ನಿಮ್ಮ ಮಕ್ಕಳು ಕೋರ್ಟು ಕೇಸಿಗೆ ಅಲೆದಾಡದಂತೆ ನೋಡಿಕೊಳ್ಳಿ | ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಶೋಕ್ ರೈ
ಪುತ್ತೂರು: ರಾಜಕೀಯದವರು ತಮ್ಮ ಲಾಭಕ್ಕೋಸ್ಕರ ಯಾರದ್ದೋ ಮಕ್ಕಳನ್ನು ಬಲಿಪಶು ಮಾಡುವ ಚಾಲ್ತಿ ಇದ್ದು ಕೆಟ್ಟ ಚಟುವಟಿಕೆಯಲ್ಲಿ ನಿಮ್ಮ ಮಕ್ಕಳು ಭಾಗಿಗಳಾಗಿ ಅವರು ಜೀವನ ಪೂರ್ತಿ ಕೋರ್ಟು, ಕೇಸು ಅಲೆದಾಡದಂತೆ ನೋಡಿಕೊಳ್ಳಿ ಎಂದು ಪುತ್ತೂರು ಶಸಕರಾದ ಅಶೋಕ್ ರೈ ಹೇಳಿದರು. ಅವರು ಬೊಳ್ಳಾಣ ಆಂಜನೇಯ ಭಜನಾಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯದವರು ತಮ್ಮ ಲಾಭಕ್ಕೆ ಏನು ಬೇಕಾದರೂ ಭಾಷಣ ಮಾಡಬಹುದು. ಅವರ ಭಾಷಣ ಕೇಳಿ ಯುವ ಸಮೂಹ ಹಾಳಾಗದಂತೆ ಎಚ್ಚರವಹಿಸಬೇಕು. ನೀವು ಒಂದು ಬಾರಿ ಕೇಸು ಮೈಮೇಲೆ ಹಾಕಿಕೊಂಡರೆ […]










