ಬೈಕ್‍ ಗೆ ಜೀಪು ಡಿಕ್ಕಿ : ಬೈಕ್ ಸವಾರ ಮೃತ್ಯು, ಇಬ್ಬರು ಗಂಭೀರ

ಪುತ್ತೂರು: ಬೈಕ್‍ ಗೆ ಜೀಪು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ನರಿಮೊಗರು ಗ್ರಾಮದ ಪಾಪೆತ್ತಡ್ಕದಲ್ಲಿ ಸಂಭವಿಸಿದೆ. ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್(48) ಮೃತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ ಲೋಕೇಶ್ ಅವರು ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ […]

ಬೈಕ್‍ ಗೆ ಜೀಪು ಡಿಕ್ಕಿ : ಬೈಕ್ ಸವಾರ ಮೃತ್ಯು, ಇಬ್ಬರು ಗಂಭೀರ Read More »

ಟೈಮ್ & ಟೈಡ್ ವತಿಯಿಂದ ಏ.18 ರಂದು ಮುಕ್ರಂಪಾಡಿ ಹನುಮವಿಹಾರ ಮೈದಾನದಲ್ಲಿ ನಡೆಯಬೇಕಿದ್ದ ಪುತ್ತೂರ ಹಬ್ಬ ಕಾರ್ಯಕ್ರಮ ಮುಂದೂಡಿಕೆ | ಮುಂದಿನ ದಿನಾಂಕ ಶೀಘ್ರದಲ್ಲಿ ಪ್ರಕಟಿಸಲಾಗುವುದು

ಪುತ್ತೂರು: ಟೈಮ್ & ಟೈಡ್ ಸಂಸ್ಥೆಯಿಂದ ಏ.18 ಗುರುವಾರದಂದು ಮುಕ್ರಂಪಾಡಿ ಹನುಮವಿಹಾರ ಮೈದಾನದಲ್ಲಿ ನಡೆಯಬೇಕಿದ್ದ ಪುತ್ತೂರ ಹಬ್ಬ ಬೃಹತ್ ಮನೋರಂಜನಾ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಏ.18 ಗುರುವಾರ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಮೇ ತಿಂಗಳಿನಲ್ಲಿ ಬೃಹತ್ ಮಟ್ಟದಲ್ಲಿ ಆಯೋಜಿಸಲಾಗುವುದು. ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು. ಈ ಹಿನ್ನಲೆಯಲ್ಲಿ ಪುತ್ತೂರಿನ ನಾಗರೀಕರು, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು, ಅಲ್ಲದೆ ಎಂ.ಎನ್‍.ಸಿ.ಬ್ರಾಂಡ್‍ ಗಳು ಟೈಮ್‍ & ಟೈಡ್ ಸಂಸ್ಥೆಗೆ ಸಾಥ್ ನೀಡಿ ಪ್ರೋತ್ಸಾಹಿಸಬೇಕೆಂದು ಟೈಮ್ & ಟೈಡ್‍ ನ

ಟೈಮ್ & ಟೈಡ್ ವತಿಯಿಂದ ಏ.18 ರಂದು ಮುಕ್ರಂಪಾಡಿ ಹನುಮವಿಹಾರ ಮೈದಾನದಲ್ಲಿ ನಡೆಯಬೇಕಿದ್ದ ಪುತ್ತೂರ ಹಬ್ಬ ಕಾರ್ಯಕ್ರಮ ಮುಂದೂಡಿಕೆ | ಮುಂದಿನ ದಿನಾಂಕ ಶೀಘ್ರದಲ್ಲಿ ಪ್ರಕಟಿಸಲಾಗುವುದು Read More »

ಏ : 24 ಯೋಗಿ ಆದಿತ್ಯನಾಥ್ ಉಡುಪಿ ಭೇಟಿ

ಉಡುಪಿ: ರಾಜ್ಯ ಮತ್ತು ರಾಷ್ಟ್ರ ನಾಯಕರ ದಂಡು ಉಡುಪಿ- ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರ ಪ್ರಚಾರಕ್ಕೆ ಉಡುಪಿಗೆ ಆಗಮಿಸಲಿದ್ದಾರೆ.  ಏ. 19ರಂದು ಉಳ್ಳೂರಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ ಹಾಗೂ ಸಂಸದೆ ಸುಮಲತಾ, ಏ. 20ರಂದು ಉಡುಪಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಏ. 21ರಂದು ಕಾಪುವಿಗೆ ಸಂಸದ ಪ್ರತಾಪ್ ಸಿಂಹ, ಏ. 22ರಂದು ಹಿರಿಯಡಕಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಏ. 24ರಂದು

ಏ : 24 ಯೋಗಿ ಆದಿತ್ಯನಾಥ್ ಉಡುಪಿ ಭೇಟಿ Read More »

ಏಕಾಏಕಿ ಬ್ರೇಕ್ ಹಾಕಿದ ಆಟೋ ಚಾಲಕ | ನಾಲ್ಕು ವರ್ಷದ ಮಗು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯ

ಕಡಬ:  ಆಟೋ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ವರ್ಷ ಮಗುವೊಂದು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ರಾಮಕುಂಜದಲ್ಲಿ ಇಂದು ನಡೆದಿದೆ. ಸಾತ್ವಿಕ್ (4) ರಸ್ತೆಗೆಸೆಯಲ್ಪಟ್ಟು  ಗಾಯಗೊಂಡ ಮಗು. ಆಟೋರಿಕ್ಷಾ ಚಾಲಕ ಶಿವಪ್ರಸಾದ್ ಎಂಬವರು ಆಟೋವನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ವೇಗವಾಗಿ ಚಲಾಯಿಸಿಕೊಂಡು ಇಳಿಜಾರು ರಸ್ತೆಯಲ್ಲಿ ಬ್ರೇಕ್ ಹಾಕಿದಾಗ ಆಟೋರಿಕ್ಷಾದಲ್ಲಿದ್ದ ಮಗು ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದೆ ಎನ್ನಲಾಗಿದೆ. ಮಗುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ಏಕಾಏಕಿ ಬ್ರೇಕ್ ಹಾಕಿದ ಆಟೋ ಚಾಲಕ | ನಾಲ್ಕು ವರ್ಷದ ಮಗು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯ Read More »

ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ಮೃತಪಟ್ಟ ಮಹಿಳೆ

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರ ಎಂಬಲ್ಲಿ ಎ.16ರಂದು ನಡೆದಿದೆ. ಚಡಗರ ಅಗ್ರಹಾರ ನಿವಾಸಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿ ಪಿ.ಯಶೋಧ(83) ಮೃತ ಮಹಿಳೆ. ಚುನಾವಣಾ ಆಯೋಗ ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಅದರಂತೆ ಪಿ.ಯಶೋಧ ಮನೆಯಲ್ಲೆ ಮತದಾನ ಮಾಡಿದ್ದರು. ಮತದಾನದ ದಿನ ಪಿ.ಯಶೋಧ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರೂ

ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ಮೃತಪಟ್ಟ ಮಹಿಳೆ Read More »

ಸಂಭ್ರಮದ ಶ್ರೀ ರಾಮ ನವಮಿ | ಅಯೋಧ್ಯೆ ಶ್ರೀ ರಾಮಲಲ್ಲಾನಿಗೆ ಸೂರ್ಯ ಕಿರಣದ ತಿಲಕ

ಅಯೋಧ್ಯೆ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದಲ್ಲಿ ಶ್ರೀರಾಮನವಮಿ ಸಂಭ್ರಮ ಮುಗಿಲು ಮುಟ್ಟಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಳಿಕ ಮೊದಲ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಶ್ರೀರಾಮ ನವಮಿಯಂದು ಬಾಲರಾಮನಿಗೆ ಸೂರ್ಯ ರಶ್ಮಿ ಸ್ಪರ್ಶವಾಗಿದೆ.  ಸೂರ್ಯವಂಶದ ರಘುರಾಮನಿಗೆ ಸೂರ್ಯ ಭಗವನನಿಂದ ಅಭಿಷೇಕ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಾಮಲಲ್ಲಾನಿಗೆ ಸೂರ್ಯ ರಶ್ಮಿ ಸ್ಪರ್ಶ ಮಾಡಿದ್ದು, ಸುಮಾರು 70 ಮಿ.ಮೀ ಉದ್ದದ ತಿಲಕ ಹಣೆ ಮೇಲೆ ಮೂಡಿದೆ.

ಸಂಭ್ರಮದ ಶ್ರೀ ರಾಮ ನವಮಿ | ಅಯೋಧ್ಯೆ ಶ್ರೀ ರಾಮಲಲ್ಲಾನಿಗೆ ಸೂರ್ಯ ಕಿರಣದ ತಿಲಕ Read More »

ಏ. 22 : ತಮಿಳುನಾಡು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಅಣ್ಣಾಮಲೈ ಸುಳ್ಯಕ್ಕೆ

ಸುಳ್ಯ: ತಮಿಳುನಾಡಿನ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಅಣ್ಣಾಮಲೈ ಏ 22 ರಂದು ಸುಳ್ಯಕ್ಕೆ ಆಗಮಿಸಲಿದ್ದಾರೆ . ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬೃಜೇಶ್ ಚೌಟ ಪರ ಪ್ರಚಾರ ಸಭೆ ನಡೆಸಲಿದ್ದಾರೆ. ಈ ಕುರಿತು ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.

ಏ. 22 : ತಮಿಳುನಾಡು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಅಣ್ಣಾಮಲೈ ಸುಳ್ಯಕ್ಕೆ Read More »

ಬಲ್ನಾಡಿನಿಂದ ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ | ಈ ವೈಭವದ ಕ್ಷಣಗಳನ್ನು ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ವೈಭವದಿಂದ ನಡೆಯುತ್ತಿದ್ದು, ಮಂಗಳವಾರ ತಡರಾತ್ರಿ ದೂರದ ಬಲ್ನಾಡಿನಿಂದ ಶ್ರೀ ದಂಡನಾಯಕ- ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಕಿರುವಾಳು ಶ್ರೀ ದೇವಸ್ಥಾನಕ್ಕೆ ಆಗಮಿಸಿತು. ಬಲ್ನಾಡಿನ ಶ್ರೀ ದೈವಸ್ಥಾನದಿಂದ ಸೂಟೆಗಳೊಂದಿಗೆ ಭಂಡಾರ ಸಹಿತ ಶ್ರೀ ದಂಡನಾಯಕ-ಉಳ್ಳಾಲ್ತಿ ವಗೈರೆ ದೈವಗಳು ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರನ್ನು ಎದುರುಗೊಂಡು ಬಲಿ ಉತ್ಸವ ನಡೆಯಿತು. ಅಲ್ಲಿ ದೈವ-ದೇವರುಗಳ ನುಡಿಗಟ್ಟು ಮುಗಿದು ಬಳಿಕ ಶ್ರೀ ದೈವಗಳು ಒಳಾಂಗಣ ಪ್ರವೇಶಿಸಿದವು.

ಬಲ್ನಾಡಿನಿಂದ ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ | ಈ ವೈಭವದ ಕ್ಷಣಗಳನ್ನು ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು Read More »

ಪಾಂಡೇಶ್ವರ ಪಿಜಿಯಲ್ಲಿ ಮೃತಪಟ್ಟ ಯುವ ವೈದ್ಯೆ

ಮಂಗಳೂರು : ದಂತ ವೈದ್ಯಕೀಯ ಪದವೀಧರೆ ಯುವತಿಯೋರ್ವರು ನಗರದ ಪಾಂಡೇಶ್ವರದ ಪಿಜಿಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.ಉಳ್ಳಾಲ ತಾಲೂಕಿನ ನರಿಂಗಾನ ನಿವಾಸಿ ಸ್ವಾತಿ ಶೆಟ್ಟಿ (24) ಮೃತ ವೈದ್ಯೆ. ಬಿಡಿಎಸ್‌ ಪದವಿ ಪೂರೈಸಿದ್ದ ಸ್ವಾತಿ ಪಾಂಡೇಶ್ವರದ ಕ್ಲಿನಿಕ್‌ವೊಂದರಲ್ಲಿ ಮಂಗಳವಾರದಿಂದ ಕೆಲಸಕ್ಕೆ ಹಾಜರಾಗಬೇಕಿತ್ತು. ಸೋಮವಾರ ತಾಯಿ ಜೊತೆಗೆ ಪಾಂಡೇಶ್ವರ ಕ್ಲಿನಿಕ್‌ಗೆ ಬಂದು ಕೆಲಸದ ಬಗ್ಗೆ ಮಾತನಾಡಿ, ಪಾಂಡೇಶ್ವರ ಪೊಲೀಸ್ ಠಾಣೆ ಹಿಂಭಾಗದ ಪಿಜಿಯಲ್ಲಿ ಸೋಮವಾರ ಸಂಜೆಯಿಂದ ಉಳಿದಿದ್ದರು. ರಾತ್ರಿ ತಾಯಿ ಜೊತೆಗೆ ಮೊಬೈಲ್‌ನಲ್ಲಿ ಮಾತನಾಡಿ ವಿಪರೀತ ತಲೆನೋವು ಎಂಬುದಾಗಿ ಹೇಳಿದ್ದರು

ಪಾಂಡೇಶ್ವರ ಪಿಜಿಯಲ್ಲಿ ಮೃತಪಟ್ಟ ಯುವ ವೈದ್ಯೆ Read More »

ದುಬೈಯಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥ

ದುಬೈ : ದುಬೈನಲ್ಲಿ ಧಾರಾಕಾರ ಮಳೆಯು ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ (ಏಪ್ರಿಲ್ 16) ಸುರಿದ ಭಾರಿ ಮಳೆಗೆ ರಸ್ತೆ, ಮನೆ, ಮಾಲ್ ಗಳು ಜಲಾವೃತಗೊಂಡಿರುತ್ತದೆ. ಭಾರೀ ಮಳೆಯಿಂದಾಗಿ ದುಬೈನಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊಲ್ಲಿಯಲ್ಲಿ ಚಂಡಮಾರುತದಿಂದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆಗಳ ವ್ಯತ್ಯಯ ಉಂಟಾಯಿತು. ಹಲವಾರು ಗಂಟೆಗಳ ಕಾಲ ಇಲ್ಲಿಂದ ವಿಮಾನಗಳು ಟೇಕಾಫ್ ಆಗಲಿಲ್ಲ. ರನ್‌ವೇ ಮೊಣಕಾಲಿನ ಆಳದಲ್ಲಿ ನೀರಿತ್ತು. ಮಳೆಯಿಂದಾಗಿ 50ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ದುಬೈ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಪ್ರವಾಹದ

ದುಬೈಯಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥ Read More »

error: Content is protected !!
Scroll to Top