ಅನಾರೋಗ್ಯದಿಂದ ಯುವತಿ ಮೃತ್ಯು !

ಕಡಬ: ಯುವತಿಯೋರ್ವರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ಎಡಮಂಗಲ ಗ್ರಾಮದ ಗಂಡಿತಡ್ಕ ರಾಮಚಂದ್ರ ನಾಯ್ಕ ಎಂಬವರ ಪುತ್ರಿ ತೃಪ್ತಿ ಮೃತಪಟ್ಟ ಯುವತಿ ಸುಬ್ರಹ್ಮಣ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ತೃಪ್ತಿ ಎರಡು ದಿನಗಳಿಂದ ಅನಾರೋಗ್ಯದಿಂದಿದ್ದು, ಗುರುವಾರ ಪುತ್ತೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅನಾರೋಗ್ಯದಿಂದ ಯುವತಿ ಮೃತ್ಯು ! Read More »

ಕೆದಿಲ ಒಕ್ಕೂಟದಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಕೆದಿಲ “ಬಿ” ಒಕ್ಕೂಟದಿಂದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಸುತ್ತಮುತ್ತಲ ಕಸಕಡ್ಡಿಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ. ದೇವಸ್ಥಾನದ ಪ್ರಮುಖರಾದ ರಘುಅಜಿಲ ಮಿತ್ತಿಲ, ಗೋಪಾಕೃಷ್ಣ ಭಟ್ ವಳಂಗಜೆ, ವಿಶ್ವನಾಥ ಶೆಟ್ಟಿಕುಕ್ಕಾಜೆ, ಕಜೆ ಬಾಬು ಮೂಲ್ಯ, ಅನಂತಕೃಷ್ಣ ಮುರ್ಗಜೆ, ಸತೀಶ್ ಮುರುವ, ಪೆರ್ನೆ ವಲಯ ಮೇಲ್ವಿಚಾರಕಿ ಶಾರದ, ಸೇವಾಪ್ರತಿನಿದಿಗಳಾದ ಶಾರದಾ, ಜಯಂತಿ, ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ, ಸ್ವಸಹಾಯ, ಪ್ರಗತಿ ಬಂದು

ಕೆದಿಲ ಒಕ್ಕೂಟದಿಂದ ಸ್ವಚ್ಛತಾ ಕಾರ್ಯ Read More »

ಜ.17: ನಗರಸಭೆ ಅಯವ್ಯಯ ತಯಾರಿಕೆ ಪೂರ್ವಭಾವಿ ಸಭೆ

ಪುತ್ತೂರು: ನಗರಸಭೆಯ 2024-25ನೇ ಸಾಲಿನ ಅಯವ್ಯಯ ತಯಾರಿಕೆ ಕುರಿತು ಪೂರ್ವಭಾವಿ ಸಭೆ ಜ.17 ರಂದು ನಡೆಯಲಿದೆ. ಎರಡನೇ ಸುತ್ತಿನ ಸಭೆ ಇದಾಗಿದ್ದು, ಮಧ್ಯಾಹ್ನ 3.30 ಕ್ಕೆ ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ. ಸಭೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಬಜೆಟ್ ತಯಾರಿಕೆ ಕುರಿತು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ನಗರಸಭೆ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.17: ನಗರಸಭೆ ಅಯವ್ಯಯ ತಯಾರಿಕೆ ಪೂರ್ವಭಾವಿ ಸಭೆ Read More »

ಇತರ ಸನ್ಯಾಸಿಗಳಿಂದ ಸ್ವಾಮಿ ವಿವೇಕಾನಂದರು ಯಾಕೆ ಭಿನ್ನ: ಪ್ರಕಾಶ್ ಮಲ್ಪೆ ಮಾತು | ನಿರ್ವಿಕಲ್ಪ ಸಮಾಧಿ ಸ್ಥಿತಿಗಿಂತ ಸಮಾಜದ ಕಾರ್ಯವೇ ಶ್ರೇಷ್ಠ ಎಂದು ತೋರಿಸಿಕೊಟ್ಟವರು ವಿವೇಕಾನಂದರು | ವಿವೇಕಾನಂದ ಜಯಂತಿಯಲ್ಲಿ ಸೂತ್ರ ಮತ್ತು ಸಲಾಕೆ ಬೊಂಬೆಯಾಟ ಪ್ರದರ್ಶನ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘಧ ಅಶ್ರಯದಲ್ಲಿ ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದಲ್ಲಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ವಾಗ್ಮಿ, ಅಂಕಣಗಾರ ಪ್ರಕಾಶ್ ಮಲ್ಪೆ ಮಾತನಾಡಿ, ನಿರ್ವಿಕಲ್ಪ ಸಮಾಧಿ ಸ್ಥಿತಿಗೆ ತಲುಪಿದ ಬಳಿಕ ವಿವೇಕಾನಂದರು ಪರಮಹಂಸರ ಬಳಿ ಬರುತ್ತಾರೆ. ವಿವೇಕಾನಂದರ ಸ್ಥಿತಿಯನ್ನು ಅರಿತ ಪರಮಹಂಸರು, ನಿರ್ವಿಕಲ್ಪ ಸಮಾಧೀಗೆ ತಲುಪುದೆಯಾ. ಹಾಗೆಂದು ನಿನಂದುಕೊಂಡಂತೆ ಪದೇ ಪದೇ ಅಲ್ಲಿಗೆ ಹೋಗಿ ಬರುತ್ತೇನೆ ಎಂದರೆ ನಾನದಕ್ಕೆ ಬಿಡುವುದಿಲ್ಲ. ಯಾಕೆಂದರೆ ನೀನು ಬಂದಿರುವ ಉದ್ದೇಶವೇ, ಸಮಾಜ ಕಾರ್ಯಕ್ಕೆ ಎಂದು. ಮುಂದೆ ಸಮಾಜದ ಸುಖ

ಇತರ ಸನ್ಯಾಸಿಗಳಿಂದ ಸ್ವಾಮಿ ವಿವೇಕಾನಂದರು ಯಾಕೆ ಭಿನ್ನ: ಪ್ರಕಾಶ್ ಮಲ್ಪೆ ಮಾತು | ನಿರ್ವಿಕಲ್ಪ ಸಮಾಧಿ ಸ್ಥಿತಿಗಿಂತ ಸಮಾಜದ ಕಾರ್ಯವೇ ಶ್ರೇಷ್ಠ ಎಂದು ತೋರಿಸಿಕೊಟ್ಟವರು ವಿವೇಕಾನಂದರು | ವಿವೇಕಾನಂದ ಜಯಂತಿಯಲ್ಲಿ ಸೂತ್ರ ಮತ್ತು ಸಲಾಕೆ ಬೊಂಬೆಯಾಟ ಪ್ರದರ್ಶನ Read More »

ಎನ್.ಪಿ.ಎಸ್. ಸರಕಾರಿ ನೌಕರರು ಇನ್ನು ಓ.ಪಿ.ಎಸ್. ನೌಕರರು!! | ಶೀಘ್ರದಲ್ಲಿ ಹೊರಬೀಳಲಿದೆ ಆದೇಶ

ಪುತ್ತೂರು: ಸರಕಾರದ ಅಧಿಸೂಚನೆಯನ್ವಯ ನೇಮಕಾತಿ ಹೊಂದಿ 2006, ಏ.1 ರ ನಂತರ ಕೆಲಸಕ್ಕೆ ಹಾಜರಾಗಿ ಪ್ರಸ್ತುತ ಎನ್.ಪಿ.ಎಸ್. ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಸರಕಾರಿ ನೌಕರರಿಗೆ ಓ.ಪಿ.ಎಸ್. ನೌಕರರೆಂದು ಪರಿಗಣಿಸುವುದಕ್ಕೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಆದೇಶ ಹೊರಬೀಳಲಿದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರಂತರ ಪ್ರಯತ್ನದ ಫಲವಾಗಿ ಜ.10 ರಂದು ಆರ್ಥಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರನ್ನು ಭೇಟಿ ಮಾಡಿ 2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗೆ ಒಳಪಟ್ಟ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್.

ಎನ್.ಪಿ.ಎಸ್. ಸರಕಾರಿ ನೌಕರರು ಇನ್ನು ಓ.ಪಿ.ಎಸ್. ನೌಕರರು!! | ಶೀಘ್ರದಲ್ಲಿ ಹೊರಬೀಳಲಿದೆ ಆದೇಶ Read More »

ಜ.13ರಂದು ಕನ್ಯಾನ ದೇಲಂತಬೆಟ್ಟು ಶಾಲೆಯ ಅಮೃತ ಮಹೋತ್ಸವ

ವಿಟ್ಲ: ಕನ್ಯಾನ ಗ್ರಾಮದ ದೇಲಂತಬೆಟ್ಟು ಹಿ. ಪ್ರಾ. ಶಾಲೆಯ ಅಮೃತ ಮಹೋತ್ಸವ ‘ಅಮೃತ ಸಿಂಚನ’ ಕಾರ್ಯಕ್ರಮ ಜ.13ರಂದು ನಡೆಯಲಿದೆ.1948 ಜೂ.1ರಂದು ಆರಂಭವಾದ ಈ ಶಾಲೆಗೆ 75 ವರ್ಷ ತುಂಬಿದ್ದು, ಹಳೆ ವಿದ್ಯಾರ್ಥಿಗಳು, ಅಮೃತ ಮಹೋತ್ಸವ ಸಮಿತಿ ಮತ್ತು ಶಾಲಾಭಿವೃದ್ಧಿ ಸಮಿತಿ ಜತೆಗೂಡಿ ಅಮೃತ ಮಹೋತ್ಸವವವನ್ನು ಆಚರಿಸಲಿದೆ ಎಂದು ಸಮಿತಿಯ ಅಧ್ಯಕ್ಷ ಡಿ. ಶ್ರೀನಿವಾಸ್ ತಿಳಿಸಿದ್ದಾರೆ.ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಡಿ. ನಾರಾಯಣ ರಾವ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಬಯಲು ನೃತ್ಯ, ಪ್ರತಿಭಾ ಪುರಸ್ಕಾರ, ಪುಟಾಣಿಗಳ ಹಬ್ಬ

ಜ.13ರಂದು ಕನ್ಯಾನ ದೇಲಂತಬೆಟ್ಟು ಶಾಲೆಯ ಅಮೃತ ಮಹೋತ್ಸವ Read More »

ಸಿ.ಎ ಗ್ರೂಪ್-2 ಪರೀಕ್ಷೆ ತೇರ್ಗಡೆಯಾದ ತೇಜಸ್ವಿನಿ

ಪುತ್ತೂರು: ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ತೇಜಸ್ವಿನಿ ಅವರು ಭಾರತೀಯ ಲೆಕ್ಕ ಪರಿಶೋಧನಾ ಮಂಡಳಿಯು (ಐಸಿಎಐ) ನವೆಂಬರ್ 2023 ರಲ್ಲಿ ನಡೆಸಿದ ಸಿ.ಎ. ಇಂಟರ್ ಗ್ರೂಪ್ ಪರೀಕ್ಷೆಯ ಗ್ರೂಪ್ – 2 ವಿಭಾಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ. ಅವರು ಅಂಬಿಕಾ ಸಂಸ್ಥೆಯಲ್ಲಿ ಸಿಎ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದರು. ತೇಜಸ್ವಿನಿ ಅವರು ಬಂಟ್ವಾಳದ ನಾರಾಯಣ ಮೂಲ್ಯ ಹಾಗೂ ಹೇಮಾವತಿ ದಂಪತಿ ಪುತ್ರಿ.

ಸಿ.ಎ ಗ್ರೂಪ್-2 ಪರೀಕ್ಷೆ ತೇರ್ಗಡೆಯಾದ ತೇಜಸ್ವಿನಿ Read More »

ಬುಳೇರಿಕಟ್ಟೆ -ಸಾಜ- ಕುದ್ದುಪದವು ರಸ್ತೆ ಡಾಮರೀಕರಣಕ್ಕೆ ಗುದ್ದಲಿ ಪೂಜೆ

ಪುತ್ತೂರು: ಬಲ್ನಾಡು ಗ್ರಾಮದ ಬುಳೇರಿಕಟ್ಟೆ-ಸಾಜ ಕುದ್ದುಪದವು ಲೋಕೋಪಯೋಗಿ ರಸ್ತೆಗೆ ಗುದ್ದಲಿ ಪೂಜೆ ನಡೆಯಿತು. 1.80 ಕೋಟಿ ರೂ ವೆಚ್ಚದಲ್ಲಿ ಡಾಮರೀಕರಣಕ್ಕೆ ಶಾಸಕರು ಅನುದಾನ ಬಿಡುಗಡೆ ಮಾಡಿದ್ದು, ಶಾಸಕ ಅಶೋಕ್ ಕುಮಾರ್ ರೈ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್‍.ಮಹಮ್ಮದ್, ಬಲ್ನಾಡು ಕಾಂಗ್ರೆಸ್ ವಲಯಾಧ್ಯಕ್ಷ ಚಂದಪ್ಪ ಪೂಜಾರಿ, ಬಲ್ನಾಡು ಬೂತ್ ಅಧ್ಯಕ್ಷ ನವೀನ್ ಕರ್ಕೆರ, ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಡಿಸಿಸಿ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಬುಳೇರಿಕಟ್ಟೆ  ಪ್ರಕಾಶ್ ಚಂದ್ರ ಆಳ್ವ, ವಿಟ್ಲ

ಬುಳೇರಿಕಟ್ಟೆ -ಸಾಜ- ಕುದ್ದುಪದವು ರಸ್ತೆ ಡಾಮರೀಕರಣಕ್ಕೆ ಗುದ್ದಲಿ ಪೂಜೆ Read More »

ಜ.13 : ವಿದ್ಯುತ್ ನಿಲುಗಡೆಯಾಗಲಿದೆ | ಎಲ್ಲೆಲ್ಲಿ : ಇಲ್ಲಿದೆ ವಿವರ

ಪುತ್ತೂರು: ರಸ್ತೆ ಅಗಲೀಕರಣಕ್ಕಾಗಿ ವಿದ್ಯುತ್ ಕಾಮಗಾರಿ ಕೈಗೊಳ್ಳಲಿರುವ ಹಿನ್ನಲೆಯಲ್ಲಿ ಜ.13 ರಂದು ವಿದ್ಯುತ್ ನಿಲುಗಡೆ ಆಗಲಿದೆ. 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ವಾಟರ್ ಸಪ್ಲೈ ಮತ್ತು ಉಪ್ಪಿನಂಗಡಿ ಎಕ್ಸ್ ಪ್ರೆಸ್ ಫೀಡರ್ ನಲ್ಲಿ ಜ.13 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‍ ನಿಂದ ವಿದ್ಯುತ್‍ ಸರಬರಾಜಾಗುವ ನೆಕ್ಕಿಲಾಡಿ, ಉಪ್ಪಿನಂಗಡಿ ಗ್ರಾಮದ ವಿದ್ಯುತ್

ಜ.13 : ವಿದ್ಯುತ್ ನಿಲುಗಡೆಯಾಗಲಿದೆ | ಎಲ್ಲೆಲ್ಲಿ : ಇಲ್ಲಿದೆ ವಿವರ Read More »

ನಾಳೆ ಭಾರತದ ಅತಿ ಉದ್ದದ ಸಮುದ್ರ ಸೇತು ಲೋಕಾರ್ಪಣೆ | ಪ್ರಧಾನಿ ಉದ್ಘಾಟಿಸಲಿರುವ ಈ ಅಟಲ್ ಸೇತು ಹಲವು ವೈಶಿಷ್ಟ್ಯಗಳ ಕೇಂದ್ರ ಬಿಂದು

ಭಾರತದ ಅತಿ ಉದ್ದದ  ಸಮುದ್ರ ಸೇತುವೆ (ಟ್ರಾನ್ಸ್ ಹಾರ್ಬರ್ ಲಿಂಕ್) ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಜ.12ರಂದು ಉದ್ಘಾಟಿಸಲಿದ್ದಾರೆ. ಈ ಸೇತುವೆ ಮಾರ್ಗಕ್ಕೆ ‘ಅಟಲ್ ಸೇತು’ ಎಂದು ನಾಮಕರಣ ಮಾಡಲಾಗಿದೆ. ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ಸಮುದ್ರ ಸೇತುವೆ ಇದಾಗಿದ್ದು, ಸಮುದ್ರದ ಮೇಲೆ 16.5 ಕಿ.ಮೀ. ಮತ್ತು ನೆಲದ ಮೇಲೆ 5.5 ಕಿ.ಮೀ. ಉದ್ದವಿದ್ದು ಒಟ್ಟು 21.8 ಕಿ.ಮೀ. ಉದ್ದ ಹೊಂದಿದೆ. ಈ ಸೇತುವೆ ಮುಂಬೈನ ಸೆವ್ರಿಯಿಂದ ಆರಂಭಗೊಂಡು ರಾಯಗಡ ಜಿಲ್ಲೆಯ ಉರಾನ್ ತಾಲೂಕಿನಲ್ಲಿ ಕೊನೆಗೊಳ್ಳುತ್ತದೆ. ಸೇತುವೆ

ನಾಳೆ ಭಾರತದ ಅತಿ ಉದ್ದದ ಸಮುದ್ರ ಸೇತು ಲೋಕಾರ್ಪಣೆ | ಪ್ರಧಾನಿ ಉದ್ಘಾಟಿಸಲಿರುವ ಈ ಅಟಲ್ ಸೇತು ಹಲವು ವೈಶಿಷ್ಟ್ಯಗಳ ಕೇಂದ್ರ ಬಿಂದು Read More »

error: Content is protected !!
Scroll to Top