ಯಶ್ ಹುಟ್ಟುಹಬ್ಬದ ಕಟೌಟ್ ಕಟ್ಟುವಾಗ ವಿದ್ಯುತ್ ಶಾಕ್! | ಮೂವರು ಅಭಿಮಾನಿಗಳು ಮೃತ್ಯು!!

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಅಂಗವಾಗಿ ಕಟೌಟ್ ಕಟ್ಟಲು ಹೋಗಿದ್ದ ಮೂವರು ಅಭಿಮಾನಿಗಳು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ದುರಂತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಹನುಮಂತ ಹರಿಜನ್, ಮುರಳಿ ನಡವಿನಮನಿ  ಮತ್ತು ನವೀನ್ ಗಾಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಶ್ ಮೇಲಿನ ಅಭಿಮಾನದಿಂದ ಮಧ್ಯರಾತ್ರಿ ಹುಟ್ಟುಹಬ್ಬ ಆಚರಿಸಲು ಇವರೆಲ್ಲರೂ ಯೋಜಿಸಿದ್ದರು ಎನ್ನಲಾಗಿದೆ. ಈ ವೇಳೆ ಯಶ್ ಫೋಟೋವುಳ್ಳ ಬೃಹತ್ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿದೆ. ಈ ಸಂಬಂಧ […]

ಯಶ್ ಹುಟ್ಟುಹಬ್ಬದ ಕಟೌಟ್ ಕಟ್ಟುವಾಗ ವಿದ್ಯುತ್ ಶಾಕ್! | ಮೂವರು ಅಭಿಮಾನಿಗಳು ಮೃತ್ಯು!! Read More »

ಟಾಟಾ ಸುಮೋ, ಅಂಗಡಿ ಮೇಲೆ ಬಿದ್ದ ಮರ | ಇಬ್ಬರಿಗೆ ಗಾಯ

ಕಡಬ: ಚಲಿಸುತ್ತಿದ್ದ ಟಾಟಾ ಸುಮೋ ಹಾಗೂ ಅಂಗಡಿಯೊಂದರ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬ ಜಂಕ್ಷನ್ ನಲ್ಲಿ ಸೋಮವಾರ ನಡೆದಿದೆ. ವಾಹನ ಚಾಲಕ ಬಿಳಿನೆಲೆ ನಿವಾಸಿ ಶೇಖ‌ರ್ ಹಾಗೂ ಮತ್ತೋರ್ವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸುಬ್ರಹ್ಮಣ್ಯದಿಂದ ನೆಟ್ಟಣ ಕಡೆಗೆ ತೆರಳುತ್ತಿದ್ದ ಟಾಟಾ ಸುಮೋ ಹಾಗೂ ಕೈಕಂಬ ಜಂಕ್ಷನ್ ನಲ್ಲಿದ್ದ ಗೂಡಂಗಡಿಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ

ಟಾಟಾ ಸುಮೋ, ಅಂಗಡಿ ಮೇಲೆ ಬಿದ್ದ ಮರ | ಇಬ್ಬರಿಗೆ ಗಾಯ Read More »

ಬಾಂಗ್ಲಾ ಪ್ರಧಾನಿಯಾಗಿ ಶೇಖ್ ಹಸೀನಾ ಮರು ಆಯ್ಕೆ

ಢಾಕಾ: ಭಾನುವಾರ ಬಾಂಗ್ಲಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ 300 ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಶೇಖ್ ಹಸೀನಾ ಅವರು ಸತತ ಐದನೇ ಬಾರಿಗೆ ಪ್ರಧಾನಿಯಾಗಿ ಮರು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಚುನಾವಣಾ ಫಲಿತಾಂಶದಲ್ಲಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ 300 ಸಂಸದೀಯ ಸ್ಥಾನಗಳ ಪೈಕಿ 224 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಾಂಗ್ಲಾದೇಶದ ರಾಷ್ಟ್ರೀಯ ಪಕ್ಷವು ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಪಕ್ಷೇತರರು 62 ಸ್ಥಾನಗಳಲ್ಲಿ ಗೆಲುವು

ಬಾಂಗ್ಲಾ ಪ್ರಧಾನಿಯಾಗಿ ಶೇಖ್ ಹಸೀನಾ ಮರು ಆಯ್ಕೆ Read More »

ಏಳು ಮಕ್ಕಳಿದ್ದೂ ಅನಾಥಾಶ್ರಮ ಸೇರಿದ ವೃದ್ಧೆ ಸಾವು | ಅಂತ್ಯ ಸಂಸ್ಕಾರಕ್ಕೂ ಬಾರದ ಮಕ್ಕಳು!! | ಮಕ್ಕಳ ಸ್ಥಾನದಲ್ಲಿ ನಿಂತು ಆರೋಗ್ಯ ವಿಚಾರಿಸುತ್ತಿದ್ದ ಎಸ್.ಐ. ನಂದಕುಮಾರ್!

ಉಪ್ಪಿನಂಗಡಿ: ವೃದ್ಧಾಪ್ಯದ ಹಿನ್ನಲೆಯಲ್ಲಿ ಮಕ್ಕಳಿಂದ ಅನಾಥಾಶ್ರಮ ಸೇರಿದ ವೃದ್ಧೆಯೊಬ್ಬರು ಹೃದಯಾಘಾತದಿಂದ ಭಾನುವಾರ ನಿಧನರಾದರು. 90ರ ವಯಸ್ಸಿನ ವೃದ್ಧೆ ಲಕ್ಷ್ಮೀ ಹೆಗ್ಡೆ ನಿಧನರಾದವರರು. ದುರಾದೃಷ್ಟ ಎಂದರೆ ಅವರಿಗೆ 7 ಮಕ್ಕಳಿದ್ದರೂ ಯಾರೂ ಪಾರ್ಥಿವ ಶರೀರದ ಅಂತಿಮ ಕಾರ್ಯಕ್ಕೆ ಆಗಮಿಸದ ಕಾರಣ ಅನಾಥಾಶ್ರಮದವರೇ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ಘಟನೆಯೂ ನಡೆಯಿತು. ಉಪ್ಪಿನಂಗಡಿ ಸಮೀಪದ ಇಳಂತಿಲದಲ್ಲಿ ಲಕ್ಷ್ಮೀ ಹೆಗ್ಡೆ ಸ್ವಂತ ಮನೆಯನ್ನು ಹೊಂದಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ ಅಸಹಾಯಕತೆಗೆ ಸಿಲುಕಿದ ಅವರು ನ್ಯಾಯ ಬಯಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಮಕ್ಕಳನ್ನು ಕರೆದು

ಏಳು ಮಕ್ಕಳಿದ್ದೂ ಅನಾಥಾಶ್ರಮ ಸೇರಿದ ವೃದ್ಧೆ ಸಾವು | ಅಂತ್ಯ ಸಂಸ್ಕಾರಕ್ಕೂ ಬಾರದ ಮಕ್ಕಳು!! | ಮಕ್ಕಳ ಸ್ಥಾನದಲ್ಲಿ ನಿಂತು ಆರೋಗ್ಯ ವಿಚಾರಿಸುತ್ತಿದ್ದ ಎಸ್.ಐ. ನಂದಕುಮಾರ್! Read More »

ಅಮೃತರು ಎಷ್ಟೊಂದು ಮೆಲುದನಿಯ ಮೆದುಹೃದಯದ ಸಜ್ಜನರು…

ಪೂಕರೆ. ಗುರಿಕಾರರಾಗಿದ್ದ ಅಮೃತ ಸೋಮೇಶ್ವರರ ಮದಿಪು 1989 ಏಪ್ರಿಲ್ 15 ಮತ್ತು16ರಂದು ಮುಲ್ಕಿ ನಾರಾಯಣ ಕಿಲ್ಲೆ ನಗರದ (ಬಪ್ಪನಾಡು) ದೊಂಪದಲ್ಲಿ ಅಖಿಲ ಭಾರತ ತುಳು ಸಮ್ಮೇಳನ ನಡೆಯುತ್ತದೆ. ಸಮ್ಮೇಳನದ ಅಧ್ಯಕ್ಷತೆಯನ್ನು  ಕವಿ, ಕತೆಗಾರ, ಸಂಶೋಧಕ, ಜನಪದ ಲೇಖಕ ,ಪ್ರಾಧ್ಯಾಪಕ, ಯಕ್ಷಗಾನ ಪ್ರಸಂಗಕರ್ತ ಶ್ರೀ ಅಮೃತ ಸೋಮೇಶ್ವರರು ವಹಿಸುತ್ತಾರೆ. ಅಮೃತರು ಎಂತಹ ಸಜ್ಜನ ಸಹನಾಶೀಲ ಮೆಲುದನಿಯವರು ಎಂದರೆ ತಮ್ಮ ಅಧ್ಯಕ್ಷ ಭಾಷಣದ ಆರಂಭದಲ್ಲಿ… (ಅಮೃತರ ಪೂಕರೆ ಗುರಿಕಾರ್ಮೆದ ಮದಿಪು ನುಡಿಗಳ ಆರಂಭದ ಮಾತುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಇಲ್ಲಿ

ಅಮೃತರು ಎಷ್ಟೊಂದು ಮೆಲುದನಿಯ ಮೆದುಹೃದಯದ ಸಜ್ಜನರು… Read More »

ಶಾಂತಿಗೋಡು ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆ

ಪುತ್ತೂರು: ಶಾಂತಿಗೋಡು ಒಕ್ಕಲಿಗ ಗೌಡ ಸೇವಾ ಸಂಘದ ಸಭೆ ಶಾಂತಿಗೋಡಿನ ದೇವಪ್ಪ ಗೌಡರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪಧಾಧಿಕಾರಿಗಳ ಆಯ್ಕೆ ನಡೆಯಿತು. ಪುತ್ತೂರು ತಾಲೂಕು ಒಕ್ಕಲಿಗ ಗೌಡ ಮಾತೃ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿ ದಯಾನಂದ ಕಟ್ಟಪುಣಿ, ಕೋಶಾಧಿಕಾರಿ ಶಿವರಾಮ ಮಾತಾವು, ಮಹಿಳಾ ಘಟಕದ ಅಧ್ಯಕ್ಷೆ ವಾರಿಜ ಬೆಳ್ಳಿಯಪ್ಪ, ಪುತ್ತೂರು ಯುವ ಒಕ್ಕಲಿಗ ಸಂಘದ ಅಧ್ಯಕ್ಷ ಅಮರನಾಥ್  ಬಪ್ಪಳಿಗೆ, ತಾಲೂಕಿನ ಯುವ ಒಕ್ಕಲಿಗ ಗೌಡ ಸಂಘದ ಕೋಶಾಧಿಕಾರಿ ಪ್ರಶಾಂತ್ ಕೆಮ್ಮಾಯಿ, ಊರ ಗೌಡ್ರುಗಳಾದ

ಶಾಂತಿಗೋಡು ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆ Read More »

ಕಾಮಗಾರಿ ಪ್ರಗತಿಯಲ್ಲಿರುವಾಗ ಮತ್ತೊಮ್ಮೆ ಶಿಲಾನ್ಯಾಸ ಅಗತ್ಯವೇ | ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಪ್ರಶ್ನೆ

ಪುತ್ತೂರು: ಅಮೃತ ನಗರೋತ್ಥಾನ 2ನೇ ಹಂತದ 4.67 ಕೋಟಿ ರೂ. ಮತ್ತು ನಗರೋತ್ಥಾನ ಪ್ರೋತ್ಸಾಹ ಧನ 3 ಕೋಟಿ ರೂ. ಅನುದಾನದಡಿ ಕೈಗೊಳ್ಳುವ ಬೆದ್ರಾಳದ ಸೇತುವೆ ಸಹಿತ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಆಗಿನ ಶಾಸಕರು 2023ನೇ ಮಾರ್ಚ್ 8 ರಂದು ನೆರವೇರಿಸಿದ್ದಾರೆ. ಕಾಮಗಾರಿಯೂ ಪ್ರಗತಿಯಲ್ಲಿದೆ. ಆದರೆ ಇದೀಗ ಮತ್ತೊಮ್ಮೆ ಈಗಿನ ಶಾಸಕರು ಬೆದ್ರಾಳದಲ್ಲೇ ಅದೇ ಕಾಮಗಾರಿಗೆ ಶಿಲಾನ್ಯಾಸ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ. ನಗರೋತ್ಥಾನದಲ್ಲಿ ಮೊದಲನೆ ಹಂತದಲ್ಲಿ 30  ಕೋಟಿ

ಕಾಮಗಾರಿ ಪ್ರಗತಿಯಲ್ಲಿರುವಾಗ ಮತ್ತೊಮ್ಮೆ ಶಿಲಾನ್ಯಾಸ ಅಗತ್ಯವೇ | ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಪ್ರಶ್ನೆ Read More »

ಭಾರೀ ಮಳೆಗೆ ಒಡೆದ ಕಿಂಡಿ ಅಣೆಕಟ್ಟು | ಕೃಷಿ ಭೂಮಿ ನಾಶ

ಚೆನ್ನಾವರ : ಶನಿವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಚೆನ್ನಾವರ ಬಳಿಯ ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನ ಒಂದು ಪಾರ್ಶ್ವ ಒಡೆದು ಅಪಾರ ಪ್ರಮಾಣದ ಕೃಷಿ ಭೂಮಿ‌ ನಷ್ಟವಾಗಿದೆ. ತೋಟಕ್ಕೆ ನೀರು ಹರಿದು ಮಣ್ಣು ಕುಸಿದಿದ್ದು, ಅಡಕೆ ಮರಗಳು ಧರೆಗುರುಳಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದ್ದು, ಅಧಿಕಾರಿಗಳಿಗೆ ಪರಿಹಾರ ನೀಡಬೇಕೆಂದು ಸೂಚಿಸಿದರು.

ಭಾರೀ ಮಳೆಗೆ ಒಡೆದ ಕಿಂಡಿ ಅಣೆಕಟ್ಟು | ಕೃಷಿ ಭೂಮಿ ನಾಶ Read More »

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತ್ಯು !

ಪುತ್ತೂರು: ಹೋಂಡಾ ಆಕ್ಟೀವಾ ಹಾಗೂ ಕಾರು ಅಪಘಾತದಲ್ಲಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕ್ಟೀವಾ ಸಹಸವಾರ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಇರ್ದೆ ಗ್ರಾಮದ ಉಪ್ಪಳಿಗೆ ನಾರಾಯಣ ನಾಯ್ಕ ಹಾಗೂ ಕಲ್ಯಾಣ ದಂಪತಿ ಪುತ್ರ ಪ್ರವೀಣ (18) ಮೃತ ಯುವಕ. ಡಿ.31 ರಂದು ಪ್ರವೀಣ್ ಪುತ್ತೂರಿನಿಂದ ಮನೆಯತ್ತ ಹಿಂದಿರುಗುತ್ತಿದ್ದಾಗ ಮುಕ್ರಂಪಾಡಿ ಬಳಿ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ರಸ್ತೆಗೆಸೆಯಲ್ಪಟ್ಟ ಸಹಸವಾರ ಪ್ರವೀಣ್ ತೀವ್ರ ಗಾಯಗೊಂಡು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಹೆಚ್ಚಿನ

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತ್ಯು ! Read More »

ಸ್ಕೂಟಿಗೆ ಲಾರಿ ಡಿಕ್ಕಿ : ಗಂಭೀರ ಗಾಯ!

ಪುತ್ತೂರು: ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರೆ ಗಂಭೀರ ಗಾಯಗೊಂಡ ಘಟನೆ ಮಾಣಿ-ಮೈಸೂರು ಹೆದ್ದಾರಿ ತೆಂಕಿಲ ಬಳಿ ನಡೆದಿದೆ. ಸುಳ್ಯ ಕಡೆಗೆ ಮೀನು ಮಾರಾಟ ಮಾಡುತ್ತಿದ್ದ ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಮುಂದುಗಡೆಯಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿ ಚಾಲಕನ ಅಜಾಗರೂಕತೆ ಚಾಲನೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಕೂಟಿಗೆ ಲಾರಿ ಡಿಕ್ಕಿ : ಗಂಭೀರ ಗಾಯ! Read More »

error: Content is protected !!
Scroll to Top