ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಜೊತೆ ಚರ್ಚೆ ನಡೆಸಿದ್ದೇವೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಬೆಂಗಳೂರು: ಮುಂದಿನ ವಿಧಾನಪರಿಷತ್ ಉಪಚುನಾವಣೆ ಹಿನ್ನಲೆಯಲ್ಲಿ ವಿಧಾನಪರಿಷತ್ತಿನ ಉಳಿದ 6 ಸ್ಥಾನಗಳ ಚುನಾವಣೆಗೆ ಕುರಿತು ಈಗಾಗಲೇ ಚರ್ಚಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ಎಸ್‍.ವೈ.ವಿಜಯೇಂದ್ರ ತಿಳಿಸಿದ್ದಾರೆ. ಇಂದು ಮಾಧ್ಯಮದವರ ಜತೆ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಕ್ಷೇತ್ರಗಳ ಕುರಿತು ಚರ್ಚೆಯಾಗಿದೆ. ಸಭೆಯಲ್ಲಿ ಚರ್ಚೆಯಾದ ಅಂಶಗಳನ್ನು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದು ಶೀಘ್ರ ಅಭ್ಯರ್ಥಿಗಳ ಘೋಷಣೆ ಮಾಡಲು ನಿರ್ಧರಿಸಲಾಗಿದೆ ಎಂದ ಅವರು, ಕಾರ್ಯಕರ್ತರು ತಳಮಟ್ಟದಲ್ಲಿ ಹೊಂದಿಕೊಂಡು ಹೋಗುವ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಮುಂದಿನ […]

ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಜೊತೆ ಚರ್ಚೆ ನಡೆಸಿದ್ದೇವೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ Read More »

ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 23ನೇ ನೂತನ ಆಲಂಕಾರು ಶಾಖೆ ಶುಭಾರಂಭ

ಆಲಂಕಾರು: ಮೂರು ಬಾರಿ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಯ 23ನೇ ನೂತನ  ಆಲಂಕಾರು ಶಾಖೆಯ ಉದ್ಘಾಟನಾ ಸಮಾರಂಭ ಜ.21 ಭಾನುವಾರ ಕಡಬ ಶ್ರೀ ದುರ್ಗಾ ಟವರ್ಸ್‍ನಲ್ಲಿ ನಡೆಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಭದ್ರತಾ ಕೊಠಡಿ, ಉದ್ಯಮಿ ಜಿ.ಕೃಷ್ಣಪ್ಪ ರಾಮಕುಂಜ ಗಣಕೀಕರಣ ಉದ್ಘಾಟಿಸಿದರು. ಆಲಂಕಾರು ಗ್ರಾಮ

ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 23ನೇ ನೂತನ ಆಲಂಕಾರು ಶಾಖೆ ಶುಭಾರಂಭ Read More »

ವಿದ್ಯಾಮಾತಾ ಅಕಾಡೆಮಿಗೆ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯ ಗೌರವ | ಸಂಸ್ಥೆಯ ಮುಕುಟಕ್ಕೆ ಮತ್ತೊಂದು ರಾಜ್ಯ ಪ್ರಶಸ್ತಿಯ ಗರಿ

ಪುತ್ತೂರು: ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯತೆ ತರಬೇತಿ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಗೆ 2024ರ ಸಾಲಿನ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ಕೊಡಲ್ಪಡುವ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿ ಲಭಿಸಿದೆ. ಸವಣೂರಿನಲ್ಲಿ ನಡೆಯುತ್ತಿರುವ ಯುವಜನ ಮೇಳದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಶಸ್ತಿಯನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್

ವಿದ್ಯಾಮಾತಾ ಅಕಾಡೆಮಿಗೆ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯ ಗೌರವ | ಸಂಸ್ಥೆಯ ಮುಕುಟಕ್ಕೆ ಮತ್ತೊಂದು ರಾಜ್ಯ ಪ್ರಶಸ್ತಿಯ ಗರಿ Read More »

ಮರ್ಕಂಜ ಸರಕಾರಿ ಪ್ರೌಢಶಾಲೆಗೆ ಬೆಂಗಳೂರು ಉಜ್ಜೀವನ್ ಬ್ಯಾಂಕ್‍ ಮೂಲಕ ಹಳೆ ವಿದ್ಯಾರ್ಥಿ ಪ್ರದೀಪ್ ಜೈನ್ ರಿಂದ 9 ಕಂಪ್ಯೂಟರ್ ಹಸ್ತಾಂತರ

ಸುಳ್ಯ: ತಾಲೂಕಿನ ಮರ್ಕಂಜ ಸರಕಾರಿ ಪ್ರೌಢ ಶಾಲೆ ಹಳೆ ವಿದ್ಯಾರ್ಥಿ ಪ್ರದೀಪ್ ಜೈನ್ ಬಲ್ನಾಡುಪೇಟೆ ಅವರು ಶಾಲೆಗೆ 9 ಕಂಪ್ಯೂಟರನ್ನು ಬೆಂಗಳೂರು ಉಜ್ಜೀವನ್ ಬ್ಯಾಂಕ್‍ ಮೂಲಕ ಕೊಡುಗೆಯಾಗಿ ನೀಡಿದರು. ಪ್ರಸ್ತುತ ಬೆಂಗಳೂರಿನ ಉಜ್ಜೀವನ್ ಬ್ಯಾಂಕ್ ನ ಹೌಸಿಂಗ್ ಲೋನ್ ವಿಭಾಗದಲ್ಲಿ ನ್ಯಾಷನಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್‍ ಜೈನ್ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಕಂಪ್ಯೂಟರ್ ಕಲಿಕೆಯಲ್ಲಿ ಮುಂದೆ ಬರಬೇಕು ಎಂಬ ಆಶಯದೊಂದಿಗೆ ತಾನು ಕಲಿತ ಶಾಲೆಗೆ 9 ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮರ್ಕಂಜ ಗ್ರಾಮ

ಮರ್ಕಂಜ ಸರಕಾರಿ ಪ್ರೌಢಶಾಲೆಗೆ ಬೆಂಗಳೂರು ಉಜ್ಜೀವನ್ ಬ್ಯಾಂಕ್‍ ಮೂಲಕ ಹಳೆ ವಿದ್ಯಾರ್ಥಿ ಪ್ರದೀಪ್ ಜೈನ್ ರಿಂದ 9 ಕಂಪ್ಯೂಟರ್ ಹಸ್ತಾಂತರ Read More »

ಕರ್ವೆಲ್ ಶ್ರೀರಾಮ‌ ಭಜನಾ ಮಂದಿರದ 28 ನೇ ವಾರ್ಷಿಕೋತ್ಸವ, ಕುಣಿತ ಭಜನಾ ಸಂಭ್ರಮ

ಪುತ್ತೂರು: ದೇವರ ಪ್ರೀತಿಯನ್ನು ಗಳಿಸುವುದೇ ಭಜನೆಯ ಮೂಲ ಉದ್ದೇಶ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಕರ್ವೆಲು ಶ್ರೀರಾಮ‌ ಭಜನಾ ಮಂದಿರದ ವಾರ್ಷಿಕೋತ್ಸವ ಹಾಗೂ ಕುಣಿತ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಜನೆ ಭಕ್ತರನ್ನು ಒಗ್ಗೂಡಿಸುತ್ತದೆ,.ಮಕ್ಕಳಲ್ಲಿ ಭಜನೆಯ ಅಭಿರುಚಿ ಮೂಡಿಸುವ ಕೆಲಸ ‌ಮಾಡಬೇಕು. ಭಜನೆಯ ಜೊತೆ ಸಂಸ್ಕ್ರತಿ, ಸಂಸ್ಕಾರವನ್ನು‌ ಕಲಿಸುವ ಕೆಲಸವನ್ನು ಪೋಷಕರು ಮಾಡಬೇಕು. ಮಕ್ಕಳು ಉತ್ತಮ ಪ್ರಜೆಗಳಾದರೆ ದೇಶ ವಿಶ್ವಗುರುವಾಗಲು ಸಾಧ್ಯವಾಗುತ್ತದೆ ಎಂದರು. ವೇದಿಕೆಯಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷರಾದ ತೋಹಿಜಾಕ್ಷ ಶೆಟ್ಟಿ, ಧನ್ಯಕುಮಾರ್

ಕರ್ವೆಲ್ ಶ್ರೀರಾಮ‌ ಭಜನಾ ಮಂದಿರದ 28 ನೇ ವಾರ್ಷಿಕೋತ್ಸವ, ಕುಣಿತ ಭಜನಾ ಸಂಭ್ರಮ Read More »

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗೊಂದಲ ನಿವಾರಣೆ | ಉಪ್ಪಿನಂಗಡಿ ಗಾಂಧಿಪಾರ್ಕ್ ಬಳಿ ಅಂಡರ್ ಪಾಸ್ ನಿರ್ಮಾಣ

ಪುತ್ತೂರು : ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯ ನಡೆಯುವ ಹಿರೇಬಂಡಾಡಿ ತಿರುವು ರಸ್ತೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಕುರಿತ ದೂರಿನ ಹಿನ್ನೆಲೆಯಲ್ಲಿ ಅಂಡರ್ ಪಾಸ್ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಗೊಂದಲ ನಿವಾರಿಸಿದರು. ಹಿರೇಬಂಡಾಡಿ ತಿರುವು ರಸ್ತೆಗೆ ಸಂಪರ್ಕ ಸಾಧಿಸುವ ಮತ್ತು ವಿದ್ಯಾರ್ಥಿಗಳ ಸುರಕ್ಷಿತ ಸಂಚಾರದ ಹಿನ್ನೆಲೆಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವ ಬಗ್ಗೆ ಮೂಡಿದ್ದ ಗೊಂದಲಗಳನ್ನು ಸಂಸದರ ಸೂಚನೆ

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗೊಂದಲ ನಿವಾರಣೆ | ಉಪ್ಪಿನಂಗಡಿ ಗಾಂಧಿಪಾರ್ಕ್ ಬಳಿ ಅಂಡರ್ ಪಾಸ್ ನಿರ್ಮಾಣ Read More »

ಜ. 22: ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ

ಪುತ್ತೂರು: ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ, ಶ್ರೀರಾಮ ದೇವರ ಪ್ರತಿಮೆ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ. 22ರಂದು ಶ್ರೀ ರಾಮೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 6ರಿಂದ ಶ್ರೀರಾಮ ಜ್ಯೋತಿ ಪ್ರಜ್ವಲನೆ, ಭಜನೆ, ಸತ್ಸಂಗ ರಾಮ ನಾಮದ ಮಹತ್ವ, ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರ, ಇನ್ನಿತರ ಧಾರ್ಮಿಕ, ವೈಧಿಕ ಕಾರ್ಯಕ್ರಮಗಳು ಜರಗಲಿದೆ. ಮಧ್ಯಾಹ್ನ ದೇವರ ಪ್ರಸಾದ ರೂಪದ ಅನ್ನಸಂತರ್ಪಣೆ ಇದೆ. ಕಾರ್ಯಕ್ರಮದ ಯಶಸ್ಸಿಗೆ ಧನಸಹಾಯ, ವಸ್ತು ರೂಪದಲ್ಲಿ ಅಕ್ಕಿ, ತೆಂಗಿನಕಾಯಿ, ತರಕಾರಿ, ಬಾಳೆಗೊನೆ,

ಜ. 22: ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಖ್ಯಾತ ಗಾಯಕಿ ಸೂರ್ಯಗಾಯತ್ರಿ | ಶಿವನನ್ನು ಸ್ತುತಿಸಿದರು ಸುಶ್ರಾವ್ಯ ಕಂಠದಿಂದ

ಪುತ್ತೂರು: ಖ್ಯಾತ ಗಾಯಕಿ ಕುಮಾರಿ ಸೂರ್ಯಗಾಯತ್ರಿ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಸಂಜೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಪುತ್ತೂರಿನಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಲು ಆಗಮಿಸಿದ ಹಿನ್ನಲೆಯಲ್ಲಿ ಶ್ರೀ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವರ ನಡೆಯಲ್ಲಿ ತನ್ನ ಸುಶ್ರಾವ್ಯ ಕಂಠದಿಂದ ಶಿವನನ್ನು ಸ್ತುತಿಸಿದರು. ಶ್ರೀ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕುಮಾರ ಕೆದಿಲಾಯರು ವಿಶೇಷ ಪ್ರಾರ್ಥನೆ ಮಾಡಿ ಶ್ರೀ ದೇವರ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಖ್ಯಾತ ಗಾಯಕಿ ಸೂರ್ಯಗಾಯತ್ರಿ | ಶಿವನನ್ನು ಸ್ತುತಿಸಿದರು ಸುಶ್ರಾವ್ಯ ಕಂಠದಿಂದ Read More »

ಶ್ರೀರಾಮನ ಸೇವೆಗಾಗಿ ಶ್ರೀರಾಮ ಭಕ್ತರಿಂದ ವ್ಯಾಪಾರ ಸ್ಥಗಿತ | ಪುತ್ತೂರು ಸೆಂಟರ್ ವ್ಯಾಪರಸ್ಥರಿಂದ ಹೀಗೊಂದು ಬ್ಯಾನರ್ ಅಳವಡಿಕೆ

ಪುತ್ತೂರು: ಇಲ್ಲಿನ ಪುತ್ತೂರು ಸೆಂಟರ್ ವ್ಯಾಪರಸ್ಥರು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯ ದಿನದಂದು ವ್ಯಾಪಾರ ಸ್ಥಗಿತಗೊಳಿಸಿ, ಶ್ರೀರಾಮಚಂದ್ರನ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುತ್ತೇವೆ ಎನ್ನುವ ಬ್ಯಾನರ್ ಅಳವಡಿಸಿ ಗಮನ ಸೆಳೆದಿದ್ದಾರೆ. “||ಜೈ ಶ್ರೀರಾಮ್|| ಶ್ರೀರಾಮನ ಸೇವೆಗಾಗಿ ಸೋಮವಾಗಿ ತಾ. 22.01.2024ರಂದು ವ್ಯವಹಾರ ಸ್ಥಗಿತ. ಪುತ್ತೂರು ಸೆಂಟರ್ ವ್ಯಾಪಾರಸ್ಥರು. ಎಲ್ಲರಿಗೂ ಉತ್ತರೋತ್ತರ ಅಭಿವೃದ್ಧಿಯಾಗಲಿ” ಹೀಗೆಂದು ಬ್ಯಾನರಿನಲ್ಲಿ ಬರೆಯಲಾಗಿದೆ. ಸೋಮವಾರ ವ್ಯವಹಾರ ಸ್ಥಗಿತಗೊಳಿಸಿ, ಶ್ರೀರಾಮನ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ ವ್ಯಾಪಾರಸ್ಥರು. ನಿತಿನ್ ಕುಮಾರ್ ಮಂಗಳ, ಸಂಕಪ್ಪ ಗೌಡ, ಕೃಷ್ಣರಾಜ್ ಹೆಗ್ಡೆ,

ಶ್ರೀರಾಮನ ಸೇವೆಗಾಗಿ ಶ್ರೀರಾಮ ಭಕ್ತರಿಂದ ವ್ಯಾಪಾರ ಸ್ಥಗಿತ | ಪುತ್ತೂರು ಸೆಂಟರ್ ವ್ಯಾಪರಸ್ಥರಿಂದ ಹೀಗೊಂದು ಬ್ಯಾನರ್ ಅಳವಡಿಕೆ Read More »

ಜ. 22: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಿಶೇಷ ಭಜನೆ

ಪುತ್ತೂರು: ಶಾಂತಿಮೊಗೆರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ನೇತೃತ್ವದಲ್ಲಿ ಶಾಂತಿಮೊಗೆರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 22ರಂದು 108 ರಾಮ ಮಂತ್ರ ಜಪಿಸಿ ಭಜನಾ ಕಾರ್ಯಕ್ರಮ ನಡೆಯಲಿದೆ.ಜ. 22ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಈ ವಿಶೇಷ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಭಜನೆಯನ್ನು ನಡೆಸಿಕೊಡಲಿದೆ.ಬೆಳಿಗ್ಗೆ 10.30 ರಿಂದ 11.30 ರ ತನಕ ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾಮಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯ ಪ್ರಕಟಣೆ

ಜ. 22: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಿಶೇಷ ಭಜನೆ Read More »

error: Content is protected !!
Scroll to Top