ಬೆಂಕಿಗೆ ಆಹುತಿಯಾದ ಮನೆ !

ಪುತ್ತೂರು: ತಾಲೂಕಿನ ಸರ್ವೆ ಗ್ರಾಮದ ಸೊರಕೆ ಎಂಬಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಸಂಪೂರ್ಣ ಭಸ್ಮವಾಗಿದೆ. ಜ.9 ರಂದು ಈ ಘಟನೆ ನಡೆದಿದ್ದು, ಸೊರಕೆ ಪೆರಂಟೋಲು ನಿವಾಸಿ ಕುಂಡ ಎಂಬವರ ಟರ್ಪಾಲು ಹೊದಿಕೆಯ ಮನೆ ಬೆಂಕಿಯಿಂದ ಸಂಪೂರ್ಣ ಭಸ್ಮವಾಗಿದೆ ಎನ್ನಲಾಗಿದೆ. ಮನೆಯಲ್ಲಿ ಕುಂಡ ಹಾಗೂ ಅವರ ಪುತ್ರ, ಸೊಸೆ ವಾಸಿಸುತ್ತಿದ್ದರು ಎನ್ನಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು, ಬಟ್ಟೆ, ಪಾತ್ರೆ, ಮನೆಯ ದಾಖಲೆ ಪತ್ರ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 1.5 ಲಕ್ಷ ರೂ. […]

ಬೆಂಕಿಗೆ ಆಹುತಿಯಾದ ಮನೆ ! Read More »

ನಾಳೆ ರಾಜ್ಯ ಸರಕಾರದ 5ನೇ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಚಾಲನೆ | ಸಜ್ಜಾಗಿದೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ 5ನೇ ಗ್ಯಾರಂಟಿ ಘೋಷಣೆ ‘ಯುವ ನಿಧಿ’ ಯೋಜನೆಯಡಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಸಜ್ಜಾಗಿದೆ. ಯುವಜನರ ಆಶಾಕಿರಣವಾದ ಸ್ವಾಮಿ ವಿವೇಕಾನಂದ ಜನ್ಮ ದಿನವಾದ ಜ.12 ಶುಕ್ರವಾರ ನಡೆಯುವ ಈ ಐತಿಹಾಸಿಕ ಸಮಾರಂಭಕ್ಕೆ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್ ನ ವಿಶಾಲವಾದ ಜಾಗದಲ್ಲಿ ಬೃಹತ್‌ ವೇದಿಕೆ ನಿರ್ಮಾಣವಾಗಿದೆ. 85 ಸಾವಿರಕ್ಕೂ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗಭತ್ಯೆ

ನಾಳೆ ರಾಜ್ಯ ಸರಕಾರದ 5ನೇ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಚಾಲನೆ | ಸಜ್ಜಾಗಿದೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ Read More »

ಜ.16: ಕಾರ್ಪಾಡಿ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವ: ಪೂರ್ವಭಾವಿ ಸಭೆ

ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿ ಉತ್ಸವದ ಕುರಿತು ಪೂರ್ವಭಾವಿ ಸಭೆ ನಡೆಯಿತು. ದೇವಸ್ಥಾನದ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವರ್ಷಾವಧಿ ಜಾತ್ರೋತ್ಸವದ ದಿನದಂದು ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಸುವುದೆಂದು ತೀರ್ಮಾನಿಸಲಾಯಿತು. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪ್ರತೀ ವರ್ಷ ಕಿರುಷಷ್ಠಿಗೆ ಜಾತ್ರೋತ್ಸವ ನಡೆಯುವ ಪದ್ದತಿ. ಈ ವರ್ಷ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಟಾಪಿಸಲಾಗಿದೆ. ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನವ ಕಲಶ, ಗಣಹೋಮ ನಡೆಸಿ ಭಕ್ತಾಧಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಮಾಡುವ ಬಗ್ಗೆ

ಜ.16: ಕಾರ್ಪಾಡಿ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವ: ಪೂರ್ವಭಾವಿ ಸಭೆ Read More »

ಅಯೋಧ್ಯೆ ಕಾರ್ಯಕ್ರಮದ ಬ್ಯಾನರ್ ಹರಿದ ಕಿಡಿಗೇಡಿಗಳು !

ಸುಳ್ಯ: ಕಳೆದ ವಾರವಷ್ಟೇ ಸದ್ದು ಮಾಡಿದ ಬ್ಯಾನ್ ಹರಿದ ವಿಚಾರ ಮಾಸುವ ಮುನ್ನವೇ ಇದೀಗ ಮತ್ತೊಂದು ಅಯೋಧ್ಯೆ ಕಾರ್ಯಕ್ರಮಕ್ಕೆ ಶುಭಕೋರಿ ಹಾಕಿದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ಸುಳ್ಯ ತಾಲೂಕಿನ ಅಡ್ಕಾರು ಬಳಿ ಗುರುವಾರ ನಡೆದಿದೆ. ಅಡ್ಕಾರು ಕಾರ್ತಿಕೇಯ ಯುವ ಸೇವಾ ಸಮಿತಿಯವರು ಜ.22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಶುಭಕೋರಿ ಬ್ಯಾನರ್ ಅಳವಡಿಸಿದ್ದರು. ಬುಧವಾರ ರಾತ್ರಿ ಯಾರೋ ಕಿಡಿಗೇಡಿಗಳು ಬ್ಯಾನರ್‍ ನ ಮಧ್ಯಭಾಗವನ್ನು ಹರಿದು ಹಾಕಿದ್ದಾರೆ. ಇದೀಗ ಈ ಘಟನೆಯಿಂದ ಆಕ್ರೋಶ

ಅಯೋಧ್ಯೆ ಕಾರ್ಯಕ್ರಮದ ಬ್ಯಾನರ್ ಹರಿದ ಕಿಡಿಗೇಡಿಗಳು ! Read More »

ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ದರೋಡೆಕೋರರು | ಲಕ್ಷಾಂತರ ರೂ. ನಗ-ನಗದು ದೋಚಿ ಪರಾರಿ!!

ಬಂಟ್ವಾಳ: ಬೆಳ್ಳಂಬೆಳಗ್ಗೆ ಮನೆಯೊಂದಕ್ಕೆ ನುಗ್ಗಿದ  ನಾಲ್ವರು ಮುಸುಕುಧಾರಿ ತಂಡ ಮನೆಯಲ್ಲಿದ್ದ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗ-ನಗದನ್ನು ದೋಚಿದ ಘಟನೆ ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟೀ ಪಾರ್ಕ್ ಮುಂಭಾಗದಲ್ಲಿ ಗುರುವಾರ ನಡೆದಿದೆ. ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೋ ಹಾಗೂ ಮಗಳು ಮರಿನಾ ಪಿಂಟೋ ಇಬ್ಬರೇ ಇದ್ದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ತಾಯಿ-ಮಗಳಿಗೆ ಚಾಕು ತೋರಿಸಿ ಕಪಾಟಿನಲ್ಲಿದ್ದ ಸುಮಾರು 2.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 30 ಸಾವಿರ ನಗದು ಹಾಗೂ

ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ದರೋಡೆಕೋರರು | ಲಕ್ಷಾಂತರ ರೂ. ನಗ-ನಗದು ದೋಚಿ ಪರಾರಿ!! Read More »

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ‘ಕಲ್ಪ ವಿಕಾಸ’ ಯೋಜನೆಯ ರೂಪುರೇಷೆಗಳ ಕುರಿತು ಚರ್ಚೆ | ಸಲಹಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಮುಂಬರುವ ಯೋಜನೆಗಳ ಕುರಿತ ಸಲಹಾ ಸಮಿತಿಯ ಪೂರ್ವಭಾವಿ ಸಭೆ ಪುತ್ತೂರು ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಂಸ್ಥೆಯ ಮುಂದಿನ ಮಹತ್ವಪೂರ್ಣ ಯೋಜನೆಗಳ ಸಹಿತ “ಕಲ್ಪ ವಿಕಾಸ ” ಮಹತ್ವಾಕಾಂಕ್ಷಿ ಯೋಜನೆಯ ರೂಪು-ರೇಷೆಗಳ ಬಗ್ಗೆ, ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು  ಚರ್ಚಿಸಿ, ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಸಾವಯವ ತೆಂಗು ಕೃಷಿಗೆ ಉತ್ತೇಜನವನ್ನು ನೀಡುವುದರ ಜೊತೆಗೆ ವೈಜ್ಞಾನಿಕ ಕೃಷಿ ಬೆಳವಣಿಗೆಗೆ ಪ್ರೋತ್ಸಾಹವನ್ನು ನೀಡಲು ಹಾಗೂ ತೆಂಗು ಸಂಸ್ಥೆಯ ಪತ್ರಿಕೆ

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ‘ಕಲ್ಪ ವಿಕಾಸ’ ಯೋಜನೆಯ ರೂಪುರೇಷೆಗಳ ಕುರಿತು ಚರ್ಚೆ | ಸಲಹಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ Read More »

ವಿಕಸಿತ ಭಾರತ ನನಸಾಗುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯುತ್ತಿದೆ | ಬಳ್ಪ ಗ್ರಾಮೋತ್ಸವ – 2024 ಕಾರ್ಯಕ್ರಮದಲ್ಲಿ ಸಚಿವ ಖೂಬ ಮೆಚ್ಚುಗೆ

ಬಳ್ಪ; ಬಳ್ಪ ಗ್ರಾಮ ಪಂಚಾಯಿತಿಯಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಮೂಲಕ 58 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಅಭಿವೃದ್ಧಿ ನಡೆದಿರುವುದು ದೇಶಕ್ಕೆ ಮಾದರಿ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಭಗವಂತ ಖೂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬುಧವಾರ ಬಳ್ಪ – ಕೇನ್ಯದ ಗ್ರಾಮ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ -2024 ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಗ್ರಾಮದಲ್ಲೂ ಕಡುಬಡವರ ಅಭಿವೃದ್ಧಿಗಾಗಿ ಸಂಸದರ ಆದರ್ಶ ಗ್ರಾಮದ ಜೊತೆ ಹಲವು

ವಿಕಸಿತ ಭಾರತ ನನಸಾಗುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯುತ್ತಿದೆ | ಬಳ್ಪ ಗ್ರಾಮೋತ್ಸವ – 2024 ಕಾರ್ಯಕ್ರಮದಲ್ಲಿ ಸಚಿವ ಖೂಬ ಮೆಚ್ಚುಗೆ Read More »

ಲಾರಿಗೆ ಢಿಕ್ಕಿ ಹೊಡೆದ ಬಸ್: ವಿದ್ಯಾರ್ಥಿಗಳಿಬ್ಬರಿಗೆ ಗಾಯ!

ಪುತ್ತೂರು: ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ, ವಿದ್ಯಾರ್ಥಿಗಳಿಬ್ಬರು ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಬೊಳುವಾರಿನಲ್ಲಿ ನಡೆದಿದೆ. ಇಲ್ಲಿಯ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪವನ್ ಕುಮಾರ್ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿ ಗಣೇಶ್ ಬಸ್ಸಿನಿಂದ ಬಿದ್ದು ಗಾಯಗೊಂಡವರು. ವಿದ್ಯಾರ್ಥಿಗಳು ಬಸ್ಸಿನ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದರು. ಬಸ್ ಲಾರಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ, ಇಬ್ಬರು ವಿದ್ಯಾರ್ಥಿಗಳು ರಸ್ತೆಗೆ ಎಸೆಯಲ್ಪಟ್ಟಿದ್ದರು. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಲಾರಿಗೆ ಢಿಕ್ಕಿ ಹೊಡೆದ ಬಸ್: ವಿದ್ಯಾರ್ಥಿಗಳಿಬ್ಬರಿಗೆ ಗಾಯ! Read More »

ಅಂಗಡಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ!

ಪುತ್ತೂರು: ಒಬ್ಬಂಟಿಯಾಗಿ ವಾಸವಾಗಿದ್ದ ಕಾರ್ಮಿಕನೋರ್ವ ಪೆರಿಗೇರಿಯ ಅಂಗಡಿ ಹೊರಭಾಗದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗುರುವಾರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು, ಎಷ್ಟು ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ದಿ. ಅಪ್ಪಯ್ಯ ನಾಯ್ಕ ಅವರ ಪುತ್ರ, ಕಾರ್ಮಿಕ ಜಾನು ನಾಯ್ಕ (45) ಆತ್ಮಹತ್ಯೆ ಮಾಡಿಕೊಂಡವರು. ಪೆರಿಗೇರಿಯ ತನ್ನ ಮನೆ ಸಮೀಪದ ದುರ್ಗಾ ಸ್ಟೋರ್ ಎಂಬ ಅಂಗಡಿ ಮುಂಭಾಗವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಅಂಗಡಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ! Read More »

error: Content is protected !!
Scroll to Top