ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಭೇಟಿ

ಪುತ್ತೂರು: ಜೀರ್ಣೋದ್ಧಾರಗೊಳ್ಳುತ್ತಿರುವ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಮೊದಲಿಗೆ ಶ್ರೀ ದೇವರ ದರ್ಶನ ಪಡೆದ ಅವರು, ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಬೂಡಿಯಾರ್ ರಾಧಾಕೃಷ್ಣ ಕಾಮಗಾರಿ ಕುರಿತು ವಿವರಿಸಿದರು. ಸಮಿತಿಯ ಜಯಂತ ಶೆಟ್ಟಿ ಕಂಬಳದಡ್ಡ, ವಿಜಯ ಬಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಭೇಟಿ Read More »

ಫೆ.18: ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ, ಸಾಹಿತ್ಯ ಸಂಜೆ, ಗೀತ ಗುಂಜನ

ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ಸಾಹಿತ್ಯ ಸಂಜೆ ಫೆ.18 ಭಾನುವಾರ ಉಪ್ಪಿನಂಗಡಿ ಪಂಜಳ ಸುಧಾಮ ಮನೆಯಂಗಳದ ಮಣಿಮಂಟಪ ಸಭಾಂಗಣದಲ್ಲಿ ನಡೆಯಲಿದೆ. 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವಾಗಿದ್ದು, ಉಪ್ಪಿನಂಗಡಿ ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ನಡೆಯಲಿದೆ. ಸ್ವಾತಿ ಎನ್.ಎಸ್. ಅವರಿಂದ ಗೀತ ಗುಂಜನ, ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಅವರಿಂದ ಮಹಾಭಾರತ ಅನುಸಂಧಾನ ಪ್ರಸ್ತುತಗೊಳ್ಳಲಿದೆ. ಹಿರಿಯ ವಿದ್ವಾಂಸ ಡಾ.ತಾಳ್ತಜೆ

ಫೆ.18: ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ, ಸಾಹಿತ್ಯ ಸಂಜೆ, ಗೀತ ಗುಂಜನ Read More »

ದೈವಗಳ ಪರಿಚಾರಕ ಮೋoಟ ಗೌಡ ನಿಧನ

ರಾಮಕುಂಜ: ಶ್ರೀರಾಮಕುಂಜೇಶ್ವರ ದೇವಸ್ಥಾನದ ಪರಿವಾರ ದೈವಗಳ ಮುಕ್ಕಾಲ್ದಿ (ಪೂಜಾರಿ) ಮೋಂಟ  ಗೌಡ ಆನ (80) ಅಲ್ಪಕಾಲದ ವಯೋಸಹಜ ಕಾಯಿಲೆಯಿಂದ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಆನ ಮನೆತನ ಶ್ರೀ ರಾಮಕುಂಜೇಶ್ವರ ದೇವಾಲಯದ ಜಾತ್ರೆ- ಉತ್ಸವ- ರಥ ಅಲಂಕಾರ -ದೈವಗಳ ಚಾಕರಿ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ನೇಮ ನಿಷ್ಠೆಗಳಿಂದ ಸೇವಾ ಕಾರ್ಯಗಳಲ್ಲಿ ಹಲವು ತಲೆಮಾರುಗಳಿಂದ ತೊಡಗಿಸಿಕೊಂಡು ಆದರ್ಶತೆ ಮೆರೆದ ಕುಟುಂಬ. ಕೆಲವು ವರ್ಷಗಳ ಹಿಂದಿನವರೆಗೂ ರಥ ಅಲಂಕರಿಸಲು ಬಿದಿರುಬೆತ್ತಗಳನ್ನು ಸಂಗ್ರಹಿಸಿ ರಥ ಸಿದ್ದಗೊಳಿಸುವುದೆಂದರೆ ಬಲು ಕಠಿಣವಾದ ಕೆಲಸವಾಗಿತ್ತು. ಅಂತಹ

ದೈವಗಳ ಪರಿಚಾರಕ ಮೋoಟ ಗೌಡ ನಿಧನ Read More »

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ | ಮೋದೀಜಿಯವರಿಗೆ ವೈಜ್ಞಾನಿಕ ಮಾದರಿಯನ್ನು ವಿವರಿಸಿದ ಅಚಲ್ ಬಿಳಿನೆಲೆ

ಜ. 29ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಮುಡಿಪು ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ವೈಜ್ಞಾನಿಕ ಮಾದರಿ ಚಂದ್ರಯಾನ -3 ಯನ್ನು ದೇಶದ ಪ್ರಧಾನಿ ಮೋದೀಜಿಯವರಿಗೆ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಳ್ಯದ ಅಚಲ್ ಬಿಳಿನೆಲೆಯವರು ವಿವರಿಸಿದರು. ವೈಜ್ಞಾನಿಕ ಮಾದರಿಯನ್ನು ವೀಕ್ಷಿಸುತ್ತಾ ಬಂದ ಪ್ರಧಾನಿಗಳಿಗೆ “ಪ್ರಣಾಮ್ ಮಹೋದಯ್ , ಮೇ ಅಚಲ್ ಬಿಳಿನೆಲೆ (ನಮಸ್ತೆ ಮಹೋದಯ, ನಾನು ಅಚಲ್ ಬಿಳಿನೆಲೆ) ಎಂದು ಕಲಿಯುತ್ತಿರುವ ಸಂಸ್ಥೆಯ ಬಗ್ಗೆ ಹೇಳಿ

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ | ಮೋದೀಜಿಯವರಿಗೆ ವೈಜ್ಞಾನಿಕ ಮಾದರಿಯನ್ನು ವಿವರಿಸಿದ ಅಚಲ್ ಬಿಳಿನೆಲೆ Read More »

ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶ್ರೀಮಾ ಕೆ.ಎಚ್. ಚತುರ್ಥ ಸ್ಥಾನ | ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರಿನಿಂದ ಸನ್ಮಾನ, ಅಭಿನಂದನೆ

ಪುತ್ತೂರು: ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚತುರ್ಥ ಸ್ಥಾನ ಪಡೆದ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ 7ನೇ ತರಗತಿ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್. ಅವರಿಗೆ ಪ್ರತಿಷ್ಠಿತ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ವತಿಯಿಂದ ಸನ್ಮಾನ ಕಾರ್ಯಕ್ರಮ ಶುಕ್ರವಾರ ಸಂಜೆ ನ್ಯೂಸ್ ಪುತ್ತೂರು ಕಚೇರಿಯಲ್ಲಿ ನಡೆಯಿತು. ಶ್ರೀಮಾ ಕೆ.ಎಚ್‍. ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಹಾರ ಹಾಕಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರಾದ ವಸಂತ ವೀರಮಂಗಲ ಶ್ರೀಮಾ ಸಾಧನೆಯ ಕುರಿತು

ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶ್ರೀಮಾ ಕೆ.ಎಚ್. ಚತುರ್ಥ ಸ್ಥಾನ | ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರಿನಿಂದ ಸನ್ಮಾನ, ಅಭಿನಂದನೆ Read More »

ಹಿಂದೂ ಯುವತಿಯ ಜೊತೆ ತಿರುಗಾಡುತ್ತಿದ್ದ ಅನ್ಯಕೋಮಿನ ಡ್ಯಾನ್ಸ್ ಮಾಸ್ಟರ್ | ಹಲ್ಲೆ ನಡೆಸಿದ ಬಜರಂಗದಳ ಕಾರ್ಯಕರ್ತರ ಬಂಧನ

ಚಿಕ್ಕಮಗಳೂರು : ಅಪ್ರಾಪ್ತ ವಯಸ್ಸಿನ ಹಿಂದೂ ಯುವತಿ ಜತೆ ತಿರುಗಾಡುತ್ತಿದ್ದ ಉಜಿರೆ ಕಾಲೇಜಿನ ಡ್ಯಾನ್ಸ್ ಮಾಸ್ಟರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ 7 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಡ್ಯಾನ್ಸ್ ಮಾಸ್ಟ‌ರ್ ನೃತ್ಯ ಕಲಿಸುವ ನೆಪದಲ್ಲಿ ಹಿಂದೂ ಯುವತಿಯರನ್ನು ಬುಟ್ಟಿಗೆ ಹಾಕಿಕೊಂಡು ಲವ್ ಜಿಹಾದ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ಹಲ್ಲೆ ಮಾಡಿದ್ದರು. ಚಿಕ್ಕಮಗಳೂರಿನ ಅಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲಾಗಿತ್ತು. ಉಜಿರೆಯ ಖಾಸಗೀ ಕಾಲೇಜಿನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿರುವ ಮುಸ್ಲಿಂ

ಹಿಂದೂ ಯುವತಿಯ ಜೊತೆ ತಿರುಗಾಡುತ್ತಿದ್ದ ಅನ್ಯಕೋಮಿನ ಡ್ಯಾನ್ಸ್ ಮಾಸ್ಟರ್ | ಹಲ್ಲೆ ನಡೆಸಿದ ಬಜರಂಗದಳ ಕಾರ್ಯಕರ್ತರ ಬಂಧನ Read More »

ನಾಳೆ (ಫೆ.10): ಪತ್ರಕರ್ತರ 5ನೇ ಗ್ರಾಮವಾಸ್ತವ್ಯ | ಮಾಹಿತಿ ಪತ್ರ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ದಾವಣಗೆರೆ: ಕೊಲ್ಲಮೊಗರು ಬಂಗ್ಲೆಗುಡ್ಡೆ ಸರಕಾರಿ ಶಾಲಾ ವಠಾರದಲ್ಲಿ ಫೆ.10ರಂದು ನಡೆಯಲಿರುವ ಪತ್ರಕರ್ತರ 5ನೇ ಗ್ರಾಮ ವಾಸ್ತವ್ಯದ ಮಾಹಿತಿ ಪತ್ರವನ್ನು ಇಂದು ಬಿಡುಗಡೆ ಮಾಡಲಾಯಿತು. ದಾವಣಗೆರೆಯಲ್ಲಿ ನಡೆಯುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಮಾಹಿತಿ ಪತ್ರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ

ನಾಳೆ (ಫೆ.10): ಪತ್ರಕರ್ತರ 5ನೇ ಗ್ರಾಮವಾಸ್ತವ್ಯ | ಮಾಹಿತಿ ಪತ್ರ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ Read More »

ಉದ್ಯೋಗ ನೀಡುವುದಾಗಿ ವಂಚನೆ | ಮೂವರು ಆರೋಪಿಗಳ ಬಂಧನ

ಪುತ್ತೂರು: ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಹಣ ವಂಚನೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರಬಾಯಿ ಸಿ.ಆರ್. (23), ರಾಹುಲ್ ಕುಮಾರ್ ನಾಯ್ಕ (19) ಹಾಗೂ ಹಾಸನದ ಹಳಸಿನಹಳ್ಳಿಯ ಸೌಂದರ್ಯ ಎಂ.ಎಸ್. (21) ಬಂಧಿತ ಆರೋಪಿಗಳು. ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಾಧ್ಯಮದಲ್ಲಿ ದ.ಕ., ಉಡುಪಿ ಜಿಲ್ಲೆಗಳಲ್ಲಿ ಕಚೇರಿ ಕೆಲಸ ಖಾಲಿ ಇದೆ ಎಂದು ಜಾಹೀರಾತು ನೋಡಿ, ಜಾಹೀರಾತಿನಲ್ಲಿ ನಮೂದಿಸಿದ ಮೊಬೈಲ್ ನಂಬರ್‍

ಉದ್ಯೋಗ ನೀಡುವುದಾಗಿ ವಂಚನೆ | ಮೂವರು ಆರೋಪಿಗಳ ಬಂಧನ Read More »

ಪಡೀಲು ವಿಜಯನಗರ ಬಡಾವಣೆಯಲ್ಲಿ ಮನೆಗೆ ಬೆಂಕಿ ತಗುಲಿ ನಷ್ಟ | ಪುತ್ತಿಲ ಪರಿವಾರದಿಂದ ಧನಸಹಾಯ

ಪುತ್ತೂರು : ಪಡೀಲು ವಿಜಯನಗರ ಬಡಾವಣೆಯಲ್ಲಿ ನಾರಾಯಣ ನಾಯ್ಕ್ ಮತ್ತು ಶಿವಪ್ರಸಾದ್ ನಾಯ್ಕ್ ಎಂಬವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟವಾಗಿದ್ದು, ಪುತ್ತಿಲ ಪರಿವಾರದಿಂದ ಧನಸಹಾಯ ನೀಡಲಾಯಿತು. ಅವಘಡ ಸಂಭವಿಸಿದ ತಕ್ಷಣ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ತಂಡ ಭೇಟಿ ನೀಡಿ ಸಾಂತ್ವನ ಹೇಳಿ, ಕೈಲಾದ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ, ಚಂದ್ರಹಾಸ ಶೆಟ್ಟಿ ಆನೆಮಜಲು, ಸತೀಶ್ ಭಂಡಾರಿ, ಪ್ರವೀಣ್ ಭಂಡಾರಿ,  ಮನೀಶ್ ಕುಲಾಲ್,

ಪಡೀಲು ವಿಜಯನಗರ ಬಡಾವಣೆಯಲ್ಲಿ ಮನೆಗೆ ಬೆಂಕಿ ತಗುಲಿ ನಷ್ಟ | ಪುತ್ತಿಲ ಪರಿವಾರದಿಂದ ಧನಸಹಾಯ Read More »

ನಾಳೆ (ಫೆ.10) : ‘ಪುತ್ತೂರು ಐಟಿ ಡೀಲರ್ಸ್ ಅಸೋಸಿಯೇಶನ್’ ಶುಭಾರಂಭ

ಪುತ್ತೂರು : ನೂತನವಾಗಿ ಅಸ್ತಿತ್ವಕ್ಕೆ ಬಂದ ‘ಪುತ್ತೂರು ಐಟಿ ಡೀಲರ್ಸ್ ಅಸೋಸಿಯೇಶನ್’ ಉದ್ಘಾಟನಾ ಸಮಾರಂಭ ಫೆ.10 ಶನಿವಾರ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಎದುರಿನ ಸಚ್ಚಿದಾನಂದ ಸಭಾಭವನದಲ್ಲಿ ನಡೆಯಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಅನೂಪ್ ಕೆ.ಜೆ. ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಅಸೋಸಿಯೇಶನ್‍ಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು, ಪುತ್ತೂರು, ಬಂಟ್ವಾಳ, ಸುಳ್ಯ, ಕಡಬ ಹಾಗೂ ವಿಟ್ಲ ತಾಲೂಕುಗಳಲ್ಲಿರುವ ಐಟಿ ಕ್ಷೇತ್ರದವರು ಕೈ ಜೋಡಿಸುತ್ತಿದ್ದಾರೆ. ಈಗಾಗಲೇ ಅಸೋಸಿಯೇಶನ್‍ ನಲ್ಲಿ 75 ಮಂದಿ ಸದಸ್ಯರಿದ್ದು, ಪುತ್ತೂರಿನಲ್ಲಿ 33

ನಾಳೆ (ಫೆ.10) : ‘ಪುತ್ತೂರು ಐಟಿ ಡೀಲರ್ಸ್ ಅಸೋಸಿಯೇಶನ್’ ಶುಭಾರಂಭ Read More »

error: Content is protected !!
Scroll to Top