ಧಾರ್ಮಿಕ ದತ್ತಿ ಇಲಾಖೆ‌ ಎಸಿ ಆದೇಶ: ರಥಮಂದಿರ ಬಳಿಯ ಅಂಗಡಿ ತೆರವು

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಮಂದಿರ ಬಳಿಯಿದ್ದ ಜ್ಯೂಸ್ ಅಂಗಡಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ತೆರವು ಮಾಡಲಾಯಿತು. ಆರಂಭದಲ್ಲಿ ತಾತ್ಕಾಲಿಕ ಹಾಗೂ ಕೆಲ ದಿನಗಳ ಮಟ್ಟಿಗೆ ಕಬ್ಬು ಜ್ಯೂಸ್ ಅಂಗಡಿ ಹಾಕಲು ಇಲ್ಲಿ ಅವಕಾಶ ನೀಡಲಾಗಿತ್ತು. ಅವಧಿ ಮೀರಿದ ಹಿನ್ನೆಲೆಯಲ್ಲಿ ಅಂಗಡಿಯನ್ನು ತೆರವು ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೂ ತೆರವು ಮಾಡಿರಲಿಲ್ಲ ಎಂದು ದೂರಲಾಗಿದೆ. ಇದೀಗ ಸಾರ್ವಜನಿಕ ದೂರಿನ‌ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ […]

ಧಾರ್ಮಿಕ ದತ್ತಿ ಇಲಾಖೆ‌ ಎಸಿ ಆದೇಶ: ರಥಮಂದಿರ ಬಳಿಯ ಅಂಗಡಿ ತೆರವು Read More »

ಕಗ್ಗದ ಸಂದೇಶ- ಶವ ವಾಹಕನ ನಿರ್ಭಾವುಕ ಚಿತ್ತದಂತೆ…

ಮೃತನ ಸಂಸಾರಕತೆ ಶವವಾಹಕರಿಗೇಕೆ?|ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ||ಜಿತಮನದಿ ಚಿತೆಗಟ್ಟಿಕೊಂಡೊಯ್ಯುತಲಿಹರವರುಧೃತಿಯ ತಳೆ ನೀನಂತು- ಮಂಕುತಿಮ್ಮ||ಸತ್ತವನ ಮನೆಯ ದುಃಖದ ವಿಚಾರದ ಕಡೆಗೆ ಶವವನ್ನು ಕೊಂಡು ಹೋಗುವವನು ಗಮನ ಕೊಡುವುದಿಲ್ಲ. ಸತ್ತವನ ಹೆಂಡತಿ ಗೋಳಾಡುತ್ತಿದ್ದರೂ; ಸಾಲ ಕೊಟ್ಟವನು ಬಂದು ಗಲಾಟೆ ಮಾಡುತ್ತಿದ್ದರೂ ಅದಾವುದನ್ನು ಲೆಕ್ಕಿಸದೆ ದೃಢ ಮನಸ್ಸಿನಿಂದ ಶವವನ್ನು ಸುಡಲು ಚಿತೆಗೆ ಕೊಂಡುಹೋಗುವನು. ನಾವು ಕೂಡ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಎದುರಾದರೂ ಧೃತಿಗೆಡದೆ ದೃಢವಾದ ಮನಸ್ಸಿನಿಂದ ಮುನ್ನಡೆಯಬೇಕು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.ಮರಣದ ಮನೆಯಲ್ಲಿ ಸತ್ತವರನ್ನು ನೆನೆನೆನೆದು

ಕಗ್ಗದ ಸಂದೇಶ- ಶವ ವಾಹಕನ ನಿರ್ಭಾವುಕ ಚಿತ್ತದಂತೆ… Read More »

Mostbet Online Casino Türkiye ️ Resmi Internet Sitesi Bonus 2300 Tl + Two Hundred And Fifty F

Mostbet Online Casino Türkiye ️ Resmi Internet Sitesi Bonus 2300 Tl + Two Hundred And Fifty Fs Türkiye Resmi Web Sitesi Content Türkiye’deki Mostbet Casino Ve Bahis Sitesinin İşlevselliği Mostbet Başka Hizmetler De Sunuyor Mu? Türkiye’de Android Ve Ios Için Mostbet Uygulaması Mostbet Türkiye’ye Adım Adım Kayıt Mostbet Resmi Web Sitesi Mostbet Bahisçisinin Karlı Promosyonlarını

Mostbet Online Casino Türkiye ️ Resmi Internet Sitesi Bonus 2300 Tl + Two Hundred And Fifty F Read More »

ಬಿಜತ್ರೆ ಕಾಲನಿಗೆ ಅಚ್ಛೇ ದಿನ್: ಕಾಮಗಾರಿ ಶಿಲಾನ್ಯಾಸ ನೆರವೇರಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಒಳಮೊಗ್ರು ಗ್ರಾಮದ ಬಿಜತ್ರೆ ಪರಿಶಿಷ್ಠ  ಪಂಗಡ ಕಾಲೋನಿಗೆ ಮಂಜೂರಾಗಿರುವ 20 ಲಕ್ಷ ರೂ. ಅನುದಾನದ ಅಬಿವೃಧ್ದಿ ಕಾಮಗಾರಿಯ ಶಿಲಾನ್ಯಾಸವನ್ನು ಶಾಸಕ ಸಂಜೀವ ಮಠದೂರು ಅವರು ನೆರವೇರಿಸಿದರು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ವರ್ಷದ ಅವಧಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಅತೀ ಹೆಚ್ಚು ಅನುದಾನವನ್ನು ರಸ್ತೆ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ದೃಷ್ಠಿಯಿಂದ ಕಾಂಕ್ರೀಟ್ ರಸ್ತೆಗೆ ಹೆಚ್ಚಿನ ಮಹತ್ವವವನ್ನು ನೀಡಲಾಗಿದೆ. ನೂತನ ವರ್ಷಕ್ಕೆ ಒಳಮೊಗ್ರು ಬಿಜತ್ರೆ ಕಾಲೋನಿ ಮಹಾಜನತೆಗೆ

ಬಿಜತ್ರೆ ಕಾಲನಿಗೆ ಅಚ್ಛೇ ದಿನ್: ಕಾಮಗಾರಿ ಶಿಲಾನ್ಯಾಸ ನೆರವೇರಿಸಿ ಶಾಸಕ ಸಂಜೀವ ಮಠಂದೂರು Read More »

ಆರ್ಥಿಕ ಸಬಲೀಕರಣಕ್ಕೆ ಒಕ್ಕಲಿಗ ಸ್ವಸಹಾಯ ಸಂಘದ ಕೊಡುಗೆ ಅಪಾರ | ಸ್ವಸಹಾಯ ಟ್ರಸ್ಟಿನ ಸ್ವಂತ ಕಚೇರಿ, ವಿವಾಹ ವೇದಿಕೆ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಒಕ್ಕಲಿಗ ಸ್ವಸಹಾಯ ಸಂಘಗಳು ಗ್ರಾಮೀಣ ಜನರ ಬದುಕಿನಲ್ಲಿ ಆರ್ಥಿಕ ಸಬಲೀಕರಣಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದೆ. 10 ವರ್ಷಗಳ ಹಿಂದೆ ಆರಂಭವಾಗಿ ಸ್ವಸಹಾಯ ಸಂಘಗಳನ್ನು ಹುಟ್ಟುಹಾಕಿ, ಜನರ ಬದುಕಿಗೆ ಬೆಳಕಾದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಇದೀಗ ಸ್ವಂತ ಕಚೇರಿಗೆ ಪಾದಾರ್ಪಣೆ ಮಾಡಿರುವುದು ಅಭಿನಂದನೀಯ ಎಂದ ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ನೂತನ ಕಚೇರಿ ಮತ್ತು ವಿವಾಹ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಾಹ ವೇದಿಕೆ, ಸಾಮಾಜಿಕ ಚಟುವಟಿಕೆ ಮುಂತಾದ ಕಾರ್ಯಕ್ರಮಗಳೊಂದಿಗೆ

ಆರ್ಥಿಕ ಸಬಲೀಕರಣಕ್ಕೆ ಒಕ್ಕಲಿಗ ಸ್ವಸಹಾಯ ಸಂಘದ ಕೊಡುಗೆ ಅಪಾರ | ಸ್ವಸಹಾಯ ಟ್ರಸ್ಟಿನ ಸ್ವಂತ ಕಚೇರಿ, ವಿವಾಹ ವೇದಿಕೆ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

ಅಜ್ಜಿಕಲ್ಲು ಶಾಲೆಯಲ್ಲಿ ಶಾಸಕರ ಹಾಗೂ ಎಂ.ಆರ್.ಪಿ.ಎಲ್ ಕೊಡುಗೆಗಳ ಅನಾವರಣ

ಪುತ್ತೂರು: ಅಜ್ಜಿಕಲ್ಲು ಏಕತಡ್ಕ ಹಿ.ಪ್ರಾ. ಶಾಲೆಯಲ್ಲಿ ಝೇಂಕಾರ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಶಾಸಕರ ಅನುದಾನದಿಂದ ನೀಡಿದ ಕೊಡುಗೆ ಹಾಗೂ ಎಂ.ಆರ್.ಪಿ.ಎಲ್.ನ ಕೊಡುಗೆಗಳನ್ನು ಅನಾವರಣ ಮಾಡಲಾಯಿತು. ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಸಮಾಜ ಹಾಗೂ ಸರಕಾರ ಪರಸ್ಪರ ಕೈ ಜೋಡಿಸಿದಾಗ ಇಂತಹ ಸಂಭ್ರಮ ಮೂಡಿಬರಲು ಸಾಧ್ಯ. ಮಕ್ಕಳನ್ನು ಪೋಷಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವ ಕೆಲಸ ಪೋಷಕರಿಂದ ಆಗಬೇಕು ಎಂದರು. ಎಂ.ಆರ್.ಪಿ.ಎಲ್.ನಿಂದ

ಅಜ್ಜಿಕಲ್ಲು ಶಾಲೆಯಲ್ಲಿ ಶಾಸಕರ ಹಾಗೂ ಎಂ.ಆರ್.ಪಿ.ಎಲ್ ಕೊಡುಗೆಗಳ ಅನಾವರಣ Read More »

ಶಾಸಕರ ಅನುದಾನದಿಂದ ಬಹಳಷ್ಟು ಅಭಿವೃದ್ಧಿ | ವೀರಮಂಗಲ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷೆ

ವೀರಮಂಗಲ ಮಾದರಿ ಶಾಲೆ ಒಂದು ಶಾಲೆ ಹೇಗಿದೆ ಎಂದು ಆ ಊರನ್ನು ನೋಡಿ ತಿಳಿದುಕೊಳ್ಳಬಹುದು. ವೀರಮಂಗಲ ಶಾಲೆಯ ಅಭಿವೃದ್ಧಿ ನೋಡಿದಾಗ, ಊರಿನ ಜನರ ಹೃದಯ ಶ್ರೀಮಂತಿಕೆಯನ್ನು ಅರಿತುಕೊಳ್ಳಬಹುದು. ಶಾಸಕನಾಗಿ ನಾನು ಅನುದಾನ ನೀಡಿರಬಹುದು. ಅದರ ಜೊತೆಗೆ ಊರಿನ ಜನರ ಕೊಡುಗೆಯೂ ಇದೆ. ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು ನೀಡಿರುವ ಅನುದಾನಗಳನ್ನು ಬಳಸಿಕೊಂಡು ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಶಾಲೆಯಲ್ಲಿ ಆಗಿದೆ ಎಂದು ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಹೇಳಿದರು. ವೀರಮಂಗಲ ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಂಜೀವ

ಶಾಸಕರ ಅನುದಾನದಿಂದ ಬಹಳಷ್ಟು ಅಭಿವೃದ್ಧಿ | ವೀರಮಂಗಲ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷೆ Read More »

ಹೊಸ ವರ್ಷಾಚರಣೆ ವೇಳೆ ಯುವತಿಗೆ ಕಿರುಕುಳ

ಜನರ ಗುಂಪು ಚದುರಿಸಲು ಪೊಲೀಸರಿಂದ ಲಾಠಿಚಾರ್ಜ್‌ ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಕೆಲವು ಕಿಡಿಗೇಡಿಗಳು ಯುವತಿಗೆ ಕಿರುಕುಳ ನೀಡಿರುವ ಘಟನೆಗಳು ನಡೆದಿದ್ದು, ಕೋರಮಂಗಲದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.ಚರ್ಚ್ ಸ್ಟ್ರೀಟ್‌ನಲ್ಲಿ ಪ್ರಿಯಕರನೊಂದಿಗೆ ಬಂದಿದ್ದ ಯುವತಿಯೊಬ್ಬಳಿಗೆ ಕಿಡಿಕೇಡಿಗಳು ಕಿರುಕುಳ ನೀಡಿದ್ದಾರೆ. ಈ ವೇಳೆ ಆಕೆಯ ಗೆಳೆಯ ದುಷ್ಕರ್ಮಿಗಳೊಂದಿಗೆ ಜಗಳಕ್ಕಿಳಿದಿದ್ದು, ಕೈಕೈ ಮಿಲಾಯಿಸಿದ್ದಾರೆ. ಆದರೆ, ಪೊಲೀಸರು ಬರುವಷ್ಟರದಲ್ಲಿ ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಪಬ್ ಗಳಲ್ಲಿ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು.ಕೋರಮಂಗಲದಲ್ಲಿ ಪಬ್‌ಗಳ ಒಳಗೆ

ಹೊಸ ವರ್ಷಾಚರಣೆ ವೇಳೆ ಯುವತಿಗೆ ಕಿರುಕುಳ Read More »

ರೂಪೇಶ್‌ ಶೆಟ್ಟಿ ಬಿಗ್‌ಬಾಸ್‌ ವಿನ್ನರ್‌

60 ಲ.ರೂ. ಬಹುಮಾನ ಬೆಂಗಳೂರು: ರಿಯಾಲಿಟಿ ಶೋ ಬಿಗ್‌ಬಾಸ್ 9ರ ನಟ ರೂಪೇಶ್ ಶೆಟ್ಟಿ ಗೆದ್ದಿದ್ದಾರೆ. ಗಿರಿಗಿಟ್ ಚಿತ್ರದ ಮೂಲಕ ರೂಪೇಶ್ ಶೆಟ್ಟಿ ಹೆಸರು ಮಾಡಿದ್ದರು. ರೂಪೇಶ್ ಶೆಟ್ಟಿ ವಿಜೇತರಾಗಿದ್ದರೆ, ಅವರಿಗೆ ಪ್ರಬಲ ಪೈಪೋಟಿ ನೀಡಿದ್ದ ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ.ರೂಪೇಶ್ ಶೆಟ್ಟಿ ಒಟಿಟಿ ಮೂಲಕ ಬಿಗ್ ಬಾಸ್ ಸ್ಪರ್ಧಿಯಾಗಿ ಆಯ್ಕೆಯಾಗಿ ಮುಖ್ಯ ರಿಯಾಲಿಟಿ ಶೋ ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ, ಉಳಿದ ಎಲ್ಲ ಸ್ಪರ್ಧಿಗಳಿಗೆ ಪೈಪೋಟಿ ನೀಡಿದ್ದರು. ಒಟಿಟಿಯಲ್ಲೂ ರೂಪೇಶ್ ಶೆಟ್ಟಿ ಟಾಪರ್ ಆಗಿದ್ದರು.ಬಿಗ್

ರೂಪೇಶ್‌ ಶೆಟ್ಟಿ ಬಿಗ್‌ಬಾಸ್‌ ವಿನ್ನರ್‌ Read More »

ಆರ್‌ಎಸ್‌ಎಸ್‌ ಕಚೇರಿ ಸ್ಫೋಟಿಸುವ ಬೆದರಿಕೆ

ಫೋನ್‌ ಕರೆ ಮಾಡಿ ಬೆದರಿಕೆಯೊಡ್ಡಿದ ದುಷ್ಕರ್ಮಿ ನಾಗಪುರ : ಮಹಾರಾಷ್ಟ್ರದ ನಾಗಪುರದಲ್ಲಿರುವ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯನ್ನು ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆಯೊಡ್ಡಿದ ಬಳಿಕ ಕಚೇರಿಗೆ ಬಿಗು ಭದ್ರತೆ ಒದಗಿಸಲಾಗಿದೆ.ಶನಿವಾರ ಅಜ್ಞಾತ ವ್ಯಕ್ತಿಯೊಬ್ಬ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಫೋನ್‌ ಮಾಡಿ ಆರ್‌ಎಸ್‌ಎಸ್‌ ಕಚೇರಿಯನ್ನು ಸ್ಫೋಟಿಸುವ ಬೆದರಿಕೆಯೊಡ್ಡಿದ್ದಾನೆ. ಕೂಡಲೇ ಪೊಲೀಸರು ಬಾಂಬ್‌ ಶೋಧ ತಂಡ ಮತ್ತು ಶ್ವಾನ ಪಡೆಯೊಂದಿಗೆ ತೆರಳಿ ಆರ್‌ಎಸ್‌ಎಸ್‌ ಕಚೇರಿಯನ್ನು ಶೋಧಿಸಿ ಬಳಿಕ ಬಿಗು ಭದ್ರತೆ ಒದಗಿಸಿದ್ದಾರೆ. ಕಚೇರಿ ಸುತ್ತ ಹೆಚ್ಚುವರಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ.

ಆರ್‌ಎಸ್‌ಎಸ್‌ ಕಚೇರಿ ಸ್ಫೋಟಿಸುವ ಬೆದರಿಕೆ Read More »

error: Content is protected !!
Scroll to Top