ಏ.21 : ಕಲ್ಕಾರು ಕುಟುಂಬಸ್ಥರ ಶ್ರೀ ನಾಗದೇವರು, ಶ್ರೀ ಮಹಮ್ಮಾಯ ಅಮ್ಮನವರ, ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ
ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕಲ್ಕಾರು ಎಂಬಲ್ಲಿ ಕಲ್ಕಾರು ಕುಟುಂಬಸ್ಕರ ನೂತನವಾಗಿ ನಿರ್ಮಿಸಿರುವ ಚಿತ್ರಕೂಟದಲ್ಲಿ ನಾಗದೇವರು ದೈವಸ್ಥಾನಗಳಲ್ಲಿ ಶ್ರೀ ಮಹಮ್ಮಾಯ ಅಮ್ಮನವರು, ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಹಾಗೂ ಪರಿವಾರ ದೈವದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಏ.21 ಭಾನುವಾರ ಬೆಳಿಗ್ಗೆ 9.45 ರಿಂದ 10.25 ರ ಮಿಥುನ ಲಗ್ನದಲ್ಲಿ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ದಿವ್ಯ ಹಸ್ತದಲ್ಲಿ ಜರಗಲಿದೆ ಎಂದು ಕಲ್ಕಾರು ದೈವ ದೇವರುಗಳ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಅವರು […]










