ಚಳಿ ಕಾಯಿಸಲು ಹಾಕಿದ್ದ ಬೆಂಕಿಗೆ ಅವಳಿ ಕಂದಮ್ಮಗಳು ಸಜೀವ ದಹನ!!

ಉತ್ತರಪ್ರದೇಶ: ಮೈನ್‌ಪುರಿ ಜಿಲ್ಲೆಯಲ್ಲಿ ಅಜಾಗರೂಕತೆಯಿಂದ ಭೀಕರ ಅಪಘಾತವೇ ಸಂಭವಿಸಿದೆ. ಮಂಚಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆರು ತಿಂಗಳ ಅವಳಿ ಕಂದಮ್ಮಗಳು ಸಜೀವ ದಹನವಾಗಿದ್ದಾರೆ. ಮೈನ್‌ಪುರಿ ಜಿಲ್ಲೆಯ ಬೆಂಚಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೈನ್ಪುರಿ ರಸ್ತೆ ಬಳಿ ವಾಸಿಸುವ ಗೌರವ್ ಅಲಿಯಾಸ್ ದಿಲೀನ್ ಕುಮಾರ್ ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದರು. ಮನೆಯಲ್ಲಿ ಅವರ ಪತ್ನಿ ರಜನಿ ಅವರ ಆರು ತಿಂಗಳ ಅವಳಿ ಹೆಣ್ಣು ಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಇದ್ದರು. ರಜನಿ ಟೆರೇಸ್​​​​ನಲ್ಲಿರುವ ಕೋಣೆಯಲ್ಲಿ ನೇವಾರ್ ಕಾಟ್ […]

ಚಳಿ ಕಾಯಿಸಲು ಹಾಕಿದ್ದ ಬೆಂಕಿಗೆ ಅವಳಿ ಕಂದಮ್ಮಗಳು ಸಜೀವ ದಹನ!! Read More »

ರಾಮಮಂದಿರ ಉದ್ಘಾಟನೆಯಂದು ಮೌನ ವ್ರತ ಮುರಿಯಲಿದ್ದಾರೆ ಮೌನಿ ಮಾತಾ!!

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಮೌನ ಮುರಿಯುತ್ತೇನೆ ಎಂದು ಶಪಥಗೈದಿದ್ದ ಮಹಿಳೆಯೊಬ್ಬರು ಬರೋಬ್ಬರಿ 30 ವರ್ಷದ ನಂತರ ಮಾತನಾಡಲಿದ್ದಾರೆ. ಜಾರ್ಖಂಡ್ನ 85 ವರ್ಷದ ಸರಸ್ವತಿ ದೇವಿ 1992ರ ಡಿ. 6ರಂದು ಜನ್ಮಸ್ಥಾನದಲ್ಲಿ ದಾಳಿಕೋರರು ನಿರ್ಮಿಸಿದ್ದ ಕಟ್ಟಡ ಕರಸೇವಕರಿಂದ ನೆಲಸಮವಾಗಿದ್ದು, ಅಂದು ಸರಸ್ವತಿ ದೇವಿ ಮೌನವ್ರತ ಕೈಗೊಂಡಿದ್ದರು. ಜ.22 ರಂದು ಸರಸ್ವತಿ ದೇವಿ ಅಗರ್ವಾಲ್ ತಮ್ಮ ಕನಸು ನನಸಾಗುತ್ತಿರುವುದರಿಂದ ಅಂದಿನಿಂದ ಮತ್ತೆ ಮಾತನಾಡಲು ತೀರ್ಮಾನಿಸಿದ್ದಾರೆ. 30 ವರ್ಷದ ಅವರ ಮೌನ ದೀಕ್ಷೆ ಕೊನೆಗೊಳ್ಳುವ ಕಾಲ ರಾಮಮಂದಿರ ನಿರ್ಮಾಣದೊಂದಿಗೆ ಸನ್ನಿಹಿತವಾಗಿದೆ.

ರಾಮಮಂದಿರ ಉದ್ಘಾಟನೆಯಂದು ಮೌನ ವ್ರತ ಮುರಿಯಲಿದ್ದಾರೆ ಮೌನಿ ಮಾತಾ!! Read More »

ಹೆತ್ತ ಮಗುವನ್ನೇ ಹತ್ಯೆಗೈದು, ಬ್ಯಾಗಿನಲ್ಲಿ ತುಂಬಿಸಿದ ಸ್ಟಾರ್ಟಪ್ ಕಂಪೆನಿ ಸಿಇಓ!!

ಬೆಂಗಳೂರಿನ ಎ.ಐ. ಸ್ಟಾರ್ಟಪ್ ಕಂಪನಿಯೊಂದರ ಸಿಇಒ ಒಬ್ಬಾಕೆ ತನ್ನ ಮಗನನ್ನೇ ಕೊಂದು ಗೋವಾದಿಂದ ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಬರುತ್ತಿದ್ದಾಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾಳೆ. 39 ವರ್ಷದ ಈಕೆಯ ಹೆಸರು ಸುಚನಾ ಸೇಠ್. ಬೆಂಗಳೂರಿನಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್ ಮೈಂಡ್‌ಫುಲ್ ಎ.ಐ. ಲ್ಯಾಬ್ಸ್‌ನ ಸಹ-ಸ್ಥಾಪಕಿ ಹಾಗೂ ಸಿಇಒ. ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆಗೈದಿದ್ದಾಳೆ ಎಂಬುದು ಈಕೆಯ ಮೇಲಿರುವ ಆರೋಪ. ಮಗನ ಶವವನ್ನು ಬ್ಯಾಗ್‌ನಲ್ಲಿ ತುಂಬಿ ಟ್ಯಾಕ್ಸಿಯಲ್ಲಿ ಕರ್ನಾಟಕಕ್ಕೆ ಪ್ರಯಾಣಿಸುತ್ತಿರುವಾಗ ಸಿಕ್ಕಿಬಿದ್ದಿದ್ದಾಳೆ. ಸುಚನಾ ಸೇಠ್ ಅವರನ್ನು ಸೋಮವಾರ ಕರ್ನಾಟಕದ ಚಿತ್ರದುರ್ಗದಲ್ಲಿ

ಹೆತ್ತ ಮಗುವನ್ನೇ ಹತ್ಯೆಗೈದು, ಬ್ಯಾಗಿನಲ್ಲಿ ತುಂಬಿಸಿದ ಸ್ಟಾರ್ಟಪ್ ಕಂಪೆನಿ ಸಿಇಓ!! Read More »

ಫುಟ್ಬಾಲ್ ದಿಗ್ಗಜ ಫ್ರಾಂಜ್ ಬೆಕನ್ಬೌರ್ ಇನ್ನಿಲ್ಲ!

ಜರ್ಮನಿಯ ಫುಟ್ಬಾಲ್ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕನ್ಬೌರ್ (78) ನಿಧನರಾಗಿದ್ದಾರೆ ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ಪ್ರಕಟಿಸಿದೆ. “ಫ್ರಾಂಜ್ ಬೆಕನ್ಬೌರ್ ಅಗಲಿಕೆ ತೀವ್ರ ದುಃಖದ ವಿಚಾರ” ಎಂದು ಅವರ ಕುಟುಂಬವು ಜರ್ಮನ್ ಸುದ್ದಿ ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಿದೆ. 1974ರಲ್ಲಿ ಜರ್ಮನಿ ತಂಡದ ನಾಯಕರಾಗಿದ್ದಾಗ ಬೆಕನ್ಬೌರ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದರು. ನಿವೃತ್ತಿ ಬಳಿಕ ಅವರು ತಂಡದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡ 1990ರಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆದ್ದಿತ್ತು.

ಫುಟ್ಬಾಲ್ ದಿಗ್ಗಜ ಫ್ರಾಂಜ್ ಬೆಕನ್ಬೌರ್ ಇನ್ನಿಲ್ಲ! Read More »

ಧಾರ್ಮಿಕ ಕಾರ್ಯಕ್ರಮ ಸಮಾಜಕ್ಕೆ ಶಕ್ತಿ: ಪುತ್ತಿಲ

ಕಾವು: ಇಲ್ಲಿನ ಪುತ್ತಿಲ ಪರಿವಾರದ ವತಿಯಿಂದ ಕಾವು ಶ್ರೀ ಪಂಚಲಿಂಗೇಶ್ವರ ದೇವರಿಗೆ ಸೋಮವಾರ ಪೂಜೆ ನೆರವೇರಿಸಲಾಯಿತು. ನೇತೃತ್ವ ವಹಿಸಿದ್ದ ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಗೌರವ ಸ್ವೀಕರಿಸಿ ಮಾತನಾಡಿ, ನಾವು ಒಗ್ಗಟ್ಟಿನಿಂದ ನಡೆಸುವ ಧಾರ್ಮಿಕ ಕಾರ್ಯಕ್ರಮಗಳು  ಹಿಂದೂ ಸಮಾಜಕ್ಕೆ ಶಕ್ತಿಯನ್ನು ತುಂಬುತ್ತವೆ. ನಿರಂತರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹಿಂದುಗಳಲ್ಲಿ ಜಾಗೃತಿಯೂ ಮೂಡುತ್ತದೆ. ಎಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದರು. ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರದ ಕೇಂದ್ರ ಕಚೇರಿ ಅಧ್ಯಕ್ಷರು, ಪದಾಧಿಕಾರಿಗಳು, ಕಾವು ಘಟಕದ ಪದಾಧಿಕಾರಿಗಳು, ಸದಸ್ಯರು ಮೊದಲಾದವರು

ಧಾರ್ಮಿಕ ಕಾರ್ಯಕ್ರಮ ಸಮಾಜಕ್ಕೆ ಶಕ್ತಿ: ಪುತ್ತಿಲ Read More »

ಮೆಸ್ಕಾಂ ಜನಸಂಪರ್ಕ ಸಭೆ ಮುಂದೂಡಿಕೆ

ಪುತ್ತೂರು: ಮೆಸ್ಕಾಂ ಪುತ್ತೂರು ನಗರ ವ್ಯಾಪ್ತಿ ಹಾಗೂ ಗ್ರಾಮಾಂತರ ಉಪವಿಭಾಗದ ಜನಸಂಪರ್ಕ ಸಭೆ ಜ. 11ಕ್ಕೆ ಮುಂದೂಡಲಾಗಿದೆ. ಜ. 11ರಂದು ಬೆಳಿಗ್ಗೆ 11ರಿಂದ 12ರವರೆಗೆ ಪುತ್ತೂರು ನಗರ ಉಪವಿಭಾಗ ಕಚೇರಿಯಲ್ಲಿ ಸಭೆ ನಡೆಯಲಿದೆ. ಜ. 9ಕ್ಕೆ ಜನಸಂಪರ್ಕ ಸಭೆ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೆಸ್ಕಾಂ ಜನಸಂಪರ್ಕ ಸಭೆ ಮುಂದೂಡಿಕೆ Read More »

ಜ.14ರಂದು ಪುತ್ತೂರಿನ ತೆಂಕಿಲದಲ್ಲಿ ಅಯೋಧ್ಯೆಯ ಸಮಗ್ರ ಕಥನ `ಶ್ರೀರಾಮ ಕಥಾ ವೈಭವ” | 3 ಗಂಟೆ, 3 ವೇದಿಕೆ, 300 ವಿದ್ಯಾರ್ಥಿಗಳು `ಶ್ರೀರಾಮ ಕಥಾ ವೈಭವ’ದ ವಿಶೇಷತೆ

ಪುತ್ತೂರು: ರಾಮನ ಚರಿತ್ರೆಯನ್ನು‌ ಯುವಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಜ.14 ರಂದು ಪುತ್ತೂರಿನ ತೆಂಕಿಲದ ವಿವೇಕ ನಗರದಲ್ಲಿ ವೈಭವದ ಆಯೋಧ್ಯೆಯ ಸಮಗ್ರ ಕಥನವನ್ನು ಪ್ರಸ್ತುತಪಡಿಸುವ ‘ಶ್ರೀರಾಮ ಕಥಾ ವೈಭವ’ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀರಾಮ ಕಥಾ ವೈಭವ ಸಾಂಸ್ಕೃತಿಕ ಸಮಿತಿ ಗೌರವಾಧ್ಯಕ್ಷ ಬಲರಾಮ ಆಚಾರ್ಯ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14 ರಂದು ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ

ಜ.14ರಂದು ಪುತ್ತೂರಿನ ತೆಂಕಿಲದಲ್ಲಿ ಅಯೋಧ್ಯೆಯ ಸಮಗ್ರ ಕಥನ `ಶ್ರೀರಾಮ ಕಥಾ ವೈಭವ” | 3 ಗಂಟೆ, 3 ವೇದಿಕೆ, 300 ವಿದ್ಯಾರ್ಥಿಗಳು `ಶ್ರೀರಾಮ ಕಥಾ ವೈಭವ’ದ ವಿಶೇಷತೆ Read More »

ರಾಮ ಯುದ್ಧ: ಭಕ್ತಿ ಪ್ರದರ್ಶಿಸಿದ ಕೈಪಡೆ!

ಬಿಜೆಪಿ – ಕಾಂಗ್ರೆಸ್ ನಡುವೆ ರಾಮಮಂದಿರ ಜಟಾಪಟಿ ಮುಂದುವರಿದಿದೆ. ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರ ನಡೆಯನ್ನು ಟೀಕಿಸುತ್ತಲೇ ಬರುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ತಿರುಗಿಬಿದ್ದಿದೆ. ರಾಮ ಮಂದಿರದ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ಕೆಲಸದ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿರುವುದಲ್ಲದೇ, ರಾಮ ಮತ್ತು ಆತನ ಆದರ್ಶಗಳನ್ನು ಕಾಂಗ್ರೆಸ್ ಮೊದಲಿಂದಲೂ ಪಾಲಿಸುತ್ತಾ ಬಂದಿದೆ ಎಂದೂ ಹೇಳಿಕೊಂಡಿದೆ. ರಾಮ ಮತ್ತು ಆತನ ಆದರ್ಶಗಳನ್ನು ಕಾಂಗ್ರೆಸ್ ಮೊದಲಿಂದಲೂ ಪಾಲಿಸುತ್ತಾ ಬಂದಿದೆ. ಆದರೆ, ರಾಮನ ಹೆಸರು ಹೇಳಿಕೊಂಡೇ ರಾಜಕೀಯ ಆಶ್ರಯ ಹುಡುಕುವ “ಬಿಜೆಪಿಗೆ ಸನ್ಮತಿ ದೇ

ರಾಮ ಯುದ್ಧ: ಭಕ್ತಿ ಪ್ರದರ್ಶಿಸಿದ ಕೈಪಡೆ! Read More »

ರಾಷ್ಟ್ರಮಟ್ಟದ ಕನ್ವರ್ಜ್ ತ್ರೋಬಾಲ್ ಪಂದ್ಯ: ಧನ್ವಿ ಜೆ. ರೈ ತಂಡ ಚಾಂಪಿಯನ್

ಪುತ್ತೂರು: ಪಾಟ್ನದಲ್ಲಿ ನಡೆದ ಕನ್ವರ್ಜ್ 2023ರ ತ್ರೋಬಾಲ್ ಪಂದ್ಯದಲ್ಲಿ ಪುತ್ತೂರಿನ ಧನ್ವಿ ಜೆ. ರೈ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (nift), ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ, ಸ್ಟ್ಯಾಟುಟರಿ ಇನ್ಸ್ಟಿಟ್ಯೂಟ್ ಗವರ್ನ್ ಬೈ ದ ನಿಫ್ಟ್  ಆಕ್ಟ್  2006, ಮಿನಿಸ್ಟ್ರಿ ಆಫ್ ಟೆಕ್ಸ್ ಟೈಲ್ಸ್  ಗವರ್ಮೆಂಟ್ ಆಫ್ ಇಂಡಿಯಾ ಪಂದ್ಯವನ್ನು ಆಯೋಜಿಸಲಾಗಿತ್ತು. ಪಂದ್ಯದಲ್ಲಿ ಬೆಂಗಳೂರು ತಂಡ ಪಾಲ್ಗೊಂಡಿದ್ದು, ತಂಡದಲ್ಲಿ ಪುತ್ತೂರಿನ ಧನ್ವಿ ಜೆ. ರೈ ಆಟವಾಡಿದ್ದರು. ಧನ್ವಿ

ರಾಷ್ಟ್ರಮಟ್ಟದ ಕನ್ವರ್ಜ್ ತ್ರೋಬಾಲ್ ಪಂದ್ಯ: ಧನ್ವಿ ಜೆ. ರೈ ತಂಡ ಚಾಂಪಿಯನ್ Read More »

ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು !

ಪುತ್ತೂರು: ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಕೊಡಿಪ್ಪಾಡಿಯಲ್ಲಿ ನಡೆದಿದೆ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ರಾಘವ ಮೃತಪಟ್ಟವರು. ಕೊಡಿಪ್ಪಾಡಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಸಂದರ್ಭ ರಾಘವ ಅವರು ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು ! Read More »

error: Content is protected !!
Scroll to Top