ಆಕಸ್ಮಿಕ ಕೆರೆಗೆ ಬಿದ್ದು ಕೇಶವ ದೇವಾಡಿಗ ಮೃತ್ಯು !

ವಿಟ್ಲ : ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಟ್ಲ ಕೊಳ್ನಾಡು ಗ್ರಾಮದ ಮಂಕುಡೆ ಗುಳಿಗಳ ಗುರಿ ಎಂಬಲ್ಲಿ ನಡೆದಿದೆ. ಮಂಕುಡೆ ಗುಳಿಗಳ ಗುರಿ ನಿವಾಸಿ ಕೇಶವ ದೇವಾಡಿಗ ಎಂಬವರ ಪುತ್ರ ರವೀಂದ್ರ ದೇವಾಡಿಗ (32) ಮೃತಪಟ್ಟವರು. ವೃತ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ರವೀಂದ್ರ ದೇವಾಡಿಗರು ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಪಾಳು ಬಿದ್ದ ಕೆರೆಗೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು […]

ಆಕಸ್ಮಿಕ ಕೆರೆಗೆ ಬಿದ್ದು ಕೇಶವ ದೇವಾಡಿಗ ಮೃತ್ಯು ! Read More »

ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರ ಸ್ಥಾಪಕಾಧ್ಯಕ್ಷ ಶ್ರೀಪಾಲ್ ಜೈನ್ ನಿಧನ

ಪುತ್ತೂರು: ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ಸ್ಥಾಪಕಾಧ್ಯಕ್ಷ ಶ್ರೀಪಾಲ್ ಜೈನ್ (74) ನಿಧನರಾಗಿದ್ದಾರೆ. ಕೊಡುಗೈ ದಾನಿಯಾಗಿದ್ದ ಅವರು, ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದರು. ಸಾಮಾಜಿಕ, ಧಾರ್ಮಿಕ ಮುಖಂಡರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರನ್ನು ಅಗಲಿದ್ದಾರೆ.

ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರ ಸ್ಥಾಪಕಾಧ್ಯಕ್ಷ ಶ್ರೀಪಾಲ್ ಜೈನ್ ನಿಧನ Read More »

ಕಬ್ಸ್ ಚತುರ್ಥ ಚರಣ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 9 ವಿದ್ಯಾರ್ಥಿಗಳು ತೇರ್ಗಡೆ | ಇಂದು ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ

ಪುತ್ತೂರು :ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಮಂಗಳೂರಿನ ಪಿಲಿಕುಳದಲ್ಲಿ ನಡೆದ ಕಬ್ಸ್ ಚತುರ್ಥ ಚರಣ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ  9 ವಿದ್ಯಾರ್ಥಿಗಳು ತೇರ್ಗಡೆಗೊಂಡು ಬೆಂಗಳೂರಿನ ರಾಜ ಭವನದ ಗಾಜಿನ ಮನೆಯಲ್ಲಿ ಜ.19 ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 5ನೇ ತರಗತಿ ವಿದ್ಯಾರ್ಥಿಗಳಾದ ಅದ್ವೈತ ಶಂಕರ ವೈ, ಆರ್ಯನ್ ಪಿ .ಎಲ್., ಕೃತಿಕ್ ಬಿ.ಆರ್., ಎಂ ಜಶಿತ್ ಆಚಾರ್ಯ, ಪ್ರಣವ್

ಕಬ್ಸ್ ಚತುರ್ಥ ಚರಣ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 9 ವಿದ್ಯಾರ್ಥಿಗಳು ತೇರ್ಗಡೆ | ಇಂದು ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ Read More »

ಜ.22: ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿಯಿಂದ ಶ್ರೀ ರಾಮ ಪೂಜಾ ಮಹೋತ್ಸವ | ಕರಸೇವಕರಿಗೆ ಗೌರವಾರ್ಪಣೆ

ವೀರಕಂಭ: ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಶ್ರೀರಾಮ ಪೂಜಾ ಮಹೋತ್ಸವ ಜ.22 ರಂದು ಕೆಲಿಂಜ ಶ್ರೀನಿಕೇತನ ಮಂದಿರದಲ್ಲಿ ನಡೆಯಲಿದೆ. ಅಯೋಧ್ಯ ಶ್ರೀರಾಮ ಮಂದಿರದ ಲೋಕಾರ್ಪಣೆ ಪ್ರಯುಕ್ತ ನಡೆಯುವ ಪೂಜಾ ಕಾರ್ಯಕ್ರಮವನ್ನು ಪುರೋಹಿತ ಉದಯ ಭಟ್ ನಂದಾವರ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಸತ್ಯಸುಂದರ ಭಟ್ ಕಲ್ಮಲೆ ದೀಪ ಬೆಳಗಿಸುವರು. ಕೆಲಿಂಜ ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿ, ವೀರಕಂಭ ಶ್ರೀ ಶಾರದಾ ಭಜನಾ ಮಂಡಳಿ, ಅಜ್ಜಿನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ

ಜ.22: ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿಯಿಂದ ಶ್ರೀ ರಾಮ ಪೂಜಾ ಮಹೋತ್ಸವ | ಕರಸೇವಕರಿಗೆ ಗೌರವಾರ್ಪಣೆ Read More »

ನೇಣು ಬಿಗಿದು ಮಹಿಳೆ ಆತ್ಮಹತ್ಯೆ !

ಬೆಳ್ತಂಗಡಿ: ಉದ್ಯಮಿಯೋರ್ವರ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಗುರುವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ಕುಬಲಾಜೆ ನಿವಾಸಿ ಉದ್ಯಮಿ ಸುನಿಲ್ ಎಂಬವರ ಪತ್ನಿ ಕಾವ್ಯ (32) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಮಧ್ಯಾಹ್ನ ಮನೆಯಲ್ಲಿ ಈ ಘಟನೆ ನಡೆದಿದೆ. ಮೃತರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ನೇಣು ಬಿಗಿದು ಮಹಿಳೆ ಆತ್ಮಹತ್ಯೆ ! Read More »

ವಿದ್ಯುತ್ ಗುತ್ತಿಗೆದಾರರ ಸಂಘದ ಪುತ್ತೂರು ಉಪಸಮಿತಿ ವಾರ್ಷಿಕ ಸಭೆ | ಲೋಕೇಂದ್ರ ಸಿಂಗ್‍ ಗೆ ಸನ್ಮಾನ

ಪುತ್ತೂರು: ಇಲ್ಲಿಯ ಮನಿಷಾ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪುತ್ತೂರು ಉಪಸಮಿತಿಯ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ  ಸಭೆಯಲ್ಲಿ ಭಗವತಿ ಇಲೆಕ್ಟ್ರಿಕಲ್ಸ್ ನ ಮಾಲಕ ಲೋಕೇಂದ್ರ ಸಿಂಗ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪುತ್ತೂರು ಉಪಸಮಿತಿ ಅಧ್ಯಕ್ಷ ಸೂರ್ಯನಾಥ ಆಳ್ವ, ಜಿಲ್ಲಾ ಸಮಿತಿ ಅಧ್ಯಕ್ಷ ಕುಶಲ ಪೂಜಾರಿ, ರಾಜ್ಯ ಸಮಿತಿ ಉಪಾಧ್ಯಕ್ಷ ಉರ್ಬನ್ ಪಿಂಟೋ, ದ.ಕ.ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಬ್ರಾಯ

ವಿದ್ಯುತ್ ಗುತ್ತಿಗೆದಾರರ ಸಂಘದ ಪುತ್ತೂರು ಉಪಸಮಿತಿ ವಾರ್ಷಿಕ ಸಭೆ | ಲೋಕೇಂದ್ರ ಸಿಂಗ್‍ ಗೆ ಸನ್ಮಾನ Read More »

ಪಾರ್ಕ್ ಮಾಡಲಾದ ವಾಹನಗಳಿಂದ ಪೆಟ್ರೋಲ್ ಕಳ್ಳತನ | ರೆಡ್ ಹ್ಯಾಂಡ್ ಆಗಿ ಸಾರ್ಜನಿಕರಿಗೆ ಸಿಕ್ಕಿಬಿದ್ದ ಕಳ್ಳ

ಪುತ್ತೂರು: ಪಾರ್ಕ್ ಮಾಡಲಾದ ವಾಹನಗಳಿಂದ ಪೆಟ್ರೋಲ್ ಕದಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದ ಘಟನೆ ಗುರುವಾರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಪೆಟ್ರೋಲ್ ಕದಿಯುತ್ತಿದ್ದವನನ್ನು ಸವಣೂರು ನಿವಾಸಿ ಶಮೀರ್‍  ಎಂದು ಗುರುತಿಸಲಾಗಿದೆ. ರೈಲ್ವೇ ನಿಲ್ದಾಣಕ್ಕೆ ಬೈಕ್‍ ನಲ್ಲಿ ಬಂದ ಯುವಕ ಅಲ್ಲಿ ಪಾರ್ಕ್‍ ಮಾಡಲಾದ ಬೈಕ್‍ ಇನ್ನಿತರ ವಾಹನಗಳಿಂದ ಪೆಟ್ರೋಲ್ ಕದಿಯುತ್ತಿದ್ದಾಗ ರೆಡ್‍ ಹ್ಯಾಂಡ್‍ ಆಗಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದು, ರೈಲ್ವೇ ಪೊಲೀಸರಿಗೆ ಒಪ್ಪಿಸಲಾಗಿದೆ. ಬಳಿಕ ರೈಲ್ವೇ ಪೊಲೀಸರು ಪುತ್ತೂರು ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಾರ್ಕ್ ಮಾಡಲಾದ ವಾಹನಗಳಿಂದ ಪೆಟ್ರೋಲ್ ಕಳ್ಳತನ | ರೆಡ್ ಹ್ಯಾಂಡ್ ಆಗಿ ಸಾರ್ಜನಿಕರಿಗೆ ಸಿಕ್ಕಿಬಿದ್ದ ಕಳ್ಳ Read More »

ಕೊಡಿಪ್ಪಾಡಿಯಲ್ಲಿ ಟೈಲರಿಂಗ್ ತರಬೇತಿ ಉದ್ಘಾಟನೆ

ಪುತ್ತೂರು: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಟೈಲರಿಂಗ್ ತರಬೇತಿ ಕಾರ್ಯಕ್ರಮ ಕೊಡಿಪ್ಪಾಡಿಯಲ್ಲಿ ನಡೆಯಿತು. ಕೊಡಿಪ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಪ್ಪ ಪೂಜಾರಿ ತರಬೇತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಆರ್ಮಿ ಆಫೀಸರ್ ಜಯರಾಮ್ ಗೌಡ, ಕೊಡಿಪ್ಪಾಡಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧೀರಜ್ ಗೌಡ, ಕಾರ್ಯದರ್ಶಿ ಮನೋಹರ್ ಕೊಳಕಿಮಾರ್, ಜನಜಾಗ್ರತಿ ಗ್ರಾಮ ಸಮಿತಿ ಅಧ್ಯಕ್ಷ ಹರಿಕೃಷ್ಣ ಗೌಡ ಗುತ್ತು, ಬಲ್ನಾಡ್ ವಲಯ ಮೇಲ್ವಿಚಾರಕ ಪ್ರಶಾಂತ್ ಕುಮಾರ್, ಒಕ್ಕೂಟದ ಅಧ್ಯಕ್ಷ ದಿನೇಶ್ ಗೌಡ ಗೋಮುಖ, ಉಪಾಧ್ಯಕ್ಷ ಎನ್.

ಕೊಡಿಪ್ಪಾಡಿಯಲ್ಲಿ ಟೈಲರಿಂಗ್ ತರಬೇತಿ ಉದ್ಘಾಟನೆ Read More »

ಪ್ರಧಾನಿ ನರೇಂದ್ರ ಮೋದಿಯಿಂದ ರಾಮ ಪ್ರತಿಷ್ಠೆ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ | ಆರು ಚಿತ್ರಗಳನ್ನೊಳಗೊಂಡ ಅಂಚೆ ಚೀಟಿ

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ರಾಮಮಂದಿರದ ಸ್ಮರಣಾರ್ಥ ಆರು ಅಂಚೆ ಚೀಟಿಗಳನ್ನು ಇಂದು ಬಿಡುಗಡೆ ಮಾಡಿದರು. ಅಂಚೆಚೀಟಿಗಳನ್ನು ಹೊಂದಿರುವ ಆಲ್ಬಂ ತೆರೆಯುವ ಮೂಲಕ ಬಿಡುಗಡೆ ಮಾಡಿದ್ದಾರೆ. ಅಂಚೆಚೀಟಿಗಳ ವಿನ್ಯಾಸವು ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಸಂಬಂಧಿಸಿದ ಚಿತ್ರ ಹಾಗೂ ವಿಷಯಗಳನ್ನೊಳಗೊಂಡಿದ್ದು, ದೇವಾಲಯ, ‘ಮಂಗಳ್ ಭಾವನ್ ಅಮಂಗಳ್ ಹಾರಿ, ಸೂರ್ಯ, ಸರಯು ನದಿ ಮತ್ತು ದೇವಾಲಯದ ಸುತ್ತಮುತ್ತಲಿನ ಶಿಲ್ಪಗಳು ಕಾಣಸಿಗುತ್ತದೆ. ಅಂಚೆಚೀಟಿ ಸಂಗ್ರಹವು ಆರು ರೀತಿಯಲ್ಲಿದೆ. ರಾಮ ಮಂದಿರ, ಗಣೇಶ, ಹನುಮಾನ್‌, ಜಟಾಯು, ಕೇವತ್ರಾಜ್ ಮತ್ತು ಶಬರಿಯ ಚಿತ್ರಣಗಳನ್ನು

ಪ್ರಧಾನಿ ನರೇಂದ್ರ ಮೋದಿಯಿಂದ ರಾಮ ಪ್ರತಿಷ್ಠೆ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ | ಆರು ಚಿತ್ರಗಳನ್ನೊಳಗೊಂಡ ಅಂಚೆ ಚೀಟಿ Read More »

ಭಕ್ತರೊಬ್ಬರಿಂದ ನಿರ್ಮಾಣವಾಯಿತು ಪಾರ್ಲೆ-ಜಿ ಬಿಸ್ಕೆಟ್‍ ನಿಂದ ರಾಮ ಮಂದಿರ ಪ್ರತಿಕೃತಿ | 20 ಕೆ.ಜಿ. ಬಿಸ್ಕೆಟ್ ಬಳಕೆ

20 ಕೆ.ಜಿ.ಪಾರ್ಲೆ-ಜಿ ಬಿಸ್ಕೆಟ್ ಬಳಸಿ ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ ನಿರ್ಮಿಸುವ ಮೂಲಕ ವ್ಯಕ್ತಿಯೊಬ್ಬರು ರಾಮಭಕ್ತಿ ತೋರಿಸಿದ್ದಾರೆ. ಪಶ್ಚಿಮ ಬಂಗಾಳದ ದುರ್ಗಾಪುರ ಜಿಲ್ಲೆಯ ಛೋಟಾನ್ ಘೋಷ್ ಎಂಬವರು ಪಾರ್ಲೆ- ಜಿ ಬಿಸ್ಕೆಟ್ ಬಳಸಿ ನಾಲ್ಕು ಅಡಿ ಎತ್ತರದ ರಾಮಮಂದಿರ ಪ್ರತಿಕೃತಿ ರಚಿಸಿದ್ದಾರೆ. ಐದು ದಿನಗಳಲ್ಲಿ ಈ ಕೆಲಸ ಪೂರ್ಣಗೊಳಿಸಿದ್ದು, ನಿರ್ಮಾಣಕ್ಕೆ ಪ್ಲೈವುಡ್, ಅಂಟು ಬಳಸಲಾಗಿದೆ.  ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದಿದ್ದಾರೆ ಛೋಟಾನ್ ಘೋಷ್

ಭಕ್ತರೊಬ್ಬರಿಂದ ನಿರ್ಮಾಣವಾಯಿತು ಪಾರ್ಲೆ-ಜಿ ಬಿಸ್ಕೆಟ್‍ ನಿಂದ ರಾಮ ಮಂದಿರ ಪ್ರತಿಕೃತಿ | 20 ಕೆ.ಜಿ. ಬಿಸ್ಕೆಟ್ ಬಳಕೆ Read More »

error: Content is protected !!
Scroll to Top