ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ | ಮೂವರು ಪೊಲೀಸ್ ವಶಕ್ಕೆ

ಮಂಗಳೂರು: ಭಿನ್ನ ಸಮುದಾಯದ ವಿದ್ಯಾರ್ಥಿಗಳ ಮೇಲೆ ತಂಡವೊಂದು ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಘಟನೆ ಮಂಗಳೂರು ಕದ್ರಿ ಪಾರ್ಕ್‍ ನಲ್ಲಿ ನಡೆದಿದ್ದು ಈ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ಮಂಗಳೂರಿನ ಕಾಲೇಜೊಂದರ ಯುವಕ ಹಾಗೂ ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿ ಜತೆಯಾಗಿ ಬಸ್‍ ನಲ್ಲಿ ಮಂಗಳೂರಿಗೆ ಬಂದಿದ್ದರು. ಬಸ್‍ನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ತಂಡ ಕದ್ರಿ ಪಾರ್ಕ್‍ ತಲುಪುತ್ತಿದ್ದಂತೆ ರಸ್ತೆಯಲ್ಲಿ ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದೆ ಎನ್ನಲಾಗಿದೆ. ಈ ಸಂದರ್ಭ ಸ್ಥಳದಲ್ಲಿ ಜನ […]

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ | ಮೂವರು ಪೊಲೀಸ್ ವಶಕ್ಕೆ Read More »

ಜ.22:  ಶಾಂತಿಮೊಗೆರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯಿಂದ 108 ರಾಮ ಮಂತ್ರ ಜಪಿಸಿ ಭಜನೆ

ಪುತ್ತೂರು: ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆ ನಡೆಯುವ ದಿನದಂದು ಶಾಂತಿಮೊಗೆರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ 108 ರಾಮ ಮಂತ್ರ ಜಪಿಸಿ ಭಜನಾ ಕಾರ್ಯಕ್ರಮ ನಡೆಯಲಿದೆ. ಶಾಂತಿಮೊಗೆರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ವತಿಯಿಂದ ಬೆಳಿಗ್ಗೆ 10.30 ರಿಂದ 11.30 ರ ತನಕ ಭಜನಾ ಕಾರ್ಯಕ್ರಮ ನಡೆಯಲಿದೆ. ರಾಮಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ಜ.22:  ಶಾಂತಿಮೊಗೆರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯಿಂದ 108 ರಾಮ ಮಂತ್ರ ಜಪಿಸಿ ಭಜನೆ Read More »

ನಾಳೆ ಸವಣೂರಿನಲ್ಲಿ ದ.ಕ. ಜಿಲ್ಲಾ ಮಟ್ಟದ ಯುವಜನ ಮೇಳ, ರಾಜ್ಯ ಯುವ ಪ್ರಶಸ್ತಿ ಪ್ರದಾನ

ಪುತ್ತೂರು: ದ.ಕ. ಜಿಲ್ಲಾ ಮಟ್ಟದ ಯುವಜನ ಮೇಳ 2023-24 ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಜ. 20 ಹಾಗೂ 21ರಂದು ಸವಣೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಜ. 20ರಂದು ಬೆಳಿಗ್ಗೆ 10ರಿಂದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆ ಸಮಾರಂಭ ನಡೆಯಲಿದೆ. ಸಂಸದರು, ಶಾಸಕರು, ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಸದ್ಯರು, ಇಲಾಖಾಧಿಕಾರಿಗಳು ಭಾಗವಹಿಸಲಿದ್ದಾರೆ. ಸುರೇಶ್ ರೈ ಸೂಡಿಮುಳ್ಳು ಅವರ ನೇತೃತ್ವ ವಹಿಸಿದ್ದು,

ನಾಳೆ ಸವಣೂರಿನಲ್ಲಿ ದ.ಕ. ಜಿಲ್ಲಾ ಮಟ್ಟದ ಯುವಜನ ಮೇಳ, ರಾಜ್ಯ ಯುವ ಪ್ರಶಸ್ತಿ ಪ್ರದಾನ Read More »

ಕರಾವಳಿ ಕಂಬಳಕ್ಕೆ ಅನುದಾನ: ಶಾಸಕರ ಮನವಿಗೆ ಸ್ಪಂದನೆ

ಪುತ್ತೂರು: ತುಳುನಾಡಿನ ಜನಪದ ಕ್ರೀಡೆಯಾಗಿರುವ ಕಂಬಳವು ಉಡುಪಿ ಮತ್ತು ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರತೀ ವರ್ಷವೂ ನಡೆಯುತ್ತಿದ್ದು ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕಂಬಳಗಳಿಗೂ ತಲಾ 5 ಲಕ್ಷ ರೂ. ಅನುದಾನ ನೀಡುವಂತೆ ಪುತ್ತೂರು ಶಾಸಕ ಅಶೋಕ್ ರೈ ಪ್ರವಾಸೋದ್ಯಮ , ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ಗೆ ಮನವಿ ಸಲ್ಲಿಸಿದ್ದಾರೆ. ಸಚಿವರನ್ನು ಶುಕ್ರವಾರ ಭೇಟಿಯಾದ ಶಾಸಕರು, ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪುರಾತನ ಕಾಲದಿಂದಲೂ ಕಂಬಳ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಂಬಳ ತುಳುನಾಡಿನ

ಕರಾವಳಿ ಕಂಬಳಕ್ಕೆ ಅನುದಾನ: ಶಾಸಕರ ಮನವಿಗೆ ಸ್ಪಂದನೆ Read More »

ಶಾಂತಿಗೋಡು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ

ಪುತ್ತೂರು: ಶಾಂತಿಗೋಡು ಗ್ರಾಮ ವಿಕಾಸ ಸಮಿತಿ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಎನ್‍.ಎಸ್‍.ಎಸ್‍. ವಿದ್ಯಾರ್ಥಿಗಳಿಂದ ಶಾಂತಿಗೋಡು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಶುಕ್ರವಾರ ಹಮ್ಮಿಕೊಳ್ಳಲಾಯಿತು. ಕೈಂದಾಡಿ, ಶಿರಾಡಿ ದೈವಸ್ಥಾನದ ವಠಾರದಿಂದ ಆರಂಭಿಸಿ ಶಾಂತಿಗೋಡು ರಸ್ತೆಯಲ್ಲಿದ್ದ ಪ್ಲಾಸ್ಟಿಕ್  ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಣೆ ಮಾಡಿ ಗ್ರಾಮ ಪಂಚಾಯಿತಿಗೆ ನೀಡಲಾಯಿತು. ವಿವೇಕಾನಂದ ಕಾನೂನು ವಿದ್ಯಾಲಯದ ಸುಮಾರು 50 ವಿದ್ಯಾರ್ಥಿಗಳು ಸಹಿತ ಶಾಂತಿಗೋಡು ಗ್ರಾಮ ವಿಕಾಸ ಸಮಿಯವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೂಸಪ್ಪ ಗೌಡ ಕಲ್ಕಾರು

ಶಾಂತಿಗೋಡು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ Read More »

ಚಾರ್ವಾಕದ ಆತಾಜೆ ಮೇದಪ್ಪ ಗೌಡ ಆತ್ಮಹತ್ಯೆ !

ಕಾಣಿಯೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಆತಾಜೆ ಮೇದಪ್ಪ ಗೌಡ (48) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇದಪ್ಪ ಗೌಡರವರು ತನ್ನ ಅಣ್ಣನ ಪತ್ನಿ ಯಶೋಧ ಮತ್ತು ಮಗಳು ರಾಶಿಯವರೊಂದಿಗೆ ವಾಸವಾಗಿದ್ದು, ಬೆಳಗ್ಗೆ ಮೇದಪ್ಪ ಗೌಡರ ಅಣ್ಣನ ಪತ್ನಿ ಯಶೋಧ ಹೂ ತರಲು ಹೋಗಿದ್ದು, ವಾಪಾಸು ಮನೆಗೆ ಬಂದಾಗ ಮನೆಯಲ್ಲಿ ಮೇದಪ್ಪ ಗೌಡರು ಇಲ್ಲದೇ ಇರುವುದನ್ನು ಕಂಡು ಅವರ ಮೊಬೈಲ್‍ ಫೋನಾಯಿಸಿದಾಗ ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಮನೆಯ ಸುತ್ತಮುತ್ತ ಹುಡುಕಾಡಿದಾಗ ಮೇದಪ್ಪ ಗೌಡರು ಮನೆಯ ಹತ್ತಿರ ಸುಮಾರು

ಚಾರ್ವಾಕದ ಆತಾಜೆ ಮೇದಪ್ಪ ಗೌಡ ಆತ್ಮಹತ್ಯೆ ! Read More »

ನಾಳೆ: ತಾಯಂದಿರ ಸಭೆ, ಸೈಬರ್ ಕ್ರೈಂ, ಆರೋಗ್ಯ ಕುರಿತು ಮಾಹಿತಿ ಕಾರ್ಯಾಗಾರ | ಎಸ್‍.ಆರ್.ಕೆ. ಲ್ಯಾಡರ್ಸ್, ಶಿಕ್ಷಣ ಇಲಾಖೆ, ಡಾ.ಶಿವರಾಮ ಕಾರಂತ ಪ್ರೌಢಶಾಲೆ ಸಹಭಾಗಿತ್ವ

ಪುತ್ತೂರು: ಶಿಕ್ಷಣ ಇಲಾಖೆ, ಪುತ್ತೂರು ಸರಕಾರಿ ಪ್ರೌಢಶಾಲೆ ಹಾಗೂ ಎಸ್‍.ಆರ್.ಕೆ. ಲ್ಯಾಡರ್ಸ್ ಸಂಯುಕ್ತ ಆಶ್ರಯದಲ್ಲಿ ಎಸ್‍.ಆರ್.ಕೆ. ಲ್ಯಾಡರ್ಸ್‍ನ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ತಾಯಂದಿರ ಸಭೆ, ಸೈಬರ್ ಕ್ರೈಂ ಹಾಗೂ ಆರೋಗ್ಯ ಕುರಿತು ಮಾಹಿತಿ ಕಾರ್ಯಾಗಾರ ಜ.20 ಶನಿವಾರ ನೆಲ್ಲಿಕಟ್ಟೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಬೆಳಿಗ್ಗೆ 10.30 ಕ್ಕೆ ನಡೆಯುವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್‍.ಆರ್. ಉದ್ಘಾಟಿಸಲಿದ್ದು, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ದಿನೇಶ್‍ ಕಾಮತ್‍ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಶಿಕ್ಷಕಿ

ನಾಳೆ: ತಾಯಂದಿರ ಸಭೆ, ಸೈಬರ್ ಕ್ರೈಂ, ಆರೋಗ್ಯ ಕುರಿತು ಮಾಹಿತಿ ಕಾರ್ಯಾಗಾರ | ಎಸ್‍.ಆರ್.ಕೆ. ಲ್ಯಾಡರ್ಸ್, ಶಿಕ್ಷಣ ಇಲಾಖೆ, ಡಾ.ಶಿವರಾಮ ಕಾರಂತ ಪ್ರೌಢಶಾಲೆ ಸಹಭಾಗಿತ್ವ Read More »

ಜ.22 : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ | ಪುತ್ತೂರಿನಲ್ಲಿ ನಡೆಯಿತು ಶ್ರೀ ರಾಮಶ್ವ ಯಾತ್ರೆಗೆ ಚಾಲನೆ

ಪುತ್ತೂರು: ಜ.22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಶ್ರೀ ರಾಮನ ದಿಗ್ವಿಜಯದ ಸಂಕೇತವಾಗಿ ಶ್ರೀ ರಾಮಶ್ವ ಯಾತ್ರೆಗೆ ಶುಕ್ರವಾರ ದೇವಸ್ಥಾನದ ರಥಬೀದಿಯಲ್ಲಿ ಚಾಲನೆ ನೀಡಲಾಯಿತು. ಪುತ್ತೂರು ಸೀಮೆಗೆ ಸಂಬಂಧಿಸಿ ಮೂರು ದಿನಗಳ ಕಾಲ ಸಂಚರಿಸಲಿರುವ ಈ ಯಾತ್ರೆಯನ್ನು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ

ಜ.22 : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ | ಪುತ್ತೂರಿನಲ್ಲಿ ನಡೆಯಿತು ಶ್ರೀ ರಾಮಶ್ವ ಯಾತ್ರೆಗೆ ಚಾಲನೆ Read More »

ತರಾತುರಿಯ ಶ್ರೀರಾಮನ ಪ್ರಾಣ ಪ್ರತಿಷ್ಠೆ ಹಿಂದೂ ಸಮಾಜ, ನೈಜ ರಾಮಭಕ್ತರಿಗೆ ಮಾಡುವ  ಅವಮಾನ | ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ.ವಿಶ್ವನಾಥ ರೈ

ಪುತ್ತೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಹಾಗೂ ಸಂಘ ಪರಿವಾರದವರು ಅಯೋಧ್ಯೆಯ ಅಪೂರ್ಣ ರಾಮ ಮಂದಿರದಲ್ಲಿ ತರಾತುರಿಯಲ್ಲಿ  ಶ್ರೀರಾಮನ ಪ್ರಾಣ ಪ್ರತಿಷ್ಠೆ ಮಾಡಲು ಹೊರಟಿರುವುದು ಹಿಂದೂ ಸಮಾಜಕ್ಕೆ, ನೈಜ ರಾಮಭಕ್ತರಿಗೆ ಮಾಡುವ ಅವಮಾನ ಎಂದು ಪುತ್ತೂರು ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಆರೋಪಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಲೇ ಶ್ರೀರಾಮನ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ದೇಶದಲ್ಲಿ ಕಾಂಗ್ರೆಸ್ ನಾಯಕರು ಗೈರು ಹಾಜರಾಗುವ ಕುರಿತು ಬಹಿರಂಗ ಹೇಳಿಕೆ ಕೊಟ್ಟಿದ್ದು, ಈ ನೆಪವನ್ನಿಟ್ಟುಕೊಂಡು

ತರಾತುರಿಯ ಶ್ರೀರಾಮನ ಪ್ರಾಣ ಪ್ರತಿಷ್ಠೆ ಹಿಂದೂ ಸಮಾಜ, ನೈಜ ರಾಮಭಕ್ತರಿಗೆ ಮಾಡುವ  ಅವಮಾನ | ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ.ವಿಶ್ವನಾಥ ರೈ Read More »

ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠೆಯನ್ನು ದೀಪಾವಳಿ ರೀತಿ ಆಚರಿಸಿ | ಪತ್ರಿಕಾಗೋಷ್ಠಿಯಲ್ಲಿ ಡಾ.ಕೃಷ್ಣಪ್ರಸನ್ನ ಕರೆ

ಪುತ್ತೂರು: ಜ.22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣಪ್ರತಿಷ್ಠೆ ಮಧ್ಯಾಹ್ನ 12.20 ರ ಶುಭ ಮುಹೂರ್ತದಲ್ಲಿ ವಿದ್ಯುಕ್ತವಾಗಿ ನಡೆಯಲಿದ್ದು, ಅಂದು ಪ್ರತೀ ಹಿಂದೂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿ ಆಚರಣೆ ರೀತಿಯಲ್ಲಿ ಶ್ರೀರಾಮನನ್ನು ಆರಾಧಿಸುವಂತೆ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ವಿನಂತಿ ಮಾಡಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಾಣಪ್ರತಿಷ್ಠೆ ದಿನ ಹಿಂದೂ ಬಾಂಧವರು ಕನಿಷ್ಠ ಐದು ದೀಪಗಳನ್ನು ಉತ್ತರಾಭಿಮುಖವಾಗಿ ಬೆಳಗಿಸಿ, ಆರತಿ ಬೆಳಗಿ ಶ್ರೀರಾಮ಻ನನ್ನು ಆರಾಧಿಸಬೇಕು. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ

ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠೆಯನ್ನು ದೀಪಾವಳಿ ರೀತಿ ಆಚರಿಸಿ | ಪತ್ರಿಕಾಗೋಷ್ಠಿಯಲ್ಲಿ ಡಾ.ಕೃಷ್ಣಪ್ರಸನ್ನ ಕರೆ Read More »

error: Content is protected !!
Scroll to Top