ? ಇಲ್ಲಿದೆ ವಿವರ Read More »

ಅಯೋಧ್ಯೆ ರಾಮಮಂದಿರ ಉದ್ಘಾಟನೆ ನೋಡಲು ರಾಯಚೂರು ಭಕ್ತನ ಪಾದಯಾತ್ರೆ!

ರಾಯಚೂರು: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮಮಂದಿರದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಕೋಟಿ ಕೋಟಿ ಭಕ್ತರು ಶ್ರೀರಾಮನ ಜನ್ಮಭೂಮಿಗೆ ತೆರಳಲು ಸನ್ನದ್ಧರಾಗಿರುವ ಸಮಯದಲ್ಲೇ, ರಾಯಚೂರಿನ ಶ್ರೀರಾಮಭಕ್ತನೊಬ್ಬ ಕಾಲ್ನಡಿಗೆಯಲ್ಲೇ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾನೆ. ನಗರದ ಮಡ್ಡಿಪೇಟೆ ಬಡಾವಣೆ ಯುವಕ ವಿನೋದ್‌ ರೆಡ್ಡಿ ರಾಯಚೂರಿನಿಂದ ಅಯೋಧ್ಯೆಗೆ ಒಬ್ಬಂಟಿಯಾಗಿ ಪಾದಯಾತ್ರೆ ಕೈಗೊಂಡಿದ್ದಾನೆ. 8ನೇ ತರಗತಿ ಓದಿರುವ ವಿನೋದ್‌ ರೆಡ್ಡಿಯದು ಬಡ ಕುಟುಂಬ. ಸಣ್ಣ ವಯಸ್ಸಿನಿಂದಲೇ ಹಿಂದೂ ಧರ್ಮ, ಅಧ್ಯಾತ್ಮದತ್ತ ಆಸಕ್ತಿ ಬೆಳೆಸಿಕೊಂಡಿದ್ದು, ಈತ ಶ್ರೀರಾಮನ ಪರಮ ಭಕ್ತ.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ನೋಡಲು ರಾಯಚೂರು ಭಕ್ತನ ಪಾದಯಾತ್ರೆ! Read More »

ಲಾರಿ-ಅಟೋ ರಿಕ್ಷಾ ಡಿಕ್ಕಿ | ಮೂವರಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಅಟೋ ರಿಕ್ಷಾ ಹಾಗೂ ಲಾರಿ ಡಿಕ್ಕಿ ಹೊಡೆದುಕೊಂಡು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ಕುಮಾರಧಾರಾ ನದಿಯ ಸೇತುವೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ರಿಕ್ಷಾ ಚಾಲಕ ಫ್ರಾಂಕ್ಲಿನ್ ಗ್ಲನ್ ಲೋಬೋ (23) ಅವರ ಕಾಲು ತುಂಡರಿಸಲ್ಪಟ್ಟಿದೆ. ಪ್ರಯಾಣಿಕರಾದ ಉತ್ತರ ಭಾರತ ಮೂಲದ ಅಜಯ್ ಖಾರ್ವಾಲ್ (17), ಪೂರನ್ ಸಿಂಗ್ ಖಾರ್ವಾಲ್ (29) ಎಂಬವರೂ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳು ಪೆರ್ನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಗಾಯಾಳುಗಳೆಲ್ಲರನ್ನು ಉಪ್ಪಿನಂಗಡಿಯ ಅಂಬುಲೆನ್ಸ್ ಚಾಲಕ ಫಾರೂಕ್ ಜಿಂದಗಿ ತ್ವರಿತವಾಗಿ ಪುತ್ತೂರು ಆಸ್ಪತ್ರೆಗೆ

ಲಾರಿ-ಅಟೋ ರಿಕ್ಷಾ ಡಿಕ್ಕಿ | ಮೂವರಿಗೆ ಗಂಭೀರ ಗಾಯ Read More »

ರಜೌರಿಯಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ | ಮತ್ತೋರ್ವ ಯೋಧ ಬಲಿ | ಹುತಾತ್ಮ ಸೈನಿಕರ ಸಂಖ್ಯೆ 4ಕ್ಕೆ ಏರಿಕೆ

ಪೂಂಚ್ : ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೋರ್ವ ಯೋಧ ಹುತಾತ್ಮರಾಗಿದ್ದು, ಇದರೊಂದಿಗೆ ಹುತಾತ್ಮ ಯೋಧರ ಸಂಖ್ಯೆ ನಾಲ್ಕಕ್ಕೆ ಏರಿದೆ. ಗುರುವಾರ ಮಧ್ಯಾಹ್ನ 3.45ಕ್ಕೆ ರಜೌರಿಯ ಪೂಂಚ್ ನವ್ವಿ ಥಾನಮಂಡಿಯಲ್ಲಿ ಹೋಗುತ್ತಿದ್ದ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಹೊಂಚು ಹಾಕಿ ದಾಳಿ ನಡೆಸಿದ್ದರು. ಭಯೋತ್ಪಾದಕರ ಏಕಾಏಕಿ ದಾಳಿಗೆ ಯೋಧರು ತಕ್ಷಣವೇ ಪ್ರತ್ಯುತ್ತರ ನೀಡಿದರು. ಕೂಡಲೇ ಸ್ಥಳದಲ್ಲಿ ಎನ್‌ಕೌಂಟರ್ ಆರಂಭವಾಗಿತ್ತು. ಈ ವೇಳೆ ನಡೆದ ಚಕಮಕಿಯಲ್ಲಿ ಮೂವರು ಯೋಧರು ಪ್ರಾಣ ಕಳೆದುಕೊಂಡು,

ರಜೌರಿಯಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ | ಮತ್ತೋರ್ವ ಯೋಧ ಬಲಿ | ಹುತಾತ್ಮ ಸೈನಿಕರ ಸಂಖ್ಯೆ 4ಕ್ಕೆ ಏರಿಕೆ Read More »

ಮಾಧ್ಯಮ ಜಗತ್ತು ಊಹೆಗೂ ಮೀರಿ ಬದಲಾಗಿದೆ | ಮಾಧ್ಯಮಗಳ ಸವಾಲು ಮತ್ತು ಸಾಧ್ಯತೆಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಪ್ರೊ. ವಿ. ಬಿ ಅರ್ತಿಕಜೆ

ಪುತ್ತೂರು: ಸಂವಾದ ಕಾರ್ಯಕ್ರಮಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತವೆ. ಪತ್ರಿಕೋದ್ಯಮ ವಿದ್ಯಾರ್ಥಿಯಾದವನು ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಪತ್ರಿಕೋದ್ಯಮ ಬೆಳೆಯಬೇಕಾದರೆ ಪ್ರೋತ್ಸಾಹ ಬಹಳ ಮುಖ್ಯ ಎಂದು ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಹಾಗೂ ಹಿರಿಯ ಪತ್ರಕರ್ತ ಪ್ರೊ. ವಿ. ಬಿ ಅರ್ತಿಕಜೆ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯ, ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ, ಐಕ್ಯೂಎಸಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ

ಮಾಧ್ಯಮ ಜಗತ್ತು ಊಹೆಗೂ ಮೀರಿ ಬದಲಾಗಿದೆ | ಮಾಧ್ಯಮಗಳ ಸವಾಲು ಮತ್ತು ಸಾಧ್ಯತೆಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಪ್ರೊ. ವಿ. ಬಿ ಅರ್ತಿಕಜೆ Read More »

ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಯಾಗಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆ | ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಿಂದ ಆಯ್ಕೆ

ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಯಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ  ಬಿ.ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ನಡೆದ ಭಾರತೀಯ ಕುಸ್ತಿ ಸಂಘದ ಚುನಾವಣೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕದಿಂದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳಾಗಿ  ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಪಟ್ಟಿ ಅಧ್ಯಕ್ಷರಾಗಿ ಸಂಜಯ್‌ ಕುಮಾರ್‌ ಸಿಂಗ್‌, ಹಿರಿಯ ಉಪಾಧ್ಯಕ್ಷರಾಗಿ ದೇವೇಂದರ್‌,    ಉಪಾಧ್ಯಕ್ಷರಾಗಿ ಅಸಿತ್‌ ಕುಮಾರ್‌ ಸಹ, ಜಯಪ್ರಕಾಶ್‌, ಕಾರ್‍ತರ್‌ ಸಿಂಗ್‌, ಎನ್‌.ಫೋನಿ, ಪ್ರಧಾನ ಕಾರ್ಯದರ್ಶಿಯಾಗಿ

ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಯಾಗಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆ | ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಿಂದ ಆಯ್ಕೆ Read More »

ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ | ಗೌರವಾಧ್ಯಕ್ಷರಾಗಿ ರಾಧಾಕೃಷ್ಣ ಗೌಡ ನಂದಿಲ, ಅಧ್ಯಕ್ಷರಾಗಿ ಅಮರನಾಥ ಗೌಡ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಗೌಡ ತೆಂಕಿಲ, ಕೋಶಾಧಿಕಾರಿಯಾಗಿ ಪ್ರಶಾಂತ್ ಕೆಮ್ಮಾಯಿ ಆಯ್ಕೆ

ಪುತ್ತೂರು: ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷರಾಗಿ ರಾಧಾಕೃಷ್ಣ ಗೌಡ ನಂದಿಲ, ಅಧ್ಯಕ್ಷರಾಗಿ ಅಮರನಾಥ ಗೌಡ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಗೌಡ ತೆಂಕಿಲ, ಉಪಾಧ್ಯಕ್ಷರಾಗಿ ಯತೀಂದ್ರ ಕೊಚ್ಚಿ, ಬಾಲಚಂದ್ರ ಬೆಳ್ಳಿಪ್ಪಾಡಿ, ಕೋಶಾಧಿಕಾರಿಯಾಗಿ ಪ್ರಶಾಂತ್ ಕೆಮ್ಮಾಯಿ ಆಯ್ಕೆಯಾಗಿದ್ದಾರೆ. ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಒಕ್ಕಲಿಗ ಗೌಡ ‌ಸಮುದಾಯ ಭವನದಲ್ಲಿ ಪ್ರಸ್ತುತ ಅಧ್ಯಕ್ಷ ನಾಗೇಶ್ ಕೆಡೆಂಜಿ ಅವರ ಅಧ್ಯಕ್ಷತೆಯಲ್ಲಿ, ಪ್ರಧಾನ ಕಾರ್ಯದರ್ಶಿ ಸುಬ್ರಾಯ ಗೌಡ ಪಾಲ್ತಾಡಿ, ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಕುಂಟ್ಯಾನ ಹಾಗೂ ಒಕ್ಕಲಿಗ ಗೌಡ

ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ | ಗೌರವಾಧ್ಯಕ್ಷರಾಗಿ ರಾಧಾಕೃಷ್ಣ ಗೌಡ ನಂದಿಲ, ಅಧ್ಯಕ್ಷರಾಗಿ ಅಮರನಾಥ ಗೌಡ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಗೌಡ ತೆಂಕಿಲ, ಕೋಶಾಧಿಕಾರಿಯಾಗಿ ಪ್ರಶಾಂತ್ ಕೆಮ್ಮಾಯಿ ಆಯ್ಕೆ Read More »

error: Content is protected !!
Scroll to Top