ಜ. 7: ನರಿಮೊಗರು ಸರಸ್ವತಿ ವಿದ್ಯಾಮಂದಿರದ ಶೈಕ್ಷಣಿಕೋತ್ಸವ

ಪುತ್ತೂರು: ನರಿಮೊಗರು ಸರಸ್ವತಿ ವಿದ್ಯಾ ಮಂದಿರ ಶಿಶುಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವರ್ಧಂತ್ಯುತ್ಸವ ಪ್ರತಿಭಾ ಸರಸ್ವತಿ ಜ. 7ರಂದು ಮಧ್ಯಾಹ್ನ 3 ಗಂಟೆಗೆ ಶಾಲೆಯ ಸರಸ್ವತಿ ವಂದನಾದಲ್ಲಿ ನಡೆಯಲಿದೆ.ಕೃಷಿಕ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಮುಖ್ಯ ಅತಿಥಿಯಾಗಿರುವರು. ಪುತ್ತೂರು ಆಡ್ ಮೀಡಿಯಾದ ಆರ್.ಸಿ. ನಾರಾಯಣ ಮುಖ್ಯ ಅತಿಥಿಯಾಗಿರುವರು. ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಕೆ. ಸುಧಾಕರ ಪುತ್ತೂರಾಯ, ರೋಟರಿ ಪುತ್ತೂರು ಪೂರ್ವದ ಅಧ್ಯಕ್ಷ ಶರತ್ […]

ಜ. 7: ನರಿಮೊಗರು ಸರಸ್ವತಿ ವಿದ್ಯಾಮಂದಿರದ ಶೈಕ್ಷಣಿಕೋತ್ಸವ Read More »

ಸೀತಾರಾಘವ ಪದವಿಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕೋತ್ಸವ

ಪುತ್ತೂರು: ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ಕಾಲೇಜಿನಲ್ಲಿ ಜ. 6ರಂದು ಶೈಕ್ಷಣಿಕೋತ್ಸವ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಾಲೆಗಳಲ್ಲಿ ಮಹತ್ತರವಾದ ಬದಲಾವಣೆಗಳು ನಡೆಯುತ್ತಿವೆ. ಪ್ರಧಾನಮಂತ್ರಿಯವರು ಶೈಕ್ಷಣಿಕ ಚಟುವಟಿಕೆಗಾಗಿ ಸುಮಾರು 5 ಕೋಟಿ ರೂ. ಅನುದಾನ ನೀಡಿದ್ದು, ಎಲ್ಲಾ ಶಾಲೆಗಳಿಗೂ ಹೊಸ ಮೆರುಗು ಬರಲಿದೆ ಎಂದ ಅವರು, ದೇವಾಲಯಗಳು ಸಂಸ್ಕೃತಿಯನ್ನು ಕಲಿಸಿದರೆ, ಶಾಲೆಗಳು ಜ್ಞಾನವನ್ನು ಕಲಿಸುವ ಕೆಲಸವನ್ನು ಮಾಡುತ್ತಿವೆ ಎಂದರು.ಕಳೆದ 57 ವರ್ಷಗಳಿಂದ ವಿದ್ಯಾಭ್ಯಾಸ ನೀಡವು ಕಾಯಕದಲ್ಲಿ ಸೀತಾರಾಘವ ಪದವಿಪೂರ್ವ ಕಾಲೇಜು

ಸೀತಾರಾಘವ ಪದವಿಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕೋತ್ಸವ Read More »

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಭಾವಚಿತ್ರದ ಸ್ಟಿಕ್ಕರ್ ವಿತರಣೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 86ನೇ ಜಯಂತ್ಯೋತ್ಸವ ಸಂಸ್ಮರಣೆಯ ಹಿನ್ನೆಲೆಯಲ್ಲಿ ಮಹಾಸ್ವಾಮೀಜಿ ಅವರ ಭಾವಚಿತ್ರದ ಸ್ಟಿಕ್ಕರನ್ನು ಸವಣೂರು ಗ್ರಾಮದಲ್ಲಿ ವಿತರಿಸಲಾಯಿತು. ಇದರೊಂದಿಗೆ ಪ್ರತಿ ಮನೆಮನೆಗೆ ಆಮಂತ್ರಣವನ್ನು ನೀಡಿ, ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಭಾವಚಿತ್ರದ ಸ್ಟಿಕ್ಕರ್ ವಿತರಣೆ Read More »

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ರಾಷ್ಟ್ರಧ್ವಜ, ಸಾಹಿತ್ಯ ಪರಿಷತ್ತಿನ ಧ್ವಜ, ನಾಡ ಧ್ವಜಾರೋಹಣ ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಷ್ಟ್ರ, ನಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡುವುದರ ಮೂಲಕ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು. ಧರ್ನುಮಾಸದ ಚಳಿಯ ನಡುವೆ,‌ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ 130 ಎಕರೆ ವಿಸ್ತೀರ್ಣದ ಜಾಗದಲ್ಲಿ ಕನ್ನಡ ಗಂಧರ್ವ ಲೋಕ ಧರೆಗಿಳಿದಂತೆ ನಿರ್ಮಿಸಲಾಗಿರುವ ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ ಮುಂಭಾಗದಲ್ಲಿ ಮುಂಜಾನೆ 7 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿತು.ರಾಷ್ಟ್ರಧ್ವಜವನ್ನು ಕಾರ್ಮಿಕ ಇಲಾಖೆ ಹಾಗೂ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ Read More »

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಮುಂಬಯಿಯ ಉದ್ಯಮಿ

ವಾರಂಟ್‌ ಜಾರಿಯಾದ ಬಳಿಕ ನಾಪತ್ತೆ ಹೊಸದಿಲ್ಲಿ : ನ್ಯೂಯಾರ್ಕ್- ದೆಹಲಿ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಮುಂಬೈ ಮೂಲದ ಶಂಕರ್‌ ಮಿಶ್ರಾ ಎಂಬ ಉದ್ಯಮಿ ಎಂದು ಬೆಳಕಿಗೆ ಬಂದಿದೆ. ದಿಲ್ಲಿ ಪೊಲೀಸರು ಗುರುವಾರ ಮುಂಬಯಿಯ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಈ ವೇಳೆ ಎಲ್ಲೂ ಮಿಶ್ರಾ ಪತ್ತೆಯಾಗಿಲ್ಲ. ಹೀಗಾಗಿ ಆತ ಬೇರೆ ರಾಜ್ಯಕ್ಕೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶಂಕರ್‌ ಮಿಶ್ರಾ ವಿರುದ್ಧ ಪೊಲೀಸರು ಲೈಂಗಿಕ

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಮುಂಬಯಿಯ ಉದ್ಯಮಿ Read More »

ನಿಮ್ಮನ್ನು ಹಂದಿ ಮರಿ, ಕತ್ತೆ ಮರಿ ಎಂದರೆ ಒಪ್ಪಿಗೇನಾ?

ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್‌ ಶಿವಮೊಗ್ಗ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸಿರುವ ಸಿದ್ದರಾಮಯ್ಯ ಅವರು ರಾಜ್ಯ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು. ಒಬ್ಬ ಮುಖ್ಯಮಂತ್ರಿಯನ್ನು ಹೇಗೆ ಸಂಬೋಧಿಸಬೇಕೆಂಬ ಪರಿಜ್ಞಾನ ಇಲ್ಲ. ನಾಯಿಗೆ ಹೋಲಿಸುತ್ತಾರೆ. ನಮಗೂ ಹೋಲಿಕೆ ಮಾಡಲು ಬೇಕಾದಷ್ಟು ಪ್ರಾಣಿಗಳಿವೆ. ಕೇವಲ ನಾಯಿ ಅಲ್ಲ ಹಂದಿಯೂ ಇದೆ. ನಿಂದನೆ ಮಾಡಲು ನಮಗೆ ಬರುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ನಾವು ನಿಮ್ಮನ್ನು ನಾಯಿಮರಿ, ಕತ್ತೆ ಮರಿ, ಹಂದಿ

ನಿಮ್ಮನ್ನು ಹಂದಿ ಮರಿ, ಕತ್ತೆ ಮರಿ ಎಂದರೆ ಒಪ್ಪಿಗೇನಾ? Read More »

ಸ್ಯಾಂಟ್ರೊ ರವಿ ವಿರುದ್ಧ ಪತ್ನಿಯಿಂದಲೇ ಅತ್ಯಾಚಾರ ಆರೋಪ

ದಲಿತ ಸಂಘಟನೆಯಿಂದ ಬಂಧಿಸದಿದ್ದರೆ ಹೋರಾಟದ ಎಚ್ಚರಿಕೆ ಬೆಂಗಳೂರು : ಕೆಲವು ಬಿಜೆಪಿ ನಾಯಕರ ಜತೆ ನಂಟು ಇಟ್ಟುಕೊಂಡಿದ್ದಾನೆ ಎಂದು ಎಚ್‌ .ಡಿ. ಕುಮಾರಸ್ವಾಮಿ ಆರೊಪಿಸಿರುವ ಸ್ಯಾಂಟ್ರೊ ರವಿ ವಿರುದ್ಧ ಇದೀಗ ಆತನ ಪತ್ನಿಯೇ ಆತ್ಯಾಚಾರದ ಆರೋಪ ಹೊರಿಸಿದ್ದಾರೆ. ಇದರ ಬೆನ್ನಿಗೆ ದಲಿತ ಸಂಘಟನೆಗಳು ಸ್ಯಾಂಟ್ರೊ ರವಿಯನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಆರೋಪಿಸಿ ಹೋರಾಟದ ಎಚ್ಚರಿಕೆ ನೀಡಿವೆ.ಇಂಜಿನಿಯರಿಂಗ್ ಪದವೀಧರೆಯಾಗಿರುವ ಸಂತ್ರಸ್ತೆ ಬುಧವಾರ ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ

ಸ್ಯಾಂಟ್ರೊ ರವಿ ವಿರುದ್ಧ ಪತ್ನಿಯಿಂದಲೇ ಅತ್ಯಾಚಾರ ಆರೋಪ Read More »

ವೇಗವಾಗಿ ಬದಲಾಗುತ್ತಿದೆ ಕಾರ್ಪೊರೇಟ್ ಜಗತ್ತು

ಓಡಲು ಸಾಧ್ಯವಾದರೆ ಮಾತ್ರ ನೀವು ಸ್ಪರ್ಧೆಯಲ್ಲಿ ಉಳಿಯುತ್ತೀರಿ 1990ರವರೆಗೂ ನಾವು ಈ ಕಾರ್ಪೊರೇಟ್ ಎಂಬ ಶಬ್ದವನ್ನು ಕೇಳಿರಲಿಲ್ಲ. ಆದರೆ ಯಾವಾಗ ಭಾರತ ಗ್ಯಾಟ್ ಒಪ್ಪಂದಕ್ಕೆ ಸಹಿ ಮಾಡಿತೋ, ಭಾರತಕ್ಕೆ ಯಾವಾಗ ಅಂತಾರಾಷ್ಟ್ರೀಯ ಕಂಪೆನಿಗಳು ದಾಂಗುಡಿ ಇಟ್ಟು ಬಂದವೋ ಅಲ್ಲಿಗೆ ಭಾರತೀಯ ಉದ್ಯಮ ರಂಗದ ಚಿತ್ರಣವೇ ಬದಲಾಯಿತು!ಅದರ ಜತೆಗೆ ಇಂಟರ್‌ನೆಟ್ ಜಗತ್ತನ್ನು ಆಳಲು ಆರಂಭ ಮಾಡಿತೋ ಅಲ್ಲಿಗೆ ಎಲ್ಲವೂ ವೇಗವನ್ನು ಪಡೆದವು. ಸ್ಪರ್ಧೆ ಹೆಚ್ಚಾಯಿತು. ವಿದೇಶಿ ಕಂಪನಿಗಳ ಜತೆಗೆ ದೇಶೀಯ ಕಂಪೆನಿಗಳು ಸ್ಪರ್ಧೆಗೆ ಇಳಿಯಲೇ ಬೇಕಾಯಿತು. ಅಲ್ಲಿಗೆ ಮಾರುಕಟ್ಟೆ

ವೇಗವಾಗಿ ಬದಲಾಗುತ್ತಿದೆ ಕಾರ್ಪೊರೇಟ್ ಜಗತ್ತು Read More »

ಜ. 8, 9,10: ಕಾಡು ಬಯಲು ರಂಗಮಂದಿರದಲ್ಲಿ ಇಫಿಜೀನಿಯಾ, ಮುಕ್ತಧಾರಾ, ಲೀಕ್ ಔಟ್ ನಾಟಕ ಪ್ರದರ್ಶನ

ಪುತ್ತೂರು: ಇಲ್ಲಿನ ನೆಹರೂನಗರದ ಕಾಡು ಬಯಲು ರಂಗಮಂದಿರದಲ್ಲಿ ಜ. 8, 9, 10ರಂದು ನೀನಾಸಂ ತಂಡದ ಇಫಿಜೀನಿಯಾ, ಮುಕ್ತಧಾರಾ ಹಾಗೂ ಏಕವ್ಯಕ್ತಿ ನಾಟಕ ಲೀಕ್ ಔಟ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಾಡು ಬಯಲು ರಂಗಮಂದಿರದ ನಿರ್ದೇಶಕ ರಾಘವೇಂದ್ರ ಎಚ್.ಎಂ. ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡು ಬಯಲುರಂಗಮಂದಿರದಲ್ಲಿ ಪ್ರತಿ ವರ್ಷ ನಿರಂತರವಾಗಿ ರಂಗ ಚಟುವಟಿಕೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನೀನಾಸಂ ನಾಟಕ ಕಳೆದ 30 ವರ್ಷಗಳಿಂದ ಕಾಡು ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕೋವಿಡ್ ಕಾರಣಗಳಿಂದ ಕಳೆದ 2 ವರ್ಷ

ಜ. 8, 9,10: ಕಾಡು ಬಯಲು ರಂಗಮಂದಿರದಲ್ಲಿ ಇಫಿಜೀನಿಯಾ, ಮುಕ್ತಧಾರಾ, ಲೀಕ್ ಔಟ್ ನಾಟಕ ಪ್ರದರ್ಶನ Read More »

ಚುಂಚಶ್ರೀ ಸಭಾಂಗಣದಲ್ಲಿ ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಸಿದ್ಧತಾ ಸಭೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 86ನೇ ಜಯಂತ್ಯೋತ್ಸವ ಸಂಸ್ಮರಣಾ ಕಾರ್ಯಕ್ರಮದ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಜ. 5ರಂದು ತೆಂಕಿಲ ಒಕ್ಕಲಿಗ ಗೌಡ ಸೇವಾ ಸಂಘದ ಚುಂಚಶ್ರೀ ಸಭಾಂಗಣದಲ್ಲಿ ಸಭೆ ನಡೆಯಿತು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವ ಸಂಸ್ಮರಣಾ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಸಂಘಟಿಸಿರುವುದೇ ನಮ್ಮೆಲ್ಲರ ಭಾಗ್ಯ. ರಾಜ್ಯದ ಕೇಂದ್ರವಾಗಿ ಪುತ್ತೂರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಜನರೇ ಪುತ್ತೂರಿನತ್ತ ನೋಡಲಿದ್ದಾರೆ. ಆದ್ದರಿಂದ ಎಲ್ಲರೂ ಜೊತೆಯಾಗಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಆದಿಚುಂಚನಗಿರಿ

ಚುಂಚಶ್ರೀ ಸಭಾಂಗಣದಲ್ಲಿ ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಸಿದ್ಧತಾ ಸಭೆ Read More »

error: Content is protected !!
Scroll to Top