ಜೆರೋಸಾ ಶಾಲಾ ಮುಂಭಾಗ ಪ್ರತಿಭಟನೆ | ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿಸಹಿತ ವಿಹಿಂಪ ಮುಖಂಡರಿಗೆ ನಿರೀಕ್ಷಣಾ ಜಾಮೀನು

ಮಂಗಳೂರು: ಜೆರೋಸಾ ಶಾಲಾ ಶಿಕ್ಷಕಿಯೊಬ್ಬರು ಹಿಂದೂಗಳು ಹಾಗೂ ಶ್ರೀರಾಮ ಮಂದಿರದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನಲೆಯಲ್ಲಿ ಶಾಲೆ ಮುಂಭಾಗ ನಡೆದ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್‌ ಶೆಟ್ಟಿ ಮತ್ತು ಇತರರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಜೆರಾಲ್ಡ್‌ ಲೋಬೋ ಎಂಬವರು ನೀಡಿದ್ದ ದೂರಿನಂತೆ ಮಂಗಳೂರಿನಲ್ಲಿ ಶಾಸಕರು ಸಹಿತ  ವಿಶ್ವ ಹಿಂದು ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌ ಕಾರ್ಪೊರೇಟರ್‌ ಗಳಾದ ಸಂದೀಪ್‌ ಹಾಗೂ ಭರತ್ […]

ಜೆರೋಸಾ ಶಾಲಾ ಮುಂಭಾಗ ಪ್ರತಿಭಟನೆ | ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿಸಹಿತ ವಿಹಿಂಪ ಮುಖಂಡರಿಗೆ ನಿರೀಕ್ಷಣಾ ಜಾಮೀನು Read More »

ಫೆ.24 : ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ 90 ರ ಸಂಭ್ರಮ “ನವತಿ ಸಂಭ್ರಮ’

ಪುತ್ತೂರು: ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ 90 ರ ಸಂಭ್ರಮಾಚರಣಾ ಸಮಿತಿ ವತಿಯಿಂದ ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ 90 ರ ಸಂಭ್ರಮ ’90 ರ ನವತಿ’ ಸಂಭ್ರಮ ಫೆ.24 ಶನಿವಾರ ಕೊಂಬೆಟ್ಟು ಎಂ.ಸುದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅರಿಯಡ್ಕ ಚಿಕ್ಕಪ್ಪ ನಾಯ್ಕರು ಅತ್ಯುತ್ತಮ ಕೃಷಿಕರಾಗಿ, ಧಾರ್ಮಿಕ, ಸಾಮಾಜಿಕ, ಕಲಾಕ್ಷೇತ್ರದಲ್ಲಿ ಕಾಣಿಸಿಕೊಂಡಿರುವುದಲ್ಲದೆ, ಅವರದು ಮೃದು, ಮಧುರ

ಫೆ.24 : ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ 90 ರ ಸಂಭ್ರಮ “ನವತಿ ಸಂಭ್ರಮ’ Read More »

ನಾಪತ್ತೆಯಾದ ಬಾಲಕ ಪತ್ತೆ!

ಸವಣೂರು: ನಾಪತ್ತೆಯಾಗಿದ್ದ ಯುವಕನೋರ್ವ ಸ್ಥಳೀಯ ಮನೆಯೊಂದರಲ್ಲಿ ಪತ್ತೆಯಾಗಿದ್ದಾನೆ. ಅರೆಲ್ತಡಿ ನಿವಾಸಿ ಅಶೋಕ ಹಾಗೂ ವನಿತಾ ದಂಪತಿ ಪುತ್ರ ಅಶ್ವಥ್ (13) ನಾಪತ್ತೆಯಾಗಿದ್ದು, ಇದೀಗ ಪತ್ತೆಯಾಗಿದ್ದಾನೆ. ಸರ್ವೆ ಕಲ್ಪನೆ ಶಾಲಾ ವಿದ್ಯಾರ್ಥಿಯಾಗಿರುವ ಅಶ್ವಥ್ ಸ್ಥಳೀಯ ಹೊಸ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಪರೀಕ್ಷೆ ಇದ್ದ ಕಾರಣ ಶಾಲೆಗೆ ತೆರಳದೆ ಹೊಸಮನೆ ಸಮೀಪ ಕುಳಿತಿದ್ದ ಎನ್ನಲಾಗಿದೆ. ಸ್ಥಳೀಯರು ಹಾಗೂ ಪೊಲೀಸರ ಮೂಲಕ ಈತನನ್ನು ಪತ್ತೆಹಚ್ಚಲಾಗಿತ್ತು. ಈ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

ನಾಪತ್ತೆಯಾದ ಬಾಲಕ ಪತ್ತೆ! Read More »

ವಿದ್ಯುತ್ ನಿಲುಗಡೆ | ಯಾವಾಗ, ಎಲ್ಲೆಲ್ಲಿ? | ಇಲ್ಲಿದೆ ಡಿಟೈಲ್ಸ್

ಪುತ್ತೂರು: 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಇರುವುದರಿಂದ ಫೆ.22 ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು. 33 ಕೆವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ, 33 ಕೆವಿ ಪುತ್ತೂರು-ಕುಂಬ್ರ, 33 ಕೆವಿ ಪುತ್ತೂರು-ಸುಳ್ಯ ಹಾಗೂ 33 ಕೆವಿ ಪುತ್ತೂರು-ಸವಣೂರು-ನೆಲ್ಯಾಡಿ ವಿದ್ಯುತ್‍ ಮಾರ್ಗಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಆದ್ದರಿಂದ 110/33/11 ಕೆವಿ ಪುತ್ತೂರು ಹಾಗೂ 33/11 ಕೆವಿ ಕಡಬ, ನೆಲ್ಯಾಡಿ, ಸವಣೂರು, ಬಿಂದು ಹಾಗೂ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ

ವಿದ್ಯುತ್ ನಿಲುಗಡೆ | ಯಾವಾಗ, ಎಲ್ಲೆಲ್ಲಿ? | ಇಲ್ಲಿದೆ ಡಿಟೈಲ್ಸ್ Read More »

ಸಂಪ್ಯ ಅಕ್ಷಯ ಕಾಲೇಜಿನಿಂದ ಸಂವಿಧಾನ ಜಾಗೃತಿ ಜಾಥಾ-2024

ಪುತ್ತೂರು: ಸಂಪ್ಯ ಅಕ್ಷಯ ಕಾಲೇಜು ವತಿಯಿಂದ ಸಂವಿಧಾನ ಜಾಗೃತಿ ಜಾಥಾ -2024 ಆರ್ಯಾಪು ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು. ಅಕ್ಷಯ ಕಾಲೇಜಿನ ಸುಮಾರು 50ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದು, ಜಾಥಾವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭಿಸಿ ಸಂವಿಧಾನದ ಕುರಿತು ಮಾಹಿತಿ ನೀಡಲಾಯಿತು.ಬಳಿಕ ಸಂವಿಧಾನ ಮಾಹಿತಿ ಜಾಥಾ ಗ್ರಾಮ ಪಂಚಾಯಿತಿಯಿಂದ ಹೊರಟು ಗ್ರಾಮಾಂತರ ಆರಕ್ಷಕ ಠಾಣೆವರೆಗೆ ನಡೆಸಲಾಯಿತು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ರಾಷ್ಟ್ರೀಯ ಸೇವಾ ಯೋಜನೆ ಸಹಕಾರ್ಯಕ್ರಮಾಧಿಕಾರಿ ಮೇಘಶ್ರೀ ಹಾಗೂ ಕಾಲೇಜಿನ

ಸಂಪ್ಯ ಅಕ್ಷಯ ಕಾಲೇಜಿನಿಂದ ಸಂವಿಧಾನ ಜಾಗೃತಿ ಜಾಥಾ-2024 Read More »

ಕುಮ್ಕಿ ಭೂಮಿಯನ್ನು ಅಕ್ರಮ-ಸಕ್ರಮದಲ್ಲಿ ಮಂಜೂರಾತಿಗೆ ಅವಕಾಶ ನೀಡಿ | ಅಧಿವೇಶನದಲ್ಲಿ ಮನವಿ ಮಾಡಿದ ಶಾಸಕ ಅಶೋಕ್ ರೈ

ಪುತ್ತೂರು: ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಟ್ಟಾ ಕೃಷಿ ಭುಮಿಗೆ ಹೊಂದಿಕೊಂಡು ಸುಮಾರು 90 ಮೀಟರ್ ತನಕ ಅಥವಾ ನಾಲ್ಕೂವರೆ ಸಂಕೋಲೆ ಜಾಗವನ್ನು ಕುಮ್ಕಿ ಎಂಬ ಕಾರಣಕ್ಕೆ ರೈತರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ, ಈ ಜಾಗವನ್ನು ಅಕ್ರಮ ಸಕ್ರಮದಡಿ ಮಂಜೂರಾತಿ ಮಾಡಲು ಅವಕಾಶ ನೀಡುವಂತೆ ಶಾಸಕ ಅಶೋಕ್ ರೈ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ. ದ. ಕ. ಹಾಗೂ ಉಡುಪಿ ಜಿಲ್ಲೆಯ ಕೃಷಿಕರು ತಮ್ಮ ಪಟ್ಟಾ ಜಾಗಕ್ಕೆ ಹೊಂದಿಕೊಂಡಿರುವ ಈ ಜಾಗದಲ್ಲಿ ಹಲವಾರು ವರ್ಷದಿಂದ

ಕುಮ್ಕಿ ಭೂಮಿಯನ್ನು ಅಕ್ರಮ-ಸಕ್ರಮದಲ್ಲಿ ಮಂಜೂರಾತಿಗೆ ಅವಕಾಶ ನೀಡಿ | ಅಧಿವೇಶನದಲ್ಲಿ ಮನವಿ ಮಾಡಿದ ಶಾಸಕ ಅಶೋಕ್ ರೈ Read More »

ವೆಬ್ಸೈಟ್, ಸಾಮಾಜಿಕ ಜಾಲತಾಣ ಜೀವನದ ಅವಿಭಾಜ್ಯ ಅಂಗ : ಡಾ.ಕೆ.ಎಂ.ಕೃಷ್ಣ ಭಟ್ | ಮರು ವಿನ್ಯಾಸಗೊಂಡ ವೆಬ್ಸೈಟ್, ಸಾಮಾಜಿಕ ಜಾಲತಾಣಗಳ ಅನಾವರಣ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮರು ವಿನ್ಯಾಸಗೊಂಡ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಅನಾವರಣ ಕಾರ್ಯಕ್ರಮ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾಸಂಸ್ಥೆ ಅಭಿವೃದ್ಧಿ ಹೊಂದಲು ಮತ್ತು ಕಾಲೇಜಿನ ಎಲ್ಲಾ ಮಾಹಿತಿಗಳು ಹೊರ ಜಗತ್ತಿಗೆ ತಿಳಿಯಪಡಿಸಲು ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳು ಅತ್ಯಂತ ಸಹಾಯಕಾರಿ. ಇಂದಿನ ದಿನದಲ್ಲಿ ಸೋಶಿಯಲ್ ಮೀಡಿಯಾಗಳ ಬಳಕೆ ವ್ಯಾಪಕವಾಗಿ ಹಬ್ಬಿದೆ. ಸೋಶಿಯಲ್ ಮೀಡಿಯಾ ಎಂಬುದು ಒಬ್ಬರಿಗೊಬ್ಬರು ಸಂಪರ್ಕದಿಂದಿರಲು, ಮಾಹಿತಿಯನ್ನು

ವೆಬ್ಸೈಟ್, ಸಾಮಾಜಿಕ ಜಾಲತಾಣ ಜೀವನದ ಅವಿಭಾಜ್ಯ ಅಂಗ : ಡಾ.ಕೆ.ಎಂ.ಕೃಷ್ಣ ಭಟ್ | ಮರು ವಿನ್ಯಾಸಗೊಂಡ ವೆಬ್ಸೈಟ್, ಸಾಮಾಜಿಕ ಜಾಲತಾಣಗಳ ಅನಾವರಣ Read More »

ಅನಾರೋಗ್ಯ ಹಿನ್ನಲೆಯಲ್ಲಿ ಕಟ್ಟಲಾಗದ ಬಾಡಿಗೆ | ಅಂಗಡಿಯನ್ನು ಏಲಂ ಮಾಡಿ ದೌರ್ಜನ್ಯ : ರಾಜ್ ಬಪ್ಪಳಿಗೆ ಆರೋಪ

ಪುತ್ತೂರು; ಪುತ್ತೂರು ತಾಲೂಕು ವಾಣಿಜ್ಯ ಸಂಕೀರ್ಣದಲ್ಲಿ ಒಂದು ಅಂಗಡಿಕೋಣೆ ಯನ್ನು ಏಲಂ ಪ್ರಕ್ರಿಯೆ ಮೂಲಕ ನನ್ನ ಪತ್ನಿ ಹೇಮಲತಾ ಹೆಸರಲ್ಲಿ ಪಡೆದುಕೊಂಡಿದ್ದು, ಕಳೆದ 13 ತಿಂಗಳಿನಿಂದ ಬಾಡಿಗೆ ಪಾವತಿಸಲು ತೊಂದರೆ ಉಂಟಾಗಿದೆ. ನನಗೆ 6 ತಿಂಗಳು ಸಮಯವಕಾಶ ಕೇಳಿ ಜಿಲ್ಲಾ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದ್ದೇನೆ. ಆದರೂ ಪುತ್ತೂರು ತಾಲೂಕು ಪಂಚಾಯತ್ ನನ್ನ ಕುಟುಂಬಕ್ಕೆ ಸೇರಿದ ಅಂಗಡಿಕೋಣೆಯನ್ನು ಬಹಿರಂಗ ಏಲಂ ಮಾಡಲಾಗಿದೆ. ಈ ಅಂಗಡಿ ಕೋಣೆಯಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ನನ್ನ ವಸ್ತುಗಳನ್ನೂ ಏಲಂ

ಅನಾರೋಗ್ಯ ಹಿನ್ನಲೆಯಲ್ಲಿ ಕಟ್ಟಲಾಗದ ಬಾಡಿಗೆ | ಅಂಗಡಿಯನ್ನು ಏಲಂ ಮಾಡಿ ದೌರ್ಜನ್ಯ : ರಾಜ್ ಬಪ್ಪಳಿಗೆ ಆರೋಪ Read More »

ನಳೀಲು ಕ್ಷೇತ್ರ ಅದ್ಭುತವಾಗಿ ಬೆಳೆದಿದೆ-ಸುಬ್ರಹ್ಮಣ್ಯ ಶ್ರೀ | ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ

ಪುತ್ತೂರು :  ನಮ್ಮ ಹಿರಿಯರು ಹಾಕಿಕೊಟ್ಟ ಜೀವನ ಪದ್ದತಿಯನ್ನು ನಾವು ಪಾಲಿಸಬೇಕು. ಕಣ್ಣಿಗೆ ಕಾಣದ ಶಕ್ತಿಗಳು ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಿಕೊಂಡು ಪರೋಪಕರಿಯಾಗಿ ನಿಸ್ವಾರ್ಥತೆಯಿಂದ ಬದುಕುವುದರ ಮೂಲಕ ಧರ್ಮವನ್ನು ಗಟ್ಟಿಗೊಳಿಸಬೇಕು ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ  ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ನಳೀಲು ಕ್ಷೇತ್ರದಲ್ಲಿ 20 ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷನಾಗುವ ಅವಕಾಶವನ್ನು

ನಳೀಲು ಕ್ಷೇತ್ರ ಅದ್ಭುತವಾಗಿ ಬೆಳೆದಿದೆ-ಸುಬ್ರಹ್ಮಣ್ಯ ಶ್ರೀ | ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ Read More »

ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಸ್ವಸ್ಥಿಕ್ ಎ.ಕೆ. ಇನ್‍ಸ್ಪೈರ್ ಅವಾರ್ಡ್‍ ಗೆ ಆಯ್ಕೆ

ಕಡಬ: ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ  ಸ್ವಸ್ತಿಕ್ ಎ.ಕೆ. ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಇನ್‍ಸ್ಪೈರ್  ಅವಾರ್ಡ್‍ ಗೆ ಆಯ್ಕೆಯಾಗಿದ್ದಾರೆ. 8ನೇ ತರಗತಿಯಲ್ಲಿ ಓದುತ್ತಿರುವ ಸ್ವಸ್ತಿಕ್ ಕುಶಾಲಪ್ಪ ಅಂಬುಲ ಹಾಗೂ ಜಯಪ್ರಭಾ ದಂಪತಿ ಪುತ್ರ. ಅವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ಸಹಕಾರದಲ್ಲಿ ವಿಜ್ಞಾನ ಶಿಕ್ಷಕಿ ಜ್ಯೋತಿ ಬಿ. ಮಾರ್ಗದರ್ಶನ ನೀಡಿದ್ದರು.

ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಸ್ವಸ್ಥಿಕ್ ಎ.ಕೆ. ಇನ್‍ಸ್ಪೈರ್ ಅವಾರ್ಡ್‍ ಗೆ ಆಯ್ಕೆ Read More »

error: Content is protected !!
Scroll to Top