ಫೆ.24 : ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ 13ನೇ ಸರಣಿ ಕಾರ್ಯಕ್ರಮ

ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಮಹಾಪೋಷಕತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗದ  ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ – 2024 13ನೇ ಸರಣಿ ಕಾರ್ಯಕ್ರಮ ಫೆ.24 ಶನಿವಾರ ಬೆಳಗ್ಗೆ 10 ರಿಂದ ನಿಡ್ಪಳ್ಳಿ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ 8ನೇ ತರಗತಿ […]

ಫೆ.24 : ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ 13ನೇ ಸರಣಿ ಕಾರ್ಯಕ್ರಮ Read More »

ಶಕ್ತೀ ವಂದನಾ ಕಾರ್ಯಕ್ರಮ

ವಿಟ್ಲ: ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತೀ ವಂದನಾ ಕಾರ್ಯಕ್ರಮ ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಜೀವಿನಿ ತಾಲೂಕು ನಿರ್ವಹಣಾ ಘಟಕ ಮೇಲ್ವಿಚಾರಕಿ ದೀಕ್ಷಿತಾ, ಎಂ.ಬಿ.ಕೆ ಸೌಮ್ಯ ಹಾಗೂ ಧರ್ಮಸ್ಥಳ ಗ್ರಾಮ ಅಭಿವೃದ್ದಿ ಸೇವಾ ಪ್ರತಿನಿಧಿ ಯಶೋಧ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪುನೀತ್ ಮಾಡತ್ತಾರ್ ಅಧ್ಯಕ್ಷತೆ ವಹಿಸಿದ್ದರು, ಪುತ್ತೂರು ಮಂಡಲ ಶಕ್ತೀವಂದನಾ ಪ್ರಮುಖ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹರಿಪ್ರಸಾದ್ ಯಾದವ್, ಗ್ರಾಪಂ.ಉಪಾಧ್ಯಕ್ಷೆ ರೋಹಿಣಿ, ಸೊಸೈಟಿ ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ಗ್ರಾಪಂ.ಸದಸ್ಯರಾದ

ಶಕ್ತೀ ವಂದನಾ ಕಾರ್ಯಕ್ರಮ Read More »

ಟಿಪ್ಪರ್-ಆಕ್ಟಿವಾ ಡಿಕ್ಕಿ : ಆಕ್ಟಿವಾ ಸವಾರನಿಗೆ ಗಾಯ !

ಪುತ್ತೂರು: ಆಕ್ಟಿವಾ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಕ್ಟಿವಾ ಸವಾರ ಗಾಯಗೊಂಡ ಘಟನೆ ದರ್ಬೆ ಬೈಪಾಸ್ ಸರ್ಕಲ್ ಬಳಿ ನಡೆದಿದೆ. ದಿವಾಕರ ಮಡಿವಾಳ ಗಾಯಗೊಂಡ ಆಕ್ಟಿವಾ ಸವಾರ. ಅಪಘಾತ ನಡೆದ ತಕ್ಷಣ ಗಾಯಾಳುವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಟಿಪ್ಪರ್-ಆಕ್ಟಿವಾ ಡಿಕ್ಕಿ : ಆಕ್ಟಿವಾ ಸವಾರನಿಗೆ ಗಾಯ ! Read More »

ವಿಕಿಪೀಡಿಯ ಜ್ಞಾನವನ್ನು ತಿಳಿದುಕೊಳ್ಳುವ ಜೊತೆ ಹಂಚುವ ಕೆಲಸ ಮಾಡುತ್ತಿದೆ : ದುರ್ಗಾ ಪ್ರಸನ್ನ

ಪುತ್ತೂರು:  ಮಾಹಿತಿ ಎಲ್ಲಿಂದ, ಯಾವ ಮೂಲದಿಂದ ಹಂಚುತ್ತೇವೆ ಎನ್ನುವುದನ್ನು ತಿಳಿಯುವುದು ಮುಖ್ಯ. ಅಕ್ಷರ ದೋಷಗಳ ತಿದ್ದುಪಡಿ ಮಾಡುವುದು, ಸರಳಭಾಷೆಯಲ್ಲಿ ವಿಷಯವನ್ನು ತಲುಪಿಸುವ ಕೆಲಸ ಎಂದು ಆಧುನಿಕ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ಸಹಾಯಕವಾಗಿದೆ ಎಂದು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಪಕಿ  ದುರ್ಗಾ ಪ್ರಸನ್ನ  ಹೇಳಿದರು. ಅವರು ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಐ ಕ್ಯೂ ಎ ಸಿ ಇದರ ಆಶ್ರಯದಲ್ಲಿ ನಡೆದ ವಿಕಿಪೀಡಿಯ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿಕಿಪೀಡಿಯ ಜ್ಞಾನ

ವಿಕಿಪೀಡಿಯ ಜ್ಞಾನವನ್ನು ತಿಳಿದುಕೊಳ್ಳುವ ಜೊತೆ ಹಂಚುವ ಕೆಲಸ ಮಾಡುತ್ತಿದೆ : ದುರ್ಗಾ ಪ್ರಸನ್ನ Read More »

ಫೆ.22: ಸುಲ್ತಾನ್ ಡೈಮಂಡ್ & ಗೋಲ್ಡ್ ಪುತ್ತೂರು ಶೋರೂಂ ಶುಭಾರಂಭ | ಉದ್ಘಾಟನೆ ಮಾಡಲಿದ್ದಾರೆ ಖ್ಯಾತ ಚಿತ್ರನಟಿ ಪ್ರಿಯಾಮಣಿ

ಪುತ್ತೂರು: ವಿಶ್ವಾಸಾರ್ಹ ಆಭರಣ ಬ್ರಾಂಡ್ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ನ 10ನೇ ಶಾಖೆ ಪುತ್ತೂರಿನ ಏಳ್ಮುಡಿಯಲ್ಲಿರುವ ರಾಮ್‍ ರಾಜ್ ಕಾಟನ್ ಎದುರುಗಡೆ ನೂತನವಾಗಿ ನಿರ್ಮಾಣಗೊಂಡಿರುವ ತಾಜ್ ಟವರ್ಸ್‍ ನಲ್ಲಿ  ಫೆ.22 ಗುರುವಾರ ಶುಭಾರಂಭಗೊಳ್ಳಲಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಜನಪ್ರಿಯ ಚಿತ್ರನಟಿ ಪ್ರಿಯಾಮಣಿ ಅವರಿಂದ ಮಳಿಗೆ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ವೈವಿಧ್ಯಮಯ ವಜ್ರದ ಸಂಗ್ರಹವನ್ನು ಅನಾವರಣ ಗೊಳಿಸಲಿದ್ದಾರೆ. ಸ್ಥಳೀಯ ನಗರಸಭಾ ಸದಸ್ಯೆ

ಫೆ.22: ಸುಲ್ತಾನ್ ಡೈಮಂಡ್ & ಗೋಲ್ಡ್ ಪುತ್ತೂರು ಶೋರೂಂ ಶುಭಾರಂಭ | ಉದ್ಘಾಟನೆ ಮಾಡಲಿದ್ದಾರೆ ಖ್ಯಾತ ಚಿತ್ರನಟಿ ಪ್ರಿಯಾಮಣಿ Read More »

ಪುತ್ತೂರು ಮೂಲದ ವಿದ್ಯಾರ್ಥಿನಿ ಮಾಡೂರಿನ ಪಿಜಿಯಿಂದ ನಾಪತ್ತೆ !

ಉಳ್ಳಾಲ: ಪುತ್ತೂರು ಮೂಲದ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ. ಪುತ್ತೂರಿನ ಮುಕ್ವೆ ನಿವಾಸಿ ಪ್ರಸ್ತುತ ಕೋಟೆಕಾರು ಬಳಿಯ ಮಾಡೂರಿನ ಪಿಜಿಯಲ್ಲಿದ್ದು, ದೇರಳಕಟ್ಟೆ ಖಾಸಗಿ ಯುನಿವರ್ಸಿಟಿಯಲ್ಲಿ ಪಿ.ಎಚ್‍.ಡಿ ಅಧ್ಯಯನ ಮಾಡುತ್ತಿರುವ ಚೈತ್ರಾ (27) ನಾಪತ್ತೆಯಾದ ವಿದ್ಯಾರ್ಥಿನಿ. ಚೈತ್ರಾಳ ತಂದೆ ಮೃತರಾಗಿದ್ದು, ಮಂಗಳೂರಿನ ಸಂಬಂಧಿಕರ ಆಶ್ರಯದಲ್ಲಿದ್ದುಕೊಂಡು ಎಂ.ಎ.ಸ್ಸಿ ವ್ಯಾಸಂಗ ಮಾಡಿದ್ದಳು. ಫೆ.17 ರಂದು ಬೆಳಿಗ್ಗೆ ಮಾಡೂರಿನ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದ ಚೈತ್ರಾ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ದೂರಲಾಗಿದೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಮೂಲದ ವಿದ್ಯಾರ್ಥಿನಿ ಮಾಡೂರಿನ ಪಿಜಿಯಿಂದ ನಾಪತ್ತೆ ! Read More »

ಮಾರಕಾಸ್ತ್ರದೊಂದಿಗೆ ಕಾರಿನಲ್ಲಿ ತಿರುಗುತ್ತಿದ್ದ ನಾಲ್ವರ ಬಂಧನ | ಪ್ರಕರಣ ದಾಖಲು

ಪುತ್ತೂರು: ಮಾರಕಾಸ್ತ್ರದೊಂದಿಗೆ ತಡ ರಾತ್ರಿ ಕಾರಿನಲ್ಲಿ ತಿರುಗಾಡುತ್ತಿದ್ದ ನಾಲ್ವರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಗೋಳ್ತಮಜಲು ನಿವಾಸಿ ಕಿಶೋರ್ (36), ಪುತ್ತೂರು ತಾಲೂಕಿನ ಕಬಕ ಗ್ರಾಮದ ಮನೋಜ್ (23), ಆಶಿಕ್ (28) ಹಾಗೂ ಪಡ್ನೂರು ಗ್ರಾಮದ ಸನತ್ ಕುಮಾರ್ (24) ಬಂಧಿತ ವ್ಯಕ್ತಿಗಳು. ಸೋಮವಾರ ತಡರಾತ್ರಿ ಪೊಲೀಸ್ ನಿರೀಕ್ಷಕ ಸತೀಶ್ ಜೆ.ಜೆ. ಸಿಬ್ಬಂದಿಗಳೊಂದಿಗೆ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ವೃತ್ತದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಮಾರಕಾಸ್ತ್ರ ಪತ್ತೆಯಾಗಿದೆ.

ಮಾರಕಾಸ್ತ್ರದೊಂದಿಗೆ ಕಾರಿನಲ್ಲಿ ತಿರುಗುತ್ತಿದ್ದ ನಾಲ್ವರ ಬಂಧನ | ಪ್ರಕರಣ ದಾಖಲು Read More »

ಕಬಡ್ಡಿ ಪಂದ್ಯಾಟ | ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪುರುಷರ ಕಬಡ್ಡಿ ತಂಡ ಚಾಂಪಿಯನ್

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪುರುಷರ ಕಬಡ್ಡಿ ತಂಡ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಂಗಳೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮ್ಯಾಟ್ ಅಂಕಣದಲ್ಲಿ ನಡೆದ ಈ ಕ್ರೀಡಾ ಕೂಟದಲ್ಲಿ ಮಂಗಳೂರು ವಿಭಾಗದ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಅತ್ಯುತ್ತಮ ನಿರ್ವಹಣೆ ನೀಡಿದ ವಿವೇಕಾನಂದ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಸಾಧನೆಯೊಂದಿಗೆ ತಂಡ ತುಮಕೂರಿನಲ್ಲಿ ಫೆ.28 ಹಾಗೂ 29 ರಂದು

ಕಬಡ್ಡಿ ಪಂದ್ಯಾಟ | ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪುರುಷರ ಕಬಡ್ಡಿ ತಂಡ ಚಾಂಪಿಯನ್ Read More »

ಸಾಲ ಮನ್ನಾ ಮೊತ್ತ ಒಂದು ತಿಂಗಳೊಳಗೆ ನೀಡಬೇಕು | ಸಾಲಮನ್ನಾ ವಂಚಿತ ರೈತರ ಪ್ರತಿಭಟನೆಯಲ್ಲಿ ಕಿಶೋರ್ ಶಿರಾಡಿ ಎಚ್ಚರಿಕೆ

ಪುತ್ತೂರು: ರೈತರ ಸಾಲ ಮನ್ನಾ ಮೊತ್ತ ಪಾವತಿಯಾಗದಿದ್ದರೆ ಡಿಸಿಸಿ ಬ್ಯಾಂಕ್ ಚಲೋ ನಡೆಸಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಕೆ ನೀಡಿದ್ದಾರೆ. ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಇಲ್ಲಿಯ ಅಮರ್ ಜವಾನ್ ಸ್ಮಾರಕದ ಬಳಿ ಮಂಗಳವಾರ ನಡೆದ ಸಾಲ ಮನ್ನಾ ವಂಚಿತ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಾಲ ಮನ್ನಾ ಮೊತ್ತ ರೈತರಿಗೆ ಪಾವತಿಯಾಗದಿರಲು ಸಹಕಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೇ ಹೊಣೆ. ಇದರ ಕುರಿತು ಸಾಲಗಾರರ ಸಾಲದ ನಂಬರ್

ಸಾಲ ಮನ್ನಾ ಮೊತ್ತ ಒಂದು ತಿಂಗಳೊಳಗೆ ನೀಡಬೇಕು | ಸಾಲಮನ್ನಾ ವಂಚಿತ ರೈತರ ಪ್ರತಿಭಟನೆಯಲ್ಲಿ ಕಿಶೋರ್ ಶಿರಾಡಿ ಎಚ್ಚರಿಕೆ Read More »

ತಾಲೂಕು ಆಡಳಿತದಿಂದ ಛತ್ರಪತಿ ಶಿವಾಜಿ, ಸಂತ ಕವಿ ಸರ್ವಜ್ಞ ಜಯಂತಿ

ಪುತ್ತೂರು: ಕಷ್ಟ ಜೀವನ ಅನುಭವಿಸಿ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ಸರ್ವಜ್ಞರ ತತ್ವ ಆದರ್ಶಗಳು ನಮಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ, ಮೋಸದ ಜಾಲವನ್ನು ಬೇಧಿಸುವ ಚಾಕಚಕ್ಯತೆಯನ್ನು ಶಿವಾಜಿ ತೋರಿಸಿಕೊಟ್ಟಿದ್ದಾರೆ. ಶ್ರೀಮಂತಿಕೆಯಿಂದ ಎಲ್ಲವನ್ನೂ ಪಡೆಯಲು ಆಗದಿದ್ದರೂ, ಶ್ರಮದ ಸಾಧನೆಯಿಂದ ಸಕಲವನ್ನು ಪಡೆಯಬಹುದು ಎಂದು ಪುತ್ತೂರು ತಹಸೀಲ್ದಾರ ಪುರಂದರ ಹೆಗ್ಡೆ ಹೇಳಿದರು. ಅವರು ಮಂಗಳವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪುತ್ತೂರು ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಜಯಂತಿ ಮತ್ತು ಸಂತಕವಿ

ತಾಲೂಕು ಆಡಳಿತದಿಂದ ಛತ್ರಪತಿ ಶಿವಾಜಿ, ಸಂತ ಕವಿ ಸರ್ವಜ್ಞ ಜಯಂತಿ Read More »

error: Content is protected !!
Scroll to Top