ಶ್ರೀರಾಮ ಪ್ರಾಣ ಪ್ರತಿಷ್ಠೆ | ಅನ್ಯಾಡಿ, ಕೆಡೆಂಜಿ ಯುವಕರಿಂದ ರಾಮಭಕ್ತರಿಗೆ ತಂಪು ಪಾನೀಯ ವಿತರಣೆ

ಸವಣೂರು: ಎಲ್ಲೆಡೆ ಇಂದು ಶ್ರೀರಾಮ ಪ್ರಾಣಪ್ರತಿಷ್ಠೆಯನ್ನು ಸಂಭ್ರಮದಿಂದ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಿದ್ದು, ಅನ್ಯಾಡಿ ಮತ್ತು ಕೆಡೆಂಜಿ ಯುವಕರಿಂದ ಹತ್ತನೇಕಲ್ಲಿನಲ್ಲಿ ತಂಪು ಪಾನೀಯ ವಿತರಿಸಲಾಯಿತು. ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ಪ್ರಯುಕ್ತ ರಾಮಭಕ್ತರಿಗೆ, ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಲಾಯಿತು. ಹಲವಾರು ರಾಮಭಕ್ತರು, ಸಾರ್ವಜನಿಕರು ತಂಪು ಪಾನೀಯ ಸ್ವೀಕರಿಸಿದರು.

ಶ್ರೀರಾಮ ಪ್ರಾಣ ಪ್ರತಿಷ್ಠೆ | ಅನ್ಯಾಡಿ, ಕೆಡೆಂಜಿ ಯುವಕರಿಂದ ರಾಮಭಕ್ತರಿಗೆ ತಂಪು ಪಾನೀಯ ವಿತರಣೆ Read More »

ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠಾ ವಿಧಿವಿಧಾನಗಳಿಗೆ ಚಾಲನೆ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನಗಳು ಆರಂಭವಾಗಿದ್ದು, ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇಂದು ಮುಂಜಾನೆ ಪ್ರಾಣಪ್ರತಿಷ್ಠೆಗೆ  ವಿಧಿವಿಧಾನ ಆರಂಭವಾಗಿದ್ದು, 114 ಕಲಶಗಳಿಂದ ವಿವಿಧ ಔಷಧೀಯ ನೀರಿನಿಂದ ವಿಗ್ರಹ ಸ್ನಾನ ನಡೆಸಲಾಯಿತು. ಕಲಶ ನೀರಿನಿಂದ ಮೂರ್ತಿಗಳ ಪುಣ್ಯ ಸ್ನಾನದ ಬಳಿ ಪ್ರತಿಷ್ಠಾಪಿಸಲಿರುವ ದೇವತೆಗಳಿಗೆ ನಿತ್ಯ ಪೂಜೆ, ಹವನ, ಪಾರಾಯಣ ನಡೆದಿದೆ. ಪ್ರಾತಃಕಾಲ ಮಾಧ್ವಾಧೀನಗಳು, ಮಹಾಪೂಜೆ, ಉತ್ಸವ ಮೂರ್ತಿ ಪ್ರಸಾದ ಪರಿಕ್ರಮ, ತತ್ತ್ವನ್ಯಾಯ, ಮಹನ್ಯಾಸ, ಅದಿನ್ಯಾಸ, ಅಘೋರ ಹೋಮ, ವ್ಯಾಹೃತಿ ಹೋಮ, ಜಾಗರಣ, ಸಂಜೆಪೂಜೆ ಹಾಗೂ

ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠಾ ವಿಧಿವಿಧಾನಗಳಿಗೆ ಚಾಲನೆ Read More »

ಪಿಎಲ್‍ ಡಿ ಬ್ಯಾಂಕ್‍ ಮಾಜಿ ಅಧ್ಯಕ್ಷ ಹಸಂತಡ್ಕ ರಾಮ ಭಟ್‍ ನಿಧನ

ಪುತ್ತೂರು: ಬಜರಂಗದಳ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಅವರ ತಂದೆ ಹಸಂತಡ್ಕ ರಾಮ ಭಟ್ ಜ.21 ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಪಿಎಲ್‍ಡಿ ಬ್ಯಾಂಕ್‍ ಮಾಜಿ ಅಧ್ಯಕ್ಷರಾಗಿದ್ದ ಅವರು, ಸಂಘ ಪರಿವಾರದ ಹಿರಿಯ ಕಾರ್ಯಕರ್ತರಾಗಿದ್ದರು. ಅವರು ಈ ಹಿಂದೆ ಪುತ್ರನ ವಿವಾಹ ಸಂದರ್ಭದಲ್ಲಿ ನೇತ್ರದಾನ ಮಾಡುವ ಕುರಿತು ನೋಂದಾವಣೆ ಮಾಡಿದ್ದರು. ಅದರಂತೆ ಭಾನುವಾರ ರಾತ್ರಿ ಮಂಗಳೂರಿನಿಂದ ನೇತ್ರ ತಜ್ಞರು ಆಗಮಿಸಿದ್ದರು. ಮೃತರರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪಿಎಲ್‍ ಡಿ ಬ್ಯಾಂಕ್‍ ಮಾಜಿ ಅಧ್ಯಕ್ಷ ಹಸಂತಡ್ಕ ರಾಮ ಭಟ್‍ ನಿಧನ Read More »

ಯಕ್ಷಗಾನ ಕಲಾವಿದ ನಾರಾಯಣ ನಾಯಕ್ ತೋಟಚಾವಡಿ ಆತ್ಮಹತ್ಯೆ !

ಸುಳ್ಯ: ಪ್ರಸಿದ್ಧ ಯಕ್ಷಗಾನ ಕಲಾವಿದರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಮರ್ಕಂಜದಲ್ಲಿ ನಡೆದಿದೆ. ಕೃಷಿಕ ನಾರಾಯಣ ನಾಯಕ್ ತೋಟಚಾವಡಿ (52) ಆತ್ಮಹತ್ಯೆ ಮಾಡಿಕೊಂಡ ಯಕ್ಷಗಾನ ಕಾಲವಿದರು. ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆ, ಮದ್ದಳೆ ವಾದಕರಾಗಿ ಪ್ರಸಿದ್ಧರಾಗಿದ್ದ ನಾರಾಯಣ ನಾಯಕ್ ಅವರ ಮನೆಯಲ್ಲಿ ಮುಂಜಾನೆ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಪಕ್ಷದ ಮನೆಯವರು ಮನೆ ಬಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಮಗಳ ಮನೆಗೆ ಹೋಗಿದ್ದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರಿಗೆ ಇಬ್ಬರು ಪುತ್ರಿಯರಿದ್ದು,

ಯಕ್ಷಗಾನ ಕಲಾವಿದ ನಾರಾಯಣ ನಾಯಕ್ ತೋಟಚಾವಡಿ ಆತ್ಮಹತ್ಯೆ ! Read More »

ಅಯೋಧ್ಯಾ ಮಂದಿರದ ಚಿತ್ರವಿರುವ ಟಿ-ಶರ್ಟ್ ಧಾರಣೆ | ಹೊಟೇಲ್ ಸಿಬ್ಬಂದಿಗಳಿಂದ ಶ್ರೀರಾಮ ಪ್ರಾಣಪ್ರತಿಷ್ಠೆಯ ಸಂಭ್ರಮ

ಪುತ್ತೂರು: ಇಂದು ಎಲ್ಲೆಲ್ಲೂ ಶ್ರೀ ರಾಮ ಪ್ರಾಣಪ್ರತಿಷ್ಠೆಯ ಸಂಭ್ರಮ. ಈ ಸಂಭ್ರಮವನ್ನು ವಿವಿಧ ರೀತಿಯಲ್ಲಿ ಇಂದು ಎಲ್ಲೆಡೆ ಆಚರಿಸುತ್ತಿದ್ದು, ಪುತ್ತೂರಿನಲ್ಲಿ ಹೊಟೇಲ್ ಒಂದರ ಸಿಬ್ಬಂದಿಗಳು ಆಯೋಧ್ಯಾ ಮಂದಿರದ ಚಿತ್ರವಿರುವ ಟಿ-ಶರ್ಟ್ ಹಾಕಿ ಸಂಭ್ರಮಿಸಿದರು. ಪುತ್ತೂರಿನ ನೆಹರೂನಗರದಲ್ಲಿರುವ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿರುವ ಹೊಟೇಲ್ ಶ್ರೀ ಕೃಷ್ಣಭವನ ಸಿಬ್ಬಂದಿಗಳು ಈ ರೀತಿಯಿಂದ ಸಂಭ್ರಮಿಸಿದರು. ಸಿಬ್ಬಂಗಳು ಜತೆ ಹೊಟೇಲ್ ಮಾಲಕ ಕೃಷ್ಣಪ್ಪ ಗೌಡ ಮತ್ತು ಸಂಜೀವಿನಿ ಕ್ಲಿನಿಕ್ ನ ಡಾ|ರವಿನಾರಾಯಣ್  ಅವರು ಫೋಟೋಗೆ ಫೋಸ್ ಕೊಡುವ ಮೂಲಕ ಸಾಥ್ ನೀಡಿದರು.

ಅಯೋಧ್ಯಾ ಮಂದಿರದ ಚಿತ್ರವಿರುವ ಟಿ-ಶರ್ಟ್ ಧಾರಣೆ | ಹೊಟೇಲ್ ಸಿಬ್ಬಂದಿಗಳಿಂದ ಶ್ರೀರಾಮ ಪ್ರಾಣಪ್ರತಿಷ್ಠೆಯ ಸಂಭ್ರಮ Read More »

ನಾಳೆ ಆಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ | ಜೀವನದಿ ನೇತ್ರಾವತಿ ನದಿ ಮಧ್ಯೆ ನಡೆಯಿತು ಶ್ರೀ ಸತ್ಯನಾರಾಯಣ ಪೂಜೆ

ಬಂಟ್ವಾಳ: ಜ.22 ರಂದು ಅಯೋಧ್ಯೆ ರಾಮಂದಿರದಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆ ಅಂಗವಾಗಿ ಮುನ್ನಾ ದಿನ ಭಾನುವಾರ ಜೀವನದಿ ನೇತ್ರಾವತಿ ನದಿ ಮಧ್ಯೆ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮಾಜಿ ಪುರಸಭೆ ಸದಸ್ಯ, ರಾಮಭಕ್ತ ಎ.ಗೊವಿಂದ ಪ್ರಭು ಎಂಬವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜಿಲ್ಲೆಯ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬಳಿಯ ನೇತ್ರಾವತಿ ನದಿ ನದಿ ಮಧ್ಯೆ ಭಾನುವಾರ ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಪುರಸಭೆಯ ಹಿರಿಯ ಸದಸ್ಯ

ನಾಳೆ ಆಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ | ಜೀವನದಿ ನೇತ್ರಾವತಿ ನದಿ ಮಧ್ಯೆ ನಡೆಯಿತು ಶ್ರೀ ಸತ್ಯನಾರಾಯಣ ಪೂಜೆ Read More »

ಅಂಬಿಕಾ ಅಂಗಳದಲ್ಲಿ ಸೂರ್ಯಗಾಯತ್ರಿ ತಂಡದಿಂದ ಸಂಗೀತ ವೈಭವ | ಜನಮನಸೂರೆಗೊಂಡ ಹಾಡುಗಳು

ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಯುವಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ – ದಶಾಂಬಿಕೋತ್ಸವ ಪ್ರಯುಕ್ತ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಸಂಗೀತಾಸಕ್ತರು ಭಾಗಿಯಾಗಿ ರಸಾನುಭೂತಿಯನ್ನು ಆಸ್ವಾದಿಸಿದರು. ಪುತ್ತೂರಿಗೆ ಮೊಟ್ಟಮೊದಲ ಬಾರಿಗೆ ಆಗಮಿಸಿದ್ದ ಸೂರ್ಯಗಾಯತ್ರಿ ಅಂಬಿಕಾ ಸಂಸ್ಥೆಯಲ್ಲಿ ತನ್ನ ಹಾಡನ್ನು ಆರಂಭಿಸುವಾಗ ತನ್ನ ತಾಯಿ ರಚಿಸಿದ ಗಣಪತಿ ಸ್ತುತಿ

ಅಂಬಿಕಾ ಅಂಗಳದಲ್ಲಿ ಸೂರ್ಯಗಾಯತ್ರಿ ತಂಡದಿಂದ ಸಂಗೀತ ವೈಭವ | ಜನಮನಸೂರೆಗೊಂಡ ಹಾಡುಗಳು Read More »

ಇಂದು ಮಧ್ಯರಾತ್ರಿಯಿಂದ ಜ.23 ಮುಂಜಾನೆ ತನಕ ಮದ್ಯದಂಗಡಿ ಬಂದ್ | ಆದೇಶ ನೀಡಿದ ಜಿಲ್ಲಾಧಿಕಾರಿ

ಮಂಗಳೂರು: ನಾಳೆ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠೆ ಅಂಗವಾಗಿ ಇಂದು ಮಧ್ಯರಾತ್ರಿಯಿಂದ ಜ.23 ರ ಮುಂಜಾನೆ ತನಕ ದ.ಕ.ಜಿಲ್ಲಾಧ್ಯಂತ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶಿಸಿದ್ದಾರೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜ್ಯಾರಿಗೊಳಿಸುವಂತೆ ಉಪವಿಭಾಗಗಳಿಗೆ ಜಿಲ್ಲಾಧಿಕಾರಿಯವರು ಪ್ರಕಟಣೆ ನೀಡಿದ್ದಾರೆ. ಈ ಅವಧಿಯಲ್ಲಿ ಆಯಾ ಉಪವಿಭಾಗಗಳಲ್ಲಿ ಬಾರ್ ಹಾಗೂ ವೈನ್‍ ಶಾಪ್‍ಗಳಿಗೆ ಅಬಕಾರಿ ಇಲಾಖೆಯ ಮೊಹರು ಹಾಕಿ ಮುಚ್ಚುವಂತೆ ನೋಡಿಕೊಳ್ಳಬೇಕು ಎಂದು ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

ಇಂದು ಮಧ್ಯರಾತ್ರಿಯಿಂದ ಜ.23 ಮುಂಜಾನೆ ತನಕ ಮದ್ಯದಂಗಡಿ ಬಂದ್ | ಆದೇಶ ನೀಡಿದ ಜಿಲ್ಲಾಧಿಕಾರಿ Read More »

ಫೆ.4 : ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟ | ಆಮಂತ್ರಣ ಬಿಡುಗಡೆ ಮಾಡಿದ ಸಂಘದ ಮುಖಂಡರು

ಪುತ್ತೂರು: ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಭಾನುವಾರ ನಡೆಯಿತು. ಕ್ರೀಡಾಕೂಟ ಫೆ.4 ರಂದು ನರಿಮೊಗರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಶಾಂತಿಗೋಡಿನ ಕೈಂದಾಡಿ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಸಂಘದ ಮುಖಂಡರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಮುಂಡೂರು ವಲಯದ ಅಧ್ಯಕ್ಷ ಚೆನ್ನಪ್ಪ ಗೌಡ ಕೋಲಾಡಿ, ಪ್ರಧಾನ ಕಾರ್ಯದರ್ಶಿ ವರುಣ್ ಗೌಡ ಓಲಾಡಿ, ಸಂಘಟನಾ ಕಾರ್ಯದರ್ಶಿ ಮೋಹನ್ ಗೌಡ ನಡುಬೈಲು,

ಫೆ.4 : ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟ | ಆಮಂತ್ರಣ ಬಿಡುಗಡೆ ಮಾಡಿದ ಸಂಘದ ಮುಖಂಡರು Read More »

ಮನೆ ಬಾಗಿಲು ಬಡಿದ ಅಪರಿಚಿತರು | ಓರ್ವ ಪೊಲೀಸ್ ವಶ

ಪುತ್ತೂರು: ಇಲ್ಲಿಯ ಕೊಂಬೆಟ್ಟು ಬಳಿ ಭಾನುವಾರ ನಸುಕಿನ ವೇಳೆ ಅಪರಿಚಿತರು ಮೂರು ಮನೆಗಳ ಬಾಗಿಲು ಬಡಿದು ಆತಂಕದ ವಾತವಾರಣ ಸೃಷ್ಟಿಸಿದ ಘಟನೆ ನಡೆದಿದೆ. ಭಾನುವಾರ ಬೆಳಿಗ್ಗೆ ಸುಮಾರು 5.30ರ ಹೊತ್ತಿಗೆ ಇಬ್ಬರು ಅಪರಿಚಿತರು ಮೂರು ಮನೆಗಳ ಬಾಗಿಲು ಬಡಿದು ಮನೆಯ ಸುತ್ತಾಮುತ್ತಾ ಓಡಾಡಿದ್ದಾರೆ. ಇದನ್ನು ಗಮನಿಸಿದ ಮನೆಯವರು ಹಿಡಿಯಲು ಹೋದಾಗ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಮನೆಯ ಪ್ರವೀಣ್ ರಾವ್ ನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಜತೆಗೆ ಸ್ಥಳೀಯ ನಗರಸಭಾ ಸದಸ್ಯರಿಗೂ ಮಾಹಿತಿ ನೀಡಿದ್ದಾರೆ.

ಮನೆ ಬಾಗಿಲು ಬಡಿದ ಅಪರಿಚಿತರು | ಓರ್ವ ಪೊಲೀಸ್ ವಶ Read More »

error: Content is protected !!
Scroll to Top