ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ

ಪುತ್ತೂರು : ಪುತ್ತೂರಿನಿಂದ ದರ್ಬೆ ಕಡೆಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ , ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ದರ್ಬೆಯಲ್ಲಿ ನಡೆದಿದೆ. ಕೆಮ್ಮಾಯಿಯ ವ್ಯಕ್ತಿಯೊಬ್ಬರು ಕಾರು ಚಲಾಯಿಸುತ್ತಿದ್ದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಸ್ಕೂಟರ್ ಸೇರಿದಂತೆ ಸಾಮೆತ್ತಡ್ಕದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ. ವ್ಯಕ್ತಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಶಾಸಕರು ಭೇಟಿ ನೀಡಿದ್ದಾರೆ. ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗಿದ್ದು, ಕಾರು ಚಾಲಕ ಜಖಂಗೊಂಡ […]

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ Read More »

ದೇಶ , ಜಿಲ್ಲೆ ಅಭಿವೃದ್ಧಿಗಾಗಿ ಹಸ್ತ ಚಿಹ್ನೆಗೆ ಮತನೀಡಿ : ಪದ್ಮರಾಜ್

ಸುಳ್ಯ : ದೇಶದ ಭವಿಷ್ಯದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ, ಕಾರ್ಯಕರ್ತರು, ನಾಯಕರು ಒಟ್ಟಾಗಿದ್ದು ಈ ಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು. ಅವರು ಸುಳ್ಯದಲ್ಲಿ ನಡೆದ ಕಾಂಗ್ರೆಸ್‌ ರೋಡ್ ಶೋ ದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ಸರಕಾರ ಅನುಷ್ಠಾನಗೊಂಡ ನೂರು ದಿನಗಳ ಒಳಗೆ ಜಾರಿಗೊಳಿಸಿದೆ. ಕೇಂದ್ರದಲ್ಲಿಯೂ ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿ ಜಾರಿಗೆ ತರಲಿದೆ. ಈ ಬಾರಿ ಎಲ್ಲರೂ ಕಾಂಗ್ರೆಸ್ ಗೆ ಬೆಂಬಲ ನೀಡಬೇಕು ಎಂದು ಹೇಳಿದರು. ಕಾಂಗ್ರೆಸ್‌ ಅಭ್ಯರ್ಥಿ

ದೇಶ , ಜಿಲ್ಲೆ ಅಭಿವೃದ್ಧಿಗಾಗಿ ಹಸ್ತ ಚಿಹ್ನೆಗೆ ಮತನೀಡಿ : ಪದ್ಮರಾಜ್ Read More »

ಏ. 24 : ಯೋಗಿ ಆದಿತ್ಯನಾಥ್ ಮಡಿಕೇರಿಗೆ ಭೇಟಿ

ಕೊಡಗು : ಏ.24 ರಂದು ಉತ್ತರಪ್ರದೇಶದ ಮುಖ್ಯಮಂತ್ರಿ, ಬಿಜೆಪಿ ಪ್ರಚಾರಕರಾದ ಯೋಗಿ ಆದಿತ್ಯನಾಥ್ ಮಡಿಕೇರಿಗೆ ಭೇಟಿ ನೀಡಲಿದ್ದಾರೆ. ಮಡಿಕೇರಿಯ ಗಾಂಧಿಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ, ಅಭ್ಯರ್ಥಿ ಯದುವೀರ್ ಒಡೆಯರ್ ಪರ ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ನಡಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾಹಿತಿ ನೀಡಿದ್ದಾರೆ.

ಏ. 24 : ಯೋಗಿ ಆದಿತ್ಯನಾಥ್ ಮಡಿಕೇರಿಗೆ ಭೇಟಿ Read More »

ಧ್ವಜಾವರೋಹಣದೊಂದಿಗೆ ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರನ ಜಾತ್ರೋತ್ಸವ ಸಂಪನ್ನ | ಭಕ್ತ ಸಮೂಹವನ್ನೇ ಪುಳಕಿತಗೊಳಿಸುವ ವೈಭವದ ಜಾತ್ರೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ ಧ್ಜಜಾವರೋಹಣದೊಂದಿಗೆ ಇಂದು ಸಂಪನ್ನಗೊಂಡಿತು. ಏ.10 ರಿಂದ ಧ್ವಜಾರೋಹಣದೊಂದಿಗೆ ಆರಂಭಗೊಂಡ ಜಾತ್ರೋತ್ಸವ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ಏ.10 ರಿಂದ ಪ್ರತಿನಿತ್ಯ ಶ್ರೀ ದೇವರ ಬಲಿ ಉತ್ಸವ ನಡೆದು ಶ್ರೀ ದೇವಸ್ಥಾನದ ವಠಾರದಲ್ಲಿರುವ ಕಟ್ಟೆಯಲ್ಲಿ ಪೂಜೆಗೊಂಡ ಬಳಿಕ ಪ್ರತಿನಿತ್ಯ ನಿಗದಿಯಾದ ಪ್ರದೇಶಗಳಿಗೆ ಸವಾರಿ ಮಾಡಿ ವಿವಿಧ ಕಟ್ಟೆಗಳಲ್ಲಿ ಪೂಜೆಗೊಂಡು ಭಕ್ತಾದಿಗಳನ್ನು ಪುನೀತರಾಗಿಸುವುದು ವಿಶೇಷತೆಯಾಗಿದ್ದು, ಈ ಮೂಲಕ ಮನೆ ಬಾಗಿಲಿಗೆ ಬರುವ ದೇವರು ಎಂದೇ ಖ್ಯಾತಿ

ಧ್ವಜಾವರೋಹಣದೊಂದಿಗೆ ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರನ ಜಾತ್ರೋತ್ಸವ ಸಂಪನ್ನ | ಭಕ್ತ ಸಮೂಹವನ್ನೇ ಪುಳಕಿತಗೊಳಿಸುವ ವೈಭವದ ಜಾತ್ರೋತ್ಸವ Read More »

ದುಷ್ಕರ್ಮಿಗಳಿಂದ ಒಂದೇ ಕುಟುಂಬದ ನಾಲ್ವರ ಹತ್ಯೆ !

ಗದಗ: ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಗಳು ಮಲಗಿದಲ್ಲೇ ಭೀಕರವಾಗಿ ಕೊಲೆ ಮಾಡಿದ ಘಟನೆ ದಾಸರ ಓಣಿಯಲ್ಲಿ ನಡೆದಿದೆ. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಆತನ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಏ.17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕನ ಮದುವೆ ಫಿಕ್ಸ್ ಮಾಡುವ ಕಾರ್ಯಕ್ರಮಕ್ಕೆ ಕೊಪ್ಪಳದಿಂದ ಸಂಬಂಧಿಗಳು ಆಗಮಿಸಿದ್ದರು. ಗುರುವಾರ ರಾತ್ರಿ ಪರಶುರಾಮ ಪತ್ನಿ ಲಕ್ಷ್ಮೀಯವರ ಹುಟ್ಟಿದ ಹಬ್ಬವನ್ನು ಕುಟುಂಬಸ್ಥರು

ದುಷ್ಕರ್ಮಿಗಳಿಂದ ಒಂದೇ ಕುಟುಂಬದ ನಾಲ್ವರ ಹತ್ಯೆ ! Read More »

ದ್ವಿಚಕ್ರ ವಾಹನ ಲಾರಿಗೆ ಡಿಕ್ಕಿ : ಸವಾರ ಮೃತ್ಯು

ಮಂಗಳೂರು: ದ್ವಿಚಕ್ರ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಹೇರೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೇರೂರು ನಿವಾಸಿ ಕೃಷ್ಣ ಗಾಣಿಗ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸಂತೆಕಟ್ಟೆಯಿಂದ ಬ್ರಹ್ಮಾವರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಸ್ತೆ ದುರಸ್ತಿ ಕಾಮಗಾರಿಯಿಂದಾಗಿ ಸಂಚಾರ ವ್ಯತ್ಯಯ ಉಂಟಾಗಿ ರಸ್ತೆಯನ್ನು ಏಕ ಪಥಕ್ಕೆ ಪರಿವರ್ತಿಸಲಾಗಿತ್ತು. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಲಾರಿಗೆ ಕೃಷ್ಣ ಅವರ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದ್ವಿಚಕ್ರ ವಾಹನ ಲಾರಿಗೆ ಡಿಕ್ಕಿ : ಸವಾರ ಮೃತ್ಯು Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿಯ ದ್ವಿತೀಯ ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇನ್ಸ್ಟಿಟ್ಯೂಶನಲ್‌ ಇನ್ನೊವೇಶನ್‌ ಕೌನ್ಸಿಲ್‌ (ಐಐಸಿ), ಗಣಕ ವಿಜ್ಞಾನ  ಹಾಗೂ ಎಂಕಾಂ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿ ದ್ವಿತೀಯ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು. ಮಂಗಳೂರಿನ ಗ್ಲೋಟಚ್‌ ಟೆಕ್ನಾಲಜೀಸ್‌ ಸಂಸ್ಥೆಯ   ಅಪ್ಲಿಕೇಶನ್‌ ಡೆವಲಪ್‌ಮೆಂಟ್‌ ವಿಭಾಗದ ನಿರ್ದೇಶಕ ದೀಪಕ್‌ ಕೃಷ್ಣಮೂರ್ತಿ ಡಿಸ್ರಪ್ಟಿವ್‌ ಇನ್ನೊವೇಶನ್‌: ಟ್ರಾನ್ಸ್ಫಾರ್ಮಿಂಗ್‌ ಇಂಡಸ್ಟ್ರೀಸ್‌ ಥ್ರೂ ಕ್ರಿಯೇಟಿವ್‌ ಐಡಿಯೇಶನ್‌ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, 90 ರ ದಶಕದದಲ್ಲಿ ಕ್ಲೇಟನ್ ಕ್ರಿಸ್ಟೇನ್‌ಸೆನ್‌ನಿಂದ ಮೊದಲ ಬಾರಿಗೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿಯ ದ್ವಿತೀಯ ಉಪನ್ಯಾಸ Read More »

ಮುಕ್ವೆ ಶಾಲಾ ವಠಾರದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರ ಹೊರವಲಯದ ಮುಕ್ವೆ ಶಾಲಾ ವಠಾರದಲ್ಲಿ ನಡೆದಿದೆ. ನಿನ್ನೆ ರಾತ್ರಿ ಮುಕ್ವೆ ಶಾಲಾ ಬಳಿ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ಶಾಲಾ ವಠಾರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದುದನ್ನು ಯಕ್ಷಗಾನ ವೀಕ್ಷಿಸಲು ಬಂದಿದ್ದವರಿಗೆ ಈ ಮಾಹಿತಿ ಇಂದು ಮುಂಜಾನೆ ಗೊತ್ತಾಗಿದೆ. ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ಮುಕ್ವೆ ಶಾಲಾ ವಠಾರದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಲೋಕಸಭೆ ಚುನಾವಣೆ | ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಹ ಅಧ್ಯಕ್ಷರಾಗಿ ಶಕುಂತಳಾ ಟಿ. ಶೆಟ್ಟಿ, ಸಂಯೋಜಕರಾಗಿ ಎನ್‍.ಚಂದ್ರಹಾಸ ಶೆಟ್ಟಿ

ಪುತ್ತೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯದ ಸಹ ಅಧ್ಯಕ್ಷರಾಗಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹಾಗೂ ಸಂಯೋಜಕರಾಗಿ ಪುತ್ತೂರು ಕೋಟಿ- ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ನೇಮಕಗೊಂಡಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಈ ಆದೇಶ ಹೊರಡಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಶಕ್ತಿಯನ್ನು ಹೆಚ್ಚಿಸಲು ನೂತನ ಪದಾಧಿಕಾರಿಗಳಿಗೆ  ಜವಾಬ್ದಾರಿಯನ್ನು ನೀಡಲಾಗಿದೆ. ನೂತನ 10 ಜನ ಸಹ-ಅಧ್ಯಕ್ಷರುಗಳು,

ಲೋಕಸಭೆ ಚುನಾವಣೆ | ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಹ ಅಧ್ಯಕ್ಷರಾಗಿ ಶಕುಂತಳಾ ಟಿ. ಶೆಟ್ಟಿ, ಸಂಯೋಜಕರಾಗಿ ಎನ್‍.ಚಂದ್ರಹಾಸ ಶೆಟ್ಟಿ Read More »

ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ ಸಂಪನ್ನ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ ವೀರಮಂಗಲ ಕುಮಾರಧಾರ ಹೊಳೆಯಲ್ಲಿ ಅತ್ಯಂತ ವೈಭವದಿಂದ ಇಂದು ಮುಂಜಾನೆ ನಡೆಯಿತು. ಗುರುವಾರ ಸಂಜೆ ಶ್ರೀ ದೇವಸ್ಥಾನದಲ್ಲಿ ಬಲಿ ಉತ್ಸವ ನಡೆದು ಬಳಿಕ ರಕ್ತೇಶ್ವರಿ ದೈವದೊಂದಿಗೆ ಮಾತುಕತೆ ನಡೆದು ನಂತರ ಹೊರಟ ಶ್ರೀ ದೇವರು ನೂರಾರು ಕಟ್ಟೆಗಳಲ್ಲಿ ಪೂಜೆಗೊಂಡು ದೂರದ ವೀರಮಂಗಲವನ್ನು ಇಂದು ಮುಂಜಾನೆ ತಲುಪಿದರು. ಅಲ್ಲಿ ಇಂದು ಮುಂಜಾನೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅವಭೃತ ಸ್ನಾನ ಮುಗಿಸಿ ಕಟ್ಟೆಪೂಜೆ ಗೊಂಡು ಪುನಃ ಹಿಂತಿರುಗಿದರು.

ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ ಸಂಪನ್ನ Read More »

error: Content is protected !!
Scroll to Top