ಬಂಟ್ವಾಳ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ

ಬಂಟ್ವಾಳ : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ, 810 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತರು ಬಂಟ್ವಾಳ ತುಂಬೆ ನಿವಾಸಿ ಸಮೀರ್ (31) ಹಾಗೂ ಬಂಟ್ವಾಳ ಗೂಡಿನ ಬಳಿ ನಿವಾಸಿ ಮೊಹಮ್ಮದ್ ಅಸೀಫ್ (35) ಸೆರೆಯಾಗಿರುವ ಆರೋಪಿಗಳು. ಡಿಸೆಂಬರ್ 13ರ ಸಂಜೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಹನಮನಗರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಬಳಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧಾರವಾಗಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ […]

ಬಂಟ್ವಾಳ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ Read More »

ಅಪಾರ್ಟ್‌ಮೆಂಟ್‌ ನಿವಾಸಿ ಸಂಘಟನೆ ಪದಾಧಿಕಾರಿಗಳಿಗೆ ಡಿಕೆಶಿ ಧಮಕಿ : ವ್ಯಾಪಕ ಆಕ್ರೋಶ

ಸಂವಾದ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಬೆದರಿಕೆ ದಾಟಿಯಲ್ಲಿ ಮಾತನಾಡಿದ ಡಿಸಿಎಂ ಬೆಂಗಳೂರು : ಬೆಂಗಳೂರಿನ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘಟನೆಯ ಪದಾಧಿಕಾರಿಗಳ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡೆದುಕೊಂಡ ರೀತಿಗೆ ಭಾರಿ ಆಕ್ರೋಶ ಮತ್ತು ಟೀಕೆ ವ್ಯಕ್ತವಾಗಿದೆ. ದೂರು ನೀಡಲು ಬಂದವರ ಜೊತೆಗೆ ದರ್ಪದಿಂದ ಮಾತನಾಡಿದ್ದಲ್ಲದೆ ಬೆದರಿಕೆಯನ್ನೂ ಹಾಕಿರುವ ಶಿವಕುಮಾರ್‌ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಇದು ಅಹಂಕಾರದ ಪರಮಾವಧಿ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಪಕ್ಷ ಬಿಜೆಪಿ ಕೂಡ ಡಿಕೆಶಿ ವರ್ತನೆಯನ್ನು ಟೀಕಿಸಿದೆ. ಕರ್ನಾಟಕ ಅಪಾರ್ಟ್​ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ

ಅಪಾರ್ಟ್‌ಮೆಂಟ್‌ ನಿವಾಸಿ ಸಂಘಟನೆ ಪದಾಧಿಕಾರಿಗಳಿಗೆ ಡಿಕೆಶಿ ಧಮಕಿ : ವ್ಯಾಪಕ ಆಕ್ರೋಶ Read More »

ಇಂದು ಧರ್ಮಶಾಲಾದಲ್ಲಿ 3ನೇ ಟಿ20 ಪಂದ್ಯ

ಟೀಮ್‌ ಇಂಡಿಯಾಕ್ಕೆ ಕ್ಯಾಪ್ಟನ್‌, ವೈಸ್‌ ಕ್ಯಾಪ್ಟನ್‌ಗಳ ಕಳಪೆ ಫಾರ್ಮ್‌ ಹೊರೆ ಧರ್ಮಶಾಲಾ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯ ಇಂದು ಧರ್ಮಶಾಲಾದಲ್ಲಿ ನಡೆಯಲಿದೆ. ಸರಣಿ 1-1 ಸಮಬಲ ಸಾಧಿಸಿರುವುದರಿಂದ ಈ ಪಂದ್ಯ ನಿರ್ಣಾಯಕವಾಗಿದೆ. ಮಳೆಯ ಸಾಧ್ಯತೆ ಇದ್ದರೂ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇದೆ. ಧರ್ಮಶಾಲಾದ ಪಿಚ್ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸಹಕಾರಿ, ನಂತರ ಸ್ಪಿನ್ನರ್‌ಗಳಿಗೆ ತಿರುವು ನೀಡಬಹುದು. ಭಾರತದ ಬ್ಯಾಟಿಂಗ್ ಪ್ರದರ್ಶನ ಮತ್ತು ಪಿಚ್ ಪರಿಸ್ಥಿತಿಗಳು ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಿವೆ. ಭಾರತಕ್ಕೆ

ಇಂದು ಧರ್ಮಶಾಲಾದಲ್ಲಿ 3ನೇ ಟಿ20 ಪಂದ್ಯ Read More »

ಅನಾರೋಗ್ಯದಿಂದ ಒಂದೂವರೆ ತಿಂಗಳ ಮಗು ಸಾವು

ಸವಣೂರು: ಉಸಿರಾಟದ ಸಮಸ್ಯೆ, ವಾಂತಿಯಿಂದ ‌ಬಳಲುತ್ತಿದ್ದ ಒಂದೂವರೆ ತಿಂಗಳಿನ ಮಗುವೊಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಓಡಂತರ್ಯದಲ್ಲಿ ನಡೆದಿದೆ. ಗುತ್ತಿಗಾರು ಗ್ರಾಮದ ಕಮಿಲ ನಿವಾಸಿಗಳಾದ ಮಾಧವ ಮತ್ತು ವೀಣಾ ದಂಪತಿಯ ಮಗು ನಿಶ್ಚಿತ್ ಮೃತಪಟ್ಟ ದುರ್ದೈವಿ. ಡಿ. 5 ರಂದು ಮಗುವಿಗೆ ವಾಂತಿ ಕಾಣಿಸಿಕೊಂಡಿದ್ದು, ತಕ್ಷಣವೇ ಕುಂಬ್ರದಲ್ಲಿರುವ ಖಾಸಗಿ ಕ್ಲಿನಿಕ್ ಒಂದರಿಂದ ಮಗುವಿಗೆ ಔಷಧಿ ತಂದಿದ್ದಾರೆ. ಆದರೆ, ಆ ದಿನ ರಾತ್ರಿ ವೇಳೆ ಮಗುವಿನ ಆರೋಗ್ಯ ಮತ್ತಷ್ಟು ಹದೆಗೆಟ್ಟಿದ್ದು, ವಾಂತಿಯ ಜೊತೆಗೆ ಉಸಿರಾಟದ ತೊಂದರೆ ಆರಂಭವಾಗಿದೆ. ತಕ್ಷಣವೇ

ಅನಾರೋಗ್ಯದಿಂದ ಒಂದೂವರೆ ತಿಂಗಳ ಮಗು ಸಾವು Read More »

ಡಿ.15 – ಜ. 15: ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ‘ಗ್ಲೋ ಫೆಸ್ಟ್’

ಪುತ್ತೂರು: ನಗರದ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಡಿ. 15 ರಿಂದ ಜ. 15 ರ ವರೆಗೆ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ‘ಗ್ಲೋ ಫೆಸ್ಟ್’ ನಡೆಯಲಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ತಿಳಿಸಿದೆ. ಈ ಸಂದರ್ಭದಲ್ಲಿ ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ 7000 ರೂ. ವರೆಗೆ ಸಂಸ್ಥೆ ರಿಯಾಯಿತಿ ನೀಡಲಿದೆ. ದುಬಾರಿ ಎಂದು ಖರೀದಿ ಮಾಡಲು ಹಿಂದೇಟು ಹಾಕುವವರಿಗೆ ‌ಕೈಗೆಟುಕುವ ದರದಲ್ಲಿ ವಜ್ರಾಭರಣಗಳು ಸಂಸ್ಥೆಯಲ್ಲಿ ಲಭ್ಯವಿದ್ದು, 3500 ರೂ. ಗಳಿಂದ ವಜ್ರಾಭರಣಗಳು

ಡಿ.15 – ಜ. 15: ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ‘ಗ್ಲೋ ಫೆಸ್ಟ್’ Read More »

ಡಿ.16 : ಧರ್ಮಸ್ಥಳದಲ್ಲಿ ಮಹಿಳಾ ನ್ಯಾಯ ಸಮಾವೇಶ

ಕೊಂದವರು ಯಾರು ಅಭಿಯಾನ ಸಮಿತಿಯಿಂದ ಮೌನ ಮೆರವಣಿಗೆ ಮಂಗಳೂರು: ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ, ಕೊಲೆ, ಅಸಹಜ ಸಾವುಗಳಿಗೆ ಕಾರಣ ಯಾರು ಎಂದು ಪತ್ತೆಹಚ್ಚಲು ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳ ಸಹಭಾಗಿತ್ವದಲ್ಲಿ ಕೊಂದವರು ಯಾರು ಅಭಿಯಾನ ಸಮಿತಿಯ ವತಿಯಿಂದ ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ ಡಿ.16ರಂದು ಬೆಳ್ತಂಗಡಿಯಲ್ಲಿ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ 1,000ದಷ್ಟು ಮಹಿಳೆಯರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅಭಿಯಾನದ ಪ್ರಮುಖರಾದ ಜ್ಯೋತಿ ಎ. ತಿಳಿಸಿದ್ದಾರೆ. ಶುಕ್ರವಾರ

ಡಿ.16 : ಧರ್ಮಸ್ಥಳದಲ್ಲಿ ಮಹಿಳಾ ನ್ಯಾಯ ಸಮಾವೇಶ Read More »

ಹಾರಾಡಿಯಲ್ಲಿ ಕಲನ 2025

ಪುತ್ತೂರು: ಇಲ್ಲಿನ ಹಾರಾಡಿಯಲ್ಲಿರುವ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಸಾರಥ್ಯದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಹಯೋಗದೊಂದಿಗೆ ಪುತ್ತೂರು ಮತ್ತು ಕಡಬ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ‘ಕಲನ 2025’ ವ್ಯವಸ್ಥಿತವಾಗಿ ಉದ್ಘಾಟನೆಗೊಂಡಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸುಲೋಚನಿಯವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಅವರು ನೆರವೇರಿಸಿದರು. ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ವಿಜಯಿಗಳಾಗಿ ಎಂದು ಸ್ಪರ್ಧಿಗಳಿಗೆ ಕಿವಿಮಾತು ಹೇಳಿದರು. ಸಭಾಧ್ಯಕ್ಷರು ಮಾತನಾಡಿ ಸರ್ವರ ಸಹಕಾರ ಕೋರಿದರು. ವೇದಿಕೆಯಲ್ಲಿ ತಾಲೂಕು

ಹಾರಾಡಿಯಲ್ಲಿ ಕಲನ 2025 Read More »

ಒಂದು ತಿಂಗಳೊಳಗೆ ಕನ್ನಡ ನಾಮಫಲಕ ಅಳಡಿಕೆ ಕಡ್ಡಾಯ : ಸಚಿವ ತಂಗಡಗಿ

ನಿಯಮ ಉಲ್ಲಂಘಿಸಿದರೆ 20 ಸಾವಿರ ರೂ. ದಂಡ ಬೆಳಗಾವಿ: ಕರ್ನಾಟಕಾದ್ಯಂತ ಎಲ್ಲ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಟ್ರಸ್ಟ್ ನಡೆಸುವ ಸಂಸ್ಥೆಗಳು, ಆಸ್ಪತ್ರೆಗಳು, ಮನರಂಜನಾ ಕೇಂದ್ರಗಳು, ಹೋಟೆಲ್‌ ಗಳು ಸೇರಿದಂತೆ ಸಲ್ಲ ಸಂಸ್ಥಾಪನೆಗಳಲ್ಲಿ ಒಂದು ತಿಂಗಳೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ಕಡ್ಡಾಯ ಕನ್ನಡ ಭಾಷಾ ನಾಮಫಲಕ ಅಳವಡಿಕೆ ಕುರಿತು ನಿಗಾವಹಿಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಆದಷ್ಟೂ ಬೇಗ ರಾಜ್ಯದಲ್ಲಿ ನಿಯಮ ಸಂಪೂರ್ಣ ಅನುಷ್ಠಾನಕ್ಕೆ

ಒಂದು ತಿಂಗಳೊಳಗೆ ಕನ್ನಡ ನಾಮಫಲಕ ಅಳಡಿಕೆ ಕಡ್ಡಾಯ : ಸಚಿವ ತಂಗಡಗಿ Read More »

ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆಯೊಡ್ಡಿದ 13 ವರ್ಷದ ಬಾಲಕಿ!

ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬಂದಿದ್ದ ಬೆದರಿಕೆ ಇ-ಮೇಲ್‌ ಬೆಂಗಳೂರು : ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬೆಳಗ್ಗೆ ಬಂದಿದ್ದ ಅನಾಮಧೇಯ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶದ ಮೂಲವನ್ನು ಪೊಲೀಸರು ಪತ್ತೆಹಚ್ಚಿದ್ದು, ಕರೆ ಕಳುಹಿಸಿದ ವ್ಯಕ್ತಿಯನ್ನು ನೋಡಿ ಪೊಲೀಸರೇ ಆಶ್ಚರ್ಯಚಕಿತರಾಗಿದ್ದಾರೆ. ಪೊಲೀಸ್ ತನಿಖೆಯ ವೇಳೆ ಈ ಬಾಂಬ್ ಬೆದರಿಕೆ ಇ-ಮೇಲ್ ತಮಿಳುನಾಡಿನ ಮೈಲಾಪುರದ 13 ವರ್ಷದ ಬಾಲಕಿಯಿಂದ ಬಂದಿರುವುದು ಗೊತ್ತಾಗಿದೆ. ಬಾಲಕಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಗಮನ ಸೆಳೆಯುವ ಉದ್ದೇಶದಿಂದ ಈ ಇ-ಮೇಲ್

ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆಯೊಡ್ಡಿದ 13 ವರ್ಷದ ಬಾಲಕಿ! Read More »

ಜಾತಕ ತೋರಿಸಲು ಬಂದ ಯುವತಿಯ ಬೆನ್ನುಬಿದ್ದ ಜ್ಯೋತಿಷಿ!

ಮದುವೆಯಾಗುವಂತೆ ಒತ್ತಾಯಿಸಿ ಮಾಟಮಂತ್ರ ಮಾಡಿದ ಜ್ಯೋತಿಷಿಯನ್ನು ಬಂಧಿಸಿದ ಪೊಲೀಸರು ಬೆಳ್ತಂಗಡಿ: ಜಾತಕ ತೋರಿಸಲು ಬಂದ ಯುವತಿಯೋರ್ವಳ ಹಿಂದೆ ಬಿದ್ದ ಜ್ಯೋತಿಷಿಯೊಬ್ಬ ಯುವತಿಗೆ ಮದುವೆಯಾಗುವಂತೆ ನಿರಂತರ ಕಿರುಕುಳ ನೀಡಿದ್ದಲ್ಲದೆ ಅವರ ಮನೆಗೆ ತೆರಳಿ ವಾಮಾಚಾರ ಮಾಡಿದ್ದು ಈ ಬಗ್ಗೆ ಪೊಲೀಸರಿಗೆ ಮನೆಯವರು ದೂರು ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ನಡೆದಿದೆ. ಮೂಲತಃ ಶಿರಸಿ ಮೂಲದವನಾದ, ಸ್ಥಳೀಯ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದ ಶೇಷಾದ್ರಿ ಎಂಬಾತನೇ ಆರೋಪಿ ಜ್ಯೋತಿಷಿಯಾಗಿದ್ದಾನೆ. ಸಂತ್ರಸ್ತ ಯುವತಿಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು

ಜಾತಕ ತೋರಿಸಲು ಬಂದ ಯುವತಿಯ ಬೆನ್ನುಬಿದ್ದ ಜ್ಯೋತಿಷಿ! Read More »

error: Content is protected !!
Scroll to Top